ದಿನಾಂಕ 26-9-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.
ಆ್ಯಂಕರಿಂಗ್ ಎಂಬ ಕನಸಿನ ಲೋಕ
ಉಪಗ್ರಹ ಆಧಾರಿತ ಚಾನಲ್‌ಗಳ ಪ್ರವೇಶದೊಂದಿಗೆ ಜನಪ್ರಿಯ ವೃತ್ತಿಯಾದ ಆ್ಯಂಕರಿಂಗ್ ಯುವಪೀಳಿಗೆಯ ಆಕರ್ಷಣೆಯ ಕ್ಷೆÃತ್ರವಾಗಿದೆ. ಹಲವಾರು ಸುದ್ದಿ ಹಾಗೂ ಮನೋರಂಜನಾ ಚಾನಲ್‌ಗಳಲ್ಲಿ ವೈಯಾರದ ಮಾತುಗಳಿಂದ ಪ್ರೆÃಕ್ಷಕರ ಮನ ಗೆದ್ದ ಅನೇಕರು ತಾರೆಗಳ ಸಾಲಿನಲ್ಲಿ ಸೇರಿರುವುದೂ ಸಹ ಆಕರ್ಷಣೆಯ ಮತ್ತೊಂದು ಬಿಂದುವಾಗಿದೆ.
ಇಂದಿನ ಯುವಪೀಳಿಗೆಗೆ ದೃಶ್ಯ ಮಾಧ್ಯಮದಲ್ಲಿ ಕಾಣಿಸಿಕೊಳ್ಳುವಾಸೆ ಅಧಿಕ. ನಟರಾಗಿ, ಕಾರ್ಯಕ್ರಮ ನಿರೂಪಕರಾಗಿ, ವಾರ್ತಾ ವಾಚಕರಾಗಿ, ಸಂವಹನಕಾರರಾಗಿ ಹೀಗೆ ವಿಭಿನ್ನ ರೂಪಗಳಲ್ಲಿ ಕಾಣಿಸಿಕೊಳ್ಳುವಾಸೆ. ಏಕೆಂದರೆ ಏಕಕಾಲದಲ್ಲಿ ಸಾವಿರಾರು ಕಣ್ಣುಗಳು ತಮ್ಮನ್ನು ನೋಡುತ್ತಾರೆ, ತಮ್ಮ ಅಂದ ಹಾಗೂ ವಿದ್ವತ್ತನ್ನು ಮೆಚ್ಚುತ್ತಾರೆ, ತಮ್ಮ ಶೈಲಿಯನ್ನು ಅನುಸರಿಸುತ್ತಾರೆ, ಅಭಿಮಾನಗಳ ಸಂಖ್ಯೆ ಹೆಚ್ಚುತ್ತದೆ ಎಂಬ ಕಲ್ಪನೆ ಸಹಜ. ನಾವೂ ಅವರಂತೆ ಆ್ಯಂಕರ್ ಆಗಬೇಕು ಎಂಬ ತುಡಿತ ಮಿಡಿತ ಯುವಪೀಳಿಗೆಯಲ್ಲಿರುವುದು ಸಹಜ. ಹೌದು ಆ್ಯಂಕರ್ ಆಗುವುದರಿಂದ ಮೇಲಿನ ಎಲ್ಲಾ ಪ್ರಯೋಜನಗಳು ದೊರೆಯುತ್ತವೆ. ಹಾಗಾದರೆ ಆ್ಯಂಕರ್ ಆಗಲು ಬೇಕಾದ ಅರ್ಹತೆಗಳೇನು, ಅನುಸರಿಸಬೇಕಾದ ನಿಯಮಗಳೇನು ಎಂಬುದನ್ನು ತಿಳಿಯೋಣ.
ಆ್ಯಂಕರ್ ಎಂದರೆ,,,,, : ಕನ್ನಡದಲ್ಲಿ ನಿರೂಪಕರು ಎಂದು ಕರೆಯಲ್ಪಡುವ ಆ್ಯಂಕರ್ ಎಂಬ ಪದವು ಹಲವು ರೂಪಗಳನ್ನು ಹೊಂದಿದೆ. ಪ್ರೆಸೆಂಟರ್, ಹೋಸ್ಟ್, ನ್ಯೂಸ್ ರೀಡರ್, ಪ್ರೊÃಗ್ರಾಂ ಆ್ಯಂಕರ್ ಹೀಗೆ ವಿವಿಧ ರೂಪಗಳನ್ನು ಹೊಂದಿದೆ. ಇವರು ಚಾನಲ್ ಮತ್ತು ಪ್ರೆÃಕ್ಷಕರ ನಡುವೆ ಮಧ್ಯವರ್ತಿಗಳಾಗಿದ್ದಾರೆ. ಚಾನಲ್‌ನ ಕಾರ್ಯಕ್ರಮಗಳನ್ನು ಪ್ರೆÃಕ್ಷಕರಿಗೆ ಮನಮುಟ್ಟುವಂತೆ ತಲುಪಿಸುವುದೇ ಆ್ಯಂಕರ್‌ಗಳ ಕೆಲಸವಾಗಿದೆ. ಇವರು ಕೇವಲ ನಿರೂಪಕರಲ್ಲದೇ ತಮ್ಮ ಜ್ಞಾನವನ್ನು ವಿಸ್ತರಿಸುವ ಹಾಗೂ ಅದನ್ನು ಪ್ರೆÃಕ್ಷಕರಿಗೆ ಹಂಚುವ ಕಾರ್ಯ ಮಾಡುತ್ತಾರೆ. ಮನೋರಂಜನೆ ಅಥವಾ ಗಂಭೀರ ಸುದ್ದಿ ಪ್ರಸ್ತುತಿ ಇರಲಿ ಕಾರ್ಯಕ್ರಮದ ಉದ್ದಕ್ಕೂ ವೀಕ್ಷಕರನ್ನು ಆಕರ್ಷಿಸುವ ಗುಣಮಟ್ಟವನ್ನು ಅವರು ಹೊಂದಿರಬೇಕು. ಇದು ಅತ್ಯಂತ ಸವಾಲಿನ ಕ್ಷೆÃತ್ರವಾಗಿದೆ. ಕೇವಲ ಮಾಹಿತಿಯನ್ನು ವಿನಿಮಯ ಮಾಡದೇ ಕಾರ್ಯಕ್ರಮವನ್ನು ಮನೋರಂಜನಾತ್ಮಕ ರೀತಿಯಲ್ಲಿ ಪ್ರೆÃಕ್ಷಕರಿಗೆ ತಲುಪಿಸುವ ಗುರುತರ ಜವಾಬ್ದಾರಿ ಇವರ ಮೇಲಿದೆ.
ಆ್ಯಂಕರ್‌ಗಳಲ್ಲಿ ಮೂರು ರೀತಿಯ ಆ್ಯಂಕರ್‌ಗಳನ್ನು ನೋಡುತ್ತೆÃವೆ. ಅವುಗಳೆಂದರೆ
ಪ್ರೊÃಗ್ರಾಂ ಆ್ಯಂಕರ್: ನಿರ್ಧಿಷ್ಟ ಕಾರ್ಯಕ್ರಮವನ್ನು ನಡೆಸಿಕೊಡುವ ನಿರೂಪಕರು. ಇವರು ಮನೋರಂಜನಾ ಕಾರ್ಯಕ್ರಮ, ಹಾಸ್ಯ ಕಾರ್ಯಕ್ರಮಗಳು, ಸನ್ಮಾನ ಸಮಾರಂಭಗಳು, ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮ, ವಿವಿಧ ಸಾಂಸ್ಕೃತಿಕ/ದಿನಾಚರಣೆಗಳ ವೇದಿಕೆ ಕಾರ್ಯಕ್ರಮಗಳ ನಿರ್ವಹಣೆ ಮಾಡುವುದು.
ನ್ಯೂಸ್ ರೀಡರ್ : ವಿವಿಧ ಭಾಷೆಗಳ ಪ್ರಾದೇಶಿಕ/ರಾಜ್ಯ/ರಾಷ್ಟಿçÃಯ ಸುದ್ದಿಗಳನ್ನು ಓದುವವರು.
ಲೈವ್ ಆ್ಯಂಕರ್ : ರಿಯಾಲಿಟಿ ಷೋಗಳು, ಅಡುಗೆ ಕಾರ್ಯಕ್ರಮಗಳು, ಕ್ರಿÃಡೆಗಳು, ಚರ್ಚೆ, ಸಂವಾದಗಳು, ಮುಂತಾದ ಲೈವ್ ಕಾರ್ಯಕ್ರಮ ನಿರೂಪಕರು.
ಇರಬೇಕಾದ ಅರ್ಹತೆಗಳು : ಆ್ಯಂಕರಿಂಗ್ ಎಂಬುದು ಸಾಮಾನ್ಯವಾದ ಕೆಲಸವಲ್ಲ. ಇದು ಆಕರ್ಷಕವಾಗಿ ಕಾಣುವ ಸವಾಲಿನ ಕೆಲಸ. ಕೆಲವೊಂದು ಅರ್ಹತೆಗಳು ಅಗತ್ಯವಾಗಿ ಬೇಕು. ನ್ಯೂಸ್ ರೀಡರ್‌ಗಳಿಗೆ ಪತ್ರಿಕೋಧ್ಯಮ ಹಾಗೂ ಸಮೂಹ ಮಾಧ್ಯಮದಂತಹ ಸ್ನಾತಕ ಪದವಿ ಅತ್ಯಗತ್ಯ. ಕೇವಲ ಪದವಿ ಇದ್ದರೆ ಸಾಲದು. ಅದರ ಜೊತೆಗೊಂದಿಷ್ಟು ಸಾಮಾನ್ಯ ಅರ್ಹತೆಗಳು ಅವಶ್ಯಕ.
• ಶುದ್ದ ಭಾಷಾಜ್ಞಾನ
• ಉತ್ತಮ ಸಂವಹನ ಕೌಶಲ್ಯ
• ಪ್ರಾಪಂಚಿಕ ಜ್ಞಾನ(ಆಗುಹೋಗುಗಳ ಪರಿಚಯ)
• ಶಬ್ದಭಂಢಾರ
• ಆಕರ್ಷಕ ದೇಹ ಮತ್ತು ಆರೋಗ್ಯಯುತ ಮನಸ್ಸು
• ಮೋಡಿಮಾಡುವ ಮಾತುಗಾರಿಕೆ
• ಆತ್ಮವಿಶ್ವಾಸ
• ಸಹಕಾರ ಮತ್ತು ಹೊಂದಿಕೊಳ್ಳುವ ಗುಣ
ಕನಸಿಗೆ ಪರಿಶ್ರಮದ ಬಣ್ಣ ಬಳಿಯಿರಿ:
ಇಂದಿನ ಯುವಜನತೆ ತಾವೊಬ್ಬ ಉತ್ತಮ ಆ್ಯಂಕರ್ ಆಗಬೇಕೆಂಬ ಕನಸು ಕಾಣುವುದು ತಪ್ಪೆÃನಲ್ಲ. ಆದರೆ ಅದಕ್ಕೊಂದಿಷ್ಟು ಕಿರು ತಯಾರಿ ಅಗತ್ಯ ಎಂಬುದನ್ನು ಮರೆಯಬಾರದು. ಕೆಳಗಿನ ಕೆಲವು ಕ್ರಮಗಳನ್ನು ಪಾಲಿಸುವ ಮೂಲಕ ಕೌಶಲ್ಯ ಗಳಿಸಿಕೊಂಡರೆ, ನೀವೊಬ್ಬ ಉತ್ತಮ ಆ್ಯಂಕರ್ ಆಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ.
ಅರ್ಹತೆ : ಸಾಮಾನ್ಯ ಕಾರ್ಯಕ್ರಮಗಳ ನಿರೂಪಕರಾಗಲು ಯಾವುದೇ ವಿದ್ಯಾರ್ಹತೆಯ ಅಗತ್ಯವಿಲ್ಲ. ಆದರೂ ಭಾಷಾಜ್ಞಾನ ಮತ್ತು ಸಂವಹನ ಕೌಶಲ್ಯ ಬೆಳೆಸಿಕೊಳ್ಳಲು ಅಗತ್ಯ ವಿದ್ಯಾರ್ಹತೆ ಅಗತ್ಯ. ಟಿ.ವಿ.ಗಳಲ್ಲಿ ನ್ಯೂಸ್ ರೀಡರ್ ಆಗಬೇಕಾದರೆ ಬ್ರಾಡ್‌ಕಾಸ್ಟ್ ಜರ್ನಲಿಸಂನಲ್ಲಿ ಸ್ನಾತಕ ಪದವಿ ಹೊಂದಿದವರಿಗೆ ಹೆಚ್ಚಿನ ಅವಕಾಶಗಳಿವೆ. ಜೊತೆಗೆ ಇಂಗ್ಲಿÃಷ್ ಮತ್ತು ಮಾಸ್ ಕಮ್ಯೂನಿಕೇಶನ್‌ನಲ್ಲಿ ಪದವಿ ಗಳಿಸಿದವರಿಗೆ ಆಧ್ಯತೆ ಹೆಚ್ಚು.
ಜವಾಬ್ದಾರಿಯುತ ಕಾರ್ಯನಿರ್ವಹಣೆ : ನಿಮಗೆ ನೀಡಿದ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಕೌಶಲ್ಯ ಬೆಳೆಸಿಕೊಳ್ಳಬೇಕಾದುದು ಅಗತ್ಯ. ನಿಮಗೆ ನೀಡಿದ ಕಾರ್ಯದ ಎಲ್ಲಾ ಆಯಾಮಗಳನ್ನು ಅರ್ಥೈಸಿಕೊಂಡು ಅದರ ಯಶಸ್ಸಿಗೆ ಪರಿಶ್ರಮಿಸುವ ಬದ್ದತೆ ಇರಬೇಕು. ಇಲ್ಲಿ ವೈಯಕ್ತಿಕ ಜೀವನಕ್ಕಿಂತ ವೃತ್ತಿ ಜೀವನಕ್ಕೆ ಹೆಚ್ಚು ಗಮನಕೊಡಬೇಕಾಗುತ್ತದೆ. ಅದಕ್ಕಾಗಿ ಕಎಲವು ಯಶಸ್ವಿ ಆ್ಯಂಕರ್‌ಗಳ ಜೀವನವನ್ನು ಅಧ್ಯಯನ ಮಾಡಿದಾಗ ಅವರ ಪ್ರಯತ್ನದ ಹಾದಿ ತಿಳಿಯುತ್ತದೆ. ಅರ್ಹತೆಯುಳ್ಳ ಅನೇಕರು ಅರ್ದಕ್ಕೆ ಕೆಲಸ ಬಿಟ್ಟ ಉದಾಹರಣೆಗಳಿವೆ. ಅಂತಯೇ ವಿದ್ಯಾರ್ಹತೆ ಇಲ್ಲದಿದ್ದರೂ ಬದ್ದತೆಯಿಂದ ಕೆಲಸ ಮಾಡುವವರು ಉನ್ನತ ಹಂತ ತಲುಪಿದ್ದಾರೆ. ವರದಿಗಾರರು, ಕ್ಯಾಮೆರಾಮನ್ ಆಗಿ ಸೇರಿದವರು ಇಂದು ಉನ್ನತ ಹಂತಕ್ಕೆ ಏರಿದ್ದಾರೆ. ತಮಗೆ ನೀಡಿದ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿರುವುದೇ ಬೆಳವಣಿಗೆಗೆ ಕಾರಣ.
ಪ್ರಾಪಂಚಿಕ ಘಟನೆಗಳ ಜ್ಞಾನ : ಆ್ಯಂಕರ್ ಆಗಬೇಕಾದರೆ ಪ್ರಾಪಂಚಿಕ ಜ್ಞಾನದ ಅರಿವು ಅಗತ್ಯ. ಜಗತ್ತಿನಲ್ಲಿ ನಡೆಯುತ್ತಿರುವ ಸಧ್ಯದ ಘಟನೆಗಳು, ವಿಸ್ಮಯಗಳ ಬಗ್ಗೆ ಅರಿವು ಇರಬೇಕಾಗುತ್ತದೆ. ಘಟನೆಗಳನ್ನು ವಿವಿಧ ಆಯಾಮಗಳಿಂದ ವಿಶ್ಲೆÃಷಿಸುವ ಕೌಶಲ್ಯ ಇರಬೇಕು.
ಮಾತಿನ ಕೌಶಲ್ಯ : ಮಾತಿನ ಕೌಶಲ್ಯ ಇರದ ಹೊರತು ಆ್ಯಂಕರ್‌ಗಳಾಗಲು ಸಾಧ್ಯವೇ ಇಲ್ಲ. ಪ್ರಸ್ತುತಪಡಿಸುವ ಸುದ್ದಿ ಅಥವಾ ಕಾರ್ಯಕ್ರಮಕ್ಕೆ ವೀಕ್ಷಕರನ್ನು ಸೆಳೆಯುವ ಕಾರ್ಯತಂತ್ರವೆಂದರೆ ಮಾತಿನ ಕುಶಲತೆ. ಧ್ವನಿ, ಹಾವಭಾವ, ಶಭ್ದಗಳ ಬಳಕೆ, ಮುಕ್ತ ಸಂವಹನ ಇವೆಲ್ಲವೂ ಮಾತಿನಶೈಲಿಯನ್ನು ನಿರ್ಧರಿಸುತ್ತವೆ. ಸಂದರ್ಶನದ ವೇಳೆಯಲ್ಲಿ ಪ್ರಶ್ನಿಸುವ ಕೌಶಲ್ಯ ಹಾಗೂ ಸಂದರ್ಶಕರ ಮಾತಿನಲ್ಲಿನ ಆಂತರ್ಯವನ್ನು ಬಿಂಬಿಸುವ ಕುಶಲತೆ ಇರಬೇಕು. ಸ್ಪಷ್ಟ ಉಚ್ಛಾರ, ವಿವಿಧ ಪದಗಳ ಬಳಕೆ, ಧ್ವನಿಯ ಏರಿಳಿತ ಅಗತ್ಯ.
ಸ್ಟೆಮಿನಾ : ರಾಷ್ಟಿçÃಯ ಹಾಗೂ ಅಂತರರಾಷ್ಟಿçÃಯ ಸುದ್ದಿ ಚಾನಲ್‌ಗಳಲ್ಲಿ ಕೆಲಸ ಮಾಡುವವರು ಸಮಯದ ಹಂಗನ್ನು ಕೆಲಸ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಯಾವ ಸಂಧರ್ಭದಲ್ಲಿ ಎಲ್ಲಿಗೆ ಹೋಗಿ ಸುದ್ದಿ ಮಾಡುವ ಅಗತ್ಯವಿರುತ್ತದೆ ಎಂಬುದನ್ನು ಊಹಿಸಲಾಗುವುದಿಲ್ಲ. ಅಲ್ಲಿಗೆ ಹೋದ ಮೇಲೆ ವಾಪಾಸಾಗುವುದು ಯಾವಾಗ ಎಂಬುದು ಸಹ ತಿಳಿದಿರುವುದಿಲ್ಲ. ಇಂತಹ ವೇಳೆ ಆಹಾರ ನೀರಡಿಕೆಗಳನ್ನು ತ್ಯಜಿಸಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಅದಕ್ಕಾಗಿ ಅಗತ್ಯ ಸ್ಟೆಮಿನಾ(ತ್ರಾಣ) ಬಳೆಸಿಕೊಳ್ಳಬೇಕಾಗುತ್ತದೆ.
ಕ್ಯಾಮೆರಾಸ್ನೆÃಹಿ ನೋಟ : ಆ್ಯಂಕರ್‌ಗಳು ಸಾಮಾನ್ಯವಾಗಿ ಕ್ಯಾಮೆರಾ ಮುಂದೆ ಕೆಲಸ ಮಾಡಬೇಕಾಗಿರುತ್ತದೆ. ಅದಕ್ಕಾಗಿ ಕ್ಯಾಮೆರಾಸ್ನೆÃಹಿ ಮುಖ ಹಾಗೂ ದೇಹ ಹೊಂದಬೇದುದು ಅಗತ್ಯ. ಇದಕ್ಕಾಗಿ ಆಹಾರ ಕ್ರಮದ ಮೇಲೆ ನಿಯಂತ್ರಣ ಇರಬೇಕಾಗುತ್ತದೆ. ಶಕ್ತಿ ಮತ್ತು ಹುರುಪು ಪಡೆಯಲು ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಆಹಾರಕ್ಕಾಗಿ ಆಯ್ಕೆ ಮಾಡಿಕೊಳ್ಳಬೇಗುತ್ತದೆ. ಕೊಬ್ಬು ಬೆಳವಣಿಗೆಯಾಗದಂತೆ ನಿಯಮಿತ ವ್ಯಾಯಾಮದಲ್ಲಿ ತೊಡಗಿಕೊಳ್ಳಬೇಕು.
ಉಡುಪುಗಳ ಸಭ್ಯತೆ : ಆ್ಯಂಕರ್‌ಗಳು ಸದಾ ವೀಕ್ಷಕರ ಮುಂದೆ ಇರಬೇಕಾದುದರಿಂದ ಆಕರ್ಷಕ ಉಡುಪು ಧರಿಸಿಬೇಕಾಗುತ್ತದೆ. ಉಡುಪುಗಳು ವ್ಯಕ್ತಿತ್ವದ ಸಂಕೇತ. ಇತರರ ಭಾವನೆಗಳಿಗೆ ತೊಂದರೆಯಾಗದಂತಹ ರೀತಿಯಲ್ಲಿ ಉಡುಪು ಧರಿಸುವುದು ಇಂದಿನ ಅಗತ್ಯವಾಗಿದೆ. ಆ್ಯಂಕರ್‌ಗಳನ್ನು ಕೇವಲ ಒಂದು ವರ್ಗದ ಜನ ವೀಕ್ಷಿಸುವುದಿಲ್ಲ. ಮಕ್ಕಳಿಂದ ವೃದ್ದರವರೆಗೆ ಎಲ್ಲಾ ಹಂತದ ಜನ ವೀಕ್ಷಿಸುವುದರಿಂದ ಉಡುಪುಗಳಲ್ಲಿ ಸಭ್ಯತೆ ಅಗತ್ಯ. ಸೂಟ್‌ಗಳಂತಹ ಉಡುಪುಗಳು ಎಲ್ಲರಿಗೂ ಅಚ್ಚುಮೆಚ್ಚು. ಹಾಗಾಗಿ ಆ್ಯಂಕರ್‌ಗಳು ಸೂಟ್‌ಗಳನ್ನು ಹೆಚ್ಚಾಗಿ ಧರಿಸುತ್ತಾರೆ.
ಬದಲಾವಣೆಗೆ ಸಿದ್ದತೆ : ನಿರೂಪಣೆಯಲ್ಲಿ ಕೊನೆ ಕ್ಷಣದ ಬದಲಾವಣೆಗಳು ಸಹಜ. ಇಂತಹ ಬದಲಾವಣೆಗೆ ಹೊಂದಿಕೊಳ್ಳುವ ಹಾಗೂ ಅದನ್ನು ನಿಭಾಯಿಸುವ ಕೌಶಲ್ಯ ನಿರೂಪಕರಿಗೆ ಇರಬೇಕಾದುದು ಅಪೇಕ್ಷಣೀಯ. ಬದಲಾವಣೆಗೆ ಹೊಂದಿಕೊಳ್ಳದಿದ್ದರೆ ಆ್ಯಂಕರ್‌ಗಳ ಇಮೇಜ್ ಹಾಳಾಗುತ್ತದೆ.
ಮಾನವೀಯತೆಯತೆ : ನಿರೂಪಕರಿಗೆ ಇರಲೇಬೇಕಾದ ಬಹುದೊಡ್ಡ ಗುಣ ಅಥವಾ ಮಾನವೀತೆ. ಸಂದರ್ಶನ ಅಥವಾ ಚರ್ಚೆ ವೇಳೆ ನಾವೂ ಒಬ್ಬ ಮನುಷ್ಯರಾಗಿ ಇನ್ನೊಬ್ಬ ಮನುಷ್ಯರೊಂದಿಗೆ ಸಂವಾದ ನಡೆಸುತ್ತಿದ್ದೆÃವೆ ಎಂಬುದನ್ನು ಮನದಲ್ಲಿಟ್ಟುಕೊಂಡು ವರ್ತಿಸುವ ಕೌಶಲ್ಯ ಬೆಳೆಸಿಕೊಳ್ಳಬೇಕು. ಯಾರನ್ನೂ ಅನಗತ್ಯವಾಗಿ ದೂಷಿಸದೇ, ತೇಜೋವಧೆ ಮಾಡದೇ, ಮಾನವೀಯ ಹಕ್ಕುಗಳ ನೆಲೆಯಲ್ಲಿ ಪ್ರಸ್ತುತಿ ನಡೆಸಬೇಕು. ಆ ಮೂಲಕ ಮಾನವೀಯತೆ ಮೆರೆಯಬೇಕು.
ಜವಾಬ್ದಾರಿಗಳು
ತಂಡದ ಸದಸ್ಯರಿಂದ ಪಡೆದ ಸುದ್ದಿ/ವಿಷಯವನ್ನು ಸಮಯದ ಮಿತಿಗನುಗುಣವಾಗಿ ಹಿರಿಯರ ಸಲಹೆ ಪಡೆದು ಪಸ್ತುತಿಗೆ ಇದ್ದಪಡಿಸುವುದು.
ಸುದ್ದಿ ಕಥೆಯನ್ನು ವಿಷಯಕ್ಕೆ ಅನುಗುಣವಾಗಿ ನಿರೂಪಿಸುವುದು.
ವ್ಯಕ್ತಿ ಸಂದರ್ಶನದಲ್ಲಿ ಅಗತ್ಯ ಮಾಹಿತಿ ಸಂಗ್ರಹಿಸುವುದು. ವ್ಯಕ್ತಿಯ ಪೂರ್ವಾಪರಗಳನ್ನು ತಿಳಿದು ಸಂದರ್ಶನ ಪ್ರಶ್ನೆಗಳನ್ನು ಸಿದ್ದಪಡಿಸಿಕೊಳ್ಳುವುದು.
ಸ್ಥಳ/ಘಟನೆಯ ಪರಿಚಯದಲ್ಲಿ ಅದಕ್ಕೆ ಪೂರಕ ಮಾಹಿತಿಗಳನ್ನು ಕಲೆಹಾಕುವುದು.
ತಪ್ಪು ಮಾಹಿತಿ ನೀಡುವುದನ್ನು ತಡೆಯುವುದು.
ವಿವಿಧ ಮೂಲಗಳಿಂದ ಸಂಗ್ರಹಿಸಿದ ಸುದ್ದಿ/ವಿಷಯಗಳನ್ನು ಲೈವ್‌ಗೆ ಮುಂಚಿತವಾಗಿ ಪರಿಶೀಲಿಸುವುದು.
ವ್ಯಕ್ತಿಯ ತೇಜೋವಧೆ/ ಹಕ್ಕುಗಳ ಉಲ್ಲಂಘನೆ ಆಗುವುದನ್ನು ತಡೆಯುವುದು.
ಪ್ರಸ್ತುತ ವಿದ್ಯಮಾನಗಳಿಗೆ ಸಂಬಂಧಿಸಿದ ಹೊಸ ಶೈಲಿಯ ಸುದ್ದಿಯನ್ನು ಸೃಜಿಸುವುದು. ಆ ಮೂಲಕ ವೀಕ್ಷಕರ ಸಂಖ್ಯೆ ಹೆಚ್ಚುವಂತೆ ಮಾಡುವುದು.
ಅಂತರಜಾಲ ಸುದ್ದಿಗಳ ಸತ್ಯಾಸತ್ಯತೆ ತಿಳಿದು ಪ್ರಸಾರಕ್ಕೆ ಆಯ್ಕೆ ಮಾಡಿಕೊಳ್ಳುವುದು.
ನಿರ್ದಿಷ್ಟ ಸಮಯದೊಳಗೆ ಸುದ್ದಿ/ಮಾಹಿತಿಯನ್ನು ಓದುವುದು ಮತ್ತು ಪ್ರಸ್ತುತಿ ಪಡಿಸುವುದು.
ಬೃಹತ್ ಪ್ರಮಾಣದಲ್ಲಿ ಒಳಬರುವ ಡಾಟಾವನ್ನು ವಿಂಗಡಿಸುವುದು, ಸಂಸ್ಕರಿಸುವುದು ಮತ್ತು ಆಧ್ಯತೆಗೆ ತಕ್ಕಂತೆ ಆಯ್ಕೆ ಮಾಡಿಕೊಂಡು ಪ್ರಸ್ತುಪಡಿಸುವುದು.
- ಆರ್.ಬಿ.ಗುರುಬಸವರಾಜ ಹೊಳಗುಂದಿ
No comments:
Post a Comment