December 11, 2021

ಇನ್ಪೈರ್ ಅವಾರ್ಡ್ಗೆ ಅರ್ಜಿ ಸಲ್ಲಿಸಿದ್ರಾ?

 ದಿನಾಂಕ  27-7-2019ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ. 


ಇನ್ಪೈರ್ ಅವಾರ್ಡ್ಗೆ ಅರ್ಜಿ ಸಲ್ಲಿಸಿದ್ರಾ?


ಮಕ್ಕಳೇ, ನೀವು ಇತರರಿಗಿಂತ ಭಿನ್ನವಾಗಿ ಯೋಚಿಸುತ್ತೀರಿ ಮತ್ತು ತುಂಬಾ ವೇಗವಾಗಿ ಕಲಿಯುತ್ತೀರಿ ಎಂಬ ಮಾತು ಎಲ್ಲೆಡೆ ಕೇಳಿಬರುವುದು ಸಹಜ. ಇದಕ್ಕೆ ಕಾರಣ ನಿಮ್ಮಲ್ಲಿನ ಕುತೂಹಲ. ಕುತೂಹಲವು ನವೀನ ಸಂಶೋಧನೆಗಳಿಗೆ ದಾರಿ ಮಾಡಿಕೊಡುತ್ತದೆ. ಕೈಗೊಂಡ ಸಂಶೋಧನೆಯು ದಿನನಿತ್ಯದ ಬದುಕಿನ ಭಾಗವಾಗಬೇಕು, ಎಲ್ಲರೂ ಅದನ್ನು ಬಳಸುವಂತಿರಬೇಕೆAಬ ನಿಮ್ಮ ಸಹಜ ಆಸೆಯನ್ನು ಸಾಕಾರಗೊಳಿಸಲು ಒಂದು ವಿಶಿಷ್ಠ ಅವಕಾಶ ಇದೆ. ಅದೇ ಇನ್ಪೆöÊರ್ ಅವಾರ್ಡ್ ಮನಾಕ್. 

ವಿಜ್ಞಾನ ಮತ್ತು ಸಾಮಾಜಿಕ ಅನ್ವಯಿಕೆಗಳಲ್ಲಿ ಶಾಲಾ ಮಕ್ಕಳಲ್ಲಿ ಸೃಜನಶೀಲತೆ ಮತ್ತು ನವೀನ ಚಿಂತನೆಯ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ಇನ್ಪೆöÊರ್ ಅವಾರ್ಡ್ ಮನಾಕ್ ಯೋಜನೆ ಜಾರಿಯಾಗಿದೆ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಈ ಯೋಜನೆಯನ್ನು 2010 ರಿಂದ ಜಾರಿಗೆ ತಂದಿದೆ. ಇದು ವಿಶೇಷವಾಗಿ 10 ರಿಂದ 15 ವಯೋಮಾನದ ಅಂದರೆ 6 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗಾಗಿ ಜಾರಿಗೊಳಿಸಿದ ಯೋಜನೆಯಾಗಿದೆ. ಇದು ಅತ್ಯಂತ ಬೃಹತ್ ಯೋಜನೆಯಾಗಿದ್ದು, ರಾಷ್ಟçದಾದ್ಯಂತ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಇಂತಹ ಒಂದು ಬೃಹತ್ ಯೋಜನೆಯಲ್ಲಿ ನೀಮ್ಮ ಹೊಸ ಆಲೋಚನೆಯೊಂದಿಗೆ ನೀವೂ ಪಾಲ್ಗೊಳ್ಳಿ. ನಿಮ್ಮ ಆಲೋಚನೆಯು ಉತ್ತಮವಾಗಿದ್ದರೆ ರಾಷ್ಟç ಮಟ್ಟದಲ್ಲಿ ಉತ್ತಮ ಪ್ರಶಂಸೆ ಗಳಿಸುತ್ತದೆ. ಜೊತೆಗೆ ನಿಮ್ಮ ಶಾಲೆ ಮತ್ತು ಶಿಕ್ಷಕರಿಗೆ ಒಳ್ಳೆಯ ಹೆಸರು ಮತ್ತು ಕೀರ್ತಿ ಲಭಿಸುತ್ತದೆ. 

ನೀವೇನು ಮಾಡಬಹುದು?

ನಿಮ್ಮಲ್ಲಿ ವಿಜ್ಞಾನ ಮತ್ತು ಸಾಮಾಜಿಕ ಅನ್ವಯಿಕೆಯಾಗುವ ಹೊಸ ವಿಚಾರಗಳು ಅಥವಾ ಐಡಿಯಾಗಳು ಇದ್ದರೆ ಅವುಗಳ ಬಗ್ಗೆ ನಿಮ್ಮ ಶಾಲೆಯ ವಿಜ್ಞಾನ ಶಿಕ್ಷಕರು ಅಥವಾ ಆಸಕ್ತ ಶಿಕ್ಷಕರೊಂದಿಗೆ ಚರ್ಚಿಸಿ. ಅವರು ಅದಕ್ಕೆ ಹೊಸ ರೂಪು ನೀಡುತ್ತಾರೆ. ಈಗಾಗಲೇ ಈ ಯೋಜನೆಯ ಕುರಿತಾಗಿ ಶಾಲಾ ಮುಖ್ಯಸ್ಥರಿಗೆ ಮತ್ತು ವಿಜ್ಞಾನಾಸಕ್ತ ಶಿಕ್ಷಕರಿಗೆ ಮಾಹಿತಿ ಇರುತ್ತದೆ. ನಿಮ್ಮ ಐಡಿಯಾದ ಆಧಾರದ ಮೇಲೆ ಯೋಜನೆಯೊಂದನ್ನು ತಯಾರಿಸಿ ಅದನ್ನು ಇನ್ಪೆöÊರ್ ಅವಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸುತ್ತಾರೆ. ಅರ್ಜಿ ಸಲ್ಲಿಕೆ ಮತ್ತು ಪ್ರಾಥಮಿಕ ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕವೇ ನಡೆಯುತ್ತದೆ. 

ನಿಮ್ಮ ಆಲೋಚನೆಯು ಉತ್ತಮವಾಗಿದ್ದು, ನಾವೀನ್ಯತೆಯಿಂದ ಕೂಡಿದ್ದರೆ, ಪ್ರಾಥಮಿಕ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾಗುತ್ತದೆ. ನಂತರ ಜಿಲ್ಲಾ ಹಂತದಲ್ಲಿ ನಡೆಯುವ ಪ್ರದರ್ಶನದಲ್ಲಿ ನಿಮ್ಮ ಐಡಿಯಾಕ್ಕೆ ಪೂರಕವಾದ ಕಾರ್ಯನಿರ್ವಹಣಾ ಪ್ರಾತ್ಯಕ್ಷತಾ ಮಾದರಿಯನ್ನು ಪ್ರದರ್ಶಿಸಬೇಕಾಗುತ್ತದೆ. ಜಿಲ್ಲಾ ಹಂತಕ್ಕೆ ನಿಮ್ಮ ಮಾದರಿ ಆಯ್ಕೆಯಾದರೆ, ಪ್ರಾತ್ಯಕ್ಷಿತಾ ಮಾದರಿ ತಯಾರಿಕೆಗಾಗಿ ವಿದ್ಯಾರ್ಥಿಗಳ ಖಾತೆಗೆ 10,000 ರೂಪಾಯಿಗಳನ್ನು ಇಲಾಖೆಯು ನೇರವಾಗಿ ವರ್ಗಾವಣೆ ಮಾಡುತ್ತದೆ.  ಪ್ರದರ್ಶನದ ವೇಳೆ ನಿಮ್ಮ ಮಾದರಿ ಕುರಿತು ವಿಸ್ತೃತವಾಗಿ ವಿವರಿಸಬೇಕಾಗುತ್ತದೆ ಹಾಗೂ ಆಯ್ಕೆ ಸಮಿತಿ ಕೇಳುವ ಪ್ರಶ್ನೆಗೆ ಸರಿಯಾಗಿ ಉತ್ತರಿಸಿದರೆ ರಾಜ್ಯ ಹಂತಕ್ಕೆ ಆಯ್ಕೆಯಾಗುತ್ತೀರಿ. ರಾಜ್ಯಹಂತದಲ್ಲಿ ಒಟ್ಟು 1000 ಮಾದರಿಗಳು ಪ್ರದರ್ಶಿತವಾಗುತ್ತವೆ. ಅಲ್ಲಿಯೂ ನಿಮ್ಮ ಮಾದರಿ ಉತ್ತಮವಾಗಿದ್ದರೆೆ ರಾಷ್ಟç ಹಂತಕ್ಕೆ ಆಯ್ಕೆಯಾಗುತ್ತದೆ. ರಾಷ್ಟç ಹಂತದಲ್ಲಿ 1000 ಮಾದರಿಗಳು ಪ್ರದರ್ಶಿತವಾಗುತ್ತವೆ. ಅಂತಿಮವಾಗಿ 60 ಅತ್ಯುತ್ತಮ ಮಾದರಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ 60 ಮಾದರಿಗಳನ್ನು ರಾಷ್ಟçಭವನದಲ್ಲಿ ನಡೆಯುವ ವಾರ್ಷಿಕ ಉತ್ಸವದಲ್ಲಿ ಪ್ರದರ್ಶಿಸಿ ಪುರಸ್ಕಾರ ನೀಡಲಾಗುತ್ತದೆ. ಅದರಲ್ಲಿ ಮೂರು ಅತ್ಯುತ್ತಮ ಮಾದರಿಗಳಿಗೆ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ದೊರೆಯುತ್ತದೆ. ರಾಷ್ಟç ಮಟ್ಟದಲ್ಲಿ ಆಯ್ಕೆಯಾದ ಮಾದರಿಗಳಲ್ಲಿ ವಿಶೇಷತೆಯುಳ್ಳ ಮಾದರಿಗಳಿಗೆ ಪೇಟೆಂಟ್ ಕೂಡಾ ದೊರೆಯುತ್ತದೆ. 

ನೆನಪಿಡಿ : ಎಲ್ಲಾ ಹಂತದಲ್ಲೂ ನಿಮ್ಮ ಐಡಿಯಾ ಆಯ್ಕೆಯಾಗಬೇಕಾದರೆ ಅದು ಜನಸ್ನೇಹಿ, ವಿಜ್ಞಾನ ಸ್ನೇಹಿ ಹಾಗೂ ಸಾಮಾಜಿಕ ಅನ್ವಯಿಕ ಮಾದರಿಯಾಗಿರಬೇಕು ಹಾಗೂ ನಾವಿನ್ಯತೆಯಿಂದ ಕೂಡಿರಬೇಕು ಮತ್ತು ನಿಮ್ಮ ಸ್ವಂತದ್ದಾಗಿರಬೇಕು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 31-07-2019 ಕೊನೆ ದಿನಾಂಕವಾಗಿರುತ್ತದೆ. ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಅರ್ಹ ವಯೋಮಾನದ ಆಸಕ್ತ ಮಕ್ಕಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ತಿತಿತಿ.iಟಿsಠಿiಡಿeಚಿತಿಚಿಡಿಜs-ಜsಣ.gov.iಟಿ   ವೆಬ್‌ಸೈಟ್‌ಗೆ ಭೇಟಿಕೊಡಿ ಅಥವಾ ವಿವರಗಳಿಗೆ 9638418605 ಕ್ಕೆ ಸಂಪರ್ಕಿಸಿ.




No comments:

Post a Comment