ದಿನಾಂಕ 22-9-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.
ಅರೋರಾ ಕಂಡೀರಾ!
ಅರೋರಾ ಕಂಡಿರಾ!
ಕೆಲವೊಮ್ಮೆ ಸಂಜೆಯ ವೇಳೆ ಆಕಾಶದಲ್ಲಿ ಮಾಂತ್ರಿಕ ಪ್ರದರ್ಶನ ಏರ್ಪಟ್ಟಿರುತ್ತದೆ. ಸಂಜೆಯ ಆಗಸದಲ್ಲಿ ಬಣ್ಣಬಣ್ಣದ ಮೋಡಗಳ ಚಿತ್ತಾರವನ್ನು ಕಂಡಿದ್ದಿÃರಾ? ನೋಡಲು ಬಹು ಸುಂದರವಾಗಿರುತ್ತದೆ ಅಲ್ಲವೇ? ಬಣ್ಣ ಬಣ್ಣದ ಮೋಡಗಳಲ್ಲಿ ವಿವಿಧ ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ಕಲ್ಪಿಸಿಕೊಂಡು ಅವುಗಳನ್ನು ನೋಡುವುದೇ ಒಂದು ಸಂಭ್ರಮ. ಇಂತಹ ಸನ್ನಿವೇಶಗಳು ಅನಿರೀಕ್ಷಿತವಾಗಿ ಘಟಿಸುತ್ತವೆ. ಬೆಳಕಿನ ವರ್ಣ ವಿಭಜನೆಯಿಂದದ ಇಂತಹ ನೈಸರ್ಗಿಕ ವಿದ್ಯಮಾನಗಳನ್ನು ನೋಡಿ ಸವಿಯತ್ತೆÃವೆ. ಧ್ರುವ ಪ್ರದೇಶಗಳಲ್ಲಿ ಇಂತಹ ಇನ್ನೊಂದು ವೈವಿಧ್ಯಮಯ ವಿದ್ಯಮಾನ ಜರುಗುತ್ತದೆ. ಅದೇ ಅರೋರಾ. ಈ ಅರೋರಾದ ಬಗ್ಗೆ ತಿಳಿಯುವ ಕುತುಹಲವಿದ್ದರೆ ಮುಂದೆ ಓದಿ.
ಅರೋರಾ ಎಂದರೆ,,,,,,
ಧ್ರುವ ಪ್ರದೇಶಗಳಲ್ಲಿ ರಾತ್ರಿಯ ವೇಳೆ ಆಗಸದಲ್ಲಿ ಕಾಣಬರುವ ವರ್ಣರಂಜಿತ ಬೆಳಕಿನಾಟವೇ ಅರೋರಾ. ಇದೊಂದು ನೈಸರ್ಗಿಕ ವಿದ್ಯಮಾನವಾಗಿದ್ದು, ಇದನ್ನು ಅರೋರಾ ಬೋರಿಯಾಲಿಸ್ ಎಂತಲೂ ಕರೆಯುತ್ತಾರೆ. ಅರೋರಾ ಸಾಮಾನ್ಯವಾಗಿ ಹಸಿರು ಬಣ್ಣದ ಹೊಳಪಿನಿಂದ ಕೂಡಿರುತ್ತದೆ. ಕೆಲವೊಮ್ಮೆ ತಿಳಿಕೆಂಪು ಬಣ್ಣವೂ ಸಹ ಇದರಲ್ಲಿ ಕೂಡಿರುತ್ತದೆ. ಮೊದಲ ನೋಟಕ್ಕೆ ಬೇರಾವುದೇ ದಿಕ್ಕಿನಲ್ಲಿ ಜರುಗುವ ಸೂರ್ಯೋದಯದಂತೆ ಭಾಸವಾಗುತ್ತದೆ. ಅರೋರಾ ಬೋರಿಯಾಲಿಸನ್ನು ತೆಂಕಣ ಬೆಳಕು ಎಂತಲೂ ಕರೆಯುತ್ತಾರೆ.
ಬಣ್ಣದ ಬೆಳಕನ್ನು ಚೆಲ್ಲುತ್ತಿರುವ ಕುಂಡದಂತೆ ಅಥವಾ ಪೂರ್ವದಿಂದ ಪಶ್ಚಿಮಕ್ಕೆ ಕಟ್ಟಿರುವ ಒಂದು ಬಣ್ಣದ ಪರದೆಯಂತೆ ಅರೋರಾವು ಗೋಚರಿಸುತ್ತದೆ. ಕೆಲವೊಮ್ಮೆ ಇವು ಆಗಸದಲ್ಲಿ ದಪ್ಪನಾಗಿ ಎಳೆದಿರುವ ಸ್ಥಿರ ವಕ್ರ ರೇಖೆಗಳಂತೆ ಕಂಡರೆ, ಕೆಲವು ಸಲ ಅರೋರಾಗಳು ಕ್ಷಣಕ್ಷಣಕ್ಕೂ ಆಕಾರ ಬದಲಿಸುತ್ತವೆ. ಪ್ರತಿ ಬಣ್ಣದ ಪರದೆಯು ಕೆಲವಾರು ಸಮಾನಾಂತರ ರೇಖೆಗಳನ್ನು ಹೊಂದಿದ್ದು ಈ ಗೆರೆಗಳು ಆ ಕ್ಷೇತ್ರದ ಕಾಂತೀಯ ಗೆರೆಗಳಿಗೆ ಅನುಗುಣವಾಗಿಯೇ ಇರುತ್ತವೆ. ಇದರಿಂದಾಗಿ ಅರೋರಾಗಳ ಆಕಾರವು ಭೂಮಿಯ ಕಾಂತತ್ವದ ಮೇಲೆ ನಿರ್ಧರಿಸಲ್ಪಡುತ್ತದೆಂದು ತಿಳಿಯಲಾಗಿದೆ. ಧ್ರುವಪ್ರದೇಶಗಳಲ್ಲಿ ಆರೋರಾದ ಉಗಮವು ಅತಿ ಸಾಮಾನ್ಯ.
ಅರೋರಾ ಹೀಗೆ ಉಂಟಾಗುತ್ತದೆ
ಭೂಮಿಯ ವಾತಾವರಣದ ಮೇಲ್ಪದರದಲ್ಲಿರುವ ಪರಮಾಣುಗಳಿಗೆ ಕಾಂತಗೋಲದಲ್ಲಿನ ವಿದ್ಯುತ್ಪೆçÃರಿತ ಧನ ಅಥವಾ ಋಣ ಆಯಾನುಗಳು ಢಿಕ್ಕಿ ಹೊಡೆದಾಗ ಅರೋರಾ ಉಂಟಾಗುತ್ತದೆ. ಸೂರ್ಯನ ಮಧ್ಯಭಾಗದಲ್ಲಿನ ಸರಾಸರಿ ತಾಪವು 15 ದಶಲಕ್ಷ ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಇದು ಕೆಲವು ವೇಳೆ ಏರಿಳಿತವಾಗುತ್ತದೆ. ಸೌರಜ್ವಾಲೆಗಳು ಸೌರಮಾರುತಗಳು ಎಂದು ಕರೆಯಲ್ಪಡುವ ಪ್ಲಾಸ್ಮಾ ಕಣಗಳನ್ನು ಅಂತರಿಕ್ಷಕ್ಕೆ ಹರಿಸುತ್ತವೆ.
ಸೌರಮಾರುತಗಳು ಗಂಟೆಗೆ 300 ರಿಂದ 1200 ಕಿ.ಮೀ ವೇಗದಲ್ಲಿ ಅಂತರಿಕ್ಷದತ್ತ ಸಾಗುತ್ತವೆ. ವಿದ್ಯುತ್ಪೆçÃರಿತವಾದ ಈ ಕಣಗಳು ಭೂಮಿಯ ವಾತಾವರಣದಲ್ಲಿನ ಅನಿಲಗಳ ಪರಮಾಣುಗಳಿಗೆ ಢಿಕ್ಕಿ ಹೊಡೆದಾಗ ಅವು ಉತ್ತೆÃಜಿತವಾಗುತ್ತವೆ. ಅನಿಲಗಳ ಪರಮಾಣುಗಳು ಸೌರಮಾರುತದಿಂದ ಪಡೆದ ಶಕ್ತಿಯನ್ನು ಬೆಳಕಿನ ರೂಪದಲ್ಲಿ ಹೊರಹಾಕುತ್ತವೆ. ಬೆಳಕಿನ ಈ ಶಕ್ತಿಯು ಆಗಸದಲ್ಲಿ ವರ್ಣರಂಜಿತವಾಗಿ ಕಾಣಿಸುವುದು. ಇದೇ ಅರೋರಾ.
ಅರೋರಾ ಬಣ್ಣಬಣ್ಣವೇಕೆ?
ಅರೋರಾ ಗುಲಾಬಿ, ತಿಳಿಗೆಂಪು, ಹಸಿರು, ಹಳದಿ, ನೀಲಿ, ನೇರಳೆ, ಮತ್ತು ಕಿತ್ತಳೆ ಬಣ್ಣದಿಂದ ಕೂಡಿರುತ್ತದೆ. ಕಣಗಳು ಆಮ್ಲಜನಕದೊಂದಿಗೆ ಘರ್ಷಿಸಿದಾಗ ಹಳದಿ ಮತ್ತು ಹಸಿರು ಬಣ್ಣ ಉತ್ಪತ್ತಿಯಾಗುತ್ತದೆ. ಸಾರಜನಕದೊಂದಿಗೆ ಘರ್ಷಿಸಿದಾಗ ಕೆಂಪು, ನೇರಳೆ ಮತ್ತು ಸಾಂದರ್ಬಿಕವಾಗಿ ನೀಲಿ ಬಣ್ಣ ಉತ್ಪತ್ತಿ ಮಾಡುತ್ತದೆ. ಬಣ್ಣಗಳೂ ಸಹ ಎತ್ತರದ ಮೂಲಕ ಪ್ರಭಾವಿತವಾಗುತ್ತದೆ. ಹಸಿರು ಮತ್ತು ಕೆಂಪು ಬಣ್ಣವು ವಿಶಿಷ್ಠವಾಗಿ 241 ಕಿ.ಮೀ(150 ಮೈಲು) ದೂರದವರೆಗೂ ಗೋಚರಿಸಿದರೆ, ನೀಲಿ ಮತ್ತು ನೇರಳೆ ಬಣ್ಣವು 96.5 ಕಿ.ಮೀ(60 ಮೈಲಿ) ದೂರದವರೆಗೆ ಗೋಚರಿಸುತ್ತದೆ.
ಅರೋರಾ ವೀಕ್ಷಣೆಗೆ ಸೂಕ್ತ ಸಮಯ
ಅರೋರಾ ನೋಡಲು ಚಳಿಗಾಲ ಸೂಕ್ತ ಕಾಲ. ಈ ಸಮಯದಲ್ಲಿ ಮಾಲಿನ್ಯದ ಮಟ್ಟ ಕಡಿಮೆ ಇದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ಸೆಪ್ಟಂಬರ್, ಅಕ್ಟೊÃಬರ್, ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳು ಅರೋರಾ ವೀಕ್ಷಿಸಲು ಉತ್ತಮ ಸಮಯ. ಸೌರಜ್ವಾಲೆಗಳು ಹೆಚ್ಚು ಸಕ್ರಿಯವಾದ ಎರಡು ದಿನಗಳ ನಂತರ ಅರೋರಾ ಹೆಚ್ಚು ಪ್ರಕಾಶಮಾನವಾಗಿರುತ್ತದೆ.
ಅರೋರಾ ಎಲ್ಲೆಲ್ಲಿ ನೋಡಬಹುದು?
ಅರೋರಾ ನೋಡಲು ಅತ್ಯುತ್ತಮ ಸ್ಥಳವೆಂದರೆ ಅಮೇರಿಕಾದ ಅಲಾಸ್ಕಾ ಮತ್ತು ಉತ್ತರ ಕೆನಡಾ. ಇವು ಹೆಚ್ಚು ವಿಶಾಲ ಪ್ರದೇಶಗಳಾಗಿದ್ದು ಯಾವಾಗಲೂ ಅರೋರಾ ನೋಡುವುದು ಸುಲಭವಲ್ಲ. ನಾರ್ವೆ, ಸ್ವಿÃಡನ್ ಮತ್ತು ಫಿನ್‌ಲ್ಯಾಂಡ್‌ಗಳು ಉತ್ತಮ ವೀಕ್ಷಣಾ ತಾಣಗಳಾಗಿವೆ. ಸೌರಸ್ಪೊÃಟವು ಸಕ್ರಿಯವಾಗಿದ್ದಾಗ ದಕ್ಷಿಣದ ಸ್ಕಾಟ್‌ಲ್ಯಾಂಡ್ ಮತ್ತು ಉತ್ತರದ ಇಂಗ್ಲೆಂಡ್‌ನಲ್ಲೂ ಅರೋರಾವನ್ನು ಕಾಣಬಹುದು. ಅಪರೂಪದ ಸಂದರ್ಭಗಳಲ್ಲಿ ದಕ್ಷಿಣದ ಇಂಗ್ಲೆಂಡಿನಲ್ಲೂ ಕಾಣಬಹುದು.
ಇತರೆ ಗ್ರಹಗಳಲ್ಲೂ ಅರೋರಾ !
ನಮ್ಮ ಸೌರಮಂಡಲದಲ್ಲಿ ಅನಿಲ ದೈತ್ಯರು ಎನಿಸಿಕೊಂಡ ಗುರು, ಶನಿ, ಯುರೇನೆಸ್, ನೆಪ್ಚೂನ್‌ಗಳಲ್ಲಿ ದಟ್ಟ ವಾಯುಮಂಡಲ ಮತ್ತು ಬಲವಾದ ಕಾಂತೀಯ ಕ್ಷೆÃತ್ರವಿದೆ. ಹಾಗಾಗಿ ಈ ಅನಿಲದೈತ್ಯ ಗ್ರಹಗಳಲ್ಲೂ ಅರೋರಾ ಕಾಣಬಹುದು. ಆದರೆ ಇಲ್ಲಿನ ಅರೋರಾ ಭೂಮಿಗಿಂತ ಸ್ವಲ್ಪ ಭಿನ್ನ ಸ್ಥಿತಿಯಲ್ಲಿ ರೂಪುಗೊಳ್ಳುತ್ತದೆ.
ಅರೋರಾದ ಇತಿಹಾಸ
ಶತಶತಮಾನಗಳಿಂದಲೂ ಬೆಳಕು ಊಹಾಪೋಹ, ಮೂಢನಂಬಿಕೆ ಮತ್ತು ವಿಸ್ಮಯಗಳ ಮೂಲವಾಗಿತ್ತು. 30,000 ವರ್ಷಗಳ ಇತಿಹಾಸವಿರುವ ಫ್ರಾನ್ಸ್ನ ಗುಹೆಗಳಲ್ಲಿನ ವರ್ಣಚಿತ್ರಗಳು ಬೆಳಕಿನ ನೈಸರ್ಗಿಕ ವಿದ್ಯಮಾನದ ವಿವರಣೆ ಹೊಂದಿವೆ ಎಂದು ಭಾವಿಸಲಾಗಿದೆ. ಧ್ರುವ ಪ್ರದೇಶಗಳಲ್ಲಿ ಅರೋರಾದಂತಹ ಬೆಳಕು ಯುದ್ದ ಅಥವಾ ವಿನಾಶದ ಮುಂದಾಲೋಚನೆ ಎಂದು ಭಾವಿಸಲಾಗಿತ್ತು. ಅರಿಸ್ಟಾಟಲ್, ಡೆಸ್ಕಾರ್ಟೆ, ಗಯಟೆ, ಹ್ಯಾಲಿ ಮುಂತಾದ ಖಗೋಳಶಾಸ್ತçಜ್ಞರು ತಮ್ಮ ಕೃತಿಗಳಲ್ಲಿ ಅರೋರಾ ಬೆಳಕಿನ ಬಗ್ಗೆ ಉಲ್ಲೆÃಖೀಸಿದ್ದಾರೆ. 1616 ರಷ್ಟು ಮುಂಚೆ ಗೆಲಿಲಿಯೋ ಗೆಲಿಲಿ ಅರೋರಾ ಬೋರೊಯಾಲಿಸ್ ಎಂಬ ಹೆಸರನ್ನು ಬಳಸಿದ್ದಾರೆ. ರೋಮನ್ ಪುರಾಣ ದೇವತೆಯಾದ ಅರೋರಾ ಮತ್ತು ಗ್ರಿÃಕ್‌ನ ಉತ್ತರದ ಗಾಳಿಯಾದ ಬೋರಾಸ್ ಹೆಸರಿನಲ್ಲಿ ಅರೋರಾ ಬೋರೊಯಾಲಿಸ್ ಎಂಬ ಹೆಸರು ಬಂದಿದೆ ಎನ್ನುತ್ತಾರೆ.
ಆರ್.ಬಿ.ಗುರುಬಸವರಾಜ
No comments:
Post a Comment