ದಿನಾಂಕ 01-07-2015 ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಲೇಖನ.
ಜಿಮ್ಮೊಲಜಿ
ಬದಲಾಗುತ್ತಿರುವ ಜೀವನಶೈಲಿ ಹಾಗೂ ಸಂಸ್ಕøತಿಯ ಫ್ಯಾಷನೀಕರಣದ ಪ್ರಭಾವದಿಂದಾಗಿ ಇಂದಿನ ಯುವಜನತೆ ಅದರಲ್ಲೂ ಯುವತಿಯರು ಅಲಂಕಾರಕ್ಕಾಗಿ ಸಾಂಪ್ರದಾಯಿಕ ಶೈಲಿಗೆ ಮರಳುತ್ತಿದ್ದಾರೆ. ಅಲಂಕಾರಕ್ಕಾಗಿ ಪಾರಂಪರಿಕ ಹಾಗೂ ಆಕರ್ಷಕ ಹರಳುಗಳ ಮೋಹ ಪಾಶದಲ್ಲಿ ಬೀಳುತ್ತಿದ್ದಾರೆ. ಉಂಗುರ, ಕಿವಿಯೋಲೆ, ನತ್ತು, ನೆಕ್ಲೆಸ್, ಸರ, ಬಳೆ, ಡಾಬು, ವಂಕಿ, ವಡ್ಯಾಣ, ಕಾಲಂದಿಗೆ ಇತ್ಯಾದಿ ಆಭರಣಗಳಲ್ಲಿ ಹರಳುಗಳೇ ತುಂಬಿರುತ್ತವೆ.
ಅನಾದಿ ಕಾಲದಿಂದಲೂ ಹರಳುಗಳು ಭಾರತೀಯ ಸಂಸ್ಕøತಿಯ ಪ್ರತೀಕವಾಗಿವೆ. ವಜ್ರದ ಹರಳು, ನೀಲಮಣಿ, ಪಚ್ಚೆ, ಮಾಣಿಕ್ಯ ಮುಂತಾದ ಹರಳುಗಳು ಭಾರತೀಯರ ಜೀವನದೊಂದಿಗೆ ಸಮ್ಮಿಳಿತಗೊಂಡು, ಕಾಲದಿಂದ ಕಾಲಕ್ಕೆ ಹೊಸ ಹೊಸ ರೂಪು ಪಡೆಯುತ್ತಾ ಬಂದಿವೆ.
ಹರಳುಗಳನ್ನು ಆಯ್ಕೆ ಮಾಡುವ, ಶ್ರೇಣಿಕರಿಸುವ, ಮೌಲ್ಯೀಕರಿಸುವ ಅಂತಿಮವಾಗಿ ಬಳಕೆದಾರರಿಗೆ ಇಚ್ಚಿತ ರೂಪದಲ್ಲಿ ಮಾರುಕಟ್ಟೆಗೆ ಒದಗಿಸುವ ಪ್ರಕ್ರಿಯೆಯಲ್ಲಿ ಅಮೂಲಾಗ್ರ ಬದಲಾವಣೆಗಳು ಆಗಿರುವುದನ್ನು ಗಮನಿಸಬಹುದು. ನಾನಿಲ್ಲಿ ಮುಖ್ಯವಾಗಿ ಪ್ರಸ್ತಾಪಿಸಬಯಸಿರುವುದು ಹರಳುಗಳೊಂದಿಗೆ ಮಾನವ ಸಂಬಂಧವನ್ನಲ್ಲ. ಬದಲಾಗಿ ಹರಳುಗಳ ಅಧ್ಯಯನ ಕುರಿತಾದ ಜಿಮ್ಮೊಲಜಿ ಕೋರ್ಸ್‍ನ ಬಗ್ಗೆ.
ರತ್ನಖಚಿತ ಹರಳುಗಳು ಮತ್ತು ಬೆಲೆಬಾಳುವ ಲೋಹಗಳ ಅಧ್ಯಯನದ ವಿಜ್ಞಾನವೇ ಜಿಮ್ಮೊಲಜಿ. ಅಂದರೆ ರತ್ನದ ಹರಳುಗಳನ್ನು ಗುರುತಿಸುವ, ಶ್ರೇಣೀಕರಿಸುವ, ಆಕರ್ಷಕ ರೂಪು ನೀಡಿ ಆಭರಣವಾಗಿ ಪರಿವರ್ತಿಸುವ ಹಾಗೂ ಮೌಲ್ಯಮಾಪನ ಮಾಡುವ ಕಲೆ ಮತ್ತು ವಿಜ್ಞಾನಗಳ ಸಂಗಮವೇ ಜಿಮ್ಮೊಲಜಿ. ಜಿಯೋಸೈನ್ಸ್‍ನ ಭಾಗವಾದ ಈ ಕೋರ್ಸ್ ಉದ್ಯೋಗಾಕಾಂಕ್ಷಿಗಳ ಹೊಸ ವೃತ್ತಿ ಜೀವನದ ಮಾರ್ಗವೆಂದರೆ ತಪ್ಪಲ್ಲ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಗುಣಮಟ್ಟದ ಹರಳುಗಳಿಗೆ ಬೇಡಿಕೆ ಹೆಚ್ಚುತ್ತಿದೆ.
ಉತ್ತಮ ಭವಿಷ್ಯ : ಜ್ಯೂವೆಲ್ಲರಿ ಮಾಲಕರು ಚಿಲ್ಲರೆ ಗ್ರಾಹಕರನ್ನು ಆಕರ್ಷಿಸಲು ಅತ್ಯುತ್ತಮ ಗುಣಮಟ್ಟದ ಆಕರ್ಷಕ ರತ್ನದ ಹರಳುಗಳನ್ನು ಪ್ರದರ್ಶಿಸಲು ಕಾತುರರಾಗಿರುತ್ತಾರೆ. ಸ್ಪರ್ದಾತ್ಮಕ ವ್ಯಾಪಾರದ ಮಧ್ಯೆ ಗ್ರಾಹಕರಿಗೆ ನವೀನ ಹಾಗೂ ಆಕರ್ಷಕ ಮಾದರಿಯ ಹರಳುಗಳನ್ನು ನೀಡಲು ಹಾತೊರೆಯುತ್ತಿದ್ದಾರೆ. ಅಲ್ಲದೇ ಗ್ರಾಹಕರೂ ಸಹ ವೈಯಕ್ತಿಕ ಬಳಕೆಗಾಗಿ ಉತ್ತಮ ಗುಣಮಟ್ಟದ ಹಾಗೂ ಪ್ರಾಮಾಣೀಕೃತವಾದ ರತ್ನಾಭರಣಗಳನ್ನು ಖರೀದಿಸಲು ಮುಂದಾಗುತ್ತಿದ್ದಾರೆ. ಜಿಮ್ಮೊಲಾಜಿಸ್ಟ್ ಆಗುವ ಮೂಲಕ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬಹುದಾಗಿದೆ.
ಶೇಕಡಾ 95 ರಷ್ಟು ವಜ್ರದ ಹರಳುಗಳನ್ನು ಕತ್ತರಿಸುವ ಮತ್ತು ಹೊಳಪು ನೀಡುವ ಪ್ರಕ್ರಿಯೆ ಭಾರತದಲ್ಲಿಯೇ ನಡೆಯುತ್ತಿದೆ. ಭಾರತವು ವಿಶ್ವದ ಅತೀ ಹೆಚ್ಚು ವಜ್ರ ಕತ್ತರಿಸುವ ಹಾಗೂ ಹೊಳಪು ನೀಡುವ ದೇಶ ಎಂಬುದು ವಾಸ್ತವಾಗಿ ಪರಿಗಣಿತವಾಗಿದೆ. ಹಾಗಾಗಿ ಜಿಮ್ಮೊಲಜಿ ಕೋರ್ಸ್ ಅತ್ಯಂತ ಲಾಭದಾಯಕ ಮತ್ತು ಅತೀ ಹೆಚ್ಚು ತೃಪ್ತಿ ನೀಡುವ ಕ್ಷೇತ್ರ ಎಂಬುದನ್ನು ಸಾಬೀತು ಮಾಡಲು ಸಾಕಷ್ಟು ಅವಕಾಶಗಳಿವೆ.
ಅರ್ಹತೆ ಮತ್ತು ಅಗತ್ಯ ಅಂಶಗಳು : ಈ ಕೋರ್ಸ್ ಸೇರಲು ಕನಿಷ್ಠ 18 ವರ್ಷಗಳ ವಯೋಮಿತಿ ಹೊಂದಿರಬೇಕು ಮತ್ತು ಯಾವುದೇ ವಿಭಾಗದ ಪಿ.ಯು.ಸಿ.ಯಲ್ಲಿ ಕನಿಷ್ಠ ಶೇಕಡಾ 50 ರಷ್ಟು ಅಂಕಗೋಂದಿಗೆ ಉತ್ತೀರ್ಣತೆ ಹೊಂದಿರಬೇಕು. ವಿಜ್ಞಾನ ವಿಭಾಗದವರಿಗೆ ಪ್ರಥಮ ಆದ್ಯತೆ. ಇಂಗ್ಲೀಷ್ ಭಾಷಾ ಪರಿಣಿತಿ ಜೊತೆಗೆ ಸಂವಹನ ಕೌಶಲ್ಯದ ಅಗತ್ಯತೆ ಇದೆ.
ಯಶಸ್ವಿ ಜಿಮ್ಮೊಲಜಿಸ್ಟ ಆಗಲು ವಿಶ್ವಾಸಾರ್ಹ ಕೌಶಲ್ಯದ ಅರಿವು, ಉತ್ತಮವಾದ ಕಣ್ಣುಗಳ ಹೊಂದಾಣಿಕೆ, ಕಲೆಯನ್ನು ಮೆಚ್ಚುವ ಗುಣ, ಅತ್ಯುತ್ತಮವಾದ ವೀಕ್ಷಣಾ ಶಕ್ತಿ, ನಿಖರವಾದ ವಿವರ ಸಂಗ್ರಹಣಾ ಸಾಮಥ್ರ್ಯ, ವಸ್ತುನಿಷ್ಠ ಉಪಕ್ರಮ ವಿಧಾನ ಮತ್ತು ಜವಾಬ್ದಾರಿಯುತ ಅಧಿಕಾರ ಚಲಾಯಿಸುವ ಗುಣಗಳು ವೇಗವಾಗಿ ಪ್ರಗತಿಯತ್ತ ಕೊಂಡೊಯ್ಯುತ್ತವೆ.
ವಿವಿಧ ಕೋರ್ಸ್‍ಗಳು : ಜಿಮ್ಮೊಲಜಿಗೆ ಸಂಬಂಧಿಸಿದಂತೆ 3 ತಿಂಗಳಿನಿಂದ 3 ವರ್ಷಗಳವರೆಗಿನ ವಿವಿಧ ರೀತಿಯ ಸರ್ಟಿಫಿಕೆಟ್ ಮತ್ತು ಡಿಪ್ಲೊಮೊ ಕೋರ್ಸ್‍ಗಳಿವೆ. ಎಲ್ಲಾ ಕೋರ್ಸ್‍ಗಳನ್ನು ಪ್ರಾಯೋಗಿಕ ಅನುಭವದ ಮೂಲಕವೇ ನಡೆಯುವುದರಿಂದ ಹರಳುಗಳನ್ನು ಕತ್ತರಿಸುವ, ಬಣ್ಣಲೇಪಿಸುವ ಹಾಗೂ ಇನ್ನಿತರೇ ಕಾರ್ಯಗಳಿಗೆ 25 ಸಾವಿರದಿಂದ 1.5 ಲಕ್ಷ ರೂ.ಗಳವರೆಗೆ ವೆಚ್ಚ ತಗಲಬಹುದು. ಅಂತಹ ಕೆಲವು ಕೋರ್ಸ್‍ಗಳೆಂದರೆ,
• ಜೆಮ್ಸ್ ಐಡೆಂಟಿಫಿಕೇಷನ್ ಸರ್ಟಿಫಿಕೆಟ್ ಕೋರ್ಸ್
• ಡೈಮಂಡ್ ಗ್ರೇಡಿಂಗ್ ಸರ್ಟಿಫಿಕೇಷನ್ ಕೋರ್ಸ್
• ಸರ್ಟಿಫಿಕೇಷನ್ ಕೋರ್ಸ್ ಇನ್ ಕಟ್ ಅಂಡ್ ಡಿಸೈನ್ ಅನಲೈಸಿಸ್
• ಪರ್ಲ್ ಗ್ರೇಡಿಂಗ್
• ಪಾಲಿಷ್ಡ್ ಡೈಮಂಡ್ ಗ್ರೇಡಿಂಗ್ ಕೋರ್ಸ್
• ಡಿಪ್ಲೊಮೊ ಕೋರ್ಸ್‍ಗಳು
ಕೋರ್ಸ್‍ನಲ್ಲಿ ಕಲಿಯುವುದೇನು?
ಜಿಮ್ಮೊಲಜಿ ಮುಖ್ಯವಾಗಿ ನೈಸರ್ಗಿಕ ವಿಧಾನದಿಂದ ಹರಳುಗಳ ಸ್ವರೂಪ ಗುರುತಿಸುವ, ವಿಂಗಡಿಸುವ, ಶ್ರೇಣೀಕರಿಸುವ ವಿಧಾನಗಳನ್ನು ಕಲಿಸಲಾಗುತ್ತದೆ. ಅಂದರೆ ಹರಳುಗಳ ಭೌತಿಕ ಗುಣಲಕ್ಷಣಗಳು, ಆಪ್ಟಿಕಲ್ ಗುಣಗಳು, ಫ್ಯಾಷನ್ ಡಿಸೈನ್, ಕಂಪ್ಯೂಟರ್ ಆಧಾರಿತ ಆಭರಣ ವಿನ್ಯಾಸ, ಲೋಹಶಾಸ್ತ್ರೀಯ ಪರಿಕಲ್ಪನೆ, ಸಾಂಪ್ರದಾಯಿಕ ಮತ್ತು ಆಧುನಿಕ ರೇಖಾಚಿತ್ರ ಪ್ರಕ್ರಿಯೆಗಳು, ಆಭರಣ ತಯಾರಿಕಾ ತಂತ್ರಗಳನ್ನು ಕಲಿಸಲಾಗುತ್ತದೆ. ಮುಖ್ಯವಾಗಿ ಹರಳುಗಳನ್ನು ಕತ್ತರಿಸುವ, ವರ್ಣಮಯಗೊಳಿಸುವ, ಮೆರಗುಗೊಳಿಸುವ, ಹೊಳಪು ನೀಡುವ ಅಂತಿಮವಾಗಿ ಆಕರ್ಷಕ ಆಭರಣವಾಗಿ ಮಾರ್ಪಡಿಸುವ ತಾಂತ್ರಿಕ ಕೌಶಲ್ಯಗಳನ್ನು ಕಲಿಸಲಾಗುತ್ತದೆ.
ವಿವಿಧ ಹೆಸರು ಮತ್ತು ವೈವಿಧ್ಯಮಯ ಪಾತ್ರ :
ಭಾರತದಲ್ಲಿ ಜ್ಯೂವೆಲ್ಲರಿ ಕ್ಷೇತ್ರವು ವಿದೇಶಿ ವಿನಿಮಯದ ಅತ್ಯುನ್ನತ ಲಾಭಗಳಿಕಾ ವಲಯವಾಗಿದೆ. ಸ್ವದೇಶಿ ಹಾಗೂ ವಿದೇಶಗಳಲ್ಲಿ ಸಾಕಷ್ಟು ವೃತ್ತಿ ಅವಕಾಶಗಳನ್ನು ಹೊಂದಿದೆ. ಮುಖ್ಯವಾಗಿ ಜ್ಯೂವೆಲ್ಲರಿ ಡಿಸೈನ್, ಜ್ಯೂವೆಲ್ಲರಿ ರಿಟೇಲ್ ಬ್ಯುಸಿನೆಸ್, ಹರಳುಗಳನ್ನು ಕತ್ತರಿಸುವ ಹಾಗೈ ಪಾಲಿಷ್ ಮಾಡುವ ಸಂಸ್ಥೆಗಳಲ್ಲಿ, ಪ್ರಯೋಗಶಾಲೆಗಳಲ್ಲಿ, ರತ್ನ ಹಾಗೂ ಅಮೂಲ್ಯ ಲೋಹಗಳನ್ನು ಪ್ರಾಮಾಣೀಕರಿಸುವ ಸಂಸ್ಥೆಗಳಲ್ಲಿ, ಸ್ವಂತ ಜ್ಯೂವೆಲ್ಲರಿ ಉಧ್ಯಮ ಮತ್ತು ವ್ಯವಹಾರ ಹೀಗೆ ಸಾಕಷ್ಟು ವೃತ್ತಿ ಅವಕಾಶಗಳಿವೆ. ಕೋರ್ಸ್‍ನ ನಂತರ ನಿರ್ವಹಿಸಬಹುದಾದ ವಿವಧ ಪಾತ್ರಗಳು ಇಂತಿವೆ.
• ಜಿಮ್ಮೊಲಾಜಿಸ್ಟ್
• ಡೈಮಂಡ್ ಗ್ರೇಡರ್
• ಜ್ಯೂವೆಲ್ಲರಿ ಡಿಸೈನರ್
• ಸೇಲ್ಸ್ ಪರ್ಸನ್
• ಜ್ಯೂವೆಲ್ಲರಿ ಆಕ್ಷನ್ ಮೇನೇಜರ್
ಕೆಲಸ ಇಲ್ಲಿ ಖಾತ್ರಿ ಐತ್ರಿ
• ಮೈನಿಂಗ್ ಇಂಡಸ್ಟ್ರಿ
• ಜ್ಯೂವೆಲ್ಲರಿ ಮೇಕಿಂಗ್ ಅಂಡ್ ಡಿಸೈನಿಂಗ್ ಯೂನಿಟ್
• ಜ್ಯೂವೆಲ್ಲರಿ ಅಂಗಡಿಗಳು ಮತ್ತು ಷೋರೂಮ್‍ಗಳು
• ಜೆಮ್ ಎಕ್ಸ್‍ಪೋರ್ಟಿಂಗ್ ಆರ್ಗನೈಜೇಷನ್
• ಜೆಮ್ ಸ್ಟೋನ್ ಕಟ್ಟಿಂಗ್ ಅಂಡ್ ಪಾಲಿಷಿಂಗ್ ಯೂನಿಟ್
• ಜೆಮ್ ಟೆಸಿಂಗ್ ಲ್ಯಾಬ್ಸ್
• ಜೆಮ್ ಅಂಡ್ ಮೆಟಲ್ ಗ್ರೇಡಿಂಗ್ ಅಂಡ್ ಕ್ವಾಲಿಟಿ ಸರ್ಟಿಫೈಯಿಂಗ್ ಏಜೆನ್ಸಿ
• ಆರ್ಟಿಫಿಷಿಯಲ್ ಜೆಮ್ ಇಂಡಸ್ಟ್ರಿ
• ಟಾಪ್ ಗ್ರೇಡ್ ಗೋಲ್ಡ್‍ಸ್ಮಿಥ್ಸ್
ಕೋರ್ಸ್ ಇಲ್ಲಿ ಲಭ್ಯ :
• ವೋಗಾ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ, ಬೆಂಗಳೂರು.
• ಸಾಲಿಟೇರ್ ಡೈಮಂಡ್ ಇನ್ಸ್ಟಿಟ್ಯೂಟ್, ಬೆಂಗಳೂರು.
• ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜಿಮ್ಮೊಲಜಿ, ದೆಹಲಿ.
• ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜೆಮ್ ಅಂಡ್ ಜ್ಯೂವೆಲ್ಲರಿ, ಮುಂಬೈ
• ಸಿಂಗಾಬಾದ ಸ್ಕೂಲ್ ಆಫ್ ಜಿಮ್ಮೊಲಜಿ ಅಂಡ್ ಜ್ಯೂವೆಲ್ಲರಿ ಡಿಸೈನಿಂಗ್, ಪೂನ
• ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜ್ಯೂವೆಲ್ಲರಿ, ಮುಂಬೈ.
• ಇಂಟರ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಜಿಮ್ಮೊಲಾಜಿಕಲ್ ಸೈನ್ಸ್, ದೆಹಲಿ.
• ಆಸರ್ ಅಕಾಡೆಮಿ ಆಫ್ ಡಿಸೈನ್, ಚೆನ್ನೈ.
• ಅರಿಹಂತ್ ಡೈಮಂಡ್ ಇನ್ಸ್ಟಿಟ್ಯೂಟ್ , ಸೂರತ್
ಆರ್.ಬಿ.ಗುರುಬಸವರಾಜ.

No comments:
Post a Comment