ದಿನಾಂಕ 02-11-2015ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ
ಅಂತರಾಷ್ಟ್ರೀಯ ವಿಜ್ಞಾನೋತ್ಸವ-2015
ಸಂಶೋಧನೆಗಳಿಗೆ ವೈಜ್ಞಾನಿಕ ಮನೋಭಾವವು ಮೂಲಭೂತ ಅಂಶ. ವೈಜ್ಞಾನಿಕ ಮನೋಭಾವವು ನಮ್ಮ ಆಲೋಚನಾ ರೀತಿ ಮತ್ತು ಸಮಸ್ಯಾ ಪರಿಹಾರ ವಿಧಾನಗಳಿಗೆ ಮಾನಸಿಕ ಪರಿವರ್ತನೆಯಾಗಿದೆ. ಈ ವರ್ತನೆಯು ದೇಶದ ಜನತೆಯನ್ನು ಉನ್ನತ ಹಂತಕ್ಕೆ ಬೆಳೆಸುತ್ತದೆ.
ಭಾರತವು ಉತ್ಪಾದನೆ ಮತ್ತು ವಿತರಣೆಯಲ್ಲಿ ಅಮೂಲ್ಯ ಕೊಡುಗೆ ನೀಡಿದೆ. ಜೊತೆಗೆ ಅನೇಕ ವೈಜ್ಞಾನಿಕ ಸಾಧನೆಗಳ ಹೆಗ್ಗುರುತು ಮೂಡಿಸಿದೆ. ಪ್ರಸ್ತುತ ಸನ್ನಿವೇಶದಲ್ಲಿ ಭಾರತವು ತಾಂತ್ರಿಕವಾಗಿ ಅರ್ಹರಾದ ಅನೇಕ ವೃತ್ತಿಪರರ ದೊಡ್ಡ ಗುಂಪನ್ನು ಹೊಂದಿದ್ದರೂ ದೇಶದಾದ್ಯಂತ ವೈಜ್ಞಾನಿಕ ಮನೋಭಾವ ಸಂಪೂರ್ಣವಾಗಿ ಬೆಳೆದುಬಂದಿಲ್ಲ. ಆದ್ದರಿಂದ ವೈಜ್ಞಾನಿಕ ಮನೋಭಾವದ ಮಂತ್ರ ಜಪಿಸುವುದು ಹಿಂದೆಂದಿಗಿಂತಲೂ ಈಗಿನ ತುರ್ತು ಅಗತ್ಯವಾಗಿದೆ. ಇಡೀ ಸಮಾಜದುದ್ದಕ್ಕೂ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ವೈಜ್ಞಾನಿಕ ಮನೋಭಾವನೆ ಬಲಪಡಿಸುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ಭೂವಿಜ್ಞಾನ ಸಚಿವಾಲಯಗಳು ಜಂಟಿಯಾಗಿ ‘ಅಂತರಾಷ್ಟ್ರೀಯ ವಿಜ್ಞಾನೋತ್ಸವ-2015’ನ್ನು ಸಂಘಟಿಸಿವೆ.
ದೇಶದಾದ್ಯಂತ ಇರುವ ಯುವ ವಿಜ್ಞಾನಿಗಳಿಗೆ ವೈಜ್ಞಾನಿಕ ವಿಷಯದಲ್ಲಿನ ಹೊಸ ಐಡಿಯಾ, ಸಂಶೋಧನೆ, ಅನುಭವ, ಸಾಧನೆಗಳನ್ನು ಹಂಚಿಕೊಳ್ಳಲು ಮತ್ತು ಪ್ರಸಾರ ಮಾಡಲು ವೇದಿಕೆ ಒದಗಿಸುವ ಮೂಲಕ ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವ ಉದ್ದೇಶ ಹೊಂದಿದೆ. ಇದರಲ್ಲಿ ಜನಸಾಮಾನ್ಯರು, ಶಾಲಾ ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು, ಉದ್ದಿಮೆದಾರರು, ವಿಜ್ಞಾನಿಗಳು ಹೀಗೆ ಒಟ್ಟು 3500 ಜನ ಭಾಗವಹಿಸುವ ನೀರೀಕ್ಷೆಯಿದೆ. ಜನಸಾಮಾನ್ಯರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಿಜ್ಞಾನಿಗಳೊಂದಿಗೆ ಸಂವಾದ ನಡೆಸುವ ಮೂಲಕ ವೈಜ್ಞಾನಿಕ ಮನೋಭಾವನೆ ಮೂಡಿಸುವ ಆಶಯ ಹೊಂದಲಾಗಿದೆ.
ಯಾವಾಗ? ಎಲ್ಲಿ?: ಈ ಕಾರ್ಯಕ್ರಮವು 2015ರ ಡಿಸೆಂಬರ್ 4 ರಿಂದ 8ರವರೆಗೆ 5 ದಿನಗಳ ಕಾಲ ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಆವರಣದಲ್ಲಿ ನಡೆಯಲಿದೆ.

ಉದ್ದೇಶಗಳು :
• ವಿಜ್ಞಾನ ಮತ್ತು ತಂತ್ರಜ್ಞಾನದ ಫಲವನ್ನು ಜನಸಾಮಾನ್ಯರ ಗಮನಕ್ಕೆ ತರುವುದು.
• ಜನಸಾಮಾನ್ಯರಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸಲು ಕಾರ್ಯತಂತ್ರ ರೂಪಿಸುವುದು.
• ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಬಾರತೀಯರ ಕೊಡುಗೆಗಳನ್ನು ಪ್ರದರ್ಶಿಸುವುದು.
• ಯುವ ವಿಜ್ಞಾನಿಗಳಿಗೆ ತಮ್ಮ ಹೊಸ ಐಡಿಯಾಗಳ ಪ್ರದರ್ಶನ ಮತ್ತು ಪ್ರಸಾರಕ್ಕೆ ವೇದಿಕೆ ಒದಗಿಸುವುದು.
• ಗೌರವಾನ್ವಿತ ಪ್ರಧಾನಮಂತ್ರಿಗಳ ಪ್ರಮುಖ ಕಾರ್ಯಕ್ರಮಗಳಾದ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಮಾರ್ಟ್ ಸಿಟಿ, ಸ್ಮಾರ್ಟ್ ವಿಲೇಜ್ ಮುಂತಾದವುಗಳನ್ನು ಪೋಷಿಸುವುದು.

No comments:
Post a Comment