December 11, 2021

ಯೋಚನೆ ಬಿಡಿ, ಯೋಜನೆ ಮಾಡಿಸಿ

  ಆಗಸ್ಟ್ 2019ರ ಶಿಕ್ಷಣವಾರ್ತೆಯಲ್ಲಿ ಪ್ರಕಟವಾಧ ನನ್ನ ಬರಹ.

ಯೋಚನೆ ಬಿಡಿ, ಯೋಜನೆ ಮಾಡಿಸಿ




ಆರನೇ ತರಗತಿ ಓದುತ್ತಿರುವ ಫಾತೀಮಾಗೆ ವಿಜ್ಞಾನ ಶಿಕ್ಷಕರು ಏಕದಳ ಮತ್ತು ದ್ವಿದಳ ಧಾನ್ಯಗಳ ಚಿತ್ರಪಟ ತಯಾರಿಸಿಕೊಂಡು ಬರಲು ತಿಳಿಸಿದರು. ಗ್ರಾಮೀಣ ಪ್ರದೇಶದವಳಾದ ಫಾತೀಮಾ ಚಿತ್ರಗಳು ದೊರೆಯದೇ ಪರದಾಡಿದಳು. ಒಂಭತ್ತನೇ ತರಗತಿಯ ಆಕಾಶನಿಗೆ ಕನ್ನಡ ಶಿಕ್ಷಕರು ಜಾನಪದ ಗೀತೆ ಮತ್ತು ಜಾನಪದ ಕಥೆಗಳ ಸಂಗ್ರಹ ಮಾಡಿಕೊಂಡು ಬರಲು ತಿಳಿಸಿದರು. ಪುಸ್ತಕಗಳಿಗಾಗಿ ಎಲ್ಲೆಡೆ ಹುಡುಕಾಡಿದ. ಎಲ್ಲೂ ಸಿಗಲಿಲ್ಲ. ಈ ಬಗ್ಗೆ ಇಬ್ಬರೂ ತಮ್ಮ ತಮ್ಮ ಪಾಲಕರಿಗೆ ಒತ್ತಾಯ ಹೇರತೊಡಗಿದರು. ನಾಲ್ಕಾರು ದಿನಗಳ ನಂತರ ಪಕ್ಕದ ಪೇಟೆಯಿಂದ ಪಾಲಕರು ಅವರಿಗೆ ಬೇಕಾದ ಸಾಮಗ್ರಿಗಳನ್ನು ತಂದು ಕೊಟ್ಟರು. ಆಗ ಇಬ್ಬರೂ ತಮ್ಮ ಯೋಜನಾ ಕಾರ್ಯ ಮುಗಿಸಿದರು.  

ಯೋಜನಾ ಕಾರ್ಯ ಎಂದಕೂಡಲೇ ಬಹುತೇಕ ಪಾಲಕರಿಗೆ ಕಿರಿಕಿರಿ ಎನಿಸುತ್ತದೆ. ಸಂಗ್ರಹಿತ ಯೋಜನಾ ಕಾರ್ಯದಿಂದ ನಮ್ಮ ಮಕ್ಕಳು ಕಲಿಯುವುದೇನು? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇಂತಹ ಮಾಹಿತಿ ಸಂಗ್ರಹಿತ ಕಲಿಕೆಯು ಶಾಲಾ ಕಲಿಕೆಯ ಒಂದು ಭಾಗವಾಗಿದೆ. ಆದರೆ ಬಹುತೇಕ ಶಾಲೆಗಳಲ್ಲಿ ಇದು ಮೇಲಿನ ಸನ್ನಿವೇಶಗಳಂತೆ ಮಾಹಿತಿಗೆ ಮಾತ್ರ ಸೀಮಿತವಾಗಿದೆ. ಫಾತೀಮಾ ಚಿತ್ರಪಟ ತಯಾರಿಸುವ ಬದಲು ನೈಜ ಧಾನ್ಯಗಳನ್ನೇ ಸಂಗ್ರಹಿಸಿಕೊAಡು ಹೋದರೆ ಅದೊಂದು ಉತ್ತಮ ಕಲಿಕೆಯಾಗುತ್ತಿತ್ತು. ಆಕಾಶ ಪುಸ್ತಕ ನೋಡಿ ಜಾನಪದ ಗೀತೆ ಮತ್ತು ಕಥೆ ಬರೆಯುವ ಬದಲು ತನ್ನ ಸುತ್ತಮುತ್ತಲ ಜನರಿಂದ ಕೇಳಿ ಸಂಗ್ರಹಿಸುವAತಾಗಿದ್ದರೆ ಅದೊಂದು ವಿಭಿನ್ನ ಸಂತಸದಾಯಕ ಕಲಿಕೆ ಆಗುತ್ತಿತ್ತು. ಉಳಿದವರಿಗಿಂತ ಇವರ ಮಾಹಿತಿಯು ನಿಖರ ಹಾಗೂ ಅರ್ಥಪೂರ್ಣವಾಗಿರುತ್ತದೆ. 

ಪ್ರೊಜೆಕ್ಟ್ ಲರ್ನಿಂಗ್ : ಇತ್ತೀಚಿನ ವರ್ಷಗಳಲ್ಲಿ ಯೋಜನಾ ಕಲಿಕೆ(ಪ್ರೊಜೆಕ್ಟ್ ಲರ್ನಿಂಗ್)ಯು ಹೆಚ್ಚು ಪ್ರಚಲಿತದಲ್ಲಿದೆ. ಜೆ.ಎ.ಸ್ಟೀವನ್‌ಸನ್ ಎಂಬುವವರು ಯೋಜನಾ ಆಧಾರಿತ ಕಲಿಕೆಯನ್ನು ರೂಪಿಸಿದರು. 1920ರಲ್ಲಿ  ಪ್ರೋ.ಕಿಲ್‌ಪ್ಯಾಟ್ರಿಕ್ ಅವರು ಜಾರಿಗೆ ತಂದರು. ಹಾಗಾಗಿ ಕಿಲ್‌ಪ್ಯಾಟ್ರಿಕ್ ಅವರನ್ನು ಯೋಜನಾ ಪದ್ದತಿಯ ಜನಕ ಎಂದು ಕರೆಯಲಾಗುತ್ತದೆ.  ಒಂದು ನಿರ್ದಿಷ್ಟ ಪರಿಕಲ್ಪನೆಯನ್ನು ಕಾರ್ಯಾಚರಣೆ ಮೂಲಕ ಕಲಿಯುವುದೇ ಯೋಜನಾ ಕಲಿಕೆಯಾಗಿದೆ. ಈ ವಿಧಾನದಲ್ಲಿ ಕಲಿಕಾರ್ಥಿಯು ನೇರವಾಗಿ ಕಲಿಕೆಯಲ್ಲಿ ಪಾಲ್ಗೊಳ್ಳುತ್ತಾನೆ. ಪ್ರಶ್ನಿಸುವುದನ್ನೇ ಕೇಂದ್ರವನ್ನಾಗಿಟ್ಟುಕೊAಡ ಯೋಜನಾ ಕಲಿಕೆಯು ವಿದ್ಯಾರ್ಥಿ ಕೇಂದ್ರಿತ ಕಲಿಕಾ ಪದ್ದತಿಯಾಗಿದೆ. ತರಗತಿ ಹೊರಗಿನ ಕಲಿಕೆಯನ್ನು ತರಗತಿ ಕೋಣೆಗೆ ಅನ್ವಯಿಸಿಕೊಳ್ಳಲು ಇದು ಪ್ರಭಾವಿಯುತ ಕಲಿಕಾ ವಿಧಾನವಾಗಿದೆ. 

ಕಲಿಕೆ ಮಕ್ಕಳಿಗೆ ಹೊರೆಯಾಗಬಾರದು ಮತ್ತು ಒತ್ತಡವನ್ನು ಹೇರಬಾರದು ಎಂಬುದನ್ನು ಉತ್ತೇಜಿಸಿದ ರಾಷ್ಟಿçÃಯ ಪಠ್ಯಕ್ರಮ ಚೌಕಟ್ಟು(ಎನ್.ಸಿ.ಎಫ್)-2005, ನಾಲ್ಕು ಮಾರ್ಗದರ್ಶಿ ತತ್ವಗಳನ್ನು ಪ್ರಸ್ತುತಪಡಿಸಿತು. ಅದರಲ್ಲಿ ‘ಜ್ಞಾನಕ್ಕೂ ಶಾಲೆಯ ಹೊರ ವಾತಾವರಣಕ್ಕೂ ಸಂಬAಧ ಕಲ್ಪಿಸುವುದು’ ಪ್ರಮುಖವಾದದ್ದು. ಅಂದರೆ ಮಗು ತನ್ನ ಜ್ಞಾನವನ್ನು ತಾನೇ ಕಟ್ಟಿಕೊಳ್ಳುವಂತೆ ಮಾಡಬೇಕು ಎಂಬುದು ಎನ್.ಸಿ.ಎಫ್-2005ರ ಆಶಯವಾಗಿದೆ. ಈ ಆಶಯಕ್ಕೆ ಪೂರಕವಾದ ಯೋಜನಾ ಕಲಿಕೆಯು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವಲ್ಲಿ ಸಫಲವಾಗಿದೆ. ಮಗು ತನ್ನ ಸುತ್ತಲ ನೈಸರ್ಗಿಕ ಮತ್ತು ಸಾಮಾಜಿಕ ಪರಿಸರವನ್ನು ಅರ್ಥ ಮಾಡಿಕೊಳ್ಳಲು ಪೂರಕ ಚಟುವಟಿಕೆಗಳನ್ನು ರೂಪಿಸುವುದು ಯೋಜನಾ ಕಲಿಕೆಯ ಉದ್ದೇಶವಾಗಿದೆ.

ಹೊರೆಯಿಲ್ಲದ ಕಲಿಕೆ : ಯೋಜನಾ ಕಲಿಕೆಯು ಜ್ಞಾನ, ಆಲೋಚನೆ, ಅನ್ವೇಷಣೆ ಮತ್ತು  ಅನ್ವಯ ಈ ನಾಲ್ಕು ಕಲಿಕಾ ಆಯಾಮಗಳನ್ನು ಒಳಗೊಂಡಿದೆ. ಈ ವಿಧಾನದಲ್ಲಿ ಕಲಿಕೆಯು ನಿಜ ಜೀವನದೊಂದಿಗೆ ಸಾಗುವುದರಿಂದ ಕಲಿಕೆ ಆಸಕ್ತಿಯಿಂದ ಕೂಡಿದ್ದು ಶಾಶ್ವತವಾಗಿರುತ್ತದೆ. ಹಾಗಾಗಿ ಇದು ಹೊರೆಯಿಲ್ಲದ ಕಲಿಕೆಯಾಗಿದೆ.  ಮಕ್ಕಳು ತರಗತಿ ಹೊರಗಿನ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸುವುದರಿಂದ ವಿವಿಧ ಕೌಶಲ್ಯಗಳನ್ನು ಬಳಸಿ ರಚನಾತ್ಮಕ ಕಲಿಕೆಗೆ ಮುಂದಾಗುತ್ತಾರೆ. ರಚನಾವಾದದ ತಿರುಳು ಕೂಡಾ ಇದೇ ಆಗಿದೆ. 

ಯೋಜನಾ ಆಧಾರಿತ ಕಲಿಕೆಯಲ್ಲಿ ಮಕ್ಕಳು ಪರಿಕ್ಪನೆಗಳನ್ನು ತಮ್ಮ ಪರಿಸರದ ಮೂಲಕ ಕಲಿಯುವುದರಿಂದ ಅದನ್ನು ಭವಿಷ್ಯದಲ್ಲಿ ಅನ್ವಯಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಯಾಕೆಂದರೆ ಇಲ್ಲಿ ಅನುಭವದ ಮೂಲಕ ಕೌಶಲ್ಯಾಧಾರಿತ ಜ್ಞಾನವನ್ನು ಮಗು ಕಟ್ಟಿಕೊಳ್ಳುತ್ತದೆ. ತಂಡದಲ್ಲಿ ಕೆಲಸ ಮಾಡುವ, ತಂಡವನ್ನು ಮುನ್ನಡೆಸುವ, ವಿಷಯವನ್ನು ಆಯ್ಕೆ ಮಾಡುವ, ಸ್ವಂತAತ್ರ ತೀರ್ಮಾನಗಳನ್ನು ಕೈಗೊಳ್ಳುವ ಮುಂತಾದ ಕೌಶಲ್ಯಗಳನ್ನು ಕಲಿಯುತ್ತಾರೆ. ಇದು ಸಂಪೂರ್ಣವಾಗಿ ತರಗತಿ ಹೊರಗಿನ ಕಲಿಕೆಯಾಗಿದ್ದು, ಸಂಘಪರತೆ, ಸಹಕಾರಗಳು ಪರಸ್ಪರರಲ್ಲಿ ಮುಡುತ್ತವೆ. ಆದ್ದರಿಂದ ಇದು ಮಾನವೀಯ ಸಂಬAಧಗಳನ್ನು ಗಟ್ಟಿಗೊಳಿಸುವ ಕಲಿಕೆಯೂ ಆಗಿದೆ.

ಯೋಜನಾಧಾರಿತ ಕಲಿಕೆಯ ಲಕ್ಷಣಗಳು :

ಪ್ರಯೋಗಗಳು, ಸಂಶೋಧನೆ, ಉಪನ್ಯಾಸ, ಪುಸ್ತಕಗಳು ಹೀಗೆ ವಿವಿಧ ಮೂಲಗಳಿಂದ ಕಲಿಕೆ ಸಾಗುತ್ತದೆ.

ವಿಷಯ ಸಂಗ್ರಹಣೆಯಲ್ಲಿ ವಯಸ್ಕರು, ಹಿರಿಯರು, ಅನುಭವಿಗಳೊಂದಿಗೆ ಚರ್ಚಿಸಿ ಕಲಿಯುತ್ತಾರೆ.

ಯೋಜನೆಯ ಆಯ್ಕೆ, ಗುರಿ ಸಾಧನೆಗೆ ರೂಪಿಸುವ ಕಾರ್ಯಯೋಜನೆ, ಮುನ್ನಡೆಸುವ ಕಾರ್ಯತಂತ್ರಗಳು ಮುಂತಾದವುಗಳ ಬಗ್ಗೆ ಸ್ವತಃ ನಿರ್ಧಾರಣೆಯ ಮೂಲಕ ಮುಕ್ತ ಕಲಿಕೆ.

ಸಮಸ್ಯೆಯ ಪರಿಹಾರಕ್ಕಾಗಿ ವಿವಿಧ ಕೌಶಲ್ಯಗಳ ಬಳಕೆ. ಜೀವನ ಅನುಭವವನ್ನು ಶಿಕ್ಷಣಕ್ಕೆ ಅನ್ವಯಿಸಿಕೊಳ್ಳುತ್ತಾರೆ. 

ಪರಿಕಲ್ಪನೆಗಳ ಆಧಾರಿತ ಶಾಶ್ವತ ಕಲಿಕೆ.

ವಿವಿಧ ಸನ್ನಿವೇಶಗಳಲ್ಲಿ ಕಲಿಕೆ ಸಾಗುವುದರಿಂದ ತರ್ಕಶಕ್ತಿ ಮತ್ತು ಶೋಧಕ ದೃಷ್ಟಿ ಬೆಳೆಯುತ್ತದೆ. 

ಶಿಕ್ಷಕರ ಸಹಭಾಗಿತ್ವ: ಯೋಜನಾ ಕಲಿಕೆಯಲ್ಲಿ ಮಕ್ಕಳಷ್ಟೇ ಕಲಿಯುವುದಿಲ್ಲ. ಬದಲಾಗಿ ಶಿಕ್ಷಕರೂ ಕಲಿಯುತ್ತಾರೆ. ಶಿಕ್ಷಕರು ತಂಡದ ಒಬ್ಬ ಸದಸ್ಯರಾಗಿ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಹೊಸತನದ ಹರಿಕಾರರಾಗಲು ಸಾಧ್ಯ. ಶಿಕ್ಷಕರು ಇಲ್ಲಿ ಭೋದಕರಾಗುವುದರ ಜೊತೆಗೆ ಒಬ್ಬ ಮಾರ್ಗದರ್ಶಕರಾಗಿ, ಸಹಾಯಕರಾಗಿ, ಸ್ನೇಹಿತರಾಗಿ ತೊಡಗಿಕೊಳ್ಳಬೇಕು. ಯೋಜನೆಗೆ ಅಗತ್ಯವಿರುವ ಸಂಪನ್ಮೂಲ ಒದಗಿಸುವಲ್ಲಿ ಹಾಗೂ ದತ್ತಾಂಶ ಸಂಗ್ರಹಿಸುವಲ್ಲಿ ಮಕ್ಕಳಿಗೆ ಸಹಾಯ ಮಾಡಬೇಕು. 

ಶಿಕ್ಷಕರು ಮಕ್ಕಳನ್ನು ಅಭಿಪ್ರೇರಿಸಿ ಯೋಜನಾ ಕಲಿಕೆಯಲ್ಲಿ ಕುತೂಹಲ ಕೆರಳಿಸಬೇಕು. ಯೋಜನೆಯು ಮುಖ್ಯವಾಗಿ ಮಕ್ಕಳ ಮಾನಸಿಕ, ಬೌದ್ದಿಕ ಮತ್ತು ಪ್ರಾದೇಶಿಕ ಮಟ್ಟಕ್ಕನುಗುಣವಾಗಿ ಇರಬೇಕು. ಯೋಜನೆಯು ಪಠ್ಯದಾಚೆಗಿನ ಕಲಿಕೆಯನ್ನು ಪಠ್ಯಕ್ಕೆ ಪೂರಕವಾಗುವಂತೆ ಮಾಡುವಂತಿರಬೇಕು. ತಮಗೆ ಇಷ್ಟವಾದ ಯೋಜನೆ ಆಯ್ಕೆ ಮಾಡಲು ಮಕ್ಕಳಿಗೆ ಸ್ವಾತಂತ್ರ ನೀಡಬೇಕು. ತರಗತಿಯ ಎಲ್ಲಾ ಮಕ್ಕಳು ಪಾಲ್ಗೊಳ್ಳುವಂತೆ ಅವಕಾಶ ನೀಡಬೇಕು. ಯೋಜನಾ ಕಾರ್ಯವನ್ನು ನಿರಂತರವಾಗಿ ವೀಕ್ಷಿಸುತ್ತಾ ಮಾರ್ಗದರ್ಶನ ನೀಡಬೇಕು. ಮಾಹಿತಿ ಸಂಗ್ರಹಣೆಗಾಗಿ ಅಗತ್ಯ ಸಂಪನ್ಮೂಲ ಒದಗಿಸಬೇಕು. ಯೋಜನೆ ಕುರಿತು ಚರ್ಚಿಸಲು ಮತ್ತು ವಿಚಾರಗಳನ್ನು ಹಂಚಿಕೊಳ್ಳಲು ಸೂಕ್ತ ವೇದಿಕೆ ನಿರ್ಮಿಸಬೇಕು. ಹಿರಿಯರು, ಅನುಭವಿಗಳೊಂದಿಗೆ ಮಕ್ಕಳು ಮುಕ್ತವಾಗಿ ಚರ್ಚಿಸಲು ಅವಕಾಶ ಕಲ್ಪಿಸಬೇಕು. ಅಂತಿಮವಾಗಿ ಯೋಜನಾ ವರದಿ ತಯಾರಿಸಲು ಮಾರ್ಗದರ್ಶನ ಮಾಡಬೇಕು. 

ಮಕ್ಕಳು ತಯಾರಿಸಿದ ಯೋಜನೆಗಳನ್ನು ಸಭೆ ಸಮಾರಂಭಗಳAದು ಪ್ರದರ್ಶನಕ್ಕೆ ವ್ಯವಸ್ಥೆಗೊಳಿಸಬೇಕು. ಅಲ್ಲಿ ಮಕ್ಕಳು ತಮ್ಮ ಯೋಜನಾ ವರದಿಯ ಬಗ್ಗೆ ವೀಕ್ಷಕರಿಗೆ ವಿವರಣೆ ನೀಡಬೇಕು. ಉತ್ತಮ ಯೋಜನಾ ವರದಿಗಳನ್ನು ಆಯ್ಕೆ ಮಾಡಿ ಸ್ಥಳೀಯ ಪ್ರಾಯೋಜಕರಿಂದ ಪ್ರಶಂಸೆ ನೀಡಬೇಕು. ಈ ಯೋಜನಾ ವರದಿಗಳನ್ನು ಅವಶ್ಯಕತೆ ಇದ್ದಾಗ ತರಗತಿ ಕೋಣೆಯಲ್ಲಿ ಬೋಧನೋಪಕರಣವಾಗಿ ಬಳಸಬೇಕು. 

ಪೋಷಕರ ಪಾತ್ರವೂ ಮುಖ್ಯ: ಯೋಜನಾ ಕಲಿಕೆಯಲ್ಲಿ ಪೋಷಕರ ಪಾತ್ರ ಮಹತ್ವದ್ದು. ಮಕ್ಕಳು ಯೋಜನೆಗಳನ್ನು ತಯಾರಿಸಿಲು ಪೋಷಕರು ಸಹಾಯ ಮಾಡಬೇಕು. ಇದರಿಂದ ತಾವೂ ಕಲಿಕೆಯಲ್ಲಿ ಭಾಗವಹಿಸಿದಂತಾಗುತ್ತದೆ. ಅಗತ್ಯ ಸಂಪನ್ಮೂಲ ಒದಗಿಸಲು ಮುಂದಾಗಬೇಕು. ಮಕ್ಕಳ ಕಲಿಕೆಯನ್ನು ಉತ್ತೇಜಿಸುತ್ತಾ ಅವರ ವ್ಯಕ್ತಿತ್ವ ನಿರ್ಮಾಣದಲ್ಲಿ ಭಾಗಿಯಾಗಬೇಕು. ಯೋಜನಾ ಕಲಿಕೆಯು ತರಗತಿ ಹೊರಗೆ ನಡೆಯುವುದರಿಂದ ಶಿಕ್ಷಕರ ಸ್ಥಾನವನ್ನು ಪೋಷಕರು ವಹಿಸಿಕೊಳ್ಳಬೇಕು. ಮಕ್ಕಳ ಕಲಿಕೆಯಲ್ಲಿ ಪೋಷಕರೂ ಭಾಗಿಯಾದಾಗ ಅವರು ತುಂಬಾ ಖುಷಿ ಪಡುತ್ತಾರೆ. ಮಕ್ಕಳ ಖುಷಿಯಲ್ಲಿ ನಮ್ಮ ನೋವನ್ನು ನೋವನ್ನು ಮರೆಯಬಹುದು ಅಲ್ಲವೇ?




No comments:

Post a Comment