December 11, 2021

ಕಳವು ತಡೆಯಲು ಕೃತಿಸ್ವಾಮ್ಯ

 ದಿನಾಂಕ  11-09-2019ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ. 



ಕಳವು ತಡೆಯಲು ಕೃತಿಸ್ವಾಮ್ಯ




ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ಎಲ್ಲರಿಗೂ ಗೊತ್ತು. ಬಿಲ್‌ಗೇಟ್ಸ್ 1975ರಲ್ಲಿ ನ್ಯೂಮೆಕ್ಸಿಕೋ ಪ್ರಾಂತದ ಅಲ್ಬುಕರಕ್ ನಗರದ ಒಂದು ಚಿಕ್ಕ ಕೋಣೆಯಲ್ಲಿ ಮೈಕ್ರೋಸಾಫ್ಟ್ ಕಂಪನಿಯನ್ನು ಪ್ರಾರಂಭ ಮಾಡಿದನು. ಒಂದು ವರ್ಷದ ಅವಿರತ ಶ್ರಮದ ಫಲವಾಗಿ ಬಿಲ್‌ಗೇಟ್ಸ್ ಮೈಕ್ರೋಸಾಫ್ಟ್ 1.0 ಮೂಲ ತತ್ರಾಂಶವನ್ನು ಅಭಿವೃದ್ದಿಪಡಿಸಿದ. ಸ್ವಲ್ಪದಿನಗಳ ನಂತರ ತಾನು ಅಭಿವೃದ್ದಿ ಪಡಿಸಿದ ಸಾಫ್ಟ್ವೇರನ್ನು ಬೇರೆಯವರು ಅವರ ಹೆಸರಿನಲ್ಲಿ ಬಳಸುತ್ತಿರುವುದ ಗಮನಕ್ಕೆ ಬಂದಿತು. ಆ ಕಂಪನಿ ವಿರುದ್ದ ಕೋರ್ಟ್ನಲ್ಲಿ ದಾವೆ ಹೂಡಿದ. ಆದರೆ ಕೋರ್ಟ್ ಕೇಳಿದ ಪ್ರಶ್ನೆಗೆ ಬಿಲ್‌ಗೇಟ್ಸ್ನ ಬಳಿ ಉತ್ತರ ಇರಲಿಲ್ಲ. ತಾವು ಅಭಿವೃದ್ದಿ ಪಡಿಸಿದ ಕಾರ್ಯಕ್ಕೆ ಕಾಪಿರೈಟ್ ಮಾಡಿಸಿರಲಿಲ್ಲ. ಆದರೆ ತನ್ನಿಂದ ಆದ ತಪ್ಪನ್ನು ಕೋರ್ಟ್ಗೆ ತಿಳಿಸಿ, ತಾನು ಒಂದು ವರ್ಷಗಳ ಕಾಲ ಮಾಡಿದ ಎಲ್ಲಾ ದಾಖಲೆಗಳ ವಿವರವನ್ನು ಕೋರ್ಟ್ಗೆ ನೀಡಿದ. ಆ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಕೋರ್ಟ್ ಬಿಲ್‌ಗೇಟ್ಸ ಪರವಾದ ತೀರ್ಪನ್ನು ನೀಡಿತು. ನಂತರ ತನ್ನೆಲ್ಲಾ ಕಾರ್ಯವನ್ನು ಕಾಪಿರೈಟ್ ಮಾಡಿಸಿದ.

ರಾಮು ನಿರ್ದಿಷ್ಟ ಉದ್ದೇಶವನ್ನಾಧರಿಸಿದ ತನ್ನದೇ ಆದ ಒಂದು ಕಂಪನಿಯನ್ನು ಕಟ್ಟಿ ಬೆಳೆಸಿದ್ದಾನೆ. ಕಂಪನಿಯ ಮಾಹಿತಿ ಮತ್ತು ಪ್ರಕ್ರಿಯೆ ಕುರಿತ ಮಾರ್ಗದರ್ಶಿ ಪುಸ್ತಕಕ್ಕೆ ಕಾಪಿರೈಟ್ ಪಡೆಯಲು ನಿರ್ಧರಿಸಿದ. ಅದಕ್ಕಾಗಿ ಏಜೆನ್ಸಿಗಳ ಮೊರೆಹೋದ. ಸುಮಾರು ಎರಡು ವರ್ಷಗಳಿಂದ ಒಂದು ಏಜೆನ್ಸಿಯ ಕಛೇರಿ ಅಲೆದು ಅಲೆದು ಸುಸ್ತಾದ. ಕೊನೆಗೆ ಇನ್ನೊಂದು ಏಜೆನ್ಸಿಯ ಬಾಗಿಲು ಬಡಿದ. ಕೇವಲ ಎಂಟು ತಿಂಗಳಲ್ಲಿ ತನ್ನ ಕಂಪನಿಗೆ ಕೃತಿಸ್ವಾಮ್ಯ ದೊರೆಯಿತು.

 ಸಾಮಾನ್ಯವಾಗಿ ನಾವು ಯಾವುದೇ ಪುಸ್ತಕದ ತಾಂತ್ರಿಕ ಪುಟವನ್ನು ತೆರೆದರೆ ಅಲ್ಲಿ ಹಕ್ಕುಗಳು ಅಥವಾ ಬಿ ಎಂಬ ಚಿಹ್ನೆಯನ್ನು ಕಾಣುತ್ತೇವೆ. ಜೊತೆಗೆ ಕೆಲವು ಆಡಿಯೋ, ವೀಡಿಯೋ ಸಿ.ಡಿ.ಗಳ ಮೇಲೂ ಈ ಚಿಹ್ನೆಯನ್ನು ಕಾಣುತ್ತೇವೆ. ಹಾಗಾದರೆ ಈ ಚಿಹ್ನೆಯ ಅರ್ಥ ಏನು? ಇದನ್ನು ಏತಕ್ಕಾಗಿ ಬಳಸುತ್ತಾರೆ? ಇದರ ಹಿಂದಿನ ತಾತ್ವಿಕತೆ ಏನು? ಇತ್ಯಾದಿ ಪ್ರಶ್ನೆಗಳ ಕುರಿತ ಮಾಹಿತಿಯೇ ಈ ಬರಹ.

ಕೃತಿಸ್ವಾಮ್ಯ ಎಂದರೆ,,,

ಕಾಪಿರೈಟ್ ಅಥವಾ ಕೃತಿಸ್ವಾಮ್ಯ ಎಂಬುದು ಕಾನೂನುಬದ್ದ ಹಕ್ಕು ಆಗಿದ್ದು, ಅದು  ಅದರ ಸೃಷ್ಟಿಕರ್ತನ ಕೆಲಸಕ್ಕೆ ಸಲ್ಲುವ ವಿಶೇಷ ಹಕ್ಕು ಆಗಿದೆ. ಜೊತೆಗೆ ಇದು ಈ ಮೂಲಕೃತಿಯ ಮಾಹಿತಿಯನ್ನು ಇತರರು ಬಳಸಬೇಕೇ? ಬೇಡವೇ? ಎಂಬುದನ್ನು ನಿರ್ಧರಿಸಲು ಅನುವು ಮಾಡಿಕೊಡುತ್ತದೆ. ಇದು ಸಾಮಾನ್ಯವಾಗಿ ಸೀಮಿತ ಅವಧಿಗೆ ನೀಡುವ ಹಕ್ಕಾಗಿದೆ. ಇದು ಕೃತಿಕಾರ ಅಥವಾ ಸೃಷ್ಟಿಕರ್ತನ ಆಲೋಚನಾ ಹಾಗೂ ಅಭಿವ್ಯಕ್ತಿ ಸ್ವಾತಂತ್ರದ ರಕ್ಷಕವಾಗಿದೆ.

ಕೃತಿಸ್ವಾಮ್ಯವು ಸೃಜನಶೀಲ ಕೃತಿಗಳಿಗೆ ನೀಡುವ ದೇಶವ್ಯಾಪಿ ಅಥವಾ ಅಂತರಾಷ್ಟಿçÃಯ ಮಟ್ಟದ ಹಕ್ಕಾಗಿದೆ. ಅಂತೆಯೇ ಕೆಲವು ಖಾಸಗೀ ಕಂಪನಿಗಳ ಕಾರ್ಯಸೂಚಿ ಪುಸ್ತಿಕೆಯ ನ್ಯಾಯವ್ಯಾಪ್ತಿ ಹಕ್ಕಾಗಿದೆ. ಕೃತಿಯಲ್ಲಿ ಉಲ್ಲೇಖಿಸಿದ ಹಕ್ಕುದಾರರಿಗೆ ಅದರ ಲಾಭಗಳು ಅನ್ವಯಿಸುತ್ತವೆ. ಈ ಹಕ್ಕುಗಳು ಮರು ಉತ್ಪಾದನೆ, ವಿತರಣೆ, ಸಾರ್ವಜನಿಕ ಕಾರ್ಯಕ್ಷಮತೆ, ನೈತಿಕ ಹಕ್ಕುಗಳನ್ನು ಒಳಗೊಂಡಿದೆ.

ಕೃತಿಸ್ವಾಮ್ಯವು ಸಾಹಿತ್ಯ, ನಾಟಕ, ಸಂಗೀತ, ಸಿನಿಮಾ, ಧ್ವನಿ ರೆರ್ಕಾಡಿಂಗ್, ಕಲಾಕೃತಿಗಳು ಹೀಗೆ ವಿವಿಧ ಪ್ರಕಾರದ ಸೃಜನಾತ್ಮಕ ಕೃತಿ/ಡಾಕ್ಯುಮೆಂಟರಿ ಕೆಲಸಗಳಿಗೆ ನೀಡುವ ಅಧಿಕೃತತೆಯ ಹಕ್ಕಾಗಿದೆ. ವಾಸ್ತವವಾಗಿ ಇದೊಂದು ಹಕ್ಕುಗಳ ಗುಚ್ಛವಾಗಿದ್ದು, ತನ್ನ/ತಮ್ಮ ಕೆಲಸಗಳಿಗೆ ಪಡೆಯುವ ಅಧಿಕೃತ ಹಕ್ಕಾಗಿದೆ. ಅದು ಸಂಪಾದನೆ, ಸಂವಹನ, ಮರುಸೃಷ್ಟಿ, ಅನುವಾದ ಇತ್ಯಾದಿ ಕಾರ್ಯಗಳಿಗೆ ಪಡೆಯುವ ರಾಷ್ಟç/ಅಂತರರಾಷ್ಟಿçÃಯ ಮಟ್ಟದ ಹಕ್ಕಾಗಿದೆ. 

ಕೃತಿಸ್ವಾಮ್ಯವು ಸೃಷ್ಟಿಕರ್ತರಿಗೆ ತಮ್ಮ ಉತ್ಪನ್ನವನ್ನು ರಕ್ಷಿಸಿಕೊಳ್ಳುವ ಅಧಿಕೃತ ಹಕ್ಕಾಗಿದೆ.  ಆ ಉತ್ಪನ್ನದ ಲಾಭ ಮತ್ತು ಇನ್ನಿತರೇ ಪ್ರಯೋಜನಗಳು ಸಂಪೂರ್ಣವಾಗಿ ನೊಂದಾಯಿತ ವಾರಸುದಾರರಿಗೆ ಸಲ್ಲುತ್ತದೆ. ಬರಹಗಾರರು, ಕಲಾವಿದರು, ವಿನ್ಯಾಸಕಾರರು, ನಾಟಕಕಾರರು, ಸಂಗೀತಗಾರರು, ವಾಸ್ತುಶಿಲ್ಪಿಗಳು, ಧ್ವನಿ ರೆಕಾರ್ಡರ್, ಛಾಯಾಚಿತ್ರಗಾರರು, ಸಿನಿಮಾಟೋಗ್ರಾಫರ್, ಕಂಪ್ಯೂಟರ್ ಸಾಫ್ಟ್ವೇರರ್ ಮುಂತಾದವರು ತಮ್ಮ ಸೃಜನಶೀಲ ಉತ್ಪನ್ನಕ್ಕೆ ಕಾನೂನಾತ್ಮಕ ರಕ್ಷಣೆ ಒದಗಿಸಿಕೊಳ್ಳಲು ಕೃತಿಸ್ವಾಮ್ಯವು ಪ್ರಬಲ ಅಸ್ತçವಾಗಿದೆ. 

ವ್ಯಾಪ್ತಿ :

1957ರ ಕೃತಿಸ್ವಾಮ್ಯ ಕಾಯಿದೆ ಪ್ರಕಾರ ಮೂಲ ಸಾಹಿತ್ಯ, ನಾಟಕ, ಸಂಗೀತ, ಸಿನಿಮಾಟೋಗ್ರಾಫಿ, ಚಲನಚಿತ್ರ, ಧ್ವನಿ ರೆಕಾರ್ಡಿಂಗ್‌ಗಳೂ ಮತ್ತು ಕಲಾಕೃತಿಗಳು ಕೃತಿಸ್ವಾಮ್ಯಕ್ಕೆ ಒಳಪಡುತ್ತವೆ. ಇದು ಪೆಟೆಂಟ್‌ಗಿAತ ಭಿನ್ನವಾಗಿದೆ. ಪೆಟೆಂಟ್ ಐಡಿಯಾಗಳನ್ನು ರಕ್ಷಿಸುತ್ತದೆ. ಅದೇ ರೀತಿ ಕೃತಿಸ್ವಾಮ್ಯವು ಅಭಿವ್ಯಕ್ತಿಯನ್ನು ರಕ್ಷಿಸುತ್ತದೆ. ಕಲ್ಪನೆಗಳು, ಕಾರ್ಯ ವಿಧಾನಗಳು, ಆಲೋಚನೆಗಳು, ಗಣಿತದ ಪರಿಕಲ್ಪನೆಗಳಿಗೆ ಕೃತಿಸ್ವಾಮ್ಯದಡಿಯಲ್ಲಿ ರಕ್ಷಣೆ ಇಲ್ಲ.

ಅರ್ಜಿ ಸಲ್ಲಿಕೆ :

ಬಹುತೇಕರಿಗೆ ಕೃತಿಸ್ವಾಮ್ಯ ಪಡೆಯುವುದು ಹೇಗೆ ಎಂಬ ಮಾಹಿತಿ ಲಭ್ಯವಿಲ್ಲ. ಎಲ್ಲಾ ರೀತಿಯ ಸೃಜನಾತ್ಮಕ ಕೃತಿಗಳನ್ನು ನೊಂದಾಯಿಸಲು ರಿಜಿಸ್ಟಾçರ್ ಆಫ್ ಕಾಪಿರೈಟ್ ನೇತೃತ್ವದಲ್ಲಿ ಕಛೇರಿ ಸ್ಥಾಪಿಸಲಾಗಿದೆ. ಇದು ನವದೆಹಲಿಯಲ್ಲಿದೆ. ಅರ್ಜಿಗಳನ್ನು ತಿತಿತಿ.ಛಿoಠಿಥಿಡಿighಣ.gov.iಟಿ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ. ಅಲ್ಲದೇ 2014 ರಿಂದ ಆನ್‌ಲೈನ್‌ನಲ್ಲಿ ‘ಇ-ಫೈಲಿಂಗ್’ ಸೌಕರ್ಯದ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಲೇಖಕ, ಮಾಲಿಕ, ನಿಯೋಜಕ, ಅಥವಾ ಕಾನೂನುಬದ್ದ ಉತ್ತರಾಧಿಕಾರಿ ಯಾರಾದರೂ ಅರ್ಜಿ ಸಲ್ಲಿಸಬಹುದು. 

ನೊಂದಣಿ ಪ್ರಕ್ರಿಯೆ :

ನೊಂದಣಿ ಪ್ರಕ್ರಿಯೆ ಹಲವು ಹಂತಗಳಲ್ಲಿ ಮುಂದುವರೆಯುತ್ತದೆ. ಮೊದಲು ವೆಬ್‌ಸೈಟ್‌ನಿಂದ ನಮೂನೆ-14 ನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು. ಪ್ರತಿ ಕೆಲಸಕ್ಕೂ ಪ್ರತ್ಯೇಕವಾಗಿ ನೊಂದಣಿ ಮಾಡಿಸಬೇಕು.  ಅರ್ಜಿಯೊಂದಿಗೆ ಅಗತ್ಯ ಶುಲ್ಕ ಪಾವತಿಸಬೇಕು. ಅರ್ಜಿದಾರರು ಹಾಗೂ ಹಕ್ಕು ಪಡೆಯುವವರು ಸಹಿ ಹಾಕಬೇಕು. ಕೆಲವು ವೇಳೆ ಕೃತಿಕಾರರಲ್ಲದವರಿಗೆ ಹಕ್ಕುಗಳನ್ನು ವರ್ಗಾಯಿಸಲಾಗುತ್ತದೆ. ಅಂತಹ ಸಂದರ್ಭದಲ್ಲಿ ವಾರಸುದಾರರು ಸಹಿ ಹಾಕಬೇಕು. ವಾರಸುದಾರಿಕೆ ನ್ಯಾಯಾಂಗ ಇಲಾಖೆಯ ಮೂಲಕ ಅಧಿಕೃತಗೊಂಡಿರಬೇಕು. ಶುಲ್ಕವನ್ನು ಡಿಮ್ಯಾಂಡ್ ಡ್ರಾಫ್ಟ್ ಅಥವಾ ಪೋಸ್ಟಲ್ ಆರ್ಡರ್ ರೂಪದಲ್ಲಿ ‘ರಿಜಿಸ್ಟಾçರ್ ಆಫ್ ಕಾಪಿರೈಟ್ಸ್, ನ್ಯೂಡೆಲ್ಲಿ’ ಇವರಿಗೆ ಸಂದಾಯವಾಗುವAತೆ ಪಾವತಿಸಬೇಕು. ಇ-ಪಾವತಿಯ ಸೌಲಭ್ಯವೂ ಲಭ್ಯವಿದೆ. ಸಂಪೂರ್ಣ ವಿವರಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಬೌಧಿಕ್ ಸಂಪದಾ ಭವನ, ಪ್ಲಾಟ್ ಸಂಖ್ಯೆ 32, ಸೆಕ್ಟರ್ 14, ದ್ವಾರಕಾ, ಹೊಸದೆಹಲಿ, 110075 ಇಲ್ಲಿಗೆ ಕಳಿಸಬೇಕು. 

ಅರ್ಜಿ ತಲುಪಿದ 30 ದಿನಗಳ ನಂತರ ಕಛೇರಿಯಿಂದ ಡೈರಿ ನಂಬರ್ ಸಿಗುತ್ತದೆ. ಇದೊಂದು ರೀತಿಯ ರೆಫರೆನ್ಸ್ ನಂಬರ್ ಇದ್ದಂತೆ. ನಂತರ ಎಲ್ಲಾ ದಾಖಲೆಗಳ ಪರಿಶೀಲನೆಯಾದ ನಂತರ ಕಾಪಿರೈಟ್ ಪರವಾನಿಗೆ ಸಿಗುತ್ತದೆ. ಕೆಲವು ವೇಳೆ ಕೃತಿಗೆ ಸಂಬAಧಿಸಿದ ಆಕ್ಷೇಪಣೆಗಳಿಗೆ ನಿಗದಿತ ಸಮಯದಲ್ಲಿ ಉತ್ತರಿಸದೇ ಇದ್ದರೆ ಕಾಪಿರೈಟ್ ಬೇಗನೇ ಸಿಗುವುದಿಲ್ಲ. ಯಾವುದೇ ಆಕ್ಷೇಪಣೆಗಳು ಇಲ್ಲದಿದ್ದರೆ 3-4 ತಿಂಗಳಲ್ಲಿ ಕಾಪಿರೈಟ್ ಪರವಾನಿಗೆ ದೊರೆಯುತ್ತದೆ. ಅದು ದೊರೆತ ನಂತರ ಮಾತ್ರ ಅಧಿಕೃತವಾಗಿ ಬಿ ಚಿಹ್ನೆಯನ್ನು ಬಳಸಬಹುದು. ಬಹುತೇಕ ಕೃತಿ/ ಸಂಗೀತ ಉತ್ಪನ್ನಗಳಲ್ಲಿ ಬಳಸುತ್ತಿರುವುದು ಅನಧಿಕೃತ ಚಿಹ್ನೆಯಾಗಿದೆ.

ಶುಲ್ಕ ಎಷ್ಟು? :

ಕೃತಿಯ ಹಕ್ಕುಗಳ ಆಧಾರದ ಮೇಲೆ ಶುಲ್ಕದಲ್ಲಿ ವ್ಯತ್ಯಾಸಗಳಿವೆ. ಸಾಹಿತಿಕ, ನಾಟಕ, ಸಂಗೀತ ಮತ್ತು ಕಲಾ ಕೃತಿಗಳಿಗೆ 500 ರೂ.ಗಳ ಶುಲ್ಕವಿದ್ದರೆ, ಸಮೂಹ ಸಂವಹನದAತಹ ಪ್ರಸಾರಾತ್ಮಕ ಕೆಲಸಗಳಿಗೆ 40000 ರೂ. ಗಳವೆರೆಗೆ ಶುಲ್ಕವಿದೆ. ಶುಲ್ಕದ ವಿವರಗಳಿಗೆ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ. ಅಲ್ಲದೇ ಯಾವುದೇ ಸಂದರ್ಭದಲ್ಲಿಯೂ ಹಕ್ಕುಸ್ವಾಮ್ಯದ ವಾರಸುದಾರಿಕೆಯನ್ನು ಸೂಕ್ತ ಶುಲ್ಕದೊಂದಿಗೆ ಬದಲಾಯಿಸಲು ಅವಕಾಶವಿದೆ. 

ಕೃತಿಸ್ವಾಮ್ಯ ಕುರಿತ ಮಾರ್ಗದರ್ಶನ :

1958 ರ ಜನವರಿಯಲ್ಲಿ ಕಾಪಿರೈಟ್ ಆಕ್ಟ್ ಜಾರಿಗೆ ಬಂದಿತು. ನಂತರ 1983, 1984, 1991, 1994, 1999  ಮತ್ತು 2012 ರಲ್ಲಿ ಒಟ್ಟು ಆರು ಬಾರಿ ತಿದ್ದುಪಡಿಯಾಗಿದೆ. ಅದರಲ್ಲಿ 2012ರ ತಿದ್ದುಪಡಿ  ಬಹಳ ಪ್ರಮುಖವಾದದ್ದು. ಕೃತಿಸ್ವಾಮ್ಯ ನಿಯಮಗಳು ಬಗ್ಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಅಧಿಕೃತ ಮಾಹಿತಿ ಲಭ್ಯವಿದೆ. ಇಲ್ಲಿಂದ ಡೌನ್‌ಲೋಡ್ ಮಾಡಿಕೊಂಡು ಮಾರ್ಗದರ್ಶನ ಪಡೆಯಬಹುದು. 

ಅಪ್ರಕಟಿತ ಕೃತಿ ಹಾಗೂ ಕಂಪ್ಯೂಟರ್ ಪ್ರೋಗ್ರಾಂಗಳಿಗೂ ಅವಕಾಶ :

ಹಕ್ಕುಸ್ವಾಮ್ಯ ಪಡೆಯಲು ಕೇವಲ ಪ್ರಕಟಿತ ಕೃತಿಗಳೇ ಇರಬೇಕೆಂದೇನಿಲ್ಲ. ಅಪ್ರಕಟಿತ ಕೃತಿಗಳನ್ನೂ ಸಹ ನೊಂದಾಯಿಸಲು ಅವಕಾಶವಿದೆ. ಅಪ್ರಕಟಿತ ಕೃತಿಗಳಾದರೆ ಹಸ್ತಪ್ರತಿಯನ್ನು ಅರ್ಜಿಯ ಜೊತೆ ಲಗತ್ತಿಸಬೇಕು. ಮುಂದೆ ಅದೇ ಹಸ್ತಪ್ರತಿ ಪ್ರಕಟಗೊಂಡಾಗ ನಮೂನೆ-15ನ್ನು ಭರ್ತಿ ಮಾಡುವ ಮೂಲಕ ಅದೇ ಕೃತಿಗೆ ಹಕ್ಕುಸ್ವಾಮ್ಯವನ್ನು ಪಡೆಯಬಹುದು. 

ಕಂಪ್ಯೂಟರ್ ಸಾಫ್ಟ್ವೇರ್ ಅಥವಾ ಕಂಪ್ಯೂಟರ್ ಪ್ರೋಗ್ರಾಂಗಳನ್ನು ‘ಸಾಹಿತಿಕ ಕೆಲಸ’ ಎಂದು ನೊಂದಾಯಿಸಬಹುದು. 1957ರ  ಕಾಪಿರೈಟ್ ಸೆಕ್ಷನ್ 2(ಒ) ಪ್ರಕಾರ ಕಂಪ್ಯೂಟರ್ ಡಾಟಾಬೇಸ್‌ಗಳು, ಕಂಪ್ಯೂಟರ್ ಪ್ರೋಗ್ರಾಂಗಳು, ಕೋಷ್ಟಕಗಳು, ಸಂಕಲನಗಳನ್ನು ನೊಂದಾಯಿಸಲು ಅವಕಾಶ ಇದೆ. ಸಾಫ್ಟ್ವೇರ್ ಉತ್ಪನ್ನದ ನೊಂದಣಿಗಾಗಿ ಮೂಲ ಕೋಡ್ ಮತ್ತು ಅಬ್ಜೆಕ್ಟ್ ಕೋಡ್‌ಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕಾಗುತ್ತದೆ. ಹಾಗೆಯೇ ವೆಬ್‌ಸೈಟ್‌ಗಳಿಗೂ ಸಹ ಕಾಪಿರೈಟ್ ಪಡೆಯಬಹುದು. ಆದರೆ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಳ್ಳುವ ಪ್ರತಿಯೊಂದು ಘಟಕ, ವಿಷಯ, ಕೆಲಸಕ್ಕೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ಕಾಪಿರೈಟ್ ಪಡೆಯಬಹುದು. 

ಕಿವಿಮಾತು : ಕಾಪಿರೈಟ್ ನೊಂದಣಿ ಮಾಡಿಸಲು ಅನೇಕ ಏಜೆನ್ಸಿಗಳಿವೆ. ಬಹುತೇಕ ಎಲ್ಲಾ ಏಜೆನ್ಸಿಗಳ ಉದ್ದೇಶ ಲಾಭಗಳಿಸುವುದಾಗಿದೆ. ನಿಗದಿತ ಅವಧಿಯಲ್ಲಿ ಮಾಡಿಸಿಕೊಡುವುದಾಗಿ ಭರವಸೆ ನೀಡುತ್ತವೆ. ಆದರೆ ಸರಿಯಾಗಿ ಗಮನ ಹರಿಸದಿದ್ದರೆ ಬೇಗನೆ ಕಾಪಿರೈಟ್ ಸಿಗುವುದಿಲ್ಲ. ಕೆಲವು ಏಜೆನ್ಸಿಗಳು ಉತ್ತಮ ಸೇವೆ ಒದಗಿಸುತ್ತವೆ. ಕಾಪಿರೈಟ್ ಮಾಡಿಸುವಾಗ ಇವುಗಳತ್ತ ಗಮನ ಹರಿಸಿ.



No comments:

Post a Comment