ಆಗಸ್ಟ್ 2017ರ ಟೀಚರ್ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಬರಹ.
“ಪಪ್ಪಾ,,, ಬೇಗ ಬಾ ಇಲ್ಲಿ!” ಎಂದು ಮಗಳು ಶ್ವೆತಾ ಕೂಗುತ್ತಿದ್ದಂತೆ, ಪೇಪರ್ ಓದುತ್ತಿದ್ದ ತಂದೆ ಬೆಚ್ಚಿ ಬಿದ್ದರು. ಏನೋ ತೊಂದರೆಯಾಗಿದೆ ಎಂದು ಊಹಿಸಿ ಮನೆಯ ಪಕ್ಕದ ಕೈತೋಟಕ್ಕೆ ದೌಡಾಯಿಸಿದರು. ನೆಲದತ್ತ ಕೈ ತೋರಿಸುತ್ತಾ ‘ಪಪ್ಪಾ ಇಲ್ನೊಡು! ಇವೇನು? ಎಲ್ಲಿಗೆ ಹೊರಟಿವೆ? ಯಾಕೆ ಹೀಗೆ ಗುಂಪಾಗಿ ಒಂದರ ಮೇಲೊಂದು ಹೊರಟಿವೆ? ಎಂದು ಮರ‍್ನಾಲ್ಕು ಪ್ರಶ್ನೆಗಳನ್ನು ಒಮ್ಮೆಲೇ ಹೊರ ಹಾಕಿದಳು. ‘ಪುಟ್ಟಾ ಇವು ಸಹಸ್ರಪದಿಗಳು. ಇಂಗ್ಲಿಷಿನಲ್ಲಿ ಇವುಗಳನ್ನು ಮಿಲ್ಲಿಪೀಡ್ ಎಂದೂ ಕರೆಯುತ್ತಾರೆ. ಇವು ಆಹಾರ ಹುಡುಕಿ ಹೊರಟಿವೆ. ಇವಿನ್ನೂ ಎಳೆಯ ಕೀಟಗಳು. ತಮ್ಮ ರಕ್ಷಣೆಗಾಗಿ ಹೀಗೆ ಗುಂಪಿನಲ್ಲಿ ಚಲಿಸುತ್ತವೆ. ಸ್ವಲ್ಪ ಬಲಿಷ್ಟವಾದ ನಂತರ ಒಂದೊಂದೇ ಸಂಚರಿಸುತ್ತವೆ’ ಎಂದು ಅವಳ ಪ್ರಶ್ನೆಗೆ ಉತ್ತರಿಸಿದರು.
ಅಷ್ಟು ಹೇಳಿ ಮೊಬೈಲ್‌ನಲ್ಲಿ ಅವುಗಳ ಫೋಟೋ ತೆಗೆಯಲು ಪ್ರಾರಂಭಿಸಿದರು. ಮರ‍್ನಾಲ್ಕು ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದಂತೆ ಅವುಗಳೆಲ್ಲಾ ಚಕ್ಕುಲಿಯಂತೆ ಸುರುಳಿಯಾಕಾರದಲ್ಲಿ ಸುತ್ತಿಕೊಳ್ಳಲು ಆರಂಭಿಸಿದವು. ‘ಪಪ್ಪಾ ಯಾಕೆ ಹೀಗೆ ಚಕ್ಕುಲಿಯಂತೆ ಸುತ್ತಿಕೊಂಡವು?’ ಎಂಬ ಮತ್ತೊಂದು ಪ್ರಶ್ನೆ ಹಾಕಿದಳು. ಕ್ಯಾಮೆರಾ ಬೆಳಕು ಬಿದ್ದಿದ್ದರಿಂದ ಹೀಗೆ ಸುತ್ತಿಕೊಂಡಿರಬೇಕೆಂದು ಹೇಳಿದರು. ಆದರೆ ಅವುಗಳು ಸುತ್ತಿಕೊಂಡದ್ದು ಬೇರೆಯದಕ್ಕೆ ಎಂದು ನಂತರ ತಿಳಿಯಿತು. ಅವುಗಳ ಗುಂಪಿನ ಮೇಲೆ ಕಂಬಳಿಹುಳ (ಮೈತುಂಬಾ ರೋಮವಿರುವ ಕೀಟ) ಹರಿದು ಬಂದಿತ್ತು. ‘ಕಂಬಳಿ ಹುಳುವೂ ಒಂದು ಕೀಟವಲ್ಲವೇ? ಆದರೂ ಏಕೆ ಹೀಗೆ ಸುತ್ತಿಕೊಂಡವು? ಎಂದು ಮತ್ತೆ ಪ್ರಶ್ನಿಸಿದಳು. ಅವು ಇನ್ನೊಂದು ಜೀವಿಯಿಂದ ರಕ್ಷಿಸಿಕೊಳ್ಳಲು ಹೀಗೆ ಸುರುಳಿಯಾಕಾರದಲ್ಲಿ ಸುತ್ತಿಕೊಂಡು ತಮ್ಮನ್ನು ತಾವು ರಕ್ಷಸಿಕೊಳ್ಳುತ್ತವೆ ಎಂದು ಅವಳ ತಂದೆ ಹೇಳಿದರು. ಅವಳ ಪ್ರಶ್ನೆಗಳ ಸುರಿಮಳಗೆ ಉತ್ತರವಾಗಿ ಕೆಳಗಿನ ವಿವರಣೆ ನೀಡಿದ್ದಾರೆ. ಇದು ನಿಮಗೂ ಉಪಯೋಗವಾಗುತ್ತದೆ. ಓದಿ ತಿಳಿದುಕೊಳ್ಳಿ.
ದೇಹ ರಚನೆ :
ಆರ್ತೋಪೋಡ ಕುಟುಂಬಕ್ಕೆ ಸೇರಿದ ಇವುಗಳ ದೇಹ ಉದ್ದವಾದ ಕೊಳವೆ ಆಕಾರದಲ್ಲಿರುತ್ತದೆ. ಸಾಮಾನ್ಯವಾಗಿ ಮಲೆನಾಡಿನಲ್ಲಿ ಹೆಚ್ಚಾಗಿ ಕಂಡುಬರುವ ಇವು ತಂಪಾದ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ತಲೆಯ ಭಾಗ ಹೊರತುಪಡಿಸಿ ಪ್ರತೀ ಭಾಗದಲ್ಲೂ ನಾಲ್ಕು ಕಾಲುಗಳನ್ನು ಹೊಂದಿರುತ್ತವೆ. ಕಾಲುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಇವುಗಳಿಗೆ ಸಹಸ್ರಪದಿಗಳು ಎಂದು ಕರೆದಿರಬಹುದು. ನಿಜವಾಗಿಯೂ ಇವುಗಳಿಗೆ ಸಾವಿರ ಕಾಲುಗಳೇನೂ ಇರುವುದಿಲ್ಲ. ಇವುಗಳು ನಾಲ್ಕುನೂರರಿಂದ ಏಳುನೂರು ಕಾಲುಗಳನ್ನು ಹೊಂದಿರುತ್ತವೆ. ಕಾಲುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ನಡಿಗೆ ತುಂಬಾ ನಿಧಾನವಾಗಿರುತ್ತದೆ.
ಆಹಾರ ಮತ್ತು ಬೆಳವಣಿಗೆ :
ಸಹಸ್ರಪದಿಗಳು ಸಾಮಾನ್ಯವಾಗಿ ಕಪ್ಪು ಅಥವಾ ಕಂದು ಬಣ್ಣದಲ್ಲಿರುತ್ತವೆ. ಮಳೆಗಾಲದಲ್ಲಿ ಹೆಚ್ಚು ಚಟುವಟಿಕೆಯಿಂದ ಇರುವ ಇವುಗಳು ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳಲು ತಂಪಾದ ಪ್ರದೇಶಗಳಲ್ಲಿ ಮಾತ್ರ ವಾಸಿಸುತ್ತವೆ. ಬೇರೆ ಕಾಲದಲ್ಲಿ ತೇವಾಂಶ ಹೆಚ್ಚಿರುವ ಪ್ರದೇಶಗಳಲ್ಲಿ ಅಡಗಿರುತ್ತವೆ. ಒಣಗಿದ ಮತ್ತು ಕೊಳೆಯುತ್ತಿರುವ ಸಸ್ಯಶೇಷ ಇವುಗಳ ಆಹಾರವಾಗಿದೆ. ಕೆಲವು ಜಾತಿಯ ಸಹಸ್ರಪದಿಗಳು ಎರೆಹುಳು ಹಾಗೂ ಕೆಲವು ಕೀಟಗಳನ್ನು ತಿನ್ನುತ್ತವೆ. ಕೆಲ ಜಾತಿಯ ಸಹಸ್ರಪದಿಗಳು ಸಸ್ಯಗಳ ಎಳೆ ಚಿಗುರನ್ನು ತಿನ್ನುತ್ತವೆ.
ಹೆಣ್ಣುಹುಳು ತೇವಾಂಶವಿರುವ ಮಣ್ಣಿನಲ್ಲಿ ಗೂಡು ನಿರ್ಮಿಸಿ ಮೊಟ್ಟೆಗಳನ್ನು ಇಡುತ್ತದೆ. ಕೆಲವು ಹುಳುಗಳು ಹತ್ತರಿಂದ ಮೂರುನೂರು ಮೊಟ್ಟೆಗಳನ್ನಿಡುತ್ತದೆ. ಪ್ರಕೃತಿಯ ಉಷ್ಣಾಂಶ ಹಾಗೂ ಇತರೆ ಕಾರಣಗಳಿಂದ ಕೆಲ ಮೊಟ್ಟೆಗಳು ನಾಶವಾಗುತ್ತವೆ. ಮರಿ ಹುಟ್ಟಿದಾಗ ದೇಹದ ಗಾತ್ರ ಚಿಕ್ಕದಾಗಿರುತ್ತದೆ ಹಾಗೂ ಕಾಲುಗಳ ಸಂಖ್ಯೆಯೂ ಕಡಿಮೆ ಇರುತ್ತದೆ. ನಂತರ ಹೊರಚರ್ಮ ಎರಡು ಮೂರು ಬಾರಿ ಕಳಚಿ ದೊಡ್ಡದಾಗಿ ಬೆಳೆಯುತ್ತವೆ.
ರಕ್ಷಣಾ ತಂತ್ರ :
ಸಹಸ್ರಪದಿಗಳ ರಕ್ಷಣಾ ತಂತ್ರ ಅತ್ಯಂತ ವಿಸ್ಮಯಕಾರಿ. ವೇಗವಾಗಿ ಓಡಲಾರದ, ಕಚ್ಚಲು ಅಥವಾ ಚುಚ್ಚಲು ಯಾವುದೇ ಅಂಗಗಳಿಲ್ಲ ಇವು ಬೇರೆ ಜೀವಿಗಳಿಗೆ ಆಹಾರವಾಗುವ ಸಾಧ್ಯತೆ ಹೆಚ್ಚು. ನಿರುಪದ್ರವಿಗಳಾದ ಇವು ಇತರೆ ಜೀವಿಗಳಿಂದ ರಕ್ಷಸಿಕೊಳ್ಳಲು ದೇಹವನ್ನು ಚಕ್ಕುಲಿಯಂತೆ ಸುರುಳಿಯಾಗಿ ಸುತ್ತಿಕೊಂಡು ವೈರಿಗಳನ್ನು ಗಲಿಬಿಲಿಗೊಳಿಸುತ್ತವೆ. ದೇಹವನ್ನು ಸುತ್ತಿಕೊಳ್ಳುವಾಗ ಕಾಲುಗಳಿಗೆ ಘಾಸಿಯಾಗದಂತೆ ಹೊರಗೆ ಎಳೆದುಕೊಳ್ಳುತ್ತವೆ. ಚಿಕ್ಕವಿರುವಾಗ ಗುಂಪಾಗಿ ಚಲಿಸುವ ಇವುಗಳು ದೊಡ್ಡದಾಗಿ ಬೆಳೆದಂತೆ ಒಂಟಿಯಾಗಿ ಸಂಚರಿಸತೊಡಗುತ್ತವೆ.
ಕೆಲವು ಜಾತಿಯ ಸಹಸ್ರಪದಿಗಳು ತಮ್ಮ ರಕ್ಷಣೆಗೆ ರಸಾಯನಿಕ ಅಸ್ತç ಪ್ರಯೋಗಿಸುತ್ತವೆ. ವೈರಿಗಳನ್ನು ದೂರ ಓಡಿಸಲು ಕೆಟ್ಟ ವಾಸನೆ ಸ್ರವಿಸುತ್ತವೆ. ಕೆಲವು ವೇಳೆ ಚಿಕ್ಕ ಚಿಕ್ಕ ಕೀಟಗಳು ಸುಡುವಂತಹ ರಸಾಯನಿಕಗಳನ್ನು ಸ್ರವಿಸುತ್ತವೆ. ಚಿಕ್ಕ ಮಕ್ಕಳು ಇವುಗಳನ್ನು ಮುಟ್ಟಿದರೆ ಕೆಲವು ಸೋಂಕುರೋಗಗಳಾದ ಕಜ್ಜಿ ಅಥವಾ ಮೈಕಡಿತ ಉಂಟಾಗುತ್ತದೆ. ಹೀಗಾಗಿ ಚಿಕ್ಕ ಮಕ್ಕಳು ಇವುಗಳನ್ನು ಮುಟ್ಟದಂತೆ ಎಚ್ಚರ ವಹಿಸಬೇಕು.
ಅವಸಾನದ ಅಂಚಿನತ್ತ,,, :
ಮಾನವ ಈ ಭೂಮಿ ಮೇಲೆ ವಾಸಿಸುವ ಮೊದಲೇ ಅಂದರೆ ನಾಲ್ಕುನೂರು ಮಿಲಿಯನ್ ವರ್ಷಗಳಿಗಿಂತ ಹಿಂದಿನಿಂದಲೂ ಭೂಮಿಯ ಮೇಲೆ ವಾಸಿಸುತ್ತಿವೆ. ಕಾಲದಿಂದ ಕಾಲಕ್ಕೆ ಆದ ಬದಲಾವಣೆಗಳಿಗೆ ಹೊಂದಿಕೊಂಡು ಬದುಕುತ್ತಾ ಬಂದಿವೆ. ಆದರೆ ಇತ್ತಿÃಚೆಗೆ ಮಾನವನ ಅತಿಯಾದ ಉಪಟಳದಿಂದ ಇವುಗಳ ಸಂತತಿ ಕಡಿಮೆಯಾಗುತ್ತಿದೆ. ಮನೆಯಂಗಳ ಹಾಗೂ ಇನ್ನಿತರೇ ಸ್ಥಳಗಳಲ್ಲಿ ಸಿಮೆಂಟ್ ಅಥವಾ ಕಲ್ಲಿನ ನೆಲಹಾಸಿನಿಂದ ಇವುಗಳ ಓಡಾಟಕ್ಕೆ ಹಾಗೂ ಆವಾಸಕ್ಕೆ ತೊಂದರೆಯಾಗುತ್ತಿದೆ. ರಸಾಯನಿಕಗಳ ಬಳಕೆಯಿಂದ ಪರಿಸರ ಕಲಿಷಿತಗೊಂಡಿದ್ದು, ಅದರಲ್ಲಿ ಭೂಮಿಯೂ ವಿಷಮಯ ಆಗಿರುವುದರಿಂದ ಇವುಗಳ ಜೀವಕ್ಕೆ ಕುತ್ತು ಬಂದಿದೆ. ಪರಿಸರ ಮಾಲಿನ್ಯ ಹಾಗೂ ಜಾಗತಿಕ ತಾಪಮಾನಗಳ ಪರಿಣಾಮದಿಂದ ಮಳೆಯ ಪ್ರಮಾಣ ಕಡಿಮೆಯಾಗಿರುವುದೂ ಇವುಗಳ ಸಂತತಿ ಕಡಿಮೆಯಾಗಲು ಕಾರಣವಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಕೆಲವೇ ವರ್ಷಗಳಲ್ಲಿ ಇವು ನಮ್ಮಿಂದ ಕಣ್ಮರೆಯಾಗುತ್ತವೆ. ಜೀವ ವೈಧ್ಯತೆಯ ಕೊಂಡಿಯೊಂದು ಕಳಚಲಿದೆ.
ಟೀಚರ್ ಆಗಸ್ಟ್-2017
ತಿನ್ನಲಾಗದ ಚಕ್ಕುಲಿ

ಆರ್.ಬಿ.ಗುರುಬಸವರಾಜ. ಹೊಳಗುಂದಿ
ಹಡಗಲಿ(ತಾ) ಬಳ್ಳಾರಿ(ಜಿ) 583219
9902992905
No comments:
Post a Comment