ದಿನಾಂಕ 18-9-18 ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.
ತಾಯಂದಿರಿಗೆ ಸವಾಲಾದಿರಲಿ ಮಕ್ಕಳ ಸಂಕೋಚ ಸ್ವಭಾವ
ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಕನಸು ಮನೆಗೆ ಯಾರಾದರೂ ಅತಿಥಿಗಳು ಬಂದರೆ ಸಾಕು, ತಂದೆ ತಾಯಿಗೆ ಅಂಟಿಕೊಂಡುಬಿಡುತ್ತಾಳೆ. ಯಾರೊಂದಿಗೂ ಮಾತನಾಡುವುದಿಲ್ಲ. ಅಳುಮೋರೆ ಹಾಕಿಕೊಂಡು ಪೆಚ್ಚಾಗಿರುತ್ತಾಳೆ. ಅತಿಥಿಗಳು ಹೋಗಿ ಕೆಲ ಕಾಲದ ನಂತರ ಮೊದಲಿನಂತಾಗುತ್ತಾಳೆ. ಸಭೆ ಸಮಾರಂಭಗಳಲ್ಲಂತೂ ಯಾವಾಗಲೂ ತಾಯಿಗೆ ಅಂಟಿಕೊಂಡೇ ಇರುತ್ತಾಳೆ. ಕನಸುವಿನ ಈ ವರ್ತನೆ ತಂದೆ ತಾಯಿಗಳಿಗೆ ಬೇಸರ ತಂದಿದೆ. ಏನು ಮಾಡಬೇಕೆಂಬುದೇ ತೋಚುತ್ತಿಲ್ಲ.
ಶಾಲೆಯಲ್ಲಿ ಕಲಿತ ಹಾಡು, ಮಗ್ಗಿ, ಇತ್ಯಾದಿಗಳನ್ನು ತಂದೆ-ತಾಯಿ ಕೇಳದಿದ್ದರೂ ಪಟಪಟನೇ ಹೇಳುವ ಶಶಾಂಕ ಬಂಧುಗಳ ಎದಿರು ಹೇಳಲು ತಡವರಿಸುತ್ತಾನೆ. ಒಂದೊಂದು ಅಕ್ಷರ/ಪದ ಹೇಳಲು ಕಷ್ಟಪಡುತ್ತಾನೆ. ಶಾಲೆಯಲ್ಲಿ ಸ್ನೆÃಹಿತರ ಜೊತೆಗೆ ಸದಾ ಮಾತನಾಡುವ ಶಶಾಂಕ ಶಿಕ್ಷಕರ ಮಾತಿಗೆ ಪ್ರತಿಕ್ರಿಯೆ ನೀಡುವುದೇ ಇಲ್ಲ. ಸದಾ ಮೌನಿಯಾಗಿರುತ್ತಾನೆ.
ಇದು ಕೇವಲ ಕನಸು ಮತ್ತು ಶಶಾಂಕರ ಸಮಸ್ಯೆಯಲ್ಲ. ಬಹುತೇಕ ಮಕ್ಕಳು ಇಂತಹ ವರ್ತನೆ ತೋರುತ್ತಿರುತ್ತಾರೆ. ಪರಿಚಯವಿಲ್ಲದ ಸಂದರ್ಭಗಳಲ್ಲಿ ಕೆಲವು ಮಕ್ಕಳು ಸಂವಹನ ಮಾಡಲು ಹಿಂಜರಿಯುತ್ತಾರೆ. ಅದನ್ನೆÃ ನಾವು ಸಂಕೋಚ ಅಥವಾ ನಾಚಿಕೆ ಎನ್ನುತ್ತೆÃವೆ. ಮಗುವಿನಲ್ಲಿ ಇಂತಹ ವರ್ತನೆ ಪೋಷಕರಿಗೆ ಗಾಬರಿ ಹುಟ್ಟಿಸಬಹುದು. ಸ್ನೆÃಹಪರರು ಮತ್ತು ಒಡನಾಡಿಗಳೊಂದಿಗೆ ಮಾತ್ರ ಮುಕ್ತವಾಗಿ ಸಂವಹನ ಮಾಡುವ ಮಕ್ಕಳು, ಹೊಸ ಸನ್ನಿವೇಶ ಅಥವಾ ಹೊಸಬರೊಂದಿಗೆ ವ್ಯವಹರಿಸಲು ಹಿಂಜರಿಯುತ್ತದೆ.
ಮಗು ಬೆಳೆದು ದೊಡ್ಡದಾದಂತೆ ಪರಿಚಿತ ಪ್ರಪಂಚವು ವಿಸ್ತರಿಸುತ್ತದೆ. ವಿವಿಧ ಜನರನ್ನು ಭೇಟಿಯಾಗುವ, ಮಾತಮಾಡುವ, ವ್ಯವಹರಿಸುವ ಸಂದರ್ಭಗಳು ಪದೇ ಪದೇ ಜರುಗುತ್ತವೆ. ಇದರಿಂದಾಗಿ ಮಗು ನಿಧಾನವಾಗಿ ಸಂಕೋಚವನ್ನು ಕಳೆದುಕೊಂಡು ಮುಕ್ತವಾಗಿ ವ್ಯವಹರಿಸಲು ಪ್ರಾರಂಭಿಸುತ್ತದೆ. ಹೆತ್ತವರ ಮೇಲೆ ಹೆಚ್ಚು ಅವಲಂಬಿತವಾಗಿದ್ದ ಮಗು ಕ್ರಮೇಣ ಸ್ವಾವಲಂಬಿಯಾಗಲು ಪ್ರಯತ್ನಿಸುತ್ತದೆ. ಮಗುವಿನ ಪರಿಕಲ್ಪನೆ ಮತ್ತು ವಿಷಯಗಳ ಪ್ರಪಂಚ ವಿಸ್ತರಿಸುತ್ತದೆ. ಸಾಮಾಜೀಕರಣದ ಪ್ರಭಾವದಿಂದಾಗಿ ಮಗು ಎಲ್ಲರೊಂದಿಗೆ ಬೆರೆಯುವ ಗುಣ ಅಭಿವೃದ್ದಿಪಡಿಸಿಕೊಳ್ಳುತ್ತದೆ.
ಕೆಲವು ಮಕ್ಕಳು ಎಲ್ಲಾ ವಯಸ್ಸಿನಲ್ಲೂ ನಾಚಿಕೆ ಪಡುತ್ತಾರೆ. ತೀಕ್ಷ÷್ಣವಾದ ಸ್ವಭಾವದಿಂದ ಬಳಲುವ ಮಕ್ಕಳ ಸಂಕೋಚ/ನಾಚಿಕೆ ಪ್ರೌಢಾವಸ್ಥೆಯಲ್ಲೂ ಮುಂದುವರೆಯಬಹುದು. ಇದರಿಂದ ಮಕ್ಕಳು ಪ್ರತಿಯೊಂದು ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಾರೆ. ಸಂಕೋಚವು ಮಗುವಿನ ಸಾಮರ್ಥ್ಯಾಭಿವೃದ್ದಿಯ ಮೇಲೆ ನೇರ ಪ್ರಭಾವ ಬೀರುತ್ತದೆ. ಯಾವ ಮಗು ಮುಕ್ತವಾಗಿ ಎಲ್ಲರೊಂದಿಗೂ ಬೆರೆತು ಸಂವಹನ ಮಾಡುತ್ತದೆಯೋ ಆ ಮಗುವಿನಲ್ಲಿ ಸಾಮಾಜಿಕ, ಭಾವನಾತ್ಮಕ ಮತ್ತು ಶೈಕ್ಷಣಿಕ ಸಾಮರ್ಥ್ಯಗಳು ಬೇಗನೇ ವೃದ್ದಿಯಾಗುತ್ತವೆ. ಹಾಗಾಗಿ ಪಾಲಕರು ಪ್ರಾರಂಭಿಕ ಹಂತದಲ್ಲಿ ಸಂಕೋಚವನ್ನು ಗುರುತಿಸಿ, ಸೂಕ್ತ ಮಾರ್ಪಾಡುಗಳೊಂದಿಗೆ ಮಗುವಿನ ಸಾಮರ್ಥ್ಯಾಭಿವೃದ್ದಿಗೆ ಸಹಕರಿಸಬಹುದು.
ಸಂಕೋಚದ ಚಿಹ್ನೆಗಳು :
• ಹೊಸಬರನ್ನು ಅನುಮಾನದಿಂದ ನೋಡುವುದು.
• ಇತರರ ಸುತ್ತಲೂ ವಿಚಿತ್ರ ಭಾವನೆಯನ್ನು ಅನುಭವಿಸುವುದು.
• ಸದಾ ಅಸುರಕ್ಷತೆಯ ಮತ್ತು ಅಹಿತಕರ ಭಾವನೆ ಅನುಭವಿಸುತ್ತಿರುವುದು.
• ಅಂಜುಬುರುಕತನ ಭಾವನೆ.
• ನಾಚಿಕೆ ಸ್ವಭಾವದ ಪ್ರದರ್ಶನ.
• ಸಮರ್ಥಿಸಿಕೊಳ್ಳಲು ನಿಷ್ಕಿçÃಯವಾದ ಕಾರಣಗಳ ಪ್ರದರ್ಶನ.
• ಭೌತಿಕ ಸಂವೇದನೆಗಳ ಪ್ರದರ್ಶನ.
• ವೇಗವಾಗಿ ಉಸಿರಾಡುವಿಕೆ.
• ಮುಖ ಮತ್ತು ಕೈಗಳಲ್ಲಿ ಅನಗತ್ಯ ಬೆವರು ಒಸರುವಿಕೆ.
• ವಿಶ್ವಾಸಿಗರು ಅಥವಾ ಗೋಡೆ ಹಿಂದೆ ಅವಿತುಕೊಳ್ಳುವುದು.
ಸಂಕೋಚಕ್ಕೆ ಕಾರಣಗಳು:
• ಅನಿವಂಶೀಯತೆ.
• ಭಯದ ವಾತಾವರಣ.
• ಕಲಿಕೆಯ ನಡವಳಿಕೆಗಳ ಮೇಲೆ ಆತ್ಮವಿಶ್ವಾಸ ಇಲ್ಲದಿರುವುದು.
• ಕೌಟುಂಬಿಕ ಸಮಸ್ಯೆಗಳ ಕೆಟ್ಟ ಪರಿಣಾಮ
• ಪಾಲಕರ ಅಸಮಂಜಸ ನಡವಳಿಕೆಗಳು.
• ಕುಟುಂಬದಲ್ಲಿ ಅಸುರಕ್ಷತೆ ಭಾವನೆ.
• ಸಾಮಾಜಿಕ ಸಂವಹನ ಕೌಶಲ್ಯಗಳ ಕೊರತೆ.
• ಪಾಲಕರು/ಪೋಷಕರ ಕಠಿಣವಾದ ವಿಮರ್ಶೆ .
• ಟೀಕೆ ಮತ್ತು ಅಪನಿಂದನೆಗಳು.
• ವೈಫಲ್ಯದ ಭಯ.
• ಕುಟುಂಬದಲ್ಲಿ ಗಮನದ ಕೊರತೆ.
• ಗಮನಾರ್ಹ ವ್ಯಕ್ತಿಗಳಿಂದ ಕಿರುಕುಳ ಅಥವಾ ಹಿಂಸೆ.
• ಅಂತರ್ಮುಖಿಗಳಾಗಿರುವುದು.
ಸಂಕೋಚದ ಕೆಲವು ಲಾಭಗಳು:
ಸಂಕೋಚದಿಂದ ಮಗು ಕೇವಲ ತೊಂದರೆಗೆ ಒಳಗಾಗುವುದಿಲ್ಲ. ಬದಲಾಗಿ ಕೆಲವು ಲಾಭಗಳನ್ನೂ ಅನುಭವಿಸುತ್ತದೆ. ಅವುಗಳೆಂದರೆ ಹೊಸಬರನ್ನು ನಂಬಿ ತೊಂದರೆಗೆ ಸಿಲುಕದೇ ಇರುವುದು, ಸದಾ ಜಾಗೃತಿಯಲ್ಲಿರುವುದು, ವಾತಾವರಣಕ್ಕೆ ಅನುಗುಣವಾಗಿ ವರ್ತಿಸುವುದು, ವರ್ತನೆಯಲ್ಲಿ ಸದಾ ಜಾಗೃತಿಯಿಂದ ಇರುವುದು, ಉತ್ತಮವಾಗಿ ಕೆಲಸ ಮಾಡಬೇಕೆಂಬ ಹಂಬಲ ಹೆಚ್ಚುವುದು, ತಪ್ಪು ಮಾಡಲೇಬಾರದೆಂಬ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವುದು. ಹೀಗೆ ಅನೇಕ ವ್ಯಕ್ತಿಗತ ಲಾಭಗಳು ದೊರೆಯುತ್ತವೆ.
ಬದಲಾಗಬೇಕಾದ ಪೋಷಕರ ವರ್ತನೆಗಳು :
• ನಾಚಿಕೆಗೇಡಿ, ಸಂಕೋಚ ಸ್ವಭಾವ ಎಂದು ಮಗುವಿಗೆ ಹಣೆಪಟ್ಟಿ ಹಚ್ಚಬೇಡಿ.
• ನಾಚಿಕೆಪಡಿಸುವಂತಹ ಸಂದರ್ಭಗಳಿಂದ ಮಗುವನ್ನು ದೂರವಿಡಿ.
• ಮಗು ನಾಚಿಕೆ/ಸಂಕೋಚಪಡುವಾಗ ಟೀಕಿಸಬೇಡಿ ಅಥವಾ ಗೇಲಿ ಮಾಡಬೇಡಿ. ಬದಲಿಗೆ ಮಗುವಿಗೆ ಬೆಂಬಲ, ಅನುಭೂತಿ ನೀಡಿ.
• ಭಯ ರಹಿತ ವಾತಾವರಣ ನಿರ್ಮಿಸಿ. ಸಂಕೋಚದ ಕಾರಣಗಳ ಬಗ್ಗೆ ಮಾತನಾಡಲು ಪ್ರೊÃತ್ಸಾಹಿಸಿ ಅಥವಾ ಅವಕಾಶ ನೀಡಿ.
• ಮಗುವಿನಲ್ಲಿ ಆತಂಕ ಹಾಗೂ ದುಗುಡ ಹೆಚ್ಚಿಸಬೇಡಿ.
• ಮಗುವನ್ನು ಒಬ್ಬಂಟಿಯಾಗಿ ಬಿಟ್ಟು ಹೋಗುವ ಸಂದರ್ಭ ಬಂದಾಗ ಇತರರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಕಲಿಸಿ.
ಪೋಷಕರ ತಂತ್ರಗಾರಿಕೆ :
• ನೀವು ಮಗುವಾಗಿದ್ದಾಗ ಸಂಕೋಚ ಅನುಭವಿಸಿದಾಗ ಅದನ್ನು ಹೇಗೆ ಎದುರಿಸಿದಿರಿ ಎಂಬುದನ್ನು ಮಗುವಿಗೆ ತಿಳಿಸಿ ಹೇಳಿ.
• ಸಂಕೋಚಪÀಡದೇ ಇರುವಂತಹ ಅನೇಕ ಪ್ರಯೋಜನಗಳ ಬಗ್ಗೆ ಮಗುವಿಗೆ ತಿಳಿಸಿ. ನಿಮ್ಮ ಜೀವನದ ಸ್ವಂತ ಉದಾಹರಣೆ ತಿಳಿಸಿ.
• ಸಭೆ, ಕಾರ್ಯಕ್ರಮಗಳು, ಸಮಾರಂಭಗಳು ಇತ್ಯಾದಿಗಳಿಗೆ ಮಗುವನ್ನು ಮನೆಯಿಂದ ಹೊರ ಕರೆದೊಯ್ಯಿರಿ.
• ಪರಿಚಯವಿಲ್ಲವರೊಂದಿಗೆ ಹೇಗೆ ವರ್ತಿಸಬೇಕೆಂಬುದನ್ನು ಹೇಳಿಕೊಡಿ.
• ಮನೆಗೆ ಆಗಾಗ ಅತಿಥಿಗಳನ್ನು, ಸ್ನೆÃಹಿತರನ್ನು, ಬಂಧುಗಳನ್ನು ಆಹ್ವಾನಿಸಿ, ಮಗುವಿಗೆ ಪರಿಚಯ ಮಾಡಿಕೊಡಿ. ಅವರ ಮತ್ತು ನಿಮ್ಮ ಸಂಬಂಧದ ಬಗ್ಗೆ ಮಗುವಿಗೆ ವಿವರವಾಗಿ ತಿಳಿಸಿ.
• ಮನೆಗೆ ಬಂದ ಅತಿಥಿಗಳನ್ನು ಮಾತನಾಡಿಸಲು ಮಗುವಿಗೆ ತಿಳಿಸಿ.
• ಹೊಸ ವ್ಯಕ್ತಿಗಳನ್ನು ಮಗು ಮಾತನಾಡಿಸಿದಾಗ ಮಗುವನ್ನು ಅಭಿನಂದಿಸಿ.
• ಮಗುವಿಗೆ ಭಾವನಾತ್ಮಕ ಬೆಂಬಲ ನೀಡಿ.
• ಹೊಸ ವಾತಾವರಣದಲ್ಲಿ ಹೇಗೆ ಪ್ರತಿಕ್ರಿಯಿಸಬೇಕೆಂಬ ಬಗ್ಗೆ ತಿಳುವಳಿಕೆ ನೀಡಿ.
• ಮುಕ್ತವಾಗಿ ಮಾತನಾಡಲು ಅವಕಾಶಗಳನ್ನು ಸೃಷ್ಟಿಸಿ.
• ಸಾಮಾಜಿಕ ಕೌಶಲ್ಯಗಳ ಕುರಿತ ಆತ್ಮವಿಶ್ವಾಸ ಮೂಡಿಸಿ.
• ನಿಮ್ಮ ಕೋಪವನ್ನು ಮೊದಲು ಕಡಿಮೆ ಮಾಡಿಕೊಂಡು ನಂತರ ಮಗುವಿನ ಕೋಪವನ್ನು ಕಡಿಮೆ ಮಾಡಿ.
• ಬದಲಾವಣೆ ಅಥವಾ ಪರಿವರ್ತನೆ ಜಗದ ನಿಯಮ ಎಂಬುದನ್ನು ಮಗುವಿಗೆ ಮನವರಿಕೆ ಮಾಡಿಕೊಡಿ.
• ವೈಫಲ್ಯ ಎದುರಿಸುವುದನ್ನು ಕಲಿಸಿ.
• ಧೈರ್ಯ ಸ್ಥೆöÊರ್ಯ ತುಂಬಿ ಆತ್ಮವಿಶ್ವಾಸ ಬೆಳೆಸಿ.
• ಅಪಾಯಕಾರಿ ಸಂದರ್ಭಗಳಿಂದ ಮಗು ದೂರವಿರಲು ತಿಳಿಸಿ.
ಆರ್.ಬಿ.ಗುರುಬಸವರಾಜ
No comments:
Post a Comment