December 11, 2021

ಉನ್ನತ ವ್ಯಾಸಂಗದ ಕನಸು ಶೈಕ್ಷಣಿಕ ಸಾಲದಿಂದ ನನಸು

ದಿನಾಂಕ  19-6-2019ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.


 ಉನ್ನತ ವ್ಯಾಸಂಗದ ಕನಸು ಶೈಕ್ಷಣಿಕ ಸಾಲದಿಂದ ನನಸು  




ಭಾರತದ ಶಿಕ್ಷಣ ವ್ಯವಸ್ಥೆ ಅತ್ಯಂತ ತೀಕ್ಷ÷್ಣವಾದುದು. ಕಲೆ, ವಿಜ್ಞಾನ, ಎಂಜಿನಿಯರಿAಗ್, ವೈದ್ಯಕೀಯ, ಸಾಹಿತ್ಯ ಮತ್ತು ಬದುಕಿಗಾಗಿ ಪರ್ಯಾಯ ಶಿಕ್ಷಣ ಇವೆಲ್ಲವೂ ಭಾರತದ ಶಿಕ್ಷಣದ ವಿಶೇಷತೆಗಳು. ಇವುಗಳ ಜೊತೆಗೆ ವಿಶೇಷತೆ ಹೊಂದಿದ ನೂರಾರು ವಿಶ್ವವಿದ್ಯಾಲಯಗಳು ವಿದೇಶಿ ವಿದ್ಯಾರ್ಥಿಗಳನ್ನು ಅಧ್ಯಯನಕ್ಕಾಗಿ ಸೂಜಿಗಲ್ಲಿನಂತೆ ಸೆಳೆಯುತ್ತವೆ. ಏಕೆಂದರೆ ಭಾರತದಲ್ಲಿ ಅಧ್ಯಯನಕ್ಕಾಗಿ ಹಲವಾರು ಆಯ್ಕೆಗಳಿವೆ. 

ವಿಶ್ವದ ಅತ್ಯಂತ ಶ್ರೇಷ್ಠ ಮತ್ತು ಅಭಿವೃದ್ದಿ ಶಿಕ್ಷಣ ಕೇಂದ್ರಗಳಲ್ಲಿ ಭಾರತವೂ ಒಂದು. ಹೊಸ ಹೊಸ ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ವಿವಿಧ ಶಿಕ್ಷಣ ಉಪಕ್ರಮಗಳ ಮೂಲಕ ಶೈಕ್ಷಣಿಕ ಸಮೂಹವನ್ನೇ ಸೃಷ್ಟಿಸಿವೆ. ಆ ಹಿನ್ನೆಲೆಯಲ್ಲಿ ಅಂತರಾಷ್ಟಿçÃಯ ಮಟ್ಟದ ವಿದ್ಯಾರ್ಥಿಗಳು ವೈವಿಧ್ಯಮಯ ಅಧ್ಯಯನಕ್ಕಾಗಿ ಭಾರತದೆಡೆಗೆ ಮುಖಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ.

ಗುಣಮಟ್ಟದ ಶಿಕ್ಷಣ ಹಾಗೂ ಯಶಸ್ವಿ ಜೀವನ ನಿರ್ವಹಣೆ ಸದುದ್ದೇಶದಿಂದ ಭಾರತದ ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಹಣವನ್ನು ಬಂಡವಾಳದ ರೂಪದಲ್ಲಿ ವ್ಯಯಮಾಡುತ್ತಿದ್ದಾರೆ. ಒಂದು ಅಧ್ಯಯನದ ಪ್ರಕಾರ ಭಾರತದ ಉನ್ನತ ಶಿಕ್ಷಣದ ಸರಾಸರಿ ವೆಚ್ಚವು ವರ್ಷದಿಂದ ವರ್ಷಕ್ಕೆ ಶೇಕಡಾ 15 ರಷ್ಟು ಹೆಚ್ಚುತ್ತಿದೆ. ಈ ವೆಚ್ಚವನ್ನು ಸರಿದೂಗಿಸಲು ಪಾಲಕರು ಮ್ಯೂಚುವಲ್ ಫಂಡ್, ಆವರ್ತಕ ನಿಧಿಗಳು, ಯುನಿಟ್ ಲಿಂಕ್ಡ್ ಇನ್ಶುರೆನ್ಸ್ ಯೋಜನೆಗಳು ಹಾಗೂ ಷೇರುಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ. 

ಭಾರತದ ವಿದ್ಯಾರ್ಥಿಗಳ ಕಲಿಕೆ ಇಡೀ ವಿಶ್ವದಲ್ಲಿಯೇ ಉತ್ತಮವಾದದ್ದು ಎಂಬ ಹೆಗ್ಗಳಿಕೆ ಇದೆ. ಆದರೆ ಬಹುತೇಕ ಭಾರತದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣದ ಕನಸು ಆರ್ಥಿಕ ಸಂಕಷ್ಟದಲ್ಲಿಯೇ ಕಮರುತ್ತಿದೆ. ಪ್ರತಿಭೆಗಳ ಕನಸನ್ನು ಸಾಕಾರಗೊಳಿಸುವ ಸಲುವಾಗಿಯೇ ಭಾರತದ ಮಾನವ ಸಂಪನ್ಮೂಲ ಇಲಾಖೆ ಹಾಗೂ ಭಾರತದ ಹಣಕಾಸು ಸಂಸ್ಥೆ(ಬ್ಯಾAಕ್)ಗಳು ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸಲು ಇತ್ತೀಚಿನ ವರ್ಷಗಳಲ್ಲಿ ಹಣಕಾಸು ಸೌಲಭ್ಯ ನೀಡಲು ಮುಂದೆ ಬಂದಿವೆ. ಈ ಹಿನ್ನೆಲೆಯಲ್ಲಿ ಜಾರಿಗೆ ಬಂದ ಸೌಲಭ್ಯವೇ ಶೈಕ್ಷಣಿಕ ಸಾಲ. ಅಂದರೆ ಉನ್ನತ ಶಿಕ್ಷಣದ ಕನಸು ಹೊತ್ತ ವಿದ್ಯಾರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಸಮೀಪದ ಬ್ಯಾಂಕ್‌ನಲ್ಲಿ ಸಾಲ ಪಡೆದು, ವಿದ್ಯಾಭ್ಯಾಸ ಪೂರೈಸುವುದು. ನಂತರ ಕನಿಷ್ಠ ಕಂತು ಹಾಗೂ ಕನಿಷ್ಠ ಬಡ್ಡಿ ದರದಲ್ಲಿ ಸಾಲವನ್ನು ಮರುಪಾವತಿಸುವ ಯೋಜನೆ ಇದಾಗಿದೆ. ಶಿಕ್ಷಣ ಸಾಲದ ಪ್ರಮಾಣದಲ್ಲಿ ನಿರ್ಧಿಷ್ಟತೆ ಇಲ್ಲ. ಎಂಜಿನಿಯರಿAಗ್, ವೈದ್ಯಕೀಯ, ಕಾನೂನು, ಮ್ಯಾನೇಜ್‌ಮೆಂಟ್ ಕೋರ್ಸ್ಗಳು, ವಾಯುಯಾನ, ಇತ್ಯಾದಿ ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ 180ಕ್ಕೂ ಹೆಚ್ಚು ಕೋರ್ಸ್ಗಳಿಗಾಗಿ ಭಾರತದಲ್ಲಿ ಉತ್ತಮ ಸಾಲ ಸೌಲಭ್ಯಗಳನ್ನು ವಿನ್ಯಾಸ ಮಾಡಲಾಗಿದೆ. ಆಸಕ್ತರು ಅನುಕೂಲವಾಗುವಂತಹ ಯೋಜನೆಯನ್ವಯ ಸಾಲ ಪಡೆಯಬಹುದು.

ಶಿಕ್ಷಣ ಸಾಲ ಏನನ್ನು ಒಳಗೊಂಡಿದೆ? : ಶೈಕ್ಷಣಿಕ ಸಾಲವು ಕೋರ್ಸ್ಗೆ ಸಂಬAಧಿತ ಎಲ್ಲಾ ಶುಲ್ಕಗಳನ್ನು ಅಂದರೆ ಕಾಲೇಜು/ವಿಶ್ವವಿದ್ಯಾಲಯದ ಮೂಲಭೂತ ಶುಲ್ಕ, ಹಾಸ್ಟಲ್ ಶುಲ್ಕ, ಪರೀಕ್ಷಾ ಶುಲ್ಕ, ಕೋರ್ಸ್ಗೆ ಸಂಬAಧಿತ ಪರಿಕರಗಳ ಶುಲ್ಕವನ್ನು ಒಳಗೊಂಡಿರುತ್ತದೆ. 

ಯಾರಿಗೆ ಎಷ್ಟು ಸಾಲ? : ಭಾರತದಲ್ಲಿ ಅಥವಾ ವಿದೇಶಗಳಲ್ಲಿ ಅಧ್ಯಯನ ಮಾಡಬಯಸಿದ ಪ್ರತಿಭಾವಂತ ವಿದ್ಯಾರ್ಥಿಗಳೆಲ್ಲರೂ ಈ ಸಾಲ ಪಡೆಯಬಹುದು. ಸಾಲದ ಮೊತ್ತವು ಅರ್ಜಿದಾರರು ವ್ಯಾಸಂಗ ಮಾಡುವ ಕೋರ್ಸ್ ಹಾಗೂ ಸ್ಥಳವನ್ನಾಧರಿಸಿರುತ್ತದೆ. ಕೆಲವು ಬ್ಯಾಂಕ್‌ಗಳು ಶೇಕಡಾ 100 ರಷ್ಟು ಸಾಲ ನೀಡುತ್ತವೆ ಹಾಗೂ ಕೆಲವು ಬ್ಯಾಂಕ್‌ಗಳು ಶೇಕಡಾ90 ರಷ್ಟು ಮಾತ್ರ ನೀಡುತ್ತವೆ. ಉಳಿದ ಮೊತ್ತವನ್ನು ಅರ್ಜಿದಾರರೇ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಸ್ವದೇಶಿ ಹಾಗೂ ವಿದೇಶಿ ಸಾಲದ ಮೊತ್ತವು ಬ್ಯಾಂಕ್‌ನಿAದ ಬ್ಯಾಂಕಿಗೆ ವಿಭಿನ್ನವಾಗಿರುತ್ತದೆ.

ಅರ್ಹತೆ ಮತ್ತು ದಾಖಲೆಗಳು : ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿ ಭಾರತೀಯ ನಾಗರೀಕನಾಗಿರಬೇಕು. ಓದಲು ಬಯಸಿದ ಕಾಲೇಜು/ವಿಶ್ವವಿದ್ಯಾಲಯ ಅರ್ಹ ಪ್ರಾಧಿಕಾರದಿಂದ ಅಂಗೀಕೃತವಾಗಿರಬೇಕು. ಅರ್ಜಿದಾರರು ಕೋರ್ಸ್ ಸಂಬAಧಿತ ಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು. ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಬಗ್ಗೆ ಅಧಿಕೃತ ಪ್ರಮಾಣ ಪತ್ರ ಸಲ್ಲಿಸಬೇಕು. ವಿಳಾಸ ಪುರಾವೆಗಾಗಿ ಆಧಾರ್/ವೋಟರ್ ಐ.ಡಿ, ಅರ್ಜಿದಾರರು/ಪೋಷಕರು/ಜಾಮೀನುದಾರರ ಆರು ತಿಂಗಳ ಬ್ಯಾಂಕ್ ವಹಿವಾಟಿನ ಮಾಹಿತಿ, ವಿದೇಶ ವ್ಯಾಸಂಗ ಸಾಲಕ್ಕೆ ಸೂಕ್ತ ದಾಖಲೆಗಳಾದ ಪಾಸ್‌ಪೋರ್ಟ್, ವೀಸಾ, ಸೂಕ್ತ ಆರ್ಥಿಕ ಹಾಗೂ ಸೇವಾ ಭದ್ರತೆ ದಾಖಲೆಗಳು, ಪ್ಯಾನ್ ಕಾರ್ಡ್, ಕರಾರು ಪತ್ರ ಇತ್ಯಾದಿ.

ಶೈಕ್ಷಣಿಕ ಸಾಲದ ವೈಶಿಷ್ಠö್ಯತೆಗಳು ಮತ್ತು ಪ್ರಯೋಜನಗಳು : 

ಸಾಲವು ಸಾರ್ವತ್ರಿಕವಾಗಿ ಲಭ್ಯವಿದ್ದು, ಉನ್ನತ ಶಿಕ್ಷಣ ಪಡೆಯಲಿಚ್ಛಿಸುವ ಯಾರು ಬೇಕಾದರೂ ಈ ಸೌಲಭ್ಯ ಪಡೆಯಬಹುದು.

ಸ್ವದೇಶ ಮತ್ತು ವಿದೇಶದಲ್ಲಿ ಪದವಿ ಮತ್ತು ಸ್ನಾತಕ, ವೃತ್ತಿಪರ ಶಿಕ್ಷಣ ಕೋರ್ಸ್ಗಳಿಗೆ ಸಾಲ ಸಿಗುತ್ತದೆ.

ಸಾಲದ ಪ್ರಮಾಣ ಕನಿಷ್ಠ 2 ಲಕ್ಷದಿಂದ 15 ಲಕ್ಷದವರೆಗೂ ದೊರೆಯುತ್ತದೆ. ಬ್ಯಾಂಕ್ ಹಾಗೂ ಕೋರ್ಸ್ಗಳ ಆಧಾರದ ಮೇಲೆ ಮೊತ್ತ ಬದಲಾಗುತ್ತದೆ.

ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಸಾಲದ ಮೊತ್ತಕ್ಕೆ ಪ್ರಮುಖ ನಿರ್ಣಾಯಕವಾಗಿದೆ. ಸಾಮಾನ್ಯವಾಗಿ ಮಹಿಳಾ ವಿದ್ಯಾರ್ಥಿಗಳಿಗೆ ರಿಯಾಯಿತಿ ಹೆಚ್ಚು ಹಾಗೂ ಬಡ್ಡಿ ದರ ಕಡಿಮೆ.

ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕೋರ್ಸ್ಗೆ ಅನುಗುಣವಾಗಿ ಸರ್ಕಾರದ ಸಬ್ಸಿಡಿ ದೊರೆಯುತ್ತದೆ.

ಅರ್ಜಿದಾರರು ಸಾಲವನ್ನು ತಕ್ಷಣವೇ ಮರುಪಾವತಿ ಮಾಡಬೇಕಾದ ಭಯವಿಲ್ಲ. ಕೋರ್ಸ್ ಪೂರ್ಣಗೊಂಡ 5 ರಿಂದ 7 ವರ್ಷದವರೆಗೆ ಸಾಲ ಮರುಪಾವತಿಸಲು ಅವಕಾಶ ಇರುತ್ತದೆ. 

ಸಾಮಾನ್ಯವಾಗಿ 4 ಲಕ್ಷಕ್ಕಿಂತ ಕಡಿಮೆ ಸಾಲಕ್ಕೆ ಸುರಕ್ಷತೆ ಅಥವಾ ಜಾಮೀನಿನ ಅಗತ್ಯವಿಲ್ಲ.

ಯೋಜನೆ ಮತ್ತು ಪ್ರಯೋಜನಗಳು ಬ್ಯಾಂಕ್‌ನಿAದ ಬ್ಯಾಂಕ್‌ಗೆ ಬದಲಾಗುತ್ತವೆ.

ಕೋಲ್ಯಾಟರಲ್ ರೂಲ್ಸ್ನ ಅನ್ವಯಿಕೆ : ಶಿಕ್ಷಣ ಸಾಲಕ್ಕೆ ಯಾವುದೇ ವಿಧವಾದ ಸ್ಥಿರಾಸ್ತಿ ಅಥವಾ ಚರಾಸ್ತಿಯ ಭದ್ರತೆಯನ್ನು ಮೇಲಾಧಾರವಾಗಿ ನೀಡುವುದೇ ಕೊಲ್ಯಾಟರಲ್ ರೂಲ್ಸ್ ಆಗಿದೆ. ಇದು ಸಾಲ ಮರುಪಾವತಿಯ ವಿಳಂಬ ಹಾಗೂ ಅಪಾಯಗಳನ್ನು ಕಡಿಮೆ ಮಾಡುತ್ತದೆ. ಕೆಲವು ವೇಳೆ ನೀಡುವ ಸಾಲದ ಮೊತ್ತ ಅಧಿಕವಾಗಿದ್ದಾಗ ಅದರ ಮರುಪಾವತಿ ವ್ಯವಸ್ಥೆ ವಿದ್ಯಾರ್ಥಿ/ಪಾಲಕರಿಗೆ ಸಮಸ್ಯೆಯಾಗುತ್ತದೆ. ಇದನ್ನು ತಪ್ಪಿಸಲು ಬ್ಯಾಂಕ್‌ನವರು ಕೋಲ್ಯಾಟರಲ್ ನಿಯಮವನ್ನು ಅನುಸರಿಸುತ್ತಾರೆ. ನಾಲ್ಕು ಲಕ್ಷದವರೆಗಿನ ಸಾಲಕ್ಕೆ ಯಾವುದೇ ಭದ್ರತೆ ಅವಶ್ಯಕತೆ ಇಲ್ಲ. ನಾಲ್ಕರಿಂದ ಏಳುವರೆ ಲಕ್ಷದವರೆಗೆ ಮೂರನೇ ವ್ಯಕ್ತಿಯ ಜಾಮೀನಿನೊಂದಿಗೆ ಸಾಲ ಪಡೆಯಬಹುದು. ಅದಕ್ಕೂ ಹೆಚ್ಚಿನ  ಸಾಲದ ಮೊತ್ತಕ್ಕೆ ಮಾತ್ರ ಕೋಲ್ಯಾಟರಲ್ ರೂಲ್ಸ್ ಪ್ರಕಾರ ಮೇಲಾಧಾರ ಭದ್ರತೆ ನೀಡಬೇಕಾಗುತ್ತದೆ. ಅದಕ್ಕಾಗಿ ಅರ್ಜಿದಾರರು ಯಾವುದೇ ವಿಧವಾದ ಸ್ಥಿರಾಸ್ತಿ ಅಂದರೆ ಮನೆ, ನಿವೇಶನ, ವಾಣಿಜ್ಯ ಕಟ್ಟಡಗಳು, ಮಾಲ್‌ಗಳನ್ನು ಭದ್ರತೆಗೆ ನೀಡಬೇಕಾಗುತ್ತದೆ. ಚರಾಸ್ಥಿಗಳಾದ ಭಾರಿ ವಾಹನಗಳು, ಎಫ್ಡಿ, ಚಿನ್ನ, ಮ್ಯೂಚುವಲ್ ಫಂಡ್ಸ್, ಷೇರುಗಳು, ಜೀವ ವಿಮಾ ಪಾಲಸಿ, ಬ್ಯಾಂಕ್ ಠೇವಣಿಗಳು, ಡಿಬೆಂಚರ್‌ಗಳು, ಬಾಂಡ್‌ಗಳು ಇತ್ಯಾದಿಗಳನ್ನು ನೀಡಬಹುದಾಗಿದೆ. ಆದರೆ ಕೃಷಿ ಜಮೀನು ಎಂದಿಗೂ ಮೇಲಾಧಾರವಾಗಿ ಅಂಗೀಕೃತವಾಗುವುದಿಲ್ಲ. 

ಶೈಕ್ಷಣಿಕ ಸಾಲ ನೀಡುವ ಬ್ಯಾಂಕ್‌ಗಳು:

ಅಲಹಬಾದ್ ಬ್ಯಾಂಕ್

ಆAದ್ರöಬ್ಯಾAಕ್

ಬ್ಯಾAಕ್ ಆಫ್ ಬರೋಡಾ

ಬ್ಯಾಂಕ್ ಆಫ್ ಇಂಡಿಯಾ

ಕೆನರಾ ಬ್ಯಾಂಕ್

ಕಾರ್ಪೋರೇಷನ್ ಬ್ಯಾಂಕ್

ಇAಡಿಯನ್ ಓವರ್‌ಸೀಸ್ ಬ್ಯಾಂಕ್

ಪAಜಾಬ್ ನ್ಯಾಶನಲ್ ಬ್ಯಾಂಕ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸಿAಡಿಕೇಟ್ ಬ್ಯಾಂಕ್

ಯುಕೋ ಬ್ಯಾಂಕ್

ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ

ವಿಜಯ ಬ್ಯಾಂಕ್


ಒಪ್ಪAದವನ್ನು ಎಚ್ಚರಿಕೆಯಿಂದ ಓದಿ: ಬಹುತೇಕರು ಸಾಲ ಪಡೆಯುವಾಗ ಹಣಕಾಸು ಸಂಸ್ಥೆಯವರು ಎಲ್ಲೆಲ್ಲಿ ಸಾಹಿ ಹಾಕಲು ತಿಳಿಸುತ್ತಾರೋ ಅಲ್ಲೆಲ್ಲಾ ಸಹಿ ಹಾಕುತ್ತಾರೆ. ಓದದೇ ಸಹಿ ಹಾಕುವುದು ತಪ್ಪು. ನಿಮಗೆ ನೀಡಿದ ಅರ್ಜಿ ಹಾಗೂ ಒಪ್ಪಂದ ಪತ್ರವನ್ನು ಕೂಲಂಕಷವಾಗಿ ಓದಿ ಸರಿ ಎನಿಸಿದರೆ ಸಹಿ ಹಾಕಿ. ಯಾವುದೇ ಪದ ಅಥವಾ ವಿಷಯದ ಕುರಿತು ಸಂದೇಹಗಳಿದ್ದರೆ ಬ್ಯಾಂಕ್‌ನ ಪ್ರತಿನಿಧಿ ಅಥವಾ ಸಂಬAಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಿ.

ಸಾಲ ಪಡೆಯುವ ಮುನ್ನ : ಸಾಲ ಪಡೆಯುವ ಮುನ್ನ ಸಾಲದ ಮೊತ್ತವನ್ನು ಮರುಪಾವತಿಸುವ ಯೋಜನೆ ಇದ್ದರೆ ಒಳಿತು. ಸಾಲ ಮರುಪಾವತಿಯಾಗದಿದ್ದರೆ ಹಣಕಾಸು ಸಂಸ್ಥೆಯವರ ಕಿರುಕುಳ ಎದುರಿಸಬೇಕಾಗುತ್ತದೆ. ಅಲ್ಲದೇ ನೀಡಿದ ಜಾಮೀನುದಾರರು ತೊಂದರೆಗೆ ಒಳಗಾಗುತ್ತಾರೆ. ಅಲ್ಲದೇ ನೀಡಿದ ಮೇಲಾಧಾರ ಭದ್ರತೆಗೆ ನೀಡಿದ ಆಸ್ತಿಯೂ ಮುಟ್ಟುಗೋಲಾಗುವ ಸಂಭವ ಇರುತ್ತದೆ. ಆದ್ದರಿಂದ ಸಾಲ ಪಡೆಯುವಾಗಿನ ಖುಷಿಯು ತೀರಿಸುವಾಗಲೂ ಇದ್ದರೆ ಒಳಿತು. ಕೆಲವು ವ್ಯಕ್ತಿಗಳು ಮತ್ತು ಸಂಸ್ಥೆಗಳು ತಾವು ಶೈಕ್ಷಣಿಕ ಸಾಲ ಕೊಡಿಸುವುದಾಗಿ ನಿಮ್ಮಿಂದ ನಿಗದಿತ ಮೊತ್ತ ಕಸಿಯಬಹುದು. ಇಂತಹ ವ್ಯಕ್ತಿಗಳಿಂದ ಮೋಸಹೋಗಬೇಡಿ.

ವಿದ್ಯಾಲಕ್ಷಿö್ಮ ಪೋರ್ಟಲ್ : ಶೈಕ್ಷಣಿಕ ಸಾಲ ಪಡೆಯುವವರು ಬ್ಯಾಂಕ್‌ಗಳಿಗೆ ಅಲೆದಾಡುವುದನ್ನು ತಪ್ಪಿಸಲು ಮತ್ತು ಇನ್ನಿತರೇ ಸಾಲ ಸಂಬAಧಿತ ಮಾಹಿತಿಗಾಗಿ “ವಿದ್ಯಾಲಕ್ಷಿö್ಮ ಪೋರ್ಟಲ್” ರೂಪುಗೊಂಡಿದೆ. ಭಾರತೀಯ ಹಣಕಾಸು ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ(ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ ಹಾಗೂ ಭಾರತೀಯ ಬ್ಯಾಂಕುಗಳ ಸಂಘದ ಮಾರ್ಗದರ್ಶನದಲ್ಲಿ ಈ ಪೋರ್ಟಲ್ ಕಾರ್ಯನಿರ್ವಹಿಸುತ್ತದೆ. ಸಾಲಕ್ಕಾಗಿ ಅರ್ಜಿ ಸಲ್ಲಿಸಬಯಸುವವರಿಗೆ ಈ ಪೋರ್ಟಲ್ ಗೇಟ್ ವೇ ಇದ್ದಂತೆ. ಇದರಲ್ಲಿ ಭಾರತದ ಬಹುತೇಕ ಬ್ಯಾಂಕ್‌ಗಳ ಶೈಕ್ಷಣಿಕ ಸಾಲದ ಮಾಹಿತಿ ಇದೆ. ಸಾಲದ ಅರ್ಜಿ ಸಲ್ಲಿಕೆಯಿಂದ ಸಾಲ ಮಂಜೂರಾತಿ ಹಾಗೂ ಮರುಪಾವತಿವರೆಗಿನ ಎಲ್ಲಾ ಮಾಹಿತಿಯನ್ನು ಟ್ರಾö್ಯಕ್ ಮಾಡುವ ಸೌಲಭ್ಯವನ್ನು ಈ ಪೋರ್ಟಲ್ ಹೊಂದಿದೆ. ವಿವರಗಳಿಗೆ ತಿತಿತಿ.viಜಥಿಚಿಟಚಿಞshmi.ಛಿo.iಟಿ ನ್ನು ವೀಕ್ಷಿಸಿ.





No comments:

Post a Comment