ದಿನಾಂಕ 30-09-2015ರ 'ವಿಜಯವಾಣಿ'ಯಲ್ಲಿ ಪ್ರಕಟವಾದ ನನ್ನ ಲೇಖನ.
ಯುವ ಟ್ರೆಂಡಿನ
ಆಡಿಯೋ ಬುಕ್ಸ್
ಇತ್ತೀಚೆಗ ಕೆ.ಎ.ಎಸ್ ಮುಖ್ಯ ಪರೀಕ್ಷೆಗೆ ತಯಾರಿ ನಡೆಸಿರುವ ವಿರುಪಾಕ್ಷ ನಮ್ಮ ಮನೆಗೆ ಭೇಟಿ ನೀಡಿ ಕೆಲವು ಪುಸ್ತಕಗಳ ಬಗ್ಗೆ ಚರ್ಚಿಸುತ್ತಿದ್ದ. ನಿಗದಿತ ಪಠ್ಯವನ್ನು ಹೇಗೆ ಓದಬೇಕು ಎಂಬ ಬಗ್ಗೆ ಚರ್ಚೆ ಸಾಗಿತ್ತು. ಪುಸ್ತಕಗಳನ್ನು ಓದುವ ಬದಲು ಕೇಳುವಂತಿದ್ದರೆ ತುಂಬಾ ಆಸಕ್ತಿದಾಯವಾಗಿರುತ್ತಿತ್ತು ಎಂದು ತನ್ನ ಅಳಲು ತೋಡಿಕೊಂಡ. ಒಂದು ಕ್ಷಣ ಅವನ ಮಾತು ಸತ್ಯ ಎನಿಸಿತು. ಆಗ ವಿಷಯದ ಬಗ್ಗೆ ಹೆಚ್ಚು ಮಾಹಿತಿ ಕಲೆಹಾಕಿದಾಗ ದೊರೆತ ಪುಸ್ತಕಗಳೇ ಆಡಿಯೋ ಪುಸ್ತಕಗಳು.
ಏನಿದು ಆಡಿಯೋ ಪುಸ್ತಕ? : ರೆಕಾರ್ಡೆಡ್ ಸ್ವರೂಪದಲ್ಲಿನ ಕೇಳಬಹುದಾದ ಪುಸ್ತಕಗಳೇ ಆಡಿಯೋ ಪುಸ್ತಕಗಳು. ಅಂದರೆ ಮೂಲ ಮುದ್ರಿತ ಪುಸ್ತಕದ ಸಂಕ್ಷೇಪಿತವಲ್ಲದ ಧ್ವನಿಮುದ್ರಿತ ಪುಸ್ತಕಗಳು. ಈ ಪುಸ್ತಕಗಳನ್ನು ಪ್ರಯಾಣದ ವೇಳೆ ಹಾಗೂ ಇನ್ನಿತರೇ ಕೆಲಸಗಳ ಜೊತೆಜೊತೆಗೆ ಕೇಳುವ ಮೂಲಕ ಪುಸ್ತಕಗಳಲ್ಲಿನ ಮಾಹಿತಿಯನ್ನು ಆಸ್ವಾದಿಸಬಹುದು. ಹರಿಯದ ಮುರಿಯದ ಈ ಪುಸ್ತಕಗಳನ್ನು ಸುಲಭವಾಗಿ ಎಲ್ಲೆಂದರಲ್ಲಿ ಕೊಂಡೊಯ್ಯಬಹುದು.
ಪುಸ್ತಕಗಳನ್ನು ಓದಬೇಕೆಂದರೆ ಮಳಿಗೆಗೆ ಹೋಗಿ ಖರೀದಿಸಬೇಕು ಅಥವಾ ಗ್ರಂಥಾಲಯಗಳಿಗೆ ಹೋಗಿ ಎರವಲು ಪಡೆದು ಓದಬೇಕೆಂಬ ಪ್ರಸಂಗವೇ ಈಗ ಇಲ್ಲ. ಬಿಡುಗಡೆಯಾದ ಎಲ್ಲಾ ಹೊಸ ಪುಸ್ತಕಗಳು ಆನ್‍ಲೈನ್‍ನಲ್ಲಿ ಲಭ್ಯ ಇರುತ್ತವೆ. ಸುಲಭ ವಿಧಾನಗಳಿಂದ ಡೌನ್‍ಲೋಡ್ ಮಾಡಿಕೊಂಡು ನೆಚ್ಚಿನ ಪುಸ್ತಕಗಳನ್ನು ನೀವಿದ್ದಲ್ಲಿಯೇ ಕೇಳಬಹುದು.
ಇಲ್ಲಿ ಕತೆ, ಕಾದಂಬರಿ, ನಾಟಕ, ಜೀವನ ಚರಿತ್ರೆ, ಕಲೆ, ಸಾಹಿತ್ಯ, ವಿಮರ್ಶೆ, ಆರೋಗ್ಯ, ಉಧ್ಯಮ, ವಿದೇಶಿ ಭಾಷಾ ಅಧ್ಯಯನ, ಇತಿಹಾಸ, ಮನೋರಂಜನೆ, ಹಾಸ್ಯ, ವಿಡಂಬನೆ, ಧಾರ್ಮಿಕ, ಆದ್ಯಾತ್ಮಿಕ ಹೀಗೆ ಎಲ್ಲಾ ಪ್ರಕಾರಗಳ ಸಾಹಿತ್ಯ ಪುಸ್ತಕಗಳು ಆಡಿಯೋ ರೂಪದಲ್ಲಿ ಲಭ್ಯ ಇವೆ. ಹೆಚ್ಚುತ್ತಿರುವ ನಗರೀಕರಣದ ಪ್ರಭಾವ ಮತ್ತು ಸುಧಾರಿತ ಜೀವನ ಶೈಲಿಯಿಂದಾಗಿ ಪುಸ್ತಕ ಓದುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಆದ್ದರಿಂದ ಇಂದಿನ ಯುವ ಪೀಳಿಗೆಗೆ ಮತ್ತು ಓದಲು ಅಸಾಧ್ಯ ಎನ್ನುವವರಿಗೆ ಆಡಿಯೋ ಪುಸ್ತಕಗಳು ಆಪ್ಯಾಯಮಾನ ಎನಿಸಿವೆ.
ಬೆಳೆದು ಬಂದ ಹಾದಿ : ಆಡಿಯೋ ಪುಸ್ತಕಗಳ ಬೆಳವಣಿಗೆಯ ಜಾಡು ಹಿಡಿದು ಹೊರಟರೆ ನಮಗೆ ಸಿಗವ ಮೊದಲ ಹೆಜ್ಜೆ ಎಂದರೆ 1877ರಲ್ಲಿ. ಥಾಮಸ್ ಅಲ್ವಾ ಎಡಿಸನ್ ಫೋನೋಗ್ರಾಮ್ ಕಂಡುಹಿಡಿದ ನಂತರ ಸ್ಪೋಕನ್ ರೆಕಾರ್ಡಿಂಗ್ ಸಾಧ್ಯವಾಯಿತು. ಫೋನೋಗ್ರಾಮ್ ಬಳಸಿ ಮುದ್ರಿಸಿದ ಮೊದಲ ಆಡಿಯೋ ಪುಸ್ತಕ ಎಂದರೆ ಎಡಿಸನ್‍ರವರ ‘ಮೇರಿ ಹ್ಯಾಡ್ ಎ ಲಿಟ್ಲ್ ಲ್ಯಾಂಬ್’. ಇದು ಕೇವಲ ನಾಲ್ಕು ನಿಮಿಷದ ಪುಸ್ತಕ. 4 ನಿಮಿಷಗಳಿಂದ ಶುರುವಾದ ಪ್ರಯೋಗಗಳು 1930ರಲ್ಲಿ 20 ನಿಮಿಷಗಳ ಪುಸ್ತಕಗಳಾಗಿ ಮಾರ್ಪಟ್ಟಿದ್ದು ಮತ್ತೊಂದು ಮೈಲಿಗಲ್ಲು. 1930 ರಿಂದ 1950 ರವರೆಗೆ ಅನೇಕ ಪ್ರಾಯೋಗಿಕ ಆಡಿಯೋ ಪುಸ್ತಕಗಳು ಬಿಡುಗಡೆಯಾದವು. 1952ರಲ್ಲಿ ಮ್ಯಾಕ್‍ಡೋನಾಲ್ಡ್‍ರವರು ಯುನೈಟೆಡ್ ಸ್ಟೇಟ್ಸ್‍ನಲ್ಲಿ ಮೊದಲ ಧ್ವನಿಮುದ್ರಣ ಸ್ಟುಡಿಯೋ ಪ್ರಾರಂಭಿಸಿದರು. ಇದು ಆಡಿಯೋ ಪುಸ್ತಕಗಳ ಬೆಳವಣಿಗೆಯ ವೇಗವನ್ನು ಹೆಚ್ಚಿಸಿತು.
1963 ರ ನಂತರ ಕ್ಯಾಸೆಟ್ ಟೇಪ್ ಮಾರುಕಟ್ಟೆ ಪ್ರವೇಶಿಸಿದವು. ಆಗ ವಿನೈಲ್ ಫಾಮ್ರ್ಯಾಟ್‍ನಲ್ಲಿ ಧ್ವನಿ ಮುದ್ರಿತ ಪುಸ್ತಕಗಳು ಹೆಚ್ಚು ಪ್ರಚಲಿತಗೊಂಡವು. ವಾಕ್‍ಮನ್ ಆವಿಷ್ಕಾರದ ನಂತರ ಆಡಿಯೋ ಪುಸ್ತಕಗಳ ಮುದ್ರಣ ಮತ್ತು ಮಾರಾಟ ಹೆಚ್ಚು ತೀವ್ರಗೊಂಡಿತು. ಸಿ.ಡಿ.ಗಳ ಬಳಕೆಯ ನಂತರ ಆಡಿಯೋ ಪುಸ್ತಕಗಳ ಬಳಕೆ ಮತ್ತು ಬೇಡಿಕೆ ಹೆಚ್ಚಿತು.
1990-2000 ದ ಅವಧಿಯಲ್ಲಿ ಹಗುರ ಆಡಿಯೋ ಸಾಧನಗಳ ಜೊತೆಗೆ ಆಡಿಯೋ ಪುಸ್ತಕಗಳ ಜನಪ್ರಿಯತೆ ಹೆಚ್ಚಿತು. 1998ರಲ್ಲಿ Audible.com ಎನ್ನುವ ಆಡಿಯೋ ಪುಸ್ತಕಗಳ ಮೊದಲ ವೆಬ್‍ಸೈಟ್ ಪ್ರಾರಂಭವಾಯಿತು. ಅದು ಆನ್‍ಲೈನ್ ಲೈಬ್ರರಿಗಳ ಬೆಳವಣಿಗೆಯ ಮಹತ್ತರ ಮೈಲಿಗಲ್ಲಾಯಿತು.
ಬಳಕೆ ಸುಲಭ : ಈಗೀಗಂತೂ ಬಹುತೇಕರ ಬಳಿ ಸ್ಮಾರ್ಟ್‍ಫೋನ್, ಐಫೋನ್, ಐಪಾಡ್, ಟ್ಯಾಬ್ಲೆಟ್, ಲ್ಯಾಪ್‍ಟಾಪ್, ಕಂಪ್ಯೂಟರ್‍ಗಳು ಸಾಮಾನ್ಯವಾಗಿವೆ. ಇವುಗಳ ಸಹಾಯದಿಂದ ಆಡಿಯೋ ಪುಸ್ತಕಗಳನ್ನು ಸುಲಭವಾಗಿ ಕೇಳಬಹುದು. ಅಲ್ಲದೇ ಇತ್ತೀಚೆಗೆ ಗೂಗಲ್ ಪ್ಲೇಸ್ಟೋರ್‍ನಲ್ಲಿ ಅಡಿಬಲ್, ಲಿಬ್ರಿವೊಕ್ಸ್, ಅಕಿಮ್ಬೋ ಮುಂತಾದ ಪ್ಲೇಯರ್ ಅಪ್ಲಿಕೇಶನ್‍ಗಳು ಲಭ್ಯವಿದ್ದು, ಆಡಿಯೋ ಪುಸ್ತಕಗಳನ್ನು ಕೇಳಲು ಉಪಯುಕ್ತವಾಗಿವೆ.
ಪ್ರಯೋಜನಗಳು :
• ಪರಿಚಯವಿಲ್ಲದ ಭಾಷಾ ರೂಪಗಳ ಸ್ಪಷ್ಟ ಉಚ್ಛಾರಣೆ ತಿಳಿಯುತ್ತದೆ.
• ಹೊಸ ಪದಗಳ ಸ್ಪಷ್ಟ ಉಚ್ಛಾರದೊಂದಿಗೆ ಧ್ವನಿ ಏರಿಳಿತದ ಅನುಭವ ದೊರೆಯುತ್ತದೆ.
• ಮುದ್ರಿತ ಪುಸ್ತಕ ಓದಿದಾಗ ದೊರೆಯುವ ಅನುಭವಕ್ಕಿಂತ ವಿಶೇಷವಾದ ಆಸಕ್ತಿ ಮತ್ತು ಕುತೂಹಲ ಮೂಡುತ್ತದೆ.
• ಆರಾಮದಾಯಕವಾಗಿ ಹೆಚ್ಚು ಶ್ರಮ ಇಲ್ಲದೇ ಪುಸ್ತಕಗಳನ್ನು ಆಲಿಸಬಹುದು.
• ಉತ್ತಮವಾದ ವಿವರಣಾತ್ಮಕ ಕೌಶಲ್ಯದ ಅನುಭವ ದೊರೆಯುತ್ತದೆ.
• ರಜೆ ಹಾಗೂ ಪ್ರವಾಸದ ವೇಳೆ ಕಾಲಕಳೆಯಲು ಉತ್ತಮ ಸಂಗಾತಿ.
• ಪ್ರಾದೇಶಿಕ ಭಾಷಾ ಸೊಗಡಿನ ಪರಿಚಯವಾಗುತ್ತದೆ.
• ಇತರೆ ಕೆಲಸಗಳ ಜೊತೆಜೊತೆಗೆ ಕೇಳುವ ಮೂಲಕ ಜ್ಞಾನ ಪಡೆಯಬಹುದು.
• ಸಂಗ್ರಹಣೆ ಮತ್ತು ಸಾಗಣೆ ತುಂಬಾ ಸುಲಭ.
ಭಾರತದಲ್ಲಿ ಆಡಿಯೋ ಪುಸ್ತಕಗಳು : ವಿಶ್ವದ ವೇಗಕ್ಕೆ ಹೋಲಿಸಿದರೆ ಭಾರತದಲ್ಲಿ ಆಡಿಯೋ ಪುಸ್ತಗಳ ಬಳಕೆ ನಿಧಾನವಾಗಿದೆ. 2010 ರ ನಂತರ ಮಾತ್ರ ಭಾರತದಲ್ಲಿ ಇಂಗ್ಲೀಷ್ ಆಡಿಯೋ ಪುಸ್ತಕಗಳ ಬಳಕೆ ಪ್ರಾರಂಭವಾಯಿತು. ಆಡಿಯೋ ಮುದ್ರಕರು ಮತ್ತು ಪ್ರಕಾಶಕರ ಸಂಘಟಿತ ಪ್ರಯತ್ನಗಳ ಕೊರತೆಯಿಂದ ಭಾರತದಲ್ಲಿ ಆಡಿಯೋ ಪುಸ್ತಕಗಳು ಅಷ್ಟೊಂದು ಜನಪ್ರಿಯವಾಗಿಲ್ಲ. ಭಾರತದಲ್ಲಿ ಉತ್ತಮ ಸಾಹಿತ್ಯಕ್ಕೆ ಕೊರತೆಯಿಲ್ಲ. ವೈವಿಧ್ಯಮಯವಾದ ಪ್ರಾದೇಶಿಕ ಹಿನ್ನಲೆಯ ಅನೇಕ ಪುಸ್ತಕಗಳು ಇಡೀ ವಿಶ್ವದ ಗಮನ ಸೆಳೆದಿವೆ. ಈ ಎಲ್ಲಾ ಪುಸ್ತಕಗಳು ಆಡಿಯೋ ಸ್ವರೂಪ ಪಡೆದುಕೊಂಡರೆ ಭಾರತ ಸಾಹಿತ್ಯದ ಪರಾಕಾಷ್ಟತೆಯನ್ನು ಇಡೀ ಜಗತ್ತಿಗೆ ತಿಳಿಸಬಹುದು. ಈ ಬಗ್ಗೆ ಇಂದಿನ ಯುವಕರು ಮತ್ತು ಆಡಿಯೋ ಧ್ವನಿಮುದ್ರಕರು ಮನಸ್ಸು ಮಾಡಬೇಕಷ್ಟೇ? ಅಲ್ಲವೇ?
ಆಡಿಯೋ ಪುಸ್ತಕಗಳ ಕೆಲವು ಜಾಲತಾಣಗಳು:
www.audible.com
www.audiobooks.com
www.openculture.com/freeaudiobooks
https://librivox.org
www.amazon.com/Audiobooks-Books
www.webcrawler.com
www.techsupportalert.com/free-books-audio
www.loyalbooks.com
www.digitaltrends.com
https://www.overdrive.com
ಆರ್.ಬಿ.ಗುರುಬಸವರಾಜ.

No comments:
Post a Comment