May 30, 2018

ತಂಬಾಕಿಗೆ ಗುಡ್‌ಬೈ GOODBYE TO TOBACCO

ದಿನಾಂಕ 30-5-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ತಂಬಾಕಿಗೆ ಗುಡ್‌ಬೈ 



ಇಂದು ದೇಶವನ್ನು ಕಾಡುತ್ತಿರುವ ಆರೋಗ್ಯ ಸಂಬಂಧಿ ಪಿಡುಗುಗಳಲ್ಲಿ ಅತೀ ದೊಡ್ಡ ಪಿಡುಗು ಎಂದರೆ ತಂಬಾಕು. ಇದು ಏಡ್ಸ್, ಡ್ರಗ್ಸ್, ಕುಡಿತ, ಆತ್ಮಹತ್ಯೆ ಮತ್ತು ಕೊಲೆಗಿಂತ ಹೆಚ್ಚು ಅಪಾಯಕಾರಿ. ಭಾರತದಲ್ಲಿ ಪ್ರತಿವರ್ಷ ತಂಬಾಕು ಕ್ಯಾನ್ಸರ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ 10 ಲಕ್ಷ ಮೀರುತ್ತಿದೆ ಎಂದು `ಭಾರತೀಯ ವೈದ್ಯ ಸಂಸ್ಥೆ’(ಂIಒS)ಹೇಳಿದೆ. ಇದರಲ್ಲಿ ಪುರುಷÀರ ಸಂಖ್ಯೆ ಅಧಿಕ. ಅದರಲ್ಲೂ ಧೂಮಪಾನಿಗಳ ಸಂಖ್ಯೆ ಇನ್ನೂ ಅಧಿಕ. ಶೇ.56 ರಷ್ಟು ಪುರುಷರು ಮತ್ತು ಶೇ.44 ರಷ್ಟು ಮಹಿಳೆಯರು ತಂಬಾಕು ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ಶೇ.82 ರಷ್ಟು ಪ್ರಕರಣಗಳಲ್ಲಿ ಶ್ವಾಸಕೋಶದ ಕಾಯಿಲೆ, ಪುಪ್ಪುಸದ ಕ್ಯಾನ್ಸರ್‌ಗೆ ತಂಬಾಕು ಕಾರಣ ಎಂದು ಧೃಢಪಟ್ಟಿದೆ.
ಕಳೆದ ದಶಕದ ಅಂಕಿ-ಅಂಶಗಳನ್ನು ಗಮನಿಸಿದರೆ, ದಶಕದ ಪ್ರಾರಂಭಕ್ಕಿಂತ ಅಂತ್ಯದ ವೇಳೆಗೆ ತಂಬಾಕು ಸೇವಿಸುವವರ ಸಂಖ್ಯೆ ಹೆಚ್ಚಾಗಿರುವುದು ಕಂಡುಬರುತ್ತದೆ. ಇದೇ ಪರಿಸ್ಥಿತಿ ಮುಂದುವರೆದರೆ 2020 ರ ವೇಳೆಗೆ ತಂಬಾಕು ಸಂಬಂಧಿ ಕಾಯಿಲೆ ಮತ್ತು ಸಾವುಗಳ ಪ್ರಮಾಣ ಶೇಕಡಾ 8.9 ರಷ್ಟು ಹೆಚ್ಚುವ ಭೀತಿ ಇದೆ.
ಈ ಎಲ್ಲಾ ಅಂಕಿ-ಅಂಶಗಳನ್ನು ಗಮನಿಸಿದರೆ ತಂಬಾಕು ಸೇವನೆ ಪ್ರತಿವರ್ಷ ಅಧಿಕವಾಗುತ್ತಿರುವುದು ಶೋಚನೀಯ. ಅದರಲ್ಲೂ ಯುವಜನತೆ ಮತ್ತು ಮಕ್ಕಳು ಅಧಿಕ ಪ್ರಮಾಣದಲ್ಲಿ ಈ ಪಿಡುಗಿಗೆ ತುತ್ತಾಗುತ್ತಿರುವುದು ಅಘಾತಕಾರಿಯಾಗಿದೆ. ಒಂದು ಸಮೀಕ್ಷೆ ಪ್ರಕಾರ 12-14 ವಯೋಮಾನದ ಶೇ.21 ಬಾಲಕರು ಮತ್ತು ಶೇ.2 ಬಾಲಕಿಯರು ತಂಬಾಕು ಉತ್ಪನ್ನಗಳಿಗೆ ದಾಸರಾಗುತ್ತಿದ್ದಾರೆ. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳು ಮತ್ತು ಯುವಕರು ತಂಬಾಕು ಉತ್ಪನ್ನಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ. 
ಕಾರಣಗಳು
ದೃಶ್ಯ ಮಾಧ್ಯಮ ಹಾಗೂ ಚಲನಚಿತ್ರಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆಯನ್ನು ವೈಭವೀಕರಿಸಿ ತೋರಿಸುವುದು.
ಕುಟುಂಬ ಮತ್ತು ಸುತ್ತಲಿನ ಪರಿಸರದಲ್ಲಿನ ಬಹುತೇಕ ಜನರು ತಂಬಾಕು ಉತ್ಪನ್ನಗಳನ್ನು ಬಳಸುತ್ತಿರುವುದು.
ಸ್ನೆÃಹಿತರನ್ನು ಒಲಿಸಿಕೊಳ್ಳಲು/ಒತ್ತಾಯಕ್ಕಾಗಿ ಅಥವಾ ಅನುಕರಣೆಯಿಂದಾಗಿ ತಂಬಾಕು ಉತ್ಪನ್ನಗಳಿಗೆ ಬಲಿಯಾಗುತ್ತಿರುವುದು.
ವಿರಾಮವೇಳೆ ಕಳೆಯಲು ಹಾಗೂ ಮನೋರಂಜನೆಗಾಗಿ.
ಜಾಹೀರಾತಿನ ಪ್ರಭಾವಕ್ಕೆ ಒಳಗಾಗುವುದು.
ತಂಬಾಕಿನಿಂದಾಗುವ ದುಷ್ಪರಿಣಾಮಗಳು
ತಂಬಾಕು ಸೇವನೆಯಿಂದ ಅನೇಕ ರೀತಿಯ ನಷ್ಟಗಳಾಗುತ್ತವೆ. ಮೊದಲನೆಯದು ಸಾಮಾಜಿಕ ಸ್ಥಾನಮಾನ, ಗೌರವಕ್ಕೆ ಕುಂದುಂಟಾಗುತ್ತದೆ. ಎರಡನೆಯದು ಆರೋಗ್ಯ ಹಾನಿಯುಂಟಾಗುತ್ತದೆ. ಮೂರನೆಯದು ಆರ್ಥಿಕ ನಷ್ಟವಾಗುತ್ತದೆ. ಹೇಗೆಂದರೆ, ಒಬ್ಬ ವ್ಯಕ್ತಿ ತಂಬಾಕು ಸೇವನೆಗಾಗಿ (ಬೀಡಿ/ಸಿಗರೇಟು/ಹುಕ್ಕಾ/ಗುಟ್ಕಾ/ಖೈನಿ/ಜರ್ದಾಪಾನ್ ಇತ್ಯಾದಿ) ದಿನವೊಂದಕ್ಕೆ 30-50 ರೂ. ಖರ್ಚು ಮಾಡುತ್ತನೆ ಎಂದುಕೊಂಡರೆ, ಒಂದು ವರ್ಷಕ್ಕೆ 14,600 ರೂ.ಗಳನ್ನು ಹಾಗೂ 10 ವರ್ಷಕ್ಕೆ 1,46,000 ರೂ.ಗಳನ್ನು ಖರ್ಚು ಮಾಡುತ್ತಾನೆ. ಇಷ್ಟೊಂದು ಮೊತ್ತದ ಹಣವನ್ನು ತಂಬಾಕು ಸೇವನೆಗಾಗಿ ಖರ್ಚು ಮಾಡುವ ವೇಳೆಗೆ ಅವನ ಆರೋಗ್ಯ ಹದಗೆಟ್ಟಿರುತ್ತದೆ. ಆರೋಗ್ಯ ಸುಧಾರಣೆಗಾಗಿ ಲಕ್ಷ ಲಕ್ಷಗಳೇ ಖರ್ಚಾಗಬಹುದು. ಹೀಗೆ ತಂಬಾಕು ಆರ್ಥಿಕ ನಷ್ಟವನ್ನೂ ಉಂಟುಮಾಡುತ್ತದೆ. 
ಈಗಾಗಲೇ ನಮಗೆಲ್ಲಾ ತಿಳಿದಿರುವಂತೆ ತಂಬಾಕಿನಲ್ಲಿರುವ ‘ನಿಕೋಟಿನ್’ ಅತ್ಯಂತ ವಿಷಕಾರಿ ಎಂಬುದು ಸಾಬೀತಾಗಿದೆ. ನಿಕೋಟಿನ್ ಎಷ್ಟು ವಿಷಕಾರಿ ಎಂದರೆ, 6 ಮಿ.ಗ್ರಾಂ ನಿಕೋಟಿನ್‌ನ್ನು ನೇರವಾಗಿ ಒಂದು ನಾಯಿಗೆ ಪ್ರಯೋಗಿಸಿದರೆ ಕೆಲವೇ ಸೆಕೆಂಡುಗಳಲ್ಲಿ ನಾಯಿ ಸಾಯುತ್ತದೆ. ಇಂತಹ ನಿಕೋಟಿನ್ ನಮ್ಮ ಬಾಯಿಗೆ ಪ್ರವೇಶಿಸಿದ 10 ಸೆಕೆಂಡುಗಳಲ್ಲಿ ಮೆದುಳಿಗೆ ಹೋಗಿ ‘ಡೊಪಾಮಿನ್’ ಎಂಬ ವಿಷವನ್ನು ಉತ್ಪಾದಿಸಿ ಮೆದುಳಿಗೆ ಬರುವ ರಕ್ತ ಸಂಚಾರಕ್ಕೆ ತಡೆಯೊಡ್ಡುತ್ತದೆ. ಕ್ರಮೇಣವಾಗಿ ಇದು ಬಾಯಿಯ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಧೂಮಪಾನಿಗಳು ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗುವರು, ಅಲ್ಲದೇ ಅನ್ನನಾಳದ, ಹೊಟ್ಟೆಯ, ಮೂತ್ರಪಿಂಡದ, ಮೂತ್ರಕೋಶದ, ಮೇದೋಜೀರಕ ಗ್ರಂಥಿಯ, ಗರ್ಭಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು. ನಿಕೋಟಿನ್ ರಕ್ತದೊತ್ತಡ ಮತ್ತು ಕೊಲೆಸ್ಟಾçಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೇ ಗರ್ಭೀಣಿಯರ ಗರ್ಭದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.  
ತಂಬಾಕನ್ನು ಹದಗೊಳಿಸಲು ಮತ್ತು ಸ್ವಾದಿಷ್ಟಗೊಳಿಸಲು 4 ಸಾವಿರಕ್ಕಿಂತ ಹೆಚ್ಚಿನ ರಸಾಯನಿಕಗಳನ್ನು ಬೆರೆಸುತ್ತಾರೆ. ಅದರಲ್ಲಿ 250ಕ್ಕೂ ಹೆಚ್ಚಿನ ರಸಾಯನಿಕಗಳು ವಿಷಕಾರಿಗಳಾಗಿವೆ ಹಾಗೂ 50ಕ್ಕೂ ಹೆಚ್ಚಿನ ರಸಾಯನಿಕಗಳು ಕ್ಯಾನ್ಸರ್‌ಗೆ ಕಾರಣವಾಗಿವೆ. ಅಲ್ಲದೇ ಚರ್ಮ ಹದಮಾಡಲು ಬಳಸುವಂತಹ ಅತಿ ತೀಕ್ಷ÷್ಣವಾದ ರಸಾಯನಿಕಗಳನ್ನು ತಂಬಾಕು ಸಂಸ್ಕರಣೆಗೆ ಬಳಸುವುದರಿಂದ ಬಾಯಿಯ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ರಸಾಯನಿಕ ಬೆರೆಸದಿದ್ದಾಗಲೂ ನಿಕೋಟಿನ್‌ನ ಪ್ರಮಾಣ ಪ್ರತಿ ಪೌಂಡಿಗೆ 22.8 ಗ್ರಾಂ ಇರುತ್ತದೆ. ಅಲ್ಲದೇ ಅದರಲ್ಲಿ ಕೊಲಿಡೀಸ್, ಅಮೋನಿಯಾ, ಪೈಯರಡೀನ್, ಕಾರ್ಬನ್ ಮೋನಾಕ್ಸೆöÊಡ್‌ಗಳೆಂಬ ಪ್ರತ್ಯೆÃಕ ವಿಷಕಾರಿಗÀಳಿವೆ. ಧೂಮಪಾನದೊಂದಿಗೆ ಹೊಗೆ ಮಾತ್ರ ದೇಹ ಸೇರುವುದಿಲ್ಲ. ಅದರ ಜೊತೆಗೆ ಅರ್ಸೆನಿಕ್, ಸೈನೈಡ್, ಫಾರ್ಮಾಲೈಡ್ ಮುಂತಾದ ವಿಷಕಾರಿಗಳು ಸೇರುತ್ತವೆ.
 


ದುಷ್ಟರಿಣಾಮದ ಕೆಲವು ಅಂಕಿ-ಅಂಶಗಳು
ತಂಬಾಕು ಅದರ ಬಳಕೆದಾರರ ಅರ್ದದಷ್ಟು ಜನರನ್ನು ಕೊಲ್ಲುತ್ತದೆ.
ತಂಬಾಕು ಪ್ರತಿವರ್ಷ 70 ಲಕ್ಷ ಜನರನ್ನು ಕೊಲ್ಲುತ್ತದೆ. ಅದರಲ್ಲಿ 60 ಲಕ್ಷ ಜನರು ನೇರ ತಂಬಾಕಿಗೆ ಬಲಿಯಾದರೆ, ಉಳಿದ ಒಂದು ಲಕ್ಷ ಜನರು ಸೆಕೆಂಡ್ ಹ್ಯಾಂಡ್ ಧೂಮಪಾನದಿಂದ ಸಾಯುತ್ತಾರೆ. 
ವಿಶ್ವದ 1.1 ಕೋಟಿ ಧೂಮಪಾನಿಗಳಲ್ಲಿ ಶೇಕಡಾ 80 ರಷ್ಟು ಜನರು ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿ ವಾಸಿಸುತ್ತಾರೆ.


ಸೆಕೆಂಡ್ ಹ್ಯಾಂಡ್ ಧೂಮಪಾನಿ
ಧೂಮಪಾನಿ ಬಿಟ್ಟ ಹೊಗೆಯನ್ನು ಸೇವಿಸುವವರನ್ನು ಸೆಕೆಂಡ್ ಹ್ಯಾಂಡ್ ಧೂಮಪಾನಿಗಳೆನ್ನುವರು. ಧೂಮಪಾನಿಯು ಬೀಡಿ, ಸಿಗರೇಟ್, ಹುಕ್ಕಾ, ಪೈಪ್ ಇತ್ಯಾದಿಗಳಿಂದ  ತಂಬಾಕು ಸೇವಿಸಿ ಬಿಟ್ಟ ಹೊಗೆಯನ್ನು ಪಕ್ಕದಲ್ಲಿರುವ ಇನ್ನಿತರರು ಸೇವಿಸುತ್ತಾರೆ. ಇವರೇ ಸೆಕೆಂಡ್ ಹ್ಯಾಂಡ್ ಧೂಮಪಾನಿಗಳು. ಸಾಮಾನ್ಯವಾಗಿ ಮನೆ, ಹೋಟೆಲ್, ರೆಸ್ಟೊರೆಂಟ್, ಬಸ್/ರೈಲು ನಿಲ್ದಾಣಗಳು ಇತ್ಯಾದಿ ಜನಸಾಂದ್ರತೆ ಇರುವ ಪ್ರದೇಶದಲ್ಲಿ ಇಂತಹ ಸೆಕೆಂಡ್ ಹ್ಯಾಂಡ್ ಧೂಮಪಾನಿಗಳಿರುತ್ತಾರೆ. ಇದರಲ್ಲಿ ಮಕ್ಕಳು, ಮಹಿಳೆಯರು, ಗರ್ಭಿಣಿಯರು, ಬಾಣಂತಿಯರು, ವಯಸ್ಕರು, ಮುದುಕರೂ ಇರಬಹುದು. ಇವರು ನೇರವಾಗಿ ತಂಬಾಕನ್ನು ಸೇವಿಸದಿದ್ದರೂ ಧುಮಪಾನಿಯ ಹೊಗೆಯಿಂದ ಇವರಲ್ಲೂ ದುಷ್ಟರಿಣಾಮಗಳು ಕಾಣಿಸಿಕೊಳ್ಳುತ್ತವೆ.

ತಂಬಾಕು ತ್ಯಜಿಸುವುದರಿಂದ ಆಗುವ ಲಾಭಗಳು
ತಂಬಾಕು ತ್ಯಜಿಸುವುದರಿಂದ ಕೆಳಗಿನವುಗಳನ್ನು ಆನಂದಿಸಬಹುದು.
ಕೆಂಪು ಒಸಡುಗಳು, ಬಾಯಿ ಅಥವಾ ತುಟಿಯಲ್ಲಿನ ಬಿಳಿ ಕಲೆಗಳು ಮಾಯವಾಗುತ್ತವೆ.
ಒಸಡುಗಳಲ್ಲಿ ರಕ್ತ ಒಸರುವುದು ನಿಲ್ಲುತ್ತದೆ.
ಕೆಂಪು ಹಲ್ಲುಗಳಿಂದ ಮುಕ್ತಿ ದೊರೆಯುತ್ತದೆ.
ಸ್ವಸ್ಥ ಹಾಗೂ ಆರೋಗ್ಯಕರ ಬಾಯಿ ಇರುತ್ತದೆ.
ಆರೋಗ್ಯಪೂರ್ಣ ಹೊಳೆಯುವ ಕೆನ್ನೆಗಳು ನಿಮ್ಮದಾಗುತ್ತವೆ.
ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.
ಸಾಮಾಜಿಕ ಮನ್ನಣೆ ದೊರೆಯುತ್ತದೆ. 
ಉಸಿರು ಹಾಗೂ ಬಟ್ಟೆಗಳು ಉತ್ತಮ ವಾಸನೆಯಿಂದ ಕೂಡಿರುತ್ತದೆ.
ಆಹಾರವು ರುಚಿಯನ್ನು ಪಡೆದು ಸಂಪೂರ್ಣವಾಗಿ ಜೀರ್ಣವಾಗುತ್ತದೆ.
ಬೆರಳುಗಳು ಮತ್ತು ಉಗುರುಗಳು ನಿಧಾನವಾಗಿ ಹಳದಿ ಮುಕ್ತವಾಗುತ್ತವೆ.
ಉದ್ಯೊÃಗದ ಅವಕಾಶಗಳು ಹೆಚ್ಚುತ್ತವೆ.
ಹಣದ ಉಳಿತಾಯ ಆರಂಭವಾಗುತ್ತದೆ.
ಮುಕ್ತಿಮಾರ್ಗ
ತಂಬಾಕು ಸೇವನೆ ಇಂದು ಸಮುದಾಯ ಆರೋಗ್ಯ ಸಮಸ್ಯೆಯಾಗಿದೆ. ಇದಕ್ಕೆ ಬಲವಾದ ವಿರೋಧದ ಅಗತ್ಯವಿದೆ. ಬಹುತೇಕರು ತಂಬಾಕು ತ್ಯಜಿಸುವುದು ಸುಲಭವಲ್ಲ ಎನ್ನುತ್ತಾರೆ. ತಂಬಾಕು ಪದಾರ್ಥಗಳನ್ನು ತ್ಯಜಿಸುವುದು ದೇಹದ ತೂಕ ಕಳೆದುಕೊಳ್ಳುವಂತೆ ಬಹು ದೀರ್ಘಕಾಲದ ಪ್ರಯತ್ನ. ಆದರೆ ಬದ್ದತೆಯಿಂದ ಕೂಡಿದ ಗಟ್ಟಿ ನಿರ್ಧಾರದಿಂದ ಎಂತಹ ಚಟವನ್ನಾದರೂ ಬಿಡಬಹುದು. ತಂಬಾಕು ವಿರೋಧಿಸುವ ಪ್ರತಿಯೊಬ್ಬರೂ ಕೆಳಗಿನ ಅಂಶಗಳತ್ತ ಚಿತ್ತವಹಿಸಬೇಕಾಗಿದೆ.
ತಂಬಾಕು ತ್ಯಜಿಸುವ ದಿನಾಂಕವನ್ನು ನಿರ್ಧರಿಸಿ ಕ್ಯಾಲೆಂಡರನಲ್ಲಿ ಗುರುತಿಸಿಕೊಳ್ಳಿ.
ನೀವು ತಂಬಾಕು ತ್ಯಜಿಸುವ ದಿನಾಂಕದ ಬಗ್ಗೆ ನಿಮ್ಮ ಸ್ನೆÃಹಿತರು ಮತ್ತು ಕುಟುಂಬದವರಿಗೆ ತಿಳಿಸಿ.
ನಿಮ್ಮ ಮನೆ, ವಾಹನ, ಮತ್ತು ಕೆಲಸದ ಸ್ಥಳ ಎಲ್ಲವೂ ತಂಬಾಕು ಮುಕ್ತವಾಗಲಿ.
ತಂಬಾಕು ಸೇವಿಸುವ ಬಯಕೆಯಾದಾಗ ತಂಬಾಕಿನ ಬದಲು ಇನ್ನಿತರೇ ಅಪಾಯಕಾರಿಯಲ್ಲದ ಅಗಿಯುವ ವಸ್ತುಗಳು ಬಳಿಯಿರಲಿ. ಉದಾ: ಚಾಕೋಲೇಟ್, ಚ್ಯೂಯಿಂಗ್ ಗಮ್, ಕ್ಯಾಂಡಿ, ಲವಂಗ, ಯಾಲಕ್ಕಿ ಇತ್ಯಾದಿ.
ಕುಟುಂಬ ಅಥವಾ ದಂತ ವೈದ್ಯರನ್ನು ಸಂಪರ್ಕಿಸಿ ಬಾಯಿ ಪರೀಕ್ಷೆ ಮಾಡಿಸಿಕೊಳ್ಳಿ. 
ತಂಬಾಕು ಬಳಸುವ ಕುಟುಂಬ/ಸ್ನೆÃಹಿತರಿಂದ ದೂರವಿರಿ ಅಥವಾ ಬಳಸುವಂತೆ ಒತ್ತಾಯ ಮಾಡದಿರಲು ತಿಳಿಸಿ.
ವಾಕಿಂಗ್, ವ್ಯಾಯಾಮ, ಸೃಜನಾತ್ಮಕ ಚಟುವಟಿಕೆ ಅಥವಾ ಉತ್ತಮ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ.
ಆಗಾಗ ನೀರು ಅಥವಾ ಹಣ್ಣಿನ ರಸ/ಜ್ಯೂಸ್ ಕುಡಿಯಿರಿ.
ತಂಬಾಕು ಮುಕ್ತ ಮಾಡುವಲ್ಲಿ ಸಮುದಾಯದ ಪಾತ್ರ
ತಂಬಾಕು ಸೇವೆಯಿಂದಾಗುವ ದುಷ್ಪರಿಣಾಮಗಳನ್ನು ಮತ್ತು ಪರಿಹಾರ ಮಾರ್ಗಗಳನ್ನು ಉನ್ನತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಪಠ್ಯಪುಸ್ತಕಗಳಲ್ಲಿ ಅಳವಡಿಸುವ ಮೂಲಕ ‘ತಂಬಾಕು ವಿರೋಧಿ ಶಿಕ್ಷಣ’ವನ್ನು ಪ್ರೊÃತ್ಸಾಹಿಸುವುದು.
ಮಕ್ಕಳು ಮತ್ತು ಯುವಜನತೆಯನ್ನು ತಂಬಾಕು ಮುಕ್ತರನ್ನಾಗಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದು. ಶಾಲಾ ಶಿಕ್ಷಣದ ಮೂಲಕ ತಂಬಾಕು ಬಳಕೆಯನ್ನು ತಡೆಯಲು ಪ್ರಯತ್ನಿಸಬೇಕು.
ಶಾಲೆಗಳಲ್ಲಿ ಚರ್ಚೆ, ಸಂವಾದ, ಉಪನ್ಯಾಸ, ವಿಚಾರಗೋಷ್ಟಿ, ನಾಟಕ, ವೀಡಿಯೋ ಪ್ರದರ್ಶನಗಳಂತಹ ಕರ‍್ಯಕ್ರಮಗಳನ್ನು ಕಾಲಕಾಲಕ್ಕೆ ಹಮಿಕೊಂಡು ಅವುಗಳ ಮೂಲಕ ‘ತಂಬಾಕು ವಿರೋಧಿ ಶಿಕ್ಷಣ’ ಬೆಂಬಲಿಸುವುದು.
ಮಕ್ಕಳು ಮತ್ತು ಯುವಜನತೆ ಸದಾಕಾಲ ಜ್ಞಾನಾಧಾರಿತ/ ಅಭಿವೃದ್ದಿ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೆÃರೇಪಿಸುವುದು.
ಹತಾಶೆ ಮತ್ತು ಖಿನ್ನತೆಯಿಂದ ಮುಕ್ತರನ್ನಾಗಿಸುವುದು.
ವಿರಾಮ ವೇಳೆಯ ಸದುಪಯೋಗಕ್ಕಾಗಿ ಕ್ರಿÃಡೆಗಳು/ ಓದುವ ಹವ್ಯಾಸ ಇತ್ಯಾದಿಗಳಲ್ಲಿ ತೊಡಗಿಸಿಕೊಳ್ಳವಂತೆ ಮಾಡುವುದು.
ಮಾಧ್ಯಮಗಳ ಮೂಲಕ ‘ತಂಬಾಕು ವಿರೋಧಿ ಶಿಕ್ಷಣ’ ನೀಡುವುದು.
ತಂಬಾಕನ್ನು ತಿರಸ್ಕರಿಸುವ ಕೌಶಲಗಳನ್ನು ಅಭಿವೃದ್ದಿಪಡಿಸುವದು ಮತ್ತು ತರಬೇತಿ ನೀಡುವದು.
ಆತ್ಮವಿಶ್ವಾಸ ಹೆಚ್ಚಿಸುವ ಚಟುವಟಿಕೆಗಳನ್ನು ಪ್ರೊÃತ್ಸಾಹಿಸುವುದು.
ತಂಬಾಕು ಸೇವನೆ ಪ್ರಚೋದಿಸುವ ದೃಶ್ಯಗಳು ಮತ್ತು ಜಾಹೀರಾತುಗಳಿಗೆ ತಡೆಯೊಡ್ಡುವುದು.
ತಂಬಾಕಿನಿಂದಾಗುವ ದುಷ್ಪರಿಣಾಮಗಳನ್ನು ಬಿಂಬಿಸುವ ಪೋಸ್ಟರ್/ಬ್ಯಾನರ್‌ಗಳನ್ನು ಪ್ರದರ್ಶಿಸುವುದು.
ಕಾನೂನುಗಳಿಗೆ ಸೂಕ್ತ ಮಾರ್ಪಾಡು ಮಾಡುವ ಮೂಲಕ ತಂಬಾಕು ಉತ್ಪನ್ನಗಳಿಗೆ ಕಡಿವಾಣ  ಹಾಕುವುದು.
ತಂಬಾಕು ವಿರೋಧಿ ಹೋರಾಟ ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯಿಂದ ಆಗುವ ಕೆಲಸವಲ್ಲ. ಇದಕ್ಕೆ ಸಾಮೂಹಿಕ ಬೆಂಬಲ ಅಗತ್ಯ. ಇದಕ್ಕೆ ಪೂರಕವಾಗಿ ಸರ್ಕಾರದ ನೀತಿ ನಿಯಮಗಳು ಬದಲಾಗಬೇಕು. ಪ್ರತಿಯೊಬ್ಬರೂ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತಾಗಬೇಕು. ಬನ್ನಿ! ಎಲ್ಲರೂ ಕೈ ಜೋಡಿಸಿ ‘ತಂಬಾಕು ವಿರೋಧಿ ಶಿಕ್ಷಣ’ವನ್ನು ಬಲಪಡಿಸೋಣ.
ಆರ್.ಬಿ.ಗುರುಬಸವರಾಜ ಹೊಳಗುಂದಿ





ಓದಿನ ಗಮ್ಮತ್ತು Benefits of Reading

ದಿನಾಂಕ 28-5-2018ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಓದಿನ ಗಮ್ಮತ್ತು


“ಇತ್ತಿÃಚಿನ ಯುವ ಪೀಳಿಗೆ ಇಂಟರ್‌ನೆಟ್‌ನಲ್ಲೆÃ ಮುಳುಗಿ ಹೋಗಿರುವಾಗ ಪುಸ್ತಕ ಓದುವ ಜನ ಎಲ್ಲಿದ್ದಾರೆ? ಈ ಪುಸ್ತಕವನ್ನು ಓದುವವರು ಯಾರು? ಯಾವ ಉದ್ದೆÃಶದಿಂದ ಹೊರತರುತ್ತಿÃರಿ?” ಇದು ಖ್ಯಾತ ಸಾಹಿತಿ ನಾಡೋಜ ಕೋ.ಚೆನ್ನಬಸಪ್ಪ ಅವರ ನೋವಿನ ನುಡಿ. ಇತ್ತಿÃಚೆಗೆ ಪುಸ್ತಕದ ಮುನ್ನುಡಿಗೆಂದು ಅವರ ಬಳಿ ಹೋದಾಗ ಪುಸ್ತಕ ಓದುವವರ ಸಂಖ್ಯೆ ಕ್ಷಿÃಣಿಸುತ್ತಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಆದರೆ ಮುಂದುವರೆದು ಪುಸ್ತಕ ಓದುವುದರಿಂದ ತಮ್ಮ ವೈಯಕ್ತಿಕ ಜೀವನದಲ್ಲಿ ಆದ ಲಾಭಗಳ ಬಗ್ಗೆಯೂ ಚರ್ಚಿಸಿದರು. “ಓದು, ನನ್ನ ಆಲೋಚನೆಗಳ ದಿಕ್ಕನ್ನು ಬದಲಿಸಿತು ಮತ್ತು ಭಾವನೆಗಳನ್ನು ಅಭಿವ್ಯಕ್ತಿಗೊಳಿಸಲು ಸಹಾಯಕವಾಯಿತು. ಪುಸ್ತಕ ಓದಿನಿಂದ ಶೋಷಿತರ ಮತ್ತು ಅವ್ಯವಸ್ಥೆಯ ವಿರುದ್ದ ನನ್ನ ಧ್ವನಿ ಗಟ್ಟಿಯಾಗಿದೆ. ಪುಸ್ತಕಗಳು ಇಲ್ಲದೇ ಹೋಗಿದ್ದರೆ ನಾನಿಂದು ಈ ಹಂತಕ್ಕೆ ಬೆಳೆಯುತ್ತಿರಲಿಲ್ಲ. ಪುಸ್ತಕಗಳು ನನ್ನನ್ನು ಒಬ್ಬ ಮನುಷ್ಯನನ್ನಾಗಿಸಿವೆ”. 
 ಹೌದು ಇತ್ತಿಚಿಗೆ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ನಿಜಕ್ಕೂ ಖೇದಕರ ಸಂಗತಿ. ಆದಾಗ್ಯೂ ಕನ್ನಡದ ನೆಲದಲ್ಲಿ ಪುಸ್ತಕಗಳು, ಸಾಹಿತಿಗಳು, ಬರಹಗಾರರು, ಪ್ರಕಾಶಕರು ಮತ್ತು ಮಾರಾಟಗಾರರ ಸಂಖ್ಯೆ ಹೆಚ್ಚುತ್ತಿರುವುದು ಸಂತೋಷದ ಸಂಗತಿಯಲ್ಲವೇ?
ಪ್ರತಿದಿನವೂ ಪುಸ್ತಕ ದಿನವನ್ನಾಗಿ ಮಾಡಿಕೊಂಡವರ ಬದುಕು ಸುಂದರವಾಗಿರುವುದನ್ನು ಕಾಣಬಹುದು. ದಶಕಕ್ಕೂ ಹಿಂದೆ ಪುಸ್ತಕ ಓದುವುದು ಬಹುತೇಕರ ದಿನದ ಅವಿಭಾಜ್ಯ ಅಂಗವಾಗಿತ್ತು. ಆದರೆ ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಉಂಟಾದ ಸಂಪರ್ಕ ಕ್ರಾಂತಿ ಮತ್ತು ಮೊಬೈಲ್ ಮೇನಿಯಾಗಳು ಜನರನ್ನು ಪುಸ್ತಕ ಓದಿನಿಂದ ದೂರ ಸರಿಸಿದವು. ಆದರೆ ಪುಸ್ತಕ ಓದುವುದರಿಂದ ದೊರೆಯುವ ಸುಖ ಮತ್ತು ಲಾಭಗಳನ್ನು ಬೇರೆ ಯಾವ ಸಾಧನಗಳೂ ನೀಡಲಾರವು. 
ಪುಸ್ತಕಗಳು ಜೀವನದ ಆತ್ಮ ಸಂಗಾತಿಗಳು. ಪ್ರತಿಯೊಬ್ಬ ಸಾಕ್ಷರರ ಜೀವನದಲ್ಲಿ ಕನಿಷ್ಠ ಒಂದು ಪುಸ್ತಕವಾದರೂ ಪ್ರಭಾವ ಬೀರಿರುತ್ತದೆ ಮತ್ತು ಅವರ ಜೀವನದ ದಿಕ್ಕನ್ನು ಉತ್ತಮಗೊಳಿಸಿರುತ್ತದೆ. ಪುಸ್ತಕದ ಓದು ಭವಿಷ್ಯಕ್ಕೊಂದು ದಿಕ್ಸೂಚಿ. ಓದುವುದರಿಂದ ಸ್ವಯಂ ಅಭಿವೃದ್ದಿ, ಸ್ವಯಂ ಶಿಕ್ಷಣ ಮತ್ತು ಮನೋರಂಜನೆ ದೊರೆಯುತ್ತದೆ. ಹಾಗಾಗಿ ಓದು ಅತ್ಯಂತ ಜನಪ್ರಿಯ ಹಾಗೂ ಸುಲಭ ಮಾಧ್ಯಮವಾಗಿದೆ. ಓದು ಮಕ್ಕಳ ಮತ್ತು ವಯಸ್ಕರ ಬೆಳೆವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಾಹಿತಿಯನ್ನು ಸಂಗ್ರಹಿಸಲು ಮತ್ತು ಕೇಂದ್ರಿÃಕರಿಸಲು ಓದು ಅತ್ಯಂತ ಅವಶ್ಯಕ. ಓದುವುದರಿಂದ ಜೀವನಕ್ಕೆ ಪರ್ಯಾಯ ದೃಷ್ಟಿಕೋನ, ವಿವಿಧ ಅಭಿಪ್ರಾಯಗಳು ಮತ್ತು ಅವುಗಳ ಒಳನೋಟಗಳು ಲಭಿಸುತ್ತದೆ. ಜೊತೆಗೆ ಕೆಲವೊಮ್ಮೆ ನಾವು ನಂಬಲು ಕಾರಣವಾದ ಅಂಶಗಳಿಗೆ ವಿಭಿನ್ನ ದೃಷ್ಟಿಕೋನ ದೊರೆಯುತ್ತದೆ. 
ಆದ್ದರಿಂದ ಒಂದು ಒಳ್ಳೆಯ ಪುಸ್ತಕ ಎತ್ತಿಕೊಳ್ಳಿ ಅಥವಾ ಒಂದು ಒಳ್ಳೆಯ ಲೇಖನ ಹುಡುಕಿ. ನಿಮ್ಮ ಎಲ್ಲಾ ತಂತ್ರಜ್ಞಾನ ಉಪಕರಣಗಳನ್ನು ಆಫ್ ಮಾಡಿ. ಮನಸ್ಸನ್ನು ಕೇಂದ್ರಿÃಕರಿಸಿ ಓದಲು ಪ್ರಾರಂಭಿಸಿ. ಖಂಡಿತವಾಗಿಯೂ ಆ ಓದು ನಿಮ್ಮನ್ನು ಉತ್ತಮರನ್ನಾಗಿಸುತ್ತದೆ. ಕೆಳಗಿನ ಅಂಶಗಳು ನಿಮಗೆ ಓದಿನ ಮಹತ್ವ ತಿಳಿಸುತ್ತವೆ.
ಓದಿನಿಂದ ಮನಸ್ಸು ಪ್ರಫುಲ್ಲವಾಗುತ್ತದೆ.
ಸಂಭಾಷಣೆಯ ಮಟ್ಟವನ್ನು ಸುಧಾರಿಸುತ್ತದೆ.
ಕುತೂಹಲವನ್ನು ತಣಿಸುತ್ತದೆ.
ವಿಭಿನ್ನ ಸ್ಥಳಗಳ ಮಾಹಿತಿ ಲಭ್ಯವಾಗುತ್ತದೆ.
ವಿಭಿನ್ನ ಸಂಸ್ಕೃತಿಗಳ ಪರಿಚಯವಾಗುತ್ತದೆ.
ಸಮಾಜದಲ್ಲಿ ವಿಭಿನ್ನ ವ್ಯಕ್ತಿಗಳ ಪಾತ್ರ ಪರಿಚಯವಾಗುತ್ತದೆ.
ಸೃಜನಶೀಲತೆಯನ್ನು ಉದ್ದಿÃಪಿಸುತ್ತದೆ.
ಸುಲಭ ರೀತಿಯಲ್ಲಿ ಮನೋರಂಜನೆ ನೀಡುತ್ತದೆ. 
ವಿಶ್ಲೆÃಷಣಾತ್ಮಕ ಚಿಂತನಾ ಸಾಮರ್ಥ್ಯ ಬೆಳೆಯುತ್ತದೆ.
ಶಬ್ದ ಭಂಡಾರ ಮತ್ತು ಜ್ಞಾನ ವಿಸ್ತಾರಗೊಳ್ಳುತ್ತದೆ.
ಬರವಣಿಗೆಯ ಸಾಮರ್ಥ್ಯವನ್ನು ಉನ್ನತೀಕರಿಸುತ್ತವೆ. 
ಪ್ರಾಪಂಚಿಕ ಜ್ಞಾನ ವೃದ್ದಿಯಾಗುತ್ತದೆ. 
ವಾಸ್ತವಿಕತೆಯ ಪರಿಚಯವಾಗುತ್ತದೆ.
ದೈನಂದಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. 
ಒತ್ತಡವನ್ನು ಕಡಿಮೆ ಮಾಡುತ್ತದೆ.
ಧೈರ್ಯ, ಸ್ಥೆöÊರ್ಯ ಮತ್ತು ನಿರ್ಣಯ ಸಾಮರ್ಥ್ಯಗಳು ಬೆಳೆಯುತ್ತವೆ. 
ಓದಿನಿಂದ ಜನರ ಕಷ್ಟ-ನಷ್ಟ, ನೋವು-ನಲಿವುಗಳ ಪರಿಚಯವಾಗುತ್ತದೆ. 
ಆಂತರಿಕ ಸೌಂದರ್ಯ ಹೆಚ್ಚುತ್ತದೆ.

ಆರ್.ಬಿ.ಗುರುಬಸವರಾಜ ಹೊಳಗುಂದಿ


ವೈಯಕ್ತಿಕ ಸಾಧನೆಯ ತತ್ವಗಳು Principles of success

ದಿನಾಂಕ 16-5-2018ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ವೈಯಕ್ತಿಕ ಸಾಧನೆಯ ತತ್ವಗಳು


ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ವಿಯಾಗಬೇಕೆಂದು ಬಯಸುತ್ತಾರೆ. ಆದರೆ ಬಹುತೇಕ ವೇಳೆ ಒಂದು ಸಣ್ಣ ಸಾಧನೆಯನ್ನು ಮಾಡಲೂ ಸಾಧ್ಯವಾಗುವುದಿಲ್ಲ. ಸಾಧಿಸಲು ಅನೇಕ ಅಡೆತಡೆಗಳು ಎದುರಾಗುತ್ತವೆ. ಸೋಲಿನ ಭೀತಿ ಆವರಿಸಿ ಸಾಧನೆಯ ಹಾದಿಗೆ ಮುಳ್ಳಾಗುತ್ತದೆ. ಕೆಲವು ವೇಳೆ ಗುರಿಗಳನ್ನು ಕಾರ್ಯ ರೂಪಕ್ಕೆ ತರಲಾಗದೇ ಸೋಲನ್ನು ಹಿಂಬಾಲಿಸಬೇಕಾಗುತ್ತದೆ. ಗುರಿಗಳನ್ನು ತಲುಪುವ ಹಾದಿಯಲ್ಲಿನ ಅಡೆತಡೆಗಳನ್ನು ನಿವಾರಿಸಲು ಬುದ್ದಿವಂತಿಕೆಗಿಂತ ತಂತ್ರಗಾರಿಕೆಯು ಮುಖ್ಯವಾಗಿರುತ್ತದೆ. ಯಾರಿಗೆ ತಂತ್ರಗಾರಿಕೆಯು ತಿಳಿದಿದೆಯೋ ಅವರು ಮಾತ್ರ ಯಶಸ್ವಿಯಾಗಬಲ್ಲರು. ಪ್ರಾಮಾಣಿಕ ಪ್ರಯತ್ನ ಮತ್ತು ಅವಕಾಶದ ಸದುಪಯೋದಿಂದ ಎಲ್ಲರೂ ಆ ಯಶಸ್ಸನ್ನು ಗಳಿಸಬಹುದು.  ಸಾಧನೆಗೆ ಶ್ರಿÃಮಂತಿಕೆ ಬೇಕಿಲ್ಲ. ಆದರೆ ಸಾಧಿಸುವ ಛಲ ಮತ್ತು ಪರಿಶ್ರಮ ಬೇಕು. ಅಂತಹ ಕೆಲ ತಂತ್ರಗಾರಿಕೆ ಮತ್ತು ಸಾಧನೆಯ ತತ್ವಗಳನ್ನು ಕೆಳಗೆ ನೀಡಲಾಗಿದೆ. ಅವುಗಳನ್ನು ಅನುಸರಿಸುವ ಸಾಧನೆಯ ಶಿಖರನ್ನು ನೀವೂ ಏರಬಹುದು. ಪ್ರಯತ್ನಿಸಿ.
ಸಾಧನೆಯ ಮಾರ್ಗಗಳು:
ಸಾಧನೆಯ ಉದ್ದೆÃಶ ಮತ್ತು ಗುರಿ ತಲುಪುವ ಕಾರ್ಯ ಯೋಜನೆಗಳು ಸ್ಪಷ್ಟವಾಗಿರಬೇಕು. 
ಕೇವಲ ಬುದ್ದಿ ಇದ್ದರೆ ಸಾಲದು. ಬುದ್ದಿಯಲ್ಲಿ ಚತುರತೆ ಬಹಳ ಮುಖ್ಯ. ಉದ್ದೆÃಶವನ್ನು ಸಾಧಿಸಲು ಸಾಮರಸ್ಯದಿಂದ ಕೆಲಸ ಮಾಡುವುದು ಅನಿವಾರ್ಯ. ಸಾಮರಸ್ಯದ ಕೆಲಸಕ್ಕೆ ಸಹಕಾರಿ ತತ್ವದ ಮೈತ್ರಿಯ ತಂತ್ರಗಾರಿಕೆ ತಿಳಿದಿರಬೇಕು.
ನಂಬಿಕೆ ಎಂಬುದು ಆಸೆ, ಉದ್ದೆÃಶ ಮತ್ತು ಯೋಜನೆಗಳ ಭೌತಿಕ ಮತ್ತು ಆರ್ಥಿಕ ಸ್ಥಿತಿಯಾಗಿದೆ. ಅದಕ್ಕಾಗಿ ಅನ್ವಯಿಕ ನಂಬಿಕೆ ಅಗತ್ಯ. ಕಾರ್ಯಕ್ಷೆÃತ್ರದಲ್ಲಿ ನಂಬಿಕೆ ಉಳಿಸಿಕೊಳ್ಳುವ ಮತ್ತು ಬೆಳೆಸಿಕೊಳ್ಳುವ ಪ್ರಯತ್ನ ಅವಶ್ಯಕ.
ಕಾರ್ಯಕ್ಷೆÃತ್ರದಲ್ಲಿ ಜವಾಬ್ದಾರಿ ತೆಗೆದುಕೊಳ್ಳವಿಕೆ ನಿಮ್ಮನ್ನು ಉನ್ನತ ಹಂತಕ್ಕೆ ತೆಗೆದುಕೊಂಡೊಯ್ಯುತ್ತದೆ. ನೀಡಿದ ಕೆಲಸಕ್ಕಿಂತ ಹೆಚ್ಚುವರಿಯಾಗಿ ತೆಗೆದುಕೊಳ್ಳುವ ಜವಾಬ್ದಾರಿಯು ನಿಮ್ಮ ಉತ್ತಮ ಸೇವೆಯನ್ನು ಪ್ರಶಂಸಿಸುವಂತೆ ಮಾಡುತ್ತದೆ. ಅದು ನಿಮ್ಮ ಸಾಧನೆಯ ಸೋಪಾನವಾಗಿದೆ.
ವ್ಯಕ್ತಿತ್ವವು ಒಬ್ಬ ವ್ಯಕ್ತಿಯ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ವೈಚಾರಿಕತೆಯ ಲಕ್ಷಣವಾಗಿದೆ. ಸಾಧನೆಯ ಶಿಖರ ತಲುಪಬಯಸುವ ಮುನ್ನ ಇನ್ನೊಬ್ಬರಿಗೆ ಮಾದರಿಯಾಗುವಂತಹ ವಿಭಿನ್ನ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಅಗತ್ಯವಾಗಿದೆ. 
ವೈಯಕ್ತಿಕ ಉಪಕ್ರಮ ಸಾಧನೆಯ ಮತ್ತೊಂದು ಮೆಟ್ಟಿಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ. ವೈಯಕ್ತಿಕ ಭಿನ್ನತೆಯಲ್ಲಿ ತನ್ನದೇ ಆದ ಪದ್ದತಿ ಅಥವಾ ಕ್ರಮಗಳ ಮೂಲಕ ವಿಶೇಷತೆಯನ್ನು ಸಾಧಿಸುವುದೇ ಉಪಕ್ರಮ. ಇದು ಕೆಲಸದ ಪ್ರಾರಂಭದಿಂದ ಹಿಡಿದು ಅದನ್ನು ಯಶಸ್ವಿಯಾಗಿ ಪುರ್ಣಗೊಳಸಿವವರೆಗಿನ ಎಲ್ಲಾ ಹಂತಗಳ ಕಾರ್ಯ ವಿಧಾನವಾಗಿದೆ. ಸಾಧನೆಗೈದ ಪ್ರತಿಯೊಬ್ಬರೂ ಇದನ್ನು ಬೆಳೆಸಿಕೊಂಡಿರುತ್ತಾರೆ.
ಸಕಾರಾತ್ಮಕ ಮಾನಸಿಕ ವರ್ತನೆಯು ನಿಮ್ಮನ್ನು ಸಾಧನೆಯ ಉತ್ತುಂಗಕ್ಕೆ ಒಯ್ಯುತ್ತದೆ. ಸಕಾರಾತ್ಮಕತೆಯು ಯಶಸ್ಸನ್ನು ಆಕರ್ಷಿಸುತ್ತದೆ ಮತ್ತು ವೈಪಲ್ಯಗಳನ್ನು ದೂರವಿರಿಸುತ್ತದೆ.
ಉತ್ಸಾಹವು ಆಂತರಿಕ ಧ್ವನಿಯಾಗಿದ್ದು ಮುಖಭಾವದ ಅಭಿವ್ಯಕ್ತಿಯಲ್ಲಿ ಹೊರಸೂಸುತ್ತದೆ ಮತ್ತು ಕಾರ್ಯದ ಯಶಸ್ಸಿಗೆ ಕಾರಣವಾಗುತ್ತದೆ. ಉತ್ಸಾಹದಿಂದ ಕಾರ್ಯದಲ್ಲಿ ನಂಬಿಕೆ ಉಂಟಾಗುತ್ತದೆ. 
ಚಿಂತನೆಯ ಪಾಂಡಿತ್ಯದಿಂದ ಸ್ವಯಂ ಶಿಸ್ತು ಪ್ರಾರಂಭವಾಗುತ್ತದೆ. ನಿಮ್ಮ ಆಲೋಚನೆಗಳನ್ನು ನೀವು ನಿಯಂತ್ರಿಸದಿದ್ದರೆ ನಿಮ್ಮ ಅಗತ್ಯಗಳನ್ನು ನಿಯಂತ್ರಿಸಲಾಗದು. ಸ್ವಯಂ ಶಿಸ್ತು ತರ್ಕಶಾಸ್ತçದ ಬೋಧನೆಯೊಂದಿಗೆ ನಿಮ್ಮ ಹೃದಯದ ಭಾವನೆಗಳನ್ನು ಸಮತೋಲನದಲ್ಲಿಡುತ್ತದೆ. ಇದರಿಂದ ಯಶಸ್ಸು ನಿಮ್ಮದಾಗುತ್ತದೆ.
ಚಿಂತನೆಯು ಮನುಷ್ಯನಿಗೆ ಅತ್ಯಂತ ಅಪಾಯಕಾರಿ ಅಥವಾ ಪ್ರಯೋಜನಕಾರಿ ಶಕ್ತಿಯಾಗಿದೆ. ಆದರೆ ಅದು ಹೇಗೆ ಬಳಸಲ್ಪಡುತ್ತದೆ ಎಂಬುದರ ಆಧಾರದ ಮೇಲೆ ಅದರ ಪರಿಣಾಮ ಅಡಗಿದೆ. ಆದ್ದರಿಂದ ಸರಿಯಾದ ಅಥವಾ ನಿಖರವಾದ ಚಿಂತನೆಯು ನಿಮ್ಮದಾಗಿರಲಿ.
ಸಾಧನೆಗೆ ನಿರ್ದಿಷ್ಟ ಕಾರ್ಯದಲ್ಲಿನ ಗಮನ ಬಹಳ ಮುಖ್ಯ. ಆದರೆ ಗಮನವು ನಿಮ್ಮ ನಿಯಂತ್ರಣದಲ್ಲಿರಬೇಕು. ಸಾಧನೆಗೆ ಕಾರ್ಯದ ಮೇಲೆ ಮನಸ್ಸಿನ ಶಕ್ತಿಯನ್ನು ಕೇಂದ್ರಿÃಕರಿಸುವುದು ಮತ್ತು ತನ್ನ ಇಚ್ಛೆಯಂತೆ ಅದನ್ನು ನಿರ್ದೇಶಿಸುವುದು ಅಗತ್ಯ. ನಿಯಂತ್ರಿತ ಗಮನವು ಮಾನವ ಪ್ರಯತ್ನದಲ್ಲಿ ಪಾಂಡಿತ್ಯಕ್ಕೆ ಕಾರಣವಾಗುತ್ತದೆ.
ಸಾಂಘಿಕ ಕೆಲಸವು ಉಧ್ಯಮದಲ್ಲಿ ಚೈತನ್ಯ ಮೂಡಿಸುತ್ತದೆ. ಸೌಹಾರ್ಧಯುತ ಸಹಭಾಗಿತ್ವವು ಸಾಮರಸ್ಯದ ಸಹಕಾರಕ್ಕೆ ಕಾರಣವಾಗುತ್ತದೆ. ಸಾಮರಸ್ಯದ ಸಹಕಾರವು ಅಮೂಲ್ಯ ಆಸ್ತಿಯಾಗಿದ್ದು ಅದರ ಕೊಡುಗೆ ಅನನ್ಯ. ಇದೊಂದು ಸಾಧನೆಯ ಹಾದಿಯಲ್ಲಿನ ಬಹು ಪ್ರಮುಖ ಮೈಲಿಗಲ್ಲು. 
ಸಾಧನೆಯ ಹಾದಿಯಲ್ಲಿನ ಕೆಲ ವೈಫಲ್ಯಗಳು ತಾತ್ಕಾಲಿಕ ಸೋಲನ್ನು ಪ್ರತಿನಿಧಿಸುತ್ತವೆ. ಸೋಲಿನ ನಿಖರವಾದ ಕಾರಣವು ಅದನ್ನು ಎದುರಿಸುವ ಮಾರ್ಗ ಸೂಚಿಸುತ್ತವೆ. ಹಾಗಾಗಿ ಸೋಲಿಗೆ ಎದುರದೇ ಅದನ್ನು ಮೆಟ್ಟಿನಿಲ್ಲುವ ತಾಳ್ಮೆ ಬೆಳೆಸಿಕೊಳ್ಳಬೇಕು.
ಸೃಜನಾತ್ಮಕ ದೃಷ್ಟಿಕೋನವು ಯಶಸ್ಸಿನ ಮತ್ತೊಂದು ಆಯಾಮವನ್ನು ತೆರೆದಿಡುತ್ತದೆ. ಕೇವಲ ಬುದ್ದಿವಂತಿಕೆ  ಇದ್ದರೆ ಸಾಲದು. ಬುದ್ದಿವಂತಿಕೆಯನ್ನು ಒರೆಗೆ ಹಚ್ಚುವ ಸೃಜನಾತ್ಮಕ ಬುದ್ದಿವಂತಿಕೆ ಪ್ರತಿಭಾವಂತಿಕೆಯನ್ನು ಗಳಿಸಿಕೊಡುತ್ತದೆ. 
ಆರೋಗ್ಯವು ಪ್ರಜ್ಞಾಪೂರ್ವಕ ಸಂಜ್ಞೆಯೊಂದಿಗೆ ಆರ್ಥಿಕ ಯಶಸ್ಸನ್ನು ಗಳಿಸುವ ಮೂಲಕ ಸಾಮಾಜಿಕ ಮನ್ನಣೆಗೆ ಕಾರಣವಾಗುತ್ತದೆ. ಆರೋಗ್ಯವಾದ ದೇಹದಲ್ಲಿ ಆರೋಗ್ಯವಾದ ಮನಸ್ಸಿರಬೇಕು ಎಂದಿರುವುದು ಇದಕ್ಕೆÃ ಅಲ್ಲವೇ?
ಸಮಯ ಮತ್ತು ಹಣ ಅಮೂಲ್ಯವವಾದ ಸಂಪನ್ಮೂಲಗಳಾಗಿವೆ. ಯಶಸ್ಸಿನ ಪ್ರಯತ್ನದಲ್ಲಿ ಇವುಗಳ ಬಳಕೆ ಮತ್ತು ಸದ್ವಿನಿಯೋಗ ತುಂಬಾ ಮಹತ್ವದ್ದಾಗಿದೆ. ಸಂದರ್ಭೋಚಿತವಾಗಿ ಇವುಗಳನ್ನು ಬಳಸುವ ಚಾಣಾಕ್ಷತೆ ತಿಳಿದಿರಬೇಕು.
ಮನಸ್ಸಿನ ಶಾಂತಿ ಮತ್ತು ಆರೋಗ್ಯಕ್ಕೆ ಆಹಾರ  ಪ್ರಮುಖವಾದದ್ದು. ಧನಾತ್ಮಕ ಆಹಾರ ಪದ್ದತಿಗಳನ್ನು ಬೆಳೆಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಹೊಂದಬಹುದು. 

ಆರ್.ಬಿ.ಗುರುಬಸವರಾಜ ಹೊಳಗುಂದಿ


ಎಜ್ಯು ಆ್ಯಪ್ಸ್ Educational apps

ದಿನಾಂಕ 4-4-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಭವಿಷ್ಯದ ಬೆಳಕಿಂಡಿಯಾಗುವ ಎಜ್ಯು ಆ್ಯಪ್ಸ್


ಇಂದು ಶಿಕ್ಷಣ ಕ್ಷೆತ್ರವು ವಿಸ್ತಾರವಾಗುತ್ತಿದೆ. ಕಲಿಕೆಯು ಕೇವಲ ತರಗತಿ ಕೋಣೆಗೆ ಸೀಮಿತವಾಗಿಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿವಿಧ ಮೂಲಗಳಿಂದ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳುವ ಅಗತ್ಯತೆ ಇದೆ. ಹಾಗಾಗಿ ಬೋಧನೆ ಮತ್ತು ಕಲಿಕಾ ವಿಧಾನಗಳು ಗ್ರಹಿಕೆಯನ್ನು ಮೀರಿ ವಿಸ್ತಾರಗೊಳ್ಳುತ್ತಿವೆ ಮತ್ತು ಅಭಿವೃದ್ದಿಗೊಳ್ಳುತ್ತಿವೆ. 
   ಇಂದಿನ ಪ್ರಪಂಚವು ವೇಗವಾಗಿ ಬದಲಾಗುತ್ತಿದೆ. ಅದಕ್ಕೆ ಪೂರಕವಾಗಿ ಶೈಕ್ಷಣಿಕ ವ್ಯವಸ್ಥೆಯಲ್ಲೂ ಬದಲಾವಣೆಗಳು ಅಗತ್ಯವಾಗಿವೆ. ಈ ನಿಟ್ಟಿನಲ್ಲಿ  ಹೆಚ್ಚುತ್ತಿರುವ ವಿದ್ಯಾರ್ಥಿಗಳ ನಡುವಿನ ಸ್ಪರ್ಧೆಯ ಒತ್ತಡವನ್ನು ನಿಭಾಯಿಸಲು ಕೆಲವು ಶೈಕ್ಷಣಿಕ ಆ್ಯಪ್‌ಗಳು ರೂಪುಗೊಂಡಿವೆ. ಮೊಬೈಲ್ ಆಧಾರಿತ ಕಲಿಕೆ ಮತ್ತು ಮೊಬೈಲ್ ಉಪಕರಣಗಳು ಇಂದಿನ ಯುವಜನತೆಯ ಅವಿಭಾಜ್ಯ ಅಂಗವಾಗಿವೆ. ಇದನ್ನು ಗಮನಿಸಿದ ಕೆಲವು ಶೈಕ್ಷಣಿಕ ಸಂಸ್ಥೆಗಳು ಶಾಲಾ ಕಾಲೇಜುಗಳ ಶೈಕ್ಷಣಿಕ ಕಲಿಕೆಗೆ ಪೂರಕವಾದ ಮಾಹಿತಿ/ಶಿಕ್ಷಣ ನೀಡುವ ಸದುದ್ದೆÃಶದಿಂದ ಶೈಕ್ಷಣಿಕ ಆ್ಯಪ್‌ಗಳನ್ನು ಸಿದ್ದಪಡಿಸಿವೆ. 
ತಂತ್ರಜ್ಞಾನದ ಆಗಮನವು ಸ್ವಯಂ ಕಲಿಕೆಯ ಸಾಧ್ಯತೆಗೆ ಸಾಕಷ್ಟು ಅವಕಾಶಗಳನ್ನು ತಂದಿಟ್ಟಿದೆ. ಯುವಜನತೆಯ ಆಶೊತ್ತರಗಳನ್ನು ಗಮನದಲ್ಲಿಟ್ಟುಕೊಂಡು ನಾವೀನ್ಯ ರೀತಿಯ ಬೋಧನಾ ಕಲಿಕಾ ವಿಧಾನಗಳು ರೂಪುಗೊಳ್ಳುತ್ತಿವೆ. ಅದಕ್ಕಾಗಿ ಅನೇಕ ಶೈಕ್ಷಣಿಕ ಆ್ಯಪ್‌ಗಳು ಸಿದ್ದಗೊಂಡಿವೆ. ನೀವು ಸ್ಮಾರ್ಟ್ಫೋನ್ ಅಥವಾ ಟ್ಯಾಬ್ಲೆಟ್ ಬಳಸುತ್ತಿದ್ದರೆ ಇಂತಹ ಶೈಕ್ಷಣಿಕ ಆ್ಯಪ್‌ಗಳನ್ನು ಸುಲಭವಾಗಿ ಬಳಸಬಹುದು. 
         ಶೈಕ್ಷಣಿಕ ಆ್ಯಪ್‌ಗಳು ಕಲಿಕಾರ್ಥಿಗಳ ವೈಯಕ್ತಿಕ ಕಲಿಕೆಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತವೆ. ವಿವಿಧ ವಿಷಯ ಮತ್ತು ಪರಿಕಲ್ಪನೆಗಳನ್ನು ವೈವಿಧ್ಯಮಯವಾಗಿ ಕಲಿಯುವ, ಅಭ್ಯಾಸ ಮತ್ತು ಅಧ್ಯಯನ ಮಾಡುವ ಸಾಧ್ಯತೆಗಳಿವೆ. ಇಲ್ಲಿ ವಿಷಯ ನಿರೂಪಣೆಯು ತರಗತಿ ಕೋಣೆಗಿಂತ ವಿಭಿನ್ನವಾಗಿರುವುದರಿಂದ ಕಲಿಕೆಯು ಆನಂದದಾಯಕವಾಗಿರುತ್ತದೆ. ಎಲ್ಲಾ ವಯಸ್ಸಿನ ವಿದ್ಯಾರ್ಥಿಗಳಿಗೂ ಪ್ರತ್ಯೆÃಕವಾದ ಉತ್ತಮ ಗುಣಮಟ್ಟದ ಶೈಕ್ಷಣಿಕ ಆ್ಯಪ್‌ಗಳಿವೆ. 2017ರ ಅಂತ್ಯಕ್ಕೆ ಒಟ್ಟು 116 ಶೈಕ್ಷಣಿಕ ಆ್ಯಪ್‌ಗಳು ಸಿದ್ದಗೊಂಡಿವೆ. ಅವುಗಳಲ್ಲಿ ಕೆಲವು ಆ್ಯಪ್‌ಗಳ ಬಗ್ಗೆ ತಿಳಿಯೋಣ. 
ಕೋರ್ಸೆರಾ(ಅouಡಿseಡಿಚಿ) : ಶಿಕ್ಷಣದ ವಿವಿಧ ಕ್ಷೆÃತ್ರಗಳ ವಿಸ್ತಾರವನ್ನು ಹೊಂದಿದ ಹಲವು ಅಪ್ಲಿಕೇಶನ್‌ಗಳಲ್ಲಿ ಕೋರ್ಸೆರಾ ಒಂದಾಗಿದೆ. ಕಂಪ್ಯೂಟರ್ ಸೈನ್ಸ್, ಡೇಟಾ ಸೈನ್ಸ್, ಹಣಕಾಸು ಮತ್ತು ವ್ಯವಹಾರ, ವಿದೇಶಿ ಭಾಷೆಗಳನ್ನು ಒಳಗೊಂಡಂತೆ ಹಲವಾರು ಸ್ವದೇಶಿ ಭಾಷೆಗಳನ್ನು ಈ ಆ್ಯಪ್ ಮೂಲಕ ಕಲಿಯಬಹುದು. 20ಕ್ಕೂ ಹೆಚ್ಚಿನ ಕ್ಷೆತ್ರಗಳ ವಿಷಯಗಳಿದ್ದು 100ಕ್ಕೂ ಹೆಚ್ಚಿನ ಉನ್ನತ ವಿಶ್ವವಿದ್ಯಾನಿಲಯದೊಂದಿಗೆ ಪಾಲುದಾರಿಕೆ ಇದೆ. 1000ಕ್ಕೂ ಹೆಚ್ಚು ಸಿಲಬಸ್‌ಗಳಿವೆ. ಅವುಗಳಲ್ಲಿ ವೀಡಿಯೋ ಪಾಠಗಳು ಮತ್ತು ಟ್ಯುಟೋರಿಯಲ್‌ಗಳಿವೆ. ಕೆಲವು ಪಾಠಗಳು ಉಚಿತವಾಗಿದ್ದರೆ ಕೆಲವು ಕನಿಷ್ಠ ಬೆಲೆಯನ್ನು ನಿಗದಿಪಡಿಸಿವೆ. ನಿಮ್ಮ ಬಜೆಟ್‌ಗೆ ತಕ್ಕಂತ ಪಾಠವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶಗಳಿವೆ. ಆನ್‌ಲೈನ್ ಟ್ಯುಟೋರಿಯಲ್‌ಗಳು ನಿರ್ದಿಷ್ಟ ಸಮಯಕ್ಕೆ ಲಾಕ್ ಆಗದಿರುವುದು ಬಳಕೆದಾರ ಸ್ನೆಹಿಯಾಗಿದೆ. 14 ಭಾಷೆಗಳಲ್ಲಿ ಲಭ್ಯವಿರುವ ಈ ಆ್ಯಪ್‌ನ್ನು ಪ್ಲೆಸ್ಟೊರ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. 
ಇ.ಡಿ.ಎಕ್ಸ್. : ವಿಶಿಷ್ಠ ಶೈಕ್ಷಣಿಕ ಅಪ್ಲಿಕೇಶನ್‌ಗಳಲ್ಲಿ ಇ.ಡಿ.ಎಕ್ಸ್ ಕೂಡಾ ಒಂದಾಗಿದೆ. ಇದು ವೃತ್ತಿಪರರಿಂದ ಶಿಕ್ಷಣ ನೀಡುವ ಬದಲು ನೇರವಾಗಿ ಕಾಲೇಜುಗಳಿಂದ ಶಿಕ್ಷಣ ನೀಡುತ್ತದೆ. ಆದರೆ ಇದರಲ್ಲಿ ಕಾನೂನುಬದ್ದ ಪದವಿ ಪಡೆಯುವುದಿಲ್ಲ ಅಷ್ಟೆ. ಆದಾಗ್ಯೂ ಕಂಪ್ಯೂಟರ್ ಪ್ರೊÃಗ್ರಾಮಿಂಗ್, ಎಂಜಿನಿಯರಿಂಗ್, ಇತಿಹಾಸ, ಮನಶಾಸ್ತç, ಆರೋಗ್ಯ, ಇತರೆ ನೂರಾರು ಶೈಕ್ಷಣಿಕ ಕಲಿಕೆಗಳಿವೆ. ಇಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ವೀಡಿಯೋ ಉಪನ್ಯಾಸಗಳಿವೆ. ಜೊತೆಗೆ ಟ್ಯುಟೋರಿಯಲ್‌ಗಳೂ ಸಹ ಲಭ್ಯ ಇವೆ. ಇಲ್ಲಿ ಎಲ್ಲವೂ ಮುಕ್ತವಾಗಿದೆ. ಉನ್ನತ ಶಿಕ್ಷಣದ ಹಂಬಲ ಇರುವ ಯಾರಾದರೂ ಈ ಆ್ಯಪ್ ಬಳಸಬಹುದು. 
ಖಾನ್ ಅಕಾಡೆಮಿ : ಖಾನ್ ಅಕಾಡೆಮಿ ಮತ್ತೊಂದು ಶಿಕ್ಷಣ ವೇದಿಕೆಯಾಗಿದೆ. ಇದು ಯುವಜನತೆಗೆ ಮತ್ತು ಮಕ್ಕಳಿಗೆ ವಿವಿಧ ಶಿಕ್ಷಣ ಮತ್ತು ತರಗತಿ ನೀಡುತ್ತದೆ. ಪ್ರಸ್ತುತ 10,000ಕ್ಕೂ ಹೆಚ್ಚಿನ ವೀಡಿಯೋ ತರಗತಿಗಳನ್ನು ಹೊಂದಿದೆ. ಇವೆಲ್ಲವೂ ಸಂಪೂರ್ಣವಾಗಿ ಉಚಿತವಾಗಿವೆ. ಖಾನ್ ಅಕಾಡೆಮಿ ಗಣಿತ, ಅರ್ಥಶಾಸ್ತç, ಇತಿಹಾಸ, ವಿಜ್ಞಾನ ಹೀಗೆ ಅನೇಕ ವಿಷಯಗಳ ಸಂಕೀರ್ಣ ಅಂಶಗಳನ್ನು ಸುಲಭವಾಗಿ ತಿಳಿಸುವ ಪ್ರಯತ್ನ ಮಾಡುತ್ತದೆ. ಇದು ಆಫ್‌ಲೈನ್‌ನಲ್ಲೂ ಕೂಡಾ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ಇದೊಂದು ಬೆಸ್ಟ್ ಅಪ್ಲಿಕೇಶನ್ ಆಗಿದೆ. 
ಮೆಸ್‌ಮೆರೈಸ್ : ಇದೊಂದು ಭಾಷಾ ಕಲಿಕೆಯ ಅಪ್ಲಿಕೇಶನ್ ಆಗಿದೆ. ಇಲ್ಲಿ ಸುಲಭವಾಗಿ ಭಾಷೆಯನ್ನು ಕಲಿಸಲಾಗುತ್ತದೆ. ಕಲಿಕೆಯನ್ನು ಪ್ರೊÃತ್ಸಾಹಿಸುವ ಆಟಗಳು, ಗುರಿ ತಲುಪುವ ಪ್ರೆÃರಕಾಂಶಗಳು ಇಲ್ಲಿವೆ. ಇದರ ಬಹುದೊಡ್ಡ ವಿಶೇಷ ಎಂದರೆ ನೀವು ಕಲಿಯಬಹುದಾದ 100 ಕ್ಕಿಂತ ಹೆಚ್ಚಿನ ಭಾಷಾ ಕೌಶಲ್ಯಗಳನ್ನು ಕಲಿಸುತ್ತದೆ. ಪ್ರಾಥಮಿಕ ಕಲಿಕೆಗೆ ಚಂದಾದಾರಿಕೆ ಉಚಿತವಾಗಿದ್ದು ಉನ್ನತ ಕಲಿಕೆಗೆ ಕನಿಷ್ಠ ಚಂದಾದಾರಿಕೆಯನ್ನು ಬೇಡುತ್ತದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಸರಳವಾದ ಕಲಿಕೆ ಬಯಸುವವರಿಗೆ ಉತ್ತಮ ಆ್ಯಪ್ ಇದಾಗಿದೆ. 
ಯುಡೆಮಿ  : ಮೊಬೈಲ್ ಮೂಲಕ ಶಿಕ್ಷಣ ನೀಡುವ ಮೊಟ್ಟಮೊದಲ ಶೈಕ್ಷಣಿಕ ಆ್ಯಪ್ ಇದಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಅಡುಗೆಮನೆ ಶಿಕ್ಷಣದಿಂದ ವಿದೇಶಿ ಭಾಷಾ ಕಲಿಕೆವರೆಗಿನ ವ್ಯಾಪ್ತಿಯ 32.000 ಕ್ಕೂ ಹೆಚ್ಚಿನ ಕಲಿಕಾಂಶಗಳನ್ನು ಹೊಂದಿದೆ. ವ್ಯವಹಾರ, ಮಾರ್ಕೆಟಿಂಗ್, ಉಧ್ಯಮಶೀಲತೆ, ವಿನ್ಯಾಸ, ಆರೋಗ್ಯ, ಸಂಗೀತ, ಫಿಟ್ನೆಸ್, ಛಾಯಾಗ್ರಹಣ, ಸಾಫ್ಟ್ವೇರ್ ಇತ್ಯಾದಿ ಕೋರ್ಸ್ಗಳನ್ನು ಹೊಂದಿದೆ. ವಿಷಯದ ಗುಣಮಟ್ಟ ಉನ್ನತ ಶ್ರೆÃಣಿಯಲ್ಲಿದೆ. ಕೆಲವು ಪಾಠಗಳು ಸಾಧಾರಣವಾಗಿವೆ. ಇಲ್ಲಿ ಉಚಿತ ಮತ್ತು ಪಾವತಿಸುವ ಶಿಕ್ಷಣವೂ ಲಭ್ಯವಿದೆ. ಈ ಆ್ಯಪ್ ಕಲಿಕೆಗೆ ಬಹಳ ಯೋಗ್ಯವಾಗಿದೆ ಮತ್ತು ಹೆಚ್ಚು ವೈಶಿಷ್ಟö್ಯಗಳನ್ನು ಹೊಂದಿದೆ.
ಟೆಡ್ ಟಾಕ್ಸ್ : ಕೆಲವೊಮ್ಮೆ ನೇರ ಶಿಕ್ಷಣವು ಸಾಕಾಗುವುದಿಲ್ಲ ಅಥವ ಪರಿಣಾಮಕಾರಿಯಾಗುವುದಿಲ್ಲ. ಅದಕ್ಕಾಗಿ ಒಳನೋಟದ ಆರೋಗ್ಯಕರ ಡೋಸ್ ಬೇಕಾಗುತ್ತದೆ. ನಿಮ್ಮನ್ನು ನೀವೇ ಮಾನಸಿಕವಾಗಿ ಒಳಗಿನಿಂದಲೇ ತಿದ್ದಿಕೊಳ್ಳುವ ಅವಶ್ಯಕತೆ ಇರುತ್ತದೆ. ಇದಕ್ಕಾಗಿ ಒಂದಿಷ್ಟು ಪ್ರೆÃರಣಾತ್ಮಕ ಮಾತುಗಳು ಅಗತ್ಯ ಎನಿಸುತ್ತವೆ. ಇಂತಹ ಪ್ರೆÃರಣಾತ್ಮಕ ಮಾತುಗಳಿಗೆ ಪ್ರಸಿದ್ದವಾಗ ಅಪ್ಲಿಕೇಶನ್ ಎಂದರೆ ಟೆಡ್ ಟಾಕ್ಸ್. ಇಲ್ಲಿನ ಮಾತುಗಳು ಪ್ರಬುದ್ದವಾಗಿದ್ದು ನಿಮ್ಮನ್ನು ನೀವೇ ಅರಿಯಲು ಸಾಧ್ಯವಾಗುತ್ತದೆ ಮತ್ತು ಮಾನಸಿಕವಾಗಿ ಸಬಲತೆ ಹೊಂದುವಂತೆ ಮಾಡುತ್ತದೆ. ಪ್ರಪಂಚದಾದ್ಯಂತ ಪ್ರಸಿದ್ದರಾದ ಸ್ಪಿÃಕರ್‌ಗಳ ಮಾತಿನ ಬಹುದೊಡ್ಡ ಸಂಗ್ರಹವೇ ಇಲ್ಲಿದೆ. 1700ಕ್ಕೂ ಹೆಚ್ಚಿನ ವೀಡಿಯೋಗಳಿದ್ದು 22 ವಿವಿಧ ಭಾಷೆಗಳಲ್ಲಿ ಲಭ್ಯ ಇವೆ. 
ಬುಸು : ನಿಮ್ಮ ಹೊಸ ಆಂಡ್ರಾಯ್ಡ್ ಫೋನ್ ನಿಮಗೆ ಎಷ್ಟು ಭಾಷೆಗಳನ್ನು ಕಲಿಸಬಹುದು? ಭಾಷಾವಿನ್ಯಾಸ ಆಯ್ಕೆ ಮಾಡಲು ಹಲವಾರು ಭಾಷೆಗಳಿದ್ದರೂ ಆ ಭಾಷೆಯನ್ನು ಕಲಿಯಲು ಆಗುವುದಿಲ.್ಲ ಅಲ್ಲವೇ? ವಿಶ್ವದ 11 ಜನಪ್ರಿಯ ಭಾಷೆಗಳಲ್ಲಿ ಓದುವುದು, ಬರೆಯುವುದು, ಮಾತನಾಡುವುದನ್ನು ಕಲಿಸುವ ವಿಶಿಷ್ಠ ಆ್ಯಪ್ ಎಂದರೆ ಬುಸು. ಬುಸುವಿನ ತಂತ್ರಗಾರಿಕೆ ಕೇವಲ ಒಣ ಪುಸ್ತಕಗಳನ್ನು ಓದುವುದಕ್ಕಿಂತ ಅರ್ಥಗರ್ಭಿತ ಹಾಗೂ ಪರಿಣಾಮಕಾರಿಯಾಗಿವೆ. ನೀವು ಈ ಆ್ಯಪ್ ಮೂಲಕ 45 ಮಿಲಿಯನ್‌ಗೂ ಹೆಚ್ಚು ಜನರೊಂದಿಗೆ ಸಂವಹನ ಮಾಡಬಹುದು. ಸ್ಥಳಿಯ ಭಾಷಿಕರೊಡನೆ ಮಾತನಾಡುವ ಮೂಲಕ ನಿಮ್ಮ ಹೊಸ ಭಾಷೆಯನ್ನು ಕಲಿಯಬಹುದು. ಆ್ಯಪ್ ನೀಡುವ ಸಾಮರ್ಥ್ಯವನ್ನು ಗಳಿಸುವ ಮೂಲಕ ಮುಂದಿನ ಸಾಮರ್ಥ್ಯಕ್ಕೆ ಕಾಲಿಡಬಹುದು.
ಸ್ಟಾರ್ ಚಾರ್ಟ್  : ಬಾಹ್ಯಾಕಾಶವನ್ನು ಪ್ರಿÃತಿಸುವವರಿಗೆ ಈ ಅಪ್ಲಿಕೇಶನ್ ಅತ್ಯಗತ್ಯವಾಗಿದೆ. ಸ್ಟಾರ್ ಚಾರ್ಟ್ ನಿಮ್ಮ ಸ್ಮಾರ್ಟ್ಫೋನ್ ಅಥವಾ ಟ್ಯಾಬ್ಲೆಟ್‌ಗೆ ರಾತ್ರಿ ಆಕಾಶವನ್ನು ತರುತ್ತದೆ ಮತ್ತು ಯಾವುದೇ ಕೋನದಿಂದ ಅದನ್ನು ಅನ್ವೆÃಷಿಸುವ ಸಾಮರ್ಥ್ಯವನ್ನು ನೀಡುತ್ತದೆ. ನಿಮ್ಮ ಸಾಧನದಲ್ಲಿ ಅಪ್ಲಿಕೇಶನ್ ತೆರೆದು ಗಾಳಿಯಲ್ಲಿ ಕೈಆಡಿಸಿದರೆ ನಿಮ್ಮ ಸ್ಥಳವನ್ನಾಧರಿಸಿ ನೀವು ಎಲ್ಲಿದ್ದಿÃರಿ ಎಂಬುದನ್ನು ನಿರ್ಧರಿಸುತ್ತದೆ. ಸ್ಟಾರ್ ಚಾರ್ಟ್ನಲ್ಲಿ 88 ನಕ್ಷತ್ರಪುಂಜಗಳು ಮತ್ತು 1,20,000ಕ್ಕೂ ಹೆಚ್ಚಿನ ವಿಭಿನ್ನ ನಕ್ಷತ್ರಗಳನ್ನು ಒಳಗೊಂಡಿದೆ. ನಕ್ಷತ್ರ/ನಕ್ಷತ್ರಪುಂಜದ ಬಗ್ಗೆ ವಿವರವಾಗಿ ತಿಳಿಯಲು ಅದರ ಮೇಲೆ ಟ್ಯಾಪ್ ಮಾಡಿ ಝೂಮ್ ಮಾಡಿದರೆ ಸಾಕಷ್ಟು ವಿವರಗಳು ಲಭ್ಯವಾಗುತ್ತವೆ. ಈ ಕಾರಣಕ್ಕಾಗಿ ಆಂಡ್ರಾಯ್ಡ್ಗಳಲ್ಲಿ ಲಭ್ಯ ಇರುವ ಅತ್ಯುತ್ತಮ ಖಗೋಳವಿಜ್ಞಾನದ ಅಪ್ಲಿಕೇಶನ್ ಇದಾಗಿದೆ. ಸ್ಟಾರ್ ಚಾರ್ಟ್ ಸಾಕಾಗದಿದ್ದರೆ ಸೋಲಾರ್ ವಾಕ್ ಅಥವಾ ಸ್ಕೆöÊಮ್ಯಾಪ್ ಬಳಸಬಹುದು.
ಸ್ಪಿಡ್ ಅನಾಟಮಿ ಕ್ವಿಜ್  : ನಿಮ್ಮ ಸ್ವಂತ ದೇಹದ ಬಗ್ಗೆ ನಿಮಗೇನು ತಿಳಿದಿದೆ? ನಿಮ್ಮ ನರವ್ಯೂಹದಲ್ಲಿನ ಕೋಶಗಳೆಷ್ಟು? ನಿಮ್ಮ ಹೃದಯ ಒಂದು ದಿನದಲ್ಲಿ ಎಷ್ಟು ಬಾರಿ ರಕ್ತವನ್ನು ಪಂಪ್ ಮಾಡುತ್ತದೆ? ಇತ್ಯಾದಿ ವಿಷಯಗಳು ನಿಮಗೆ ಆಶ್ಚರ್ಯ ತರುತ್ತವೆ. ಅನಾಟಮಿ ಎಂಬುದು ಆಳವಾಗಿ ಕಲಿಯುವ ಒಂದು ವಿಷಯವಾಗಿದೆ. ಸ್ಪಿÃಡ್ ಅನಾಟಮಿ ಕ್ವಿಜ್ ಅಪ್ಲಿಕೇಶನ್ ಮೂಲಕ ದೇಹದ ವಿವಿಧ ಅಂಗಗಳ ಪರಿಚಯ, ಅವುಗಳ ಕಾರ್ಯ ರಚನೆ, ಕಾರ್ಯವಿಧಾನ, ಉಪಯುಕ್ತತೆ ಮುಂತಾದ ವಿಷಯಗಳನ್ನು ತಿಳಿಯಬಹುದು. ಇದೊಂದು ರೀತಿಯ ಆಟದಂತಿದ್ದು, ಸಮಯದ ಮಿತಿಯೊಳಗೆ ವಿವಿಧ ಅಂಗಗಳನ್ನು ಗುರುತಿಸುವ ಮತ್ತು ಅವುಗಳ ಬಗ್ಗೆ ತಿಳಿಯುವ ಆಟವಾಗಿದೆ. ಇದು ಮಾನವನ ದೇಹದ ಬಗ್ಗೆ ಹೆಚ್ಚು ವೇಗವಾಗಿ ಕಲಿಯುವ ಮೊದಲ ಹೆಜ್ಜೆಯಾಗಿದೆ.
ಸೋಕ್ರಾಂಟಿಕ್  : ಗಣಿತ ಎಂಬುದೇ ಬಹುತೇಕರಿಗೆ ಭಯದ ವಿಷಯ. ಕೆಲವೊಂದು ಗಣಿತದ ಸಮಸ್ಯೆಗಳನ್ನು ಬಿಡಿಸುವ ಮಾರ್ಗವೇ ತಿಳಿಯುವುದಿಲ್ಲ. ಅಂತಹ ಕಠಿಣ ಸಮಸ್ಯೆಯ ಲೆಕ್ಕವನ್ನು ಹಂತಹಂತವಾಗಿ ಬಿಡಿಸುವ ಮಾರ್ಗವನ್ನು ತಿಳಿಸುವ ಆ್ಯಪ್ ಎಂದರೆ ಸೋಕ್ರಾö್ಯಟಿಕ್. ಆ್ಯಪ್‌ನ್ನು ತೆರೆದಾಗ ಕ್ಯಾಮೆರಾ ತೆರೆಯುತ್ತದೆ. ಕ್ಯಾಮೆರಾವನ್ನು ಗಣಿತದ ಸಮಸ್ಯೆಯ ಮೇಲೆ ಕೇಂದ್ರಿಕರಿಸಿದರೆ ಸಮಸ್ಯೆಯನ್ನು ಸ್ಕಾö್ಯನ್ ಮಾಡುತ್ತದೆ. ನಂತರ ಅದರ ಲೆಕ್ಕಾಚಾರವನ್ನು ಹಂತಹಂತವಾಗಿ ಹೇಗೆ ಬಿಡಿಸಬಹುದು ಎಂಬುದನ್ನು ತಿಳಿಸುತ್ತದೆ. ಹಾಗಾಗಿ ಗಣಿತದ ಎಂತಹ ಸಮಸ್ಯೆಗಳನ್ನೂ ಕೂಡಾ ಇಲ್ಲಿ ಸುಲಭವಾಗಿ ಬಿಡಿಸುವ ವಿಧಾನ ತಿಳಿಯಬಹುದು. ಇದು ತೃಪ್ತಿ ನೀಡದಿದ್ದರೆ ಮಾಥ್ಸ್ ಟ್ರಿಕ್ಸ್ ಆ್ಯಪ್ ಬಳಸಬಹುದು.
ಇವುಗಳಲ್ಲದೇ ಇನ್ನೂ ಅನೇಕ ಶೈಕ್ಷಣಿಕ ಅಪ್ಲಿಕೇಶನ್‌ಗಳಿವೆ. ಅವುಗಳನ್ನು ಬಳಸಿಕೊಂಡು ನಿಮ್ಮ ಜ್ಞಾನವಲಯ ಉತ್ತಮಪಡಿಸಿಕೊಳ್ಳುವ ಮೂಲಕ ಶೈಕ್ಷಣಿಕ ಅಭಿವೃದ್ದಿ ಹೊಂದಬಹುದಾಗಿದೆ. 

ಆರ್.ಬಿ.ಗುರುಬಸವರಾಜ ಹೊಳಗುಂದಿ