December 11, 2021

ಗಿರಿಕಣಿವೆಗಳ ವಗಮೋನ್

ದಿನಾಂಕ  02-05-2019 ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ.


ಗಿರಿಕಣಿವೆಗಳ ವಗಮೋನ್


    ವಿಸ್ತಾರವಾದ ಹುಲ್ಲುಗಾವಲು, ಆಳವಾದ ಕಣಿವೆ, ದಟ್ಟವಾದ ಪೈನ್ ಮರದ ಕಾಡು, ಬೆಟ್ಟಕ್ಕೆ ಹಸಿರು ಚಾದರ ಹೊದಿಸಿದ ಚಹಾ ತೋಟಗಳು, ರಮಣೀಯ ಜಲಪಾತಗಳು ಬೇಸಿಗೆಯಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಇವೆಲ್ಲವೂ ಒಂದೇ ತಾಣದಲ್ಲಿ ಸಿಗುವಂತಿದ್ದರೆ ಎಂತಾ ಮಜಾ ಅಲ್ಲವೇ? ಹೌದು, ಅಂತಹದ್ದೊAದು ತಾಣ ಕೇರಳದಲ್ಲಿದೆ. ‘ಸ್ವರ್ಗದ ತುಣುಕು’ ಎಂದೇ ಹೆಸರುವಾಸಿಯಾದ ವಗಮೋನ್‌ನಲ್ಲಿ ಇವೆಲ್ಲವೂ ಲಭ್ಯ ಇವೆ. 

ವಗಮೋನ್ ಕೇರಳದ ಕೊಟ್ಟಾಯಂ ಜಿಲ್ಲೆಯ ಪೆರ್ಮಡೆ ತಾಲೂಕಿನಲ್ಲಿದೆ. ಮೀನಚಲ್ ಮತ್ತು ಕಾಂಜಿರಪಲ್ಲಿ ತಾಲೂಕಿನ ಗಡಿಭಾಗದವರೆಗೂ ಚಾಚಿಕೊಂಡ ಗಿರಿಧಾಮವಾಗಿದೆ. ಅಂತರರಾಷ್ಟಿçÃಯ 50 ಅತ್ಯಾಕರ್ಷಕ ಗಿರಿಧಾಮಗಳಲ್ಲಿ ವಗಮೋನ್ ಒಂದಾಗಿದೆ. ಸಮುದ್ರ ಮಟ್ಟದಿಂದ 1100 ಮೀಟರ್ ಎತ್ತರದಲ್ಲಿರೂ ಅತ್ಯಂತ ಪ್ರಶಾಂತವಾದ ಹಾಗೂ ತಂಪಾದ ಪ್ರದೇಶವಾಗಿದೆ. ಬಿರುಬೇಸಿಗೆಯಲ್ಲೂ ಸಹ 10 ರಿಂದ 230 ಉಷ್ಣಾಂಶ ಮಾತ್ರ ಹೊಂದಿದೆ. ಹಾಗಾಗಿ ಇದನ್ನು ‘ಏಷ್ಯಾದ ಸ್ಕಾಟ್‌ಲ್ಯಾಂಡ್’ ಎಂದೂ ಕರೆಯುತ್ತಾರೆ. 

ವಗಮೋನ್‌ಗೆ ಭೇಟಿ ನೀಡಲು ಹಲವು ಕಾರಣಗಳಿವೆ. ಒಂದೆಡೆ ನೈಸರ್ಗಿಕ ತಾಣವಾಗಿ, ಗುಡ್ಡ ಬೆಟ್ಟಗಳ ಸ್ಥಳವಾಗಿ, ನಿಸರ್ಗ ರಮಣೀಯ ಕಣಿವೆಗಳಿಂದ, ಸುಂದರವಾದ ಜಲಪಾತಗಳಿಂದ ಪ್ರವಾಸಿಗರನ್ನು ಆಕರ್ಷಿಸಿದರೆ ಮತ್ತೊಂದೆಡೆ ಟ್ರಕ್ಕಿಂಗ್, ಪ್ಯಾರಾಗ್ಲೆöÊಡಿಂಗ್, ಪರ್ವತಾರೋಹಣ, ರಾಕ್ ಕ್ಲೆöÊಂಬಿAಗ್‌ನAತಹ ಸಾಹಸ ಕ್ರೀಡೆಗಳ ತಾಣವಾಗಿಯೂ ಅದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸೋಧ್ಯಮ ಇಲಾಖೆಯು ಇಲ್ಲಿ ಪ್ರತಿವರ್ಷ ಅಂತರಾಷ್ಟಿçÃಯ ಪ್ಯಾರಾಗ್ಲೆöÊಡಿಂಗ್ ಉತ್ಸವವನ್ನು ಆಯೋಜಿಸುತ್ತದೆ. ಆ ಸಂದರ್ಭದಲ್ಲಿ ವಗಮೋನ್‌ಗೆ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ.

ವೆಗಮೋನ್ ಬೆಟ್ಟವನ್ನು ಲೆಮೆನ್ ಗ್ರಾಸ್ ಆವರಿಸಿಕೊಂಡಿದ್ದು ನೋಡಲು ಅತ್ಯಾಕರ್ಷಕವಾಗಿ ಕಾಣುತ್ತದೆ. ಮುಂಜಾನೆಯ ಮಂಜಿನಲ್ಲಿ ಸೂರ್ಯೋದಯದ ಸೊಬಗು ಒಂದು ರೀತಿಯಾದರೆ, ಸಂಜೆಯ ಸೂರ್ಯಾಸ್ತ ಮತ್ತೊಂದು ವೈಭವದ ಮೆರಗನ್ನು ನೀಡುತ್ತದೆ. ಮಧ್ಯಾಹ್ನ ಬಿಸಿಲಿಗೆ ಇಲ್ಲಿನ ಮರ್ಮಲಾ ಜಲಪಾತದ ಜಲಕ್ರೀಡೆ ದೇಹ ಮತ್ತು ಮನಸ್ಸಿಗೆ ತಂಪೆರೆಯುತ್ತದೆ.  ಹಾಗಾಗಿ ಇಡೀ ದಿನದ ಪ್ರವಾಸಕ್ಕೆ ವೆಗಮೋನ್ ಹೇಳಿ ಮಾಡಿಸಿದಂತಹ ತಾಣ. 

ಒಂದಿಷ್ಟು ಮುಂಚಿತವಾಗಿ ಸರಿಯಾಗಿ ಪ್ಲಾನ್ ಮಾಡಿಕೊಂಡರೆ ಅಕ್ಕಪಕ್ಕದ ಸಾಕಷ್ಟು ಸ್ಥಳಗಳನ್ನು ಸುತ್ತಾಡಬಹುದು. ಅದಕ್ಕೆಂದೇ ಅಲ್ಲಿ ಜೀಪ್ ಸಫಾರಿ ವ್ಯವಸ್ಥೆ ಇದೆ. ಬೆಳಿಗ್ಗೆ 7.30ಕ್ಕೆ ವೆಗಮೋನ್ ಬಸ್ ನಿಲ್ದಾಣದಿಂದ ಜೀಪ್ ಸಫಾರಿ ಪ್ರಾರಂಭವಾಗುತ್ತದೆ. ಸಂಜೆ 6 ಗಂಟೆಗೆ ಪುನಃ ನಿಮ್ಮನ್ನು ಅದೇ ಸ್ಥಳಕ್ಕೆ ತಂದು ನಿಲ್ಲಿಸುತ್ತದೆ. ಈ ಸಫಾರಿಯಲ್ಲಿ ನೀವು ಪ್ರಮುಖವಾಗಿ ವಗಮೋನ್, ಪಾಲೋಕೋಕಂ ಪ್ಯಾರಾ, ಸೂಯಿಸೈಡ ಪಾಯಿಂಟ್, ತಾಂಗಲ್ ಪ್ಯಾರಾ, ಮುಂಡಕ್ಕಯA ವಾಚ್ ಟವರ್, ಕುರಿಸುಮಾಲಾ ಆಶ್ರಮ, ಮುರುಗನ್ ಮಾಲಾ ಮತ್ತು ಉಲುಪ್ಪುನಿಗಳನ್ನು ಸುತ್ತಾಡಬಹುದು. ಈ ತಿರುಗಾಟದಲ್ಲಿ ಕಾಫಿ, ಟೀ ತೋಟಗಳ ಜೊತೆಗೆ ಪೈನ್ ಮರಗಳ ಸುಂದರ ಅರಣ್ಯ ಮನಸ್ಸಿಗೆ ಮುದನೀಡುತ್ತದೆ.

ವಗಮೋನ್‌ನ ಬಳಿಯ ತಾಂಗಲ್ ಪ್ಯಾರಾ ಪ್ರಸಿದ್ದ ಸೂಫಿ ಸಂತ ಹಸ್ರತ್ ಶೇಖ್ ಪರೀದುದ್ದೀನ್ ಅವರ ವಿಶ್ರಾಂತಿ ತಾಣವಾಗಿದ್ದು, ಈಗ ಅದು ಪ್ರಸಿದ್ದ ತೀರ್ಥಯಾತ್ರ ಸ್ಥಳವಾಗಿದೆ. ವಗಮೋನ್ ಸರೋವರವು ಬೋಟಿಂಗ್ ಮತ್ತು ರೋಯಿಂಗ್‌ನAತಹ ಚಟುವಟಿಕೆಗಳಿಂದ ಯುವಕರನ್ನು ಆಕರ್ಷಿಸುತ್ತದೆ. 

ಮಕ್ಕಳ ಕಲಿಕೆಗಂತೂ ವಗಮೋನ್ ಸಾಕಷ್ಟು ಮಾಹಿತಿ ಒದಗಿಸುವ ಆಗರವಾಗಿದೆ. ಹೊಸ ನಗರಗಳ ಸಂಸ್ಕೃತಿ, ವಿವಿಧ ಜಾತಿಯ ಕಾಡಿನ ಮರಗಳು, ಹುಲ್ಲುಗಳು, ಪ್ರಾಣಿ ಪಕ್ಷಿಗಳು, ಕೀಟಗಳು ಮಕ್ಕಳ ಕಲಿಕೆಗೆ ಸಾಕಷ್ಟು ಮಾಹಿತಿ ಒದಗಿಸುತ್ತವೆ. 

ಹೋಗುವುದು ಸುಲಭ : ವಗಮೋನ್ ಕೊಟ್ಟಾಯಂನಿAದ 65 ಕಿ.ಮೀ ಮತ್ತು ಕೊಚ್ಚಿಯಿಂದ 93 ಕಿ.ಮೀ ದೂರದಲ್ಲಿದೆ. ವಗಮೋನ್‌ಗೆ ಸಾರ್ವಜನಿಕ ಹಾಗೂ ಖಾಸಗೀ ವಾಹನಗಳ ವ್ಯವಸ್ಥೆ ಇದೆ. ಅಲ್ಲದೇ ಸಮೀಪದಲ್ಲಿ ಸಾಕಷ್ಟು ಸರಕಾರಿ ಹಾಗೂ ಖಾಸಗೀ ರೆಸ್ಟೋರೆಂಟ್‌ಗಳೂ ಲಭ್ಯ ಇವೆ. ಅಲ್ಲಿ ಉತ್ತರ ಭಾರತ ಹಾಗೂ ದಕ್ಷಿಣ ಭಾರತೀಯ ಊಟ ಲಭ್ಯ ಇರುತ್ತದೆ.




No comments:

Post a Comment