November 20, 2013

ಕನ್ನಡ ಪುಸ್ತಕಗಳನ್ನು ಪಿ.ಡಿ.ಎಫ್. ಫಾರ್ಮಾಟ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ ಅಂತ ಹುಲಿಕುಂಟೆ ಮೂರ್ತಿ ಕಳಿಸ ಮೇಲ್ ಇಲ್ಲಿದೆ. ಹುಲಿಕುಂಟೆ ಮೂರ್ತಿ ಅವರಿಗೆ ಥ್ಯಾಂಕ್ಸ್ ಕನ್ನಡ ಪುಸ್ತಕಗಳನ್ನು ಪಿ.ಡಿ.ಎಫ್. ಫಾರ್ಮಾಟ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ ಅಂತ ಹುಲಿಕುಂಟೆ ಮೂರ್ತಿ ಕಳಿಸಿದ ಮೇಲ್ ಇಲ್ಲಿದೆ. ಹುಲಿಕುಂಟೆ ಮೂರ್ತಿ ಅವರಿಗೆ ಥ್ಯಾಂಕ್ಸ್ ಕನ್ನಡ ಪುಸ್ತಕಗಳನ್ನು ಪಿ.ಡಿ.ಎಫ್. ಫಾರ್ಮಾಟ್ ನಲಕನ್ನಡ ಪುಸ್ತಕಗಳನ್ನು ಪಿ.ಡಿ.ಎಫ್. ಫಾರ್ಮಾಟ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ ಅಂತ ಹುಲಿಕುಂಟೆ ಮೂರ್ತಿ ಕಳಿಸಿದ ಮೇಲ್ ಇಲ್ಲಿದೆ. ಹುಲಿಕುಂಟೆ ಮೂರ್ತಿ ಅವರಿಗೆ ಥ್ಯಾಂಕ್ಸ್


ಕನ್ನಡ ಪುಸ್ತಕಗಳನ್ನು ಪಿ.ಡಿ.ಎಫ್. ಫಾರ್ಮಾಟ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ

ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳು 
ಅಬಚೂರಿನ ಪೋಸ್ಟ್ ಆಫೀಸ್
http://www.mediafire.com/file/pjo2otp9d306hte/Abachoorina%20Post%20Office.zip ಏರೋಪ್ಲೇನ್ ಚಿಟ್ಟೆ
http://www.mediafire.com/file/blbc2b7wl8phmrq/Airoplane%20Chitte_tif.pdf
ಅಲೆಮಾರಿಯ ಅಂಡಮಾನ್ – ಭಾಗ ಒಂದು
http://www.mediafire.com/file/znzw2yjdjlt/alemaariya-andamaan-KPP-Part1.pdf
ಅಲೆಮಾರಿಯ ಅಂಡಮಾನ್ – ಭಾಗ ಎರಡು
http://www.mediafire.com/file/zmmm32wdgtm/alemaariya-andamaan-KPP-Part2.pdf
ಚಂದ್ರನ ಚೂರು
http://www.mediafire.com/file/tt7sle0q26v6dsq/Chandrana%20Chooru_tif.pdf
ಫ್ಲಯಿಂಗ್ ಸಾಸ್ಸರ್ಸ್
http://www.mediafire.com/file/6t42no2rj4brmnz/Flying%20Souccers%201_tif.pdf
ಮುನಿಸ್ವಾಮಿ ಮತ್ತು ಮಾಗಡಿ ಚಿರತೆ
http://www.mediafire.com/file/868rxwna8rb4axh/Muniswamy%20Mattu%20Magadi%20Chirate_tif.pdf
ಸಹಜ ಕೃಷಿ ಒಂದು ಪರಿಚಯ
http://www.mediafire.com/file/4lctrm77bay71yh/Sahaja%20Krushi%20Ondu%20Parichaya_tif.pdf
ಕಾಡಿನ ಕತೆಗಳು
http://www.mediafire.com/file/huq9b3ypieffxp0/Kaadina%20Kategalu%20-%20K.P.Poornachandra%20Tejaswi.pdf
 
ಡಾ ಶಿವರಾಮ ಕಾರಂತ ಅವರ ಪುಸ್ತಕಗಳು ಆತ್ಮಾಹುತಿ
http://www.mediafire.com/file/ozdtmmdemmq/Aatmahuti-shivaram.pdf
ಅಪೂರ್ವ ಪಶ್ಚಿಮ
http://www.mediafire.com/file/g1eyuz3irtz/apoorva_pashchima.pdf
ಔದಾರ್ಯದ ಉರುಳಲ್ಲಿ
http://www.mediafire.com/file/559955c5gqbkb24/audaryada%20urulalli_tif.pdf
ಬತ್ತದ ತೊರೆ
http://www.mediafire.com/file/15kgnbfn1l0661k/Battada_tore%20-%20Shivaram%20Karant.pdf
ಚಿಗುರಿದ ಕನಸು
http://www.mediafire.com/file/teu1gefvtkbc6v9/Chigurida_kanasu%20-%20Shivaram%20Karant.pdf
ಚಿಕ್ಕದೊದ್ದವರು
http://www.mediafire.com/file/gf68qevg53gaj6n/chikkadoddavaru_tif.pdf
ಗರ್ಭಗುಡಿ
http://www.mediafire.com/file/9qq6w9fw2rg6dww/Garbhagudi_tif.pdf
ಗೊಂಡಾರಣ್ಯ
http://www.mediafire.com/file/0t2rr1bt1bcg8kr/gondaranya_tif.pdf
ಇನ್ನೊಂದೇ ದಾರಿ
http://www.mediafire.com/file/dwvxb5mynmpw1lz/Innonde%20Daari%20-%20Dr%20K.Shivaram%20Karant.pdf
ಜಾರುವ ದಾರಿಯಲ್ಲಿ
http://www.mediafire.com/file/p486p3clzomdzbr/Jaaruva-Daariyalli-Shivarama-Karanth.pdf
ಜಾತಕ ಕತೆಗಳು
http://www.mediafire.com/file/y4mzaasdhh2zo0b/Jaataka%20Kategalu%20-%20Dr%20K.Shivaram%20Karant.pdf
ಕಾಮನಬಿಲ್ಲಿನ ರಾಜಕುಮಾರ
http://www.mediafire.com/file/smcue2bau8jwqq8/Kamanabillina%20Rajakumara%20-%20Dr.K.Shivaram%20Karant.pdf
ಕಟ್ಟೆ ಪುರಾಣ
http://www.mediafire.com/file/nqsa4j8n8fvicsz/katte%20purana_tif.pdf
ಕುಡಿಯುರ ಕೂಸು
http://www.mediafire.com/file/dmmoe5af8jsv2we/kudiyur%20koosu_tif.pdf
ಮೈಲಿಕಲ್ಲಿನೊಡನೆ ಮಾತುಕತೆ
http://www.mediafire.com/file/7dklmrjr98ycea9/mailikallinodane%20maatukate_tif.pdf
ನಮ್ಮ ಬ್ರಾಹ್ಮಣ್ಯ
http://www.mediafire.com/file/517azd0a2d7pf4l/Namma%20Brahmanya%20-%20Karant.pdf
ಸರಸಮ್ಮನ ಸಮಾಧಿ
http://www.mediafire.com/file/cq1e0cru83l4txj/sarasammana%20samaadhi_tif.pdf
ತೆರೆಯ ಮರೆಯಲ್ಲಿ
http://www.mediafire.com/file/4y6zrh50h4bmgx3/tereya%20mareyalli_tif.pdf
ವೇಲು ತಂಬಿ
http://www.mediafire.com/file/zuwk4b6zhobe50f/Velu%20Tambi%20-%20Dr%20Shivaram%20Karanth.pdf
 
 
ಯಂಡಮೂರಿ ಅವರ ಪುಸ್ತಕಗಳು
 
ಸುದರ್ಶನ ದೇಸಾಯಿ ಅವರ ಕಾದಂಬರಿಗಳು Sudarshan Desai Novel Folder share link,
http://www.mediafire.com/?bzpptyhi07jw4 1)Airavata_tif.pdf
2)Amar Deepa_tif.pdf
3)Badavana maneya Manikya_tif.pdf
4)Benkiya Madilalli_tif.pdf
5)Chinnada Beralu_tif.pdf
6)Mruthyu Bandhan_tif.pdf
7)Seelu Nalige_tif.pdf
8)Sheetal Koli_tif.pdf
9)Vichitra Aparadhi_tif.pdf
10)Visha Manthan_tif.pdf
11)Yamadootaru_tif.pdf
(ಒಟ್ಟಿಗೆ)
 
H.G.ರಾಧಾದೇವಿ ಅವರ ಕಾದಂಬರಿಗಳು ಆಕಾಶಕ್ಕಿತ್ತ ಏಣಿ
http://www.mediafire.com/file/gc725rsoaa2495w/Aakashakkita%20Eni.pdf
ಅದೃಷ್ಟದ ಅಂಚಿನಲ್ಲಿ
http://www.mediafire.com/file/dp32t7eci04ezsz/Adrushtada%20Anchinalli.pdf
ಐಶ್ವರ್ಯ ದೀಪ
http://www.mediafire.com/file/20ag2e4tg3dkba8/Aishwarya%20Deepa.pdf
 
CN ಮುಕ್ತ ಅವರ ಪುಸ್ತಕಗಳು ಮನಸು ಮಂದಾರ – 
http://www.mediafire.com/file/a19ufufowu9m6iy/Manasu%20Mandaara%20-%20C.N.Mukta.pdf
ಮನೋಲಹರಿ – CN ಮುಕ್ತ
http://www.mediafire.com/file/r4eb43bipig4g5f/Manolahari%20-%20C.N.Mukta.pdf

ಸಾಯಿಸುತೆಯವರ ಕಾದಂಬರಿಗಳು 
ಅಭಿನಂದನೆ
http://www.mediafire.com/file/h88kbvs56i7s7q0/abhinandane_tif.pdf
ಬಣ್ಣದ ಚುಂಬಕ
http://www.mediafire.com/file/4ldcnr6pst0s15h/bannada%20chumbaka_tif.pdf
ದೀಪಾಂಕುರ
http://www.mediafire.com/file/866sit6y3350tsu/deepankura_tif.pdf
ಹಂಸ ಪಲ್ಲಕ್ಕಿ
http://www.mediafire.com/file/cdym6mz63anxq1y/hansa%20pallakki_tif.pdf
ಜನನಿ ಜನ್ಮಭೂಮಿ
http://www.mediafire.com/file/2432g0f0rm2v5x7/janani%20janmabhoomi_tif.pdf
ಕಡಲ ಮುತ್ತು
http://www.mediafire.com/file/u7itsnlkr08ke2f/kadala%20muttu_tif.pdf
ಕಲ್ಯಾಣ ಮಸ್ತು
http://www.mediafire.com/file/111zdnf1rgrnzso/kalyana%20mastu_tif.pdf
ಮತ್ತೊಂದು ಬಾಡದ ಹೂವು
http://www.mediafire.com/file/o18gopozp1ev6l3/mattondu%20badada%20hoovu_tif.pdf
ನವ ಚೈತ್ರ
http://www.mediafire.com/file/b3rjptbkd9cga9d/nava%20chaitra_tif.pdf
ಪಾಂಚಜನ್ಯ
http://www.mediafire.com/file/gq490j997su6sib/panchajanya_tif.pdf
ಪ್ರಿಯ ಸಖಿ
http://www.mediafire.com/file/18nq495jc37nwhw/priya%20sakhi_tif.pdf
ಪುಷ್ಕರಣಿ
http://www.mediafire.com/file/kcm9daaxnvcmmqn/pushkarani_tif.pdf
ಸಾಗರ ತರಂಗಿಣಿ
http://www.mediafire.com/file/3g25c6jwdzaotxh/sagar%20tarangini_tif.pdf
ನೂರು ನೆನಪು – ಸಾಯಿಸುತೆ
http://www.mediafire.com/file/wjto179e2ttfv9x/Nooru%20Nenapu%20-%20Saisute.pdf
ಹೇಮಂತದ ಸೊಗಸು – ಸಾಯಿಸುತೆ
http://www.mediafire.com/file/9ntkcnpq320pnit/Hemantada%20Sogasu.zip
 
MK ಇಂದಿರಾ ಕಾದಂಬರಿಗಳು ಬಿದಿಗೆ ಚಂದ್ರಮ ಡೊಂಕು – MK ಇಂದಿರಾ
http://www.mediafire.com/file/5qan08818p14mhz/Bidige%20Chandrama%20Donku.pdf
ತೆಗ್ಗಿನಮನೆ ಸೀತೆ – MK ಇಂದಿರಾ
http://www.mediafire.com/file/ea3mo0vvoq34c0w/Tegginamane%20Seete.pdf
ಟು ಲೆಟ್ – MK ಇಂದಿರಾ
http://www.mediafire.com/file/sj86gen200pmbuq/To-Let.pdf
ಪುಟ್ಟಣ್ಣ ಕಣಗಾಲ್ – MK ಇಂದಿರಾ
http://www.mediafire.com/file/ad26fgmwjqedrxz/Puttanna%20Kanagal.pdf
 
ಉಷಾ ನವರತ್ನರಾಮ್ ಕಾದಂಬರಿಗಳು ಅಭಿನಯ
http://www.mediafire.com/file/3durwkbr26pyrov/Abhinaya_tif.pdf
ಆಶ್ವಾಸನೆ
http://www.mediafire.com/file/bzm4w4fs099mrga/Ashwasane_tif.pdf
ಬೆಳ್ಳಿ ತೆರೆ
http://www.mediafire.com/file/thnab7hbbbatxhc/Belli%20Tere_tif.pdf
ಹರಿದ ಹೊನಲು
http://www.mediafire.com/file/v4npeqv4v15cdhk/Harida%20Honalu_tif.pdf
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
http://www.mediafire.com/file/eie8938wanpcjdq/Hottegaagi%20Genu%20Battegaagi_tif.pdf
ಹೃದಯ ಮಿಲನ
http://www.mediafire.com/file/rqdsvnqsp18yh82/Hrudaya%20Milana_tif.pdf
ಮನವೆಂಬ ಮರ್ಕಟ
http://www.mediafire.com/file/93om6g7cj4ggxlg/Manavemba%20Markata_tif.pdf
ವಧು ಬೇಕಾಗಿದೆ
http://www.mediafire.com/file/7ytakt1cfbrd3cf/Vadhu%20Bekaagide_tif.pdf
 
 
BV ಅನಂತರಾಮ್  ಅವರ ಪುಸ್ತಕಗಳು

ರಾಜಾ ಚೆಂಡೂರ್ ಅವರ ಪುಸ್ತಕಗಳು
ಬೆಂಕಿಯ ಮಳೆ -  

http://www.mediafire.com/file/e47dbqaqgaeb6ne/Benkiya%20Male%20-%20Raaja%20Chendoor.pdfHidiyalli Ede Midita – ರಾಜಾ ಚೆಂಡೂರ್
http://www.mediafire.com/file/84br6h1qcs7rfa2/Hidiyalli%20Edemidita%20-%20Raaja%20Chendoor.pdf

November 2, 2013

ಕಹಳೆಯಲ್ಲಿ ಪ್ರಕಟವಾದ ಲೇಖನ


ನನ್ನ ಬುದ್ದಿಗೆ ತಿಳಿದದ್ದನ್ನು ನಾನು ಮಾಡಿದ್ದೇನೆ.

ಒಂದು ದಿನ ಡಿ.ವಿ.ಜಿ. ಯವರು ತಮ್ಮ ಗೆಳೆಯರೊಂದಿಗೆ ಬೆಳಿಗ್ಗೆ ಬೆಂಗಳೂರಿನಲ್ಲಿ ನರಹರಿ ಗುಡ್ಡದ ಕಡೆಗೆ ವಾಕಿಂಗ್ ಹೊರಟಿದ್ದರು. ಅಲ್ಲಿ ಅವರಿಗೆ ಪರಿಚಿತರಾದ ಸೆಂಟ್ರಲ್ ಕಾಲೇಜಿನ ಒಬ್ಬ ಸೀನಿಯರ್ ಪ್ರೊಫೆಸರ್ ಗೋಣಿಚೀಲದ ಮೇಲೆ ಕೆಲವು ಪುಸ್ತಕಗಳನ್ನು ಇಟ್ಟುಕೊಂಡು ಕಾಗದದ ಮೇಲೆ ಲೆಕ್ಕ ಮಾಡುತ್ತಿದ್ದರು. ಅದೇನೆಂದು ಡಿ.ವಿ.ಜಿ. ಯವರು ವಿಚಾರಿಸಿದಾಗ ಈ ದಿನದ ಪಾಠದ ಲೆಕ್ಕವೆಂದು ಪ್ರೊಫೆಸರರು ಹೇಳಿದರು. 'ನೀವು ಸೀನಿಯರ್ ಪ್ರೊಫೆಸರ್ ಇದ್ದೀರಿ, ಅಲ್ಲದೇ ಗಣಿತಶಾಸ್ತ್ರದಲ್ಲಿ ಮಹಾಪಂಡಿತರು ಕೂಡಾ, ಆದರೂ ಪಾಠಕ್ಕೆ ಹೋಗುವಾಗ ಲೆಕ್ಕ ಮಾಡಿಕೊಂಡು ಹೋಗಬೇಕಾ?' ಎಂದರು ಡಿ.ವಿ.ಜಿ. ಯವರು.

'ಪಾಂಡಿತ್ಯವೇನೋ ಸರಿ. ಆದರೆ ಕ್ಲಾಸಿನಲ್ಲಿ ವಿದ್ಯಾರ್ಥಿಗಳು ಮಹಾ ಬುದ್ಧಿವಂತರಿರುತ್ತಾರೆ. ನಮ್ಮ ತಪ್ಪುಗಳನ್ನು ಹುಡುಕಬಲ್ಲವರೂ ಇರುತ್ತಾರೆ. ಸೂಕ್ಷ್ಮವಾದ ಪ್ರಶ್ನೆಗಳನ್ನು ಕೇಳುವವರೂ ಇರುತ್ತಾರೆ. ಅವರೆದುರು ನಿಲ್ಲುವಾಗ ತಾವು ತಯಾರಿಲ್ಲವೆಂದು ಅವರಿಗೆ ಗೊತ್ತಾದರೆ ನಾವು ಬಹಳ ಸಣ್ಣವರಾಗುತ್ತೇವೆ. ಪ್ರತಿದಿನದ ತಮ್ಮ ಪಾಠದ ಬಗ್ಗೆ ಅಧ್ಯಯನ ಮಾಡಬೇಕಾದದ್ದು ಉಪಾಧ್ಯಾಯನ ಕರ್ತವ್ಯ. ಹಾಗೆ ವ್ಯಾಸಂಗ ಮಾಡಿಕೊಳ್ಳದೇ ಕ್ಲಾಸಿಗೆ ಹೋದರೆ ನಾವು ಕರ್ತವ್ಯಭ್ರಷ್ಟರಾಗುತ್ತೇವೆ’ ಎಂದರು ಪ್ರೊಫೆಸರರು. ಹೀಗೆ ತಮ್ಮ ಕರ್ತವ್ಯದ ಬಗ್ಗೆ ಅಪಾರ ಶ್ರದ್ಧೆ, ಪ್ರೀತಿ, ಕಾಳಜಿ ಇದ್ದ ಪ್ರೊಫೆಸರ್ ಬೇರೆ ಯಾರೂ ಅಲ್ಲ, ಅವರೇ ಬೆಳ್ಳಾವೆ ವೆಂಕಟನಾರಾಣಪ್ಪನವರು.

ವೆಂಕಟನಾರಾಣಪ್ಪನವರ ಸ್ವಂತ ಊರು ತುಮಕೂರು ಜಿಲ್ಲೆಯ ಬೆಳ್ಳಾವೆ. 1872 ರಲ್ಲಿ ಜನಿಸಿದ ವೆಂಕಟನಾರಾಣಪ್ಪನವರ ತಂದೆ ವೆಂಕಟಕೃಷ್ಣಯ್ಯ ಅಂಚೆ ಇಲಾಖೆಯಲ್ಲಿದ್ದರು. ತಾಯಿ ಲಕ್ಷ್ಮಿದೇವಿ. ವೆಂಕಟನಾರಾಣಪ್ಪನವರ ಪ್ರಾಥಮಿಕ ಶಿಕ್ಷಣ ಬೆಳ್ಳಾವೆಯ ಕೂಲಿಮಠದಲ್ಲಿ ಪ್ರಾರಂಭವಾಯಿತು. ಪ್ರೌಢಶಿಕ್ಷಣ ತುಮಕೂರಿನಲ್ಲಿ ಮುಂದುವರೆಯಿತು. ತುಮಕೂರಿನಲ್ಲಿ ಕಾಲೇಜು ಇಲ್ಲದ್ದರಿಂದ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಶಿಕ್ಷಣ ಮುಂದುವರೆಸಿ ಬಿ.ಎ. ಪದವಿ ಪಡೆದರು. ಆಗ ಜಾನ್-ಕುಕ್ ರವರು ಸೆಂಟ್ರಲ್ ಕಾಲೇಜಿನ ಪ್ರಿನ್ಸಿಪಾಲರಾಗಿದ್ದರು. ಅವರಿಗೆ ತಮ್ಮ ಕಾಲೇಜು ಮತ್ತು ವಿದ್ಯಾರ್ಥಿಗಳ ಮೇಲೆ ಅಪಾರ ಕಾಳಜಿ ಮತ್ತು ಅಭಿಮಾನವಿತ್ತು. ವೆಂಕಟನಾರಾಣಪ್ಪನವರ ಆದ್ಯವಸಾನ ಪ್ರವೃತ್ತಿಯನ್ನು ಗಮನಿಸಿದ ಜಾನ್-ಕುಕ್ ರವರು ಅವರ ಬಿ.ಎ. ಮುಗಿದ ಕೂಡಲೆ ತಮ್ಮ ಕಾಲೇಜಿನಲ್ಲಿ ಅಧ್ಯಾಪಕರನ್ನಾಗಿ ನೇಮಿಸಿಕೊಂಡರು.

ವೆಂಕಟನಾರಾಣಪ್ಪನವರು "ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ" ಎಂಬಂತೆ ಇದ್ದರು. ಅಂದರೆ ಹೊರಗೆ ಕಠಿಣವಾದರೂ ಅಂತರಂಗದಲ್ಲಿ ಕರುಣೆ ಉಳ್ಳವರಾಗಿದ್ದರು. ಇವರ ನಡೆ ನುಡಿ ಸ್ವಭಾವಗಳನ್ನು ಗಮನಿಸಿದ ಜಾನ್-ಕುಕ್ ರವರು ಮದರಾಸಿಗೆ ಹೋಗಿ ಎಂ.ಎ. ಓದಲು ಸಲಹೆ ನೀಡಿದರು. ಅವರ ಆಣತಿಯಂತೆ ಎಂ.ಎ. ಪಾಸಾದ ನಂತರ ಮತ್ತೆ ಸೆಂಟ್ರಲ್ ಕಾಲೇಜಿಗೆ ಬಂದು ಸೇರಿದರು. ಅವರಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರಗಳು ಅಚ್ಚುಮೆಚ್ಚಿನ ವಿಷಯಗಳಾಗಿದ್ದವು. ಆದರ್ಶ ಅಧ್ಯಾಪಕರ ಎಲ್ಲಾ ಗುಣಗಳೂ ಇದ್ದುದರಿಂದ ಬಹುಬೇಗ ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿದರು.

ಮೈಸೂರು ವಿಶ್ವವಿದ್ಯಾಲಯದಲ್ಲಿ 1927 ರಲ್ಲಿ ಎಂ.ಎ. ಕನ್ನಡ ಪ್ರಾರಂಭವಾಯಿತು. ಅದಕ್ಕಾಗಿ ಪೂರ್ಣ ಪ್ರಮಾಣದ ಪ್ರೊಫೆಸರರನ್ನು ನೇಮಿಸಲು ನಿರ್ಧರಿಸಿ, ಅರ್ಜಿ ಆಹ್ವಾನಿಸಲಾಯಿತು. ಅನೇಕ ಅರ್ಜಿಗಳು ಬಂದವು. ಆಗ ವೈಸ್-ಚಾನ್ಸಲರ್ ಆಗಿದ್ದ ಶ್ರೀ ಹೆಚ್. ವಿ. ನಂಜುಂಡಯ್ಯನವರು, ಬಂದ ಅರ್ಜಿಗಳಲ್ಲಿ ಯಾರೋ ಗೊತ್ತಾದ ಒಬ್ಬರನ್ನು ಆಯ್ಕೆ ಮಾಡಲು ನಿರ್ಧರಿಸಿದ್ದಾರೆಂದು ಸುದ್ದಿ ಹರಡಿತು.

ಆ ನಿರ್ದಿಷ್ಠ ವ್ಯಕ್ತಿಯ ಅರ್ಹತೆ ಕುರಿತು ಅನೇಕರಿಗೆ ಭಿನ್ನಾಭಿಪ್ರಾಯವಿತ್ತು. ಈ ಸಂದರ್ಭದಲ್ಲಿ ವೆಂಕಟನಾರಾಣಪ್ಪನವರು ಆ ವ್ಯಕ್ತಿಯ ಕೆಲವು ಲೇಖನಗಳನ್ನು ಸಂಗ್ರಹಿಸಿ ಅವುಗಳಲ್ಲಿನ ತಪ್ಪುಗಳನ್ನು ಪಟ್ಟಿಮಾಡಿ ಅಚ್ಚುಮಾಡಿಸಿ ಸೆನೆಟ್ ನ ಸದಸ್ಯರಿಗೆಲ್ಲ ಹಂಚಿದರು. 

ಈ ಸುದ್ದಿ ನಂಜುಂಡಯ್ಯನವರಿಗೆ ತಿಳಿಯಿತು. ವೆಂಕಟನಾರಾಣಪ್ಪನವರನ್ನು ಕರೆಸಿ ತರಾಟೆಗೆ ತೆಗೆದುಕೊಂಡರು. "ಪ್ರೊಫೆಸರರ ಕೆಲಸ ಬಹಳ ಜವಾಬ್ದಾರಿಯದು. ಅದಕ್ಕೆ ಅರ್ಹ ಪಾಂಡಿತ್ಯವುಳ್ಳವರು, ಎಲ್ಲರಿಗೂ ಒಪ್ಪಿಗೆಯುಳ್ಳವರೂ ಇರಬೇಕು. ಅದಕ್ಕಾಗಿ ನನ್ನ ಬುದ್ಧಿಗೆ ತಿಳಿದದ್ದನ್ನು ನಾನು ಮಾಡಿದ್ದೇನೆ" ಎಂದರು ವೆಂಕಟನಾರಾಣಪ್ಪ. ‘'ನೀವು ಡಿಫಮೊಷನ್(ಅಪಮಾನ ಮಾಡು)ನಂತಹ ಅಕಾರ್ಯ ಮಾಡಿದ್ದೀರಿ. ಅಲ್ಲದೇ ಸರಕಾರದ ಆಡಳಿತ ವಿಷಯದಲ್ಲಿ ಕೈಹಾಕಿದ್ದಕ್ಕಾಗಿ ಕೆಲಸ ಕಳೆದುಕೊಳ್ಳುವಿರಿ' ಎಂದು ನಂಜುಂಡಯ್ಯನವರು ಘರ್ಜಿಸಿದರು. ಕೋರ್ಟ್ ನೀಡುವ ಶಿಕ್ಷೆಯನ್ನು ಅನುಭವಿಸುವುದಾಗಿ ಹೇಳಿದ ವೆಂಕಟನಾರಾಣಪ್ಪ ತಕ್ಷಣವೇ ರಾಜೀನಾಮೆ ಬರೆದುಕೊಟ್ಟು ಹೋದರು. 

ಆಗ ಮೆಟ್-ಕಾಫ್ ರವರು ಸೆಂಟ್ರಲ್ ಕಾಲೇಜಿನ ಪ್ರಿನ್ಸಿಪಾಲರಾಗಿದ್ದರು. ಅವರಿಗೆ ಈ ವಿಷಯ ತಿಳಿದು ನಂಜುಂಡಯ್ಯನವರ ಬಳಿ ಹೋಗಿ ವೆಂಕಟನಾರಾಣಪ್ಪನವರು ಸರಿಯಾದ ಕಾರ್ಯ ಮಾಡಿರುವುದಾಗಿ ವಿವರಿಸಿ, ಅವರ ರಾಜೀನಾಮೆಯನ್ನು ವಾಪಾಸ್ಸು ತಂದರು. ವೆಂಕಟನಾರಾಣಪ್ಪನವರು ಧೈರ್ಯದಿಂದ ಈ ಕೆಲಸ ಮಾಡದಿದ್ದರೆ ಮೈಸೂರು ವಿ.ವಿ. ಪ್ರಥಮವಾಗಿ ಒಬ್ಬ ಅಸಮರ್ಥ ಕನ್ನಡ ಪ್ರೊಫೆಸರರನ್ನು ಪಡೆಯಬೇಕಾಗುತ್ತಿತ್ತು. ಅದನ್ನು ತಪ್ಪಿಸಿದ ಕೀರ್ತಿ ವೆಂಕಟನಾರಾಣಪ್ಪನವರಿಗೆ ಸಲ್ಲುತ್ತದೆ. ಮುಂದೆ ಒಬ್ಬ ಯೋಗ್ಯ ಪ್ರೊಫೆಸರ್ ಆಗಿ ಬಿ. ಕೃಷ್ಣಪ್ಪನವರು ಆಯ್ಕೆಯಾಗಿ ಬಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಶ್ರಮಿಸಿದವರಲ್ಲಿ ವೆಂಕಟನಾರಾಣಪ್ಪನವರು ಪ್ರಮುಖರು. ಪರಿಷತ್ತು ಪ್ರಾರಂಭವಾದಾಗಿನಿಂದಲೂ ತಮಗೆ ನಡೆದಾಡಲು ಸಾಧ್ಯವಿರುವ ತನಕ ಪರಿಷತ್ತಿನ ಎಲ್ಲಾ ಕಾರ್ಯಗಳನ್ನೂ ಅಚ್ಚುಕಟ್ಟಾಗಿ ನೆರವೇರಿಸುತ್ತಿದ್ದರು. ಕಸ ಗುಡಿಸುವುದರಿಂದ ಸಮ್ಮೇಳನದ ವ್ಯವಸ್ಥೆಯವರೆಗಿನ ಎಲ್ಲಾ ಕಾರ್ಯಗಳಲ್ಲೂ ತನ್ಮಯತೆಯಿಂದ ಭಾಗವಹಿಸುತ್ತಿದ್ದರು. ಪರಿಷತ್ತಿನ ಕಾರ್ಯದರ್ಶಿಯಾಗಿ, ಕೋಶಾಧಿಕಾರಿಯಾಗಿ, ಪರಿಷತ್ತಿನ ಪತ್ರಿಕೆಯ ಸಂಪಾದಕರಾಗಿ ಅನೇಕ ಕಾರ್ಯಗಳನ್ನು ಮಾಡಿದರು. 'ಪರಿಷತ್ತು ಎಂದರೆ ವೆಂಕಟನಾರಾಣಪ್ಪ' ಎಂಬಂತೆ ಶ್ರದ್ಧೋತ್ಸಾಹದಿಂದ ಅಹರ್ನಿಶಿ ದುಡಿದರು.

ವೆಂಕಟನಾರಾಣಪ್ಪನವರು ಅನೇಕ ಸೃಜನಶೀಲ ಸಾಹಿತ್ಯ ರಚಿಸಿದರು. ಅವರ ನಾಡು ನುಡಿ ಸೇವೆಯನ್ನು ಗಮನಿಸಿದ ಪರಿಷತ್ತು, ಅವರನ್ನು 1937 ರಲ್ಲಿ ಜಮಖಂಡಿಯಲ್ಲಿ ನಡೆದ 22 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಿತು. ವಿವಿಧ ಸಾಮಾಜಿಕ ಸೇವಾ ಕಾರ್ಯ ಮಾಡಿದ ವೆಂಕಟನಾರಾಣಪ್ಪನವರು 1943 ರಲ್ಲಿ ಅಸ್ತಂಗತರಾದರು. ಆದರೂ ಅವರ ಸತ್ಕಾರ್ಯ ಇಂದಿಗೂ ಧೃವತಾರೆಯಂತೆ ಪ್ರಜ್ವಲಿಸುತ್ತಿದೆ. 

ಮೇಲ್ಕಾಣಿಸಿದ ಬರೆಹವನ್ನು ಓದಲು, ದಯಮಾಡಿ ಈ ಅಂತರ್ಜಾಲ ಕೊಂಡಿಯನ್ನು ಅನುಸರಿಸಿhttp://www.kahale.gen.in/2013/11/02-Nov.html ಅಥವಾ www.kahale.gen.in ಗೆ ಭೇಟಿಕೊಡಿ.

ಲೇಖಕರ ಕಿರುಪರಿಚಯ
ಶ್ರೀ ಗುರುಬಸವರಾಜ ಅರ್. ಬಿ.

ಬಳ್ಳಾರಿ ಜಿಲ್ಲೆಯ ಹೊಳಗುಂದಿ ಇವರ ಸ್ವಗ್ರಾಮ. ಪ್ರಸ್ತುತ ಹಗರಿಬೊಮ್ಮನಹಳ್ಳಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಓದುವುದು, ವೈಜ್ಞಾನಿಕ ಮತ್ತು ಶೈಕ್ಷಣಿಕ ಲೇಖನಗಳನ್ನು ಬರೆಯುವುದು ಹಾಗೂ ಪವಾಡ ರಹಸ್ಯಗಳನ್ನು ಬಯಲು ಮಾಡುವುದು ಇವರ ಹವ್ಯಾಸ.

Blog  |  Facebook  |  Twitter