June 5, 2020

ಸ್ಮರಣೆ ಎಂಬ ಸಂಪನ್ಮೂಲ/Memory as resource

ದಿನಾಂಕ 13-09-2019ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಸ್ಮರಣೆ ಎಂಬ ಸಂಪನ್ಮೂಲ


ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಸ್ಮರಣೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ನಾವು ಕಲಿತ ಕೌಶಲ್ಯಗಳನ್ನು ನೆನಪಿಟ್ಟುಕೊಳ್ಳಲು, ಸಂಗ್ರಹವಾದ ಮಾಹಿತಿಯನ್ನು ಅಗತ್ಯವಿದ್ದಾಗ ಹಿಂಪಡೆಯಲು ಸ್ಮರಣೆ ಅಗತ್ಯ. ಮೆದುಳಿನ ಸಂಗ್ರಹದಲ್ಲಿರುವ ಮಾಹಿತಿಯನ್ನು ಸಕಾಲದಲ್ಲಿ ಸರಿಯಾಗಿ ಬಳಸದೇ ಹೋದರೆ ಸ್ಮರಣೆ ಸರಿಯಾಗಿಲ್ಲವೆಂದು ಅರ್ಥ. 
ಫೈಲಿಂಗ್ ಸಿಸ್ಟಮ್ : ಮೆಮೊರಿ ಅಥವಾ ಸ್ಮರಣೆ ಎಂಬುದು ಮೆದುಳಿನ ಒಂದು ಫೈಲಿಂಗ್ ಸಿಸ್ಟಮ್. ನಾವು ಕಲಿತ ಎಲ್ಲವನ್ನೂ ಅದು ಒಳಗೊಂಡಿದೆ. ಅದು ನಮ್ಮ ಮಾನಸಿಕ ವ್ಯವಸ್ಥೆಯ ತಾತ್ಕಾಲಿಕ ಆಯಾಮವನ್ನು ವಿವರಿಸುವ, ಉನ್ನತವಾದ ಅರಿವಿನ ಪ್ರಕ್ರಿಯೆಯಾಗಿದೆ. ಇದು ನಾವು ಗಳಿಸಿದ ಮಾಹಿತಿಯನ್ನು ಸಂಕೇತಿಕರಿಸಿ. ಸಂಗ್ರಹಿಸುತ್ತದೆ ಮತ್ತು ಅಗತ್ಯವಾದಾಗ ಸಂಕೇತಿಕರಣವನ್ನು ಜ್ಞಾನದ ಅನುಭವವನ್ನಾಗಿ ತೋರಿಸುವ ಸಾಮರ್ಥ್ಯವಾಗಿದೆ. ಸ್ಮರಣೆಯು ಹಿಂದಿನ ಕಲಿಕೆಯನ್ನು ಪ್ರತಿಬಿಂಬಿಸುವ ಜೊತೆಗೆ ಪ್ರಸ್ತುತ ಕಲಿಕೆಯನ್ನು ಒರೆಗೆ ಹಚ್ಚುತ್ತದೆ. ಹಾಗಾಗಿ ಸ್ಮರಣೆಯು ಹಿಂದಿನ ಮತ್ತು ಪ್ರಸ್ತುತತೆಯ ನಡುವೆ ನಿರಂತರತೆಯನ್ನು ಕಾಯ್ದುಕೊಳ್ಳುತ್ತದೆ. ಹಿಂದಿನ ಕಲಿಕಾ ಅನುಭವಗಳು ಸಕ್ರಿಯವಾಗಿದ್ದರೆ ವ್ಯಕ್ತಿ ಯಶಸ್ಸು ಗಳಿಸಲು ಸಾಧ್ಯ.
ವಯಸ್ಸಿಗೆ ಅನುಗುಣವಾಗಿ ಸ್ಮರಣಾಶಕ್ತಿ ವಿಭಿನ್ನವಾಗಿರುತ್ತದೆ. ಹಿರಿಯ ವಯಸ್ಕರಲ್ಲಿ ಸ್ಮರಣೆಯು ನಿಧಾನವಾಗಿ ಅವನತಿ ಹೊಂದುತ್ತಿರುತ್ತದೆ. ಆದರೆ ಯುವಪೀಳಿಗೆ ಮತ್ತು ವಯಸ್ಕರಲ್ಲಿ ಅದು ವ್ಯವಸ್ಥಿತವಾಗಿ ಇರಬೇಕಾದುದು ಅಪೇಕ್ಷಣೀಯ. ಮೆದುಳಿನಲ್ಲಿನ ನರಕೋಶಗಳ ಬಗೆಗಿನ ಅಧ್ಯಯನವನ್ನು ನ್ಯೂರೋಪ್ಲಾö್ಯಸ್ಟಿಸಿಟಿ ಎನ್ನುತ್ತಾರೆ. ಇತ್ತೀಚಿನ ದಿನಗಳಲ್ಲಿ ವಿಜ್ಞಾನಿಗಳು ಪ್ರತಿದಿನವೂ ಮೆದುಳಿನಲ್ಲಿರುವ ಸ್ಮರಣಾ ನರಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ನಮ್ಮ ಮೆಮೊರಿ ಸಾಮರ್ಥ್ಯ ಸ್ಥಿರವಾಗಿಲ್ಲವೆಂಬ ಅಂಶವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಮೆಮೊರಿ ಸ್ಥಿರವಾಗಿಲ್ಲದೇ ಹೋದರೆ ಕಲಿಕೆಯು ಶಾಶ್ವತವಾಗಿ ಉಳಿಯುವುದಿಲ್ಲ. ಕಲಿಕೆ ಶಾಶ್ವತವಾಗದಿದ್ದರೆ ಅಗತ್ಯವಿದ್ದಾಗ ಅದನ್ನು ಬಳಸಲು ಆಗುವುದಿಲ್ಲ. ಹಾಗಾಗಿ ಸ್ಮರಣಾ ಸಾಮರ್ಥ್ಯ ಉತ್ತಮವಾಗಿರಬೇಕಾದುದು ಅನಿವಾರ್ಯ. ಮೆಮೊರಿ ಸಾಮರ್ಥ್ಯ ಉತ್ತಮ ಪಡಿಸಲು ಯಾವುದೇ ವೈದ್ಯಕೀಯ ಚಿಕಿತ್ಸೆಗಳು ಲಭ್ಯವಿಲ್ಲ. ಕೆಲವು ತಂತ್ರಗಳು ಮತ್ತು ಚಟುವಟಿಕೆಗಳನ್ನು ಅನುಸರಿಸುವ ಮೂಲಕ ಸ್ಮರಣೆಗೆ ಬಲ ತುಂಬಬಹುದು.  
ಅಂತಹ ಕೆಲವು ತಂತ್ರಗಳು ಹಾಗೂ ಚಟುವಟಿಕೆಗಳನ್ನು ಕೆಳಗೆ ನೀಡಲಾಗಿದೆ. ಇವುಗಳನ್ನು ಪ್ರತಿಯೊಬ್ಬರೂ ವೈಯಕ್ತಿಕವಾಗಿ ಅನುಸರಿಸಿದಾಗ ಮಾತ್ರ ಅವರ ಸ್ಮರಣೆ ಹೆಚ್ಚುತ್ತದೆ ಎಂಬುದು ಗಮನದಲ್ಲಿರಲಿ. 
ಸ್ಮರಣೆಯನ್ನು ಹೆಚ್ಚಿಸುವ ಕೆಲವು ತಂತ್ರಗಳು
ಹೊಸದನ್ನು ಕಲಿಯಿರಿ : ಮೆಮೊರಿ ಸಾಮರ್ಥ್ಯ ಕೇವಲ ಸ್ನಾಯುವಿನ ಶಕ್ತಿಯಾಗಿದೆ. ಅದನ್ನು ನೀವು ಹೆಚ್ಚು ಹೆಚ್ಚು ಬಳಸಿದಷ್ಟೂ ಅದು ಪ್ರಬಲವಾಗುತ್ತದೆ. ಮೆದುಳನ್ನು ಪ್ರಬಲವಾಗಿಸಲು ಅದಕ್ಕೆ ಸವಾಲುಗಳನ್ನು ಒಡ್ಡುವುದು ಅನಿವಾರ್ಯ. ಅದಕ್ಕಾಗಿ ಹೊಸ ಹೊಸ ಕಲಿಕೆಯನ್ನು ಮೂಡಿಸಿಕೊಳ್ಳಬೇಕು. ಹೊಸ ಕೌಶಲ್ಯವನ್ನು ಕಲಿಯುವುದರಿಂದ ಮೆಮೊರಿ ಸಾಮರ್ಥ್ಯ ಹೆಚ್ಚುತ್ತದೆ. ಅದಕ್ಕಾಗಿ ಹೊಸ ಸಂಗೀತ, ಭಾಷೆ, ಆಟ, ಕಲಿಯಿರಿ. ಚಿತ್ರಕಲೆ, ಕುಂಬಾರಿಕೆ, ಕಸೂತಿಯಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಸುಡೋಕು, ಚೆಸ್‌ನಂತಹ ಮಾನಸಿಕ ಆಟಗಳನ್ನು ಆಡಿ. ಹೊಸ ಶೈಲಿಯ ನೃತ್ಯ ಕಲಿಯಿರಿ. 
ಪುನರಾವರ್ತಿಸಿ ಮತ್ತು ಹಿಂಪಡೆಯಿರಿ : ನೀವು ಕಲಿತ ಹೊಸ ಮಾಹಿತಿಯ ತುಣುಕೊಂದನ್ನು ಪದೇ ಪದೇ ನೆನಪಿಸಿಕೊಳ್ಳುತ್ತಿರಿ. ಅಂದರೆ ಕಲಿಕೆಯನ್ನು ಪುನರಾವರ್ತಿಸಿದರೆ ಅದು ಮಾನಸಿಕವಾಗಿ ದಾಖಲಿಸಲ್ಪಡುತ್ತದೆ. ಕೇಳಿದ್ದನ್ನು ವಾಕ್ಯದ ರೂಪದಲ್ಲಿ ದಾಖಲಿಸಿ ಮತ್ತು ಅದನ್ನು ಪದೇ ಪದೇ ಗಟ್ಟಿಯಾಗಿ ಓದಿ. ನಂತರ ಪುನರಾವರ್ತನೆಯನ್ನು ಸರಳಗೊಳಿಸಿ. ಹೀಗೆ ಗಳಿಸಿಕೊಂಡ ಕಲಿಕೆಯನ್ನು ಆಗಾಗ ನೆನಪಿಸಿಕೊಂಡು ಬಳಸಿ. ಕಲಿಕೆಯನ್ನು ಒರೆಗೆ ಹಚ್ಚಿ. ಪುನರಾವರ್ತಿತ ಅಭ್ಯಾಸದಿಂದ ಅರ್ಥಪೂರ್ಣ ಕಲಿಕಾ ಅನುಭವ ಸೃಷ್ಟಿಯಾಗುತ್ತದೆ. 
ಸಂಕ್ಷೇಪಣಗಳನ್ನು ಬಳಸಿ : ಕಲಿಕೆ ಸರಳವಾಗಲು ಸಂಕೇತಿಕರಣ ಮತ್ತು ಸಂಕ್ಷೇಪಿಕರಣಗಳು ಅಗತ್ಯ. ಧೀರ್ಘವಾದ ಕಲಿಕೆಯನ್ನು ಹೀಗೆ ಸಂಕೇತಿಕರಣ/ ಸಂಕ್ಷೇಪಿಸುವುದರಿಂದ ಕಲಿಕೆ ಶಾಶ್ವತವಾಗುತ್ತದೆ. ಹಾಡುಗಳು/ಪ್ರಾಸಗಳ ರೂಪದಲ್ಲಿ ಕಲಿಕಾಂಶವನ್ನು ಸಂಕೇತಿಕರಿಸುವುದರಿಂದ ಜ್ಞಾಪಕ ಶಕ್ತಿ ವೃದ್ದಿಸುತ್ತದೆ. 
ಚಂಕ್ : ಹೊಸದಾಗಿ ಕಲಿತ ಮಾಹಿತಿಯನ್ನು ಗುಂಪುಗಳನ್ನಾಗಿ ವಿಂಗಡಿಸುವ ಪ್ರಕ್ರಿಯೆಯೇ ಚಂಕ್. ಉದಾಹರಣೆಗೆ ನಿಮ್ಮ ಆಧಾರ್ ಸಂಖ್ಯೆಯು 12 ಅಂಕಿಗಳನ್ನು ಒಳಗೊಂಡಿದೆ. ಇವುಗಳನ್ನು ಜ್ಞಾಪಕದಲ್ಲಿಡುವುದು ಕಷ್ಟ. ಆಧಾರ್‌ನ ಮುದ್ರಿತ ಪ್ರತಿಯಲ್ಲಿ ನೀಡಿದಂತೆ ನಾಲ್ಕಂಕಿಯ ಗುಂಪುಗಳನ್ನು ನೆನಪಿಟ್ಟುಕೊಳ್ಳುವುದು ಸುಲಭ. ಹೀಗೆ ಪ್ರತೀ ಕಲಿಕೆಯನ್ನು ನಿರ್ದಿಷ್ಟ ಗುಂಪುಗಳನ್ನಾಗಿ ವಿಂಗಡಿಸಿದರೆ ನೆನೆಪಿಟ್ಟುಕೊಳ್ಳುವುದು ಸುಲಭವಾಗುತ್ತದೆ. 
ಇಂದ್ರಿಯಗಳನ್ನೂ ಬಳಸಿ : ಮೆಮೊರಿ ಉಳಿಸುವ ಮತ್ತೊಂದು ತಂತ್ರವೆAದರೆ ಇಂದ್ರಿಯಗಳ ಬಳಕೆ. ಮಾಹಿತಿಗಳನ್ನು ಬಣ್ಣ, ಅಭಿರುಚಿ ಮತ್ತು ವಾಸನೆಗಳ ಆಧಾರದ ಮೇಲೆ ಇಂದ್ರಿಯಗಳ ಸಹಾಯದಿಂದ ಸಂಗ್ರಹಿಸಿದರೆ ಬೇಗನೆ ಮರೆಯುವುದಿಲ್ಲ. ಆದ್ದರಿಂದ ಮಾಹಿತಿ ಸಂಗ್ರಹಣೆಗೆ ಇಂದ್ರಿಯಗಳನ್ನು ಬಳಸುವುದು ಒಂದು ತಂತ್ರಗಾರಿಕೆಯಾಗಿದೆ.
ಮಾನಸಿಕ ಸೋಮಾರಿತನ ಬೇಡ : ಇತ್ತೀಚಿನ ಆಧುನಿಕ ತಂತ್ರಜ್ಞಾನವು ನಮ್ಮನ್ನು ಮಾನಸಿಕ ಸೋಮಾರಿಗಳನ್ನಾಗಿಸುತ್ತದೆ. ಸಣ್ಣ ಸಣ್ಣ ಲೆಕ್ಕಾಚಾರಕ್ಕೂ ಕ್ಯಾಲ್ಕುಲೇಟರ್ ಮೊರೆಹೋಗುವುದು, ಚಿಕ್ಕ ಚಿಕ್ಕ ಪ್ರಶ್ನೆಗಳಿಗೆ ಉತ್ತರವನ್ನು ಗೂಗಲ್‌ನಲ್ಲಿ ಹುಡುಕುವುದು ಸಾಮಾನ್ಯವಾಗಿದೆ. ಪ್ರಶ್ನೆಗೆ ಉತ್ತರ ಅಥವಾ ಲೆಕ್ಕಾಚಾರಗಳಿಗೆ ಪರಿಹಾರವನ್ನು ಹಿಂದಿನ ಕಲಿಕೆಯ ಆಧಾರದ ಮೇಲೆ ಕಂಡುಕೊಳ್ಳಲು ಪ್ರಯತ್ನಿಸಬೇಕು. ಮೆದುಳಿನಲ್ಲಿ ಸಂಗ್ರಹವಾದ ಮಾಹಿತಿಯನ್ನು ಹಿಂಪಡೆಯಲು ಪ್ರಯತ್ನಿಸಬೇಕು. ಇದರಿಂದ ಮೆದುಳಿನ ನರವ್ಯೂಹದ ಹಾದಿಗಳನ್ನು ಬಲಪಡಿಸಲು ಸಹಾಯವಾಗುತ್ತದೆ.
ಜಿಪಿಎಸ್‌ಗೆ ಕಡಿವಾಣ ಹಾಕಿ : ಗೊತ್ತಿಲ್ಲದ ಪ್ರದೇಶದ ಹುಡುಕಾಟಕ್ಕಾಗಿ ಜಿಪಿಎಸ್ ಉತ್ತಮ ತಂತ್ರಜ್ಞಾನ. ಆದರೆ ಇದರ ಬಳಕೆಗೆ ಆದಷ್ಟೂ ಕಡಿವಾಣ ಹಾಕುವುದು ಉತ್ತಮ. ಜಿಪಿಎಸ್ ಬಳಕೆಯು ಮೆದುಳಿನ ಹಿಪ್ಪೋಕಾಂಪಸ್‌ನ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತದೆ. ಹಿಪ್ಪೋಕಾಂಪಸ್ ತಾತ್ಕಾಲಿಕ ಮೆಮೊರಿ ಸಂಗ್ರಾಹಕವಾಗಿದ್ದು, ಇದು ತಾತ್ಕಾಲಿಕ ಮೆಮೊರಿಯನ್ನು ಧೀರ್ಘಕಾಲಿಕ ಮೆಮೊರಿಯನ್ನಾಗಿ ಪರಿವರ್ತಿಸುವ ಕಾರ್ಯ ಮಾಡುತ್ತದೆ. ಜಿಪಿಎಸ್‌ನಂತಹ ತಂತ್ರಜ್ಞಾನದ ಬಳಕೆಯು ತಾತ್ಕಾಲಿಕ ಮೆಮೊರಿಯನ್ನು ಹಾಳುಮಾಡುತ್ತವೆ. ಗೊತ್ತಿರದ ಪ್ರದೇಶಕ್ಕೆ ಮೊದಲ ಬಾರಿಗೆ ಹೋಗುವಾಗ ಜಿಪಿಎಸ್ ಬಳಸಿದರೆ ತಪ್ಪೇನಿಲ್ಲ. ವಾಪಾಸು ಬರುವಾಗಲೂ ಅಥವಾ ಪದೇ ಪದೇ ಅದೇ ಪ್ರದೇಶಕ್ಕೆ ಹೋದಾಗಲೂ ಅದರ ಬಳಕೆಗೆ ಕಡಿವಾಣ ಹಾಕಲೇಬೇಕು.
ಕಾರ್ಯನಿರತ ವೇಳಾಪಟ್ಟಿ ಇರಲಿ : ಸದಾ ಕಾರ್ಯನಿರತವಾಗಿರಲು ವೇಳಾಪಟ್ಟಿ ಅಗತ್ಯ. ಸಾಮಾನ್ಯವಾಗಿ ಓದಲು ಮಾತ್ರ ವೇಳಾಪಟ್ಟಿ ತಯಾರಿಸುವುದು ವಾಡಿಕೆ. ಇದರ ಬದಲಾಗಿ ಇಡೀ ದಿನದ ವೇಳಾಪಟ್ಟಿ ತಯಾರಿಸಿ ಅದರಂತೆ ಕಾರ್ಯನಿರವಾಗಿರಲು ಪ್ರಯತ್ನಿಸಿ. ಬಿಡುವಿಲ್ಲದ ವೇಳಾಪಟ್ಟಿ ಉತ್ತಮ ಜ್ಞಾನವನ್ನು ಕಾಪಾಡುತ್ತದೆ ಎಂಬ ಅಂಶ ಅಧ್ಯಯನಗಳಿಂದ ಸಾಬೀತಾಗಿದೆ. 
ವ್ಯವಸ್ಥಿತವಾಗಿರಲಿ : ಕಲಿಕೆಗೆ ಸಂಬಂಧಿಸಿದ ನಿಮ್ಮ ಮಾಹಿತಿಗಳು ವ್ಯವಸ್ಥಿತವಾಗಿರಲಿ. ವಿವಿಧ ಮೂಲಗಳ ಮಾಹಿತಿಯನ್ನು ವ್ಯವಸ್ಥಿತವಾಗಿ ಜೋಡಿಸಿಟ್ಟುಕೊಳ್ಳುವುದು ನೆನಪಿನ ಸಂಭವನೀಯತೆಯನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ಕಲಿಕೆಯ ಪರಿಶೀಲನಾ ಪಟ್ಟಿಗಳನ್ನು ತಯಾರಿಸಿಕೊಳ್ಳಿ.
ನಿಯಮಿತ ವೇಳೆಯಲ್ಲಿ ನಿದ್ದೆ ಮಾಡಿ : ಪ್ರತಿರಾತ್ರಿಯೂ ನಿಯಮಿತ ವೇಳೆಗೆ ಮಲಗಿ, ಬೆಳಿಗ್ಗೆ ನಿಯಮಿತ ವೇಳೆಗೆ ಏಳಲು ಪ್ರಯತ್ನಿಸಿ. ವಾರಾಂತ್ಯಕ್ಕೆ ಬೇಕಿದ್ದರೆ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಬಹುದು. ಮಲಗುವ ಮುನ್ನ ಸೆಲ್‌ಫೋನ್, ಟಿ.ವಿ, ಕಂಪ್ಯೂಟರ್ ಅಥವಾ ಇನ್ಯಾವುದೇ ಪ್ರಕಾಶಮಾನವಾದ ಸ್ಕಿನ್ ನೋಡುವುದನ್ನು ನಿಲ್ಲಿಸಿ. ಸ್ಕಿನ್‌ನಿಂದ ಹೊರಬರುವ ನೀಲಿ ಬೆಳಕು ನಿದ್ರೆಯ ಹಾರ್ಮೊನನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸ್ಮರಣ ಶಕ್ತಿ ಹೆಚ್ಚಳಕ್ಕೆ ನಿಗದಿತ ನಿದ್ರೆ ಮತ್ತು ವಿಶ್ರಾಂತಿ ಅಗತ್ಯ. 
ಆರೋಗ್ಯ ಮತ್ತು ಆಹಾರ : ಉತ್ತಮ ಆರೋಗ್ಯಕ್ಕಾಗಿ ಸಾಧ್ಯವಾದಷ್ಟೂ ಸಸ್ಯ ಆಧಾರಿತ ಆಹಾರಗಳನ್ನು ಬಳಸಿ. ವಿಶೇಷವಾಗಿ ಸೊಪ್ಪು , ತರಕಾರಿಗಳು, ಹಣ್ಣುಗಳು, ಧಾನ್ಯಗಳು, ತೆಂಗಿನೆಣ್ಣೆ, ಮೀನಿನ ಎಣ್ಣೆ(ಓಮೇಗಾ-3) ಬಳಸಿ. ಸಕ್ಕರೆ, ಸಂಸ್ಕರಿಸಿದ ಹಾಗೂ ಪ್ಯಾಕೆಟ್ ಆಹಾರ ಪದಾರ್ಥಗಳು, ಕೆಂಪು ಮಾಂಸ, ಕರಿದ ಆಹಾರಗಳು, ಇವುಗಳನ್ನು ಆದಷ್ಟೂ ದೂರವಿಡಿ. ಕೊಬ್ಬು ಮತ್ತು ಸಕ್ಕರೆಯ ಅಂಶಗಳು ಹಿಪ್ಪೊಕಾಂಪಸ್‌ನ ಸ್ಮರಣೆಯನ್ನು ದುರ್ಬಲಗೊಳಸುತ್ತವೆ ಎಂದು ಸಮೀಕ್ಷೆಗಳಿಂದ ತಿಳಿದುಬಂದಿದೆ.
ದೈಹಿಕ ವ್ಯಾಯಾಮ : ಮೆಮೊರಿ ಸಂಗ್ರಹಕ್ಕೆ ದೈಹಿಕ ವ್ಯಾಯಾಮ ಅತ್ಯಂತ ಅಗತ್ಯವಾಗಿದೆ. ವ್ಯಾಮಾವು ದೇಹಕ್ಕೆ ಅಗತ್ಯವಾದ ಆಮ್ಲಜನಕ ಹಾಗೂ ಪೋಷಕಾಂಶಗಳನ್ನು ಪೂರೈಸುವುದಲ್ಲದೇ ಹಿಪ್ಪೊಕಾಂಪಸ್‌ನ ಜೀವಕೋಶಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಶ್ರಮದಾಯಕವಲ್ಲದ ಕೆಲ ಲಘು ವ್ಯಾಯಾಮಗಳನ್ನು ನಿಯಮಿತವಾಗಿ ಮಾಡುವುದರಿಂದ ಮೆಮೊರಿಯನ್ನು ಹೆಚ್ಚಿಸಬಹುದು.
ಸಾಮಾಜಿಕ ಜೀವನವೂ ಇರಲಿ : ಮಾನವ ಮೂಲತಃ ಸಂಘ ಜೀವಿ. ಮೆಮೊರಿ ಸಂಗ್ರಹಕ್ಕೆ ದೈಹಿಕ ಬೆಂಬಲದ ಅಗತ್ಯವಿರುವಂತೆ ಭಾವನಾತ್ಮಕ ಬೆಂಬಲದ ಅಗತ್ಯವೂ ಇದೆ. ಅದಕ್ಕಾಗಿ ಸುತ್ತಲಿನ ಜನರೊಂದಿಗೆ ಒಂದಷ್ಟು ವೇಳೆ ಕಾಲ ಕಳೆಯುವುದರಿಂದ ಮಾನಸಿಕ ಹಾಗೂ ಭಾವನಾತ್ಮಕ ಬೆಂಬಲ ದೊರೆಯುತ್ತದೆ. 
ಪ್ರಕೃತಿ ಮತ್ತು ಧ್ಯಾನ : ಪ್ರಕೃತಿಯಲ್ಲಿ ಒಂದಿಷ್ಟು ವೇಳೆ ಕಳೆಯುವುದರಿಂದ ಮನಸ್ಸು ಆಹ್ಲಾದಗೊಳ್ಳುತ್ತದೆ. ಹಾಗೆಯೇ ಪ್ರಕೃತಿಯಲ್ಲಿ ಒಂದಿಷ್ಟು ವೇಳೆ ಧ್ಯಾನವೂ ಕೂಡಾ ಮನಸ್ಸನ್ನು ಉಲ್ಲಸಿತವಾಗಿಡುತ್ತದೆ. ಇವೆರಡೂ ಒತ್ತಡವನ್ನು ಕಡಿಮೆ ಮಾಡುವ ಜೊತೆಗೆ ಸ್ಮರಣಶಕ್ತಿ ವೃದ್ದಿಗೆ ಹೆಚ್ಚು ಸಹಾಯ ಮಾಡುತ್ತವೆ.
ಕೊನೆಸಾಲು : ಸ್ಮರಣೆ ಎಂಬುದೊಂದು ಕೌಶಲ್ಯ. ಸತತ ಅಭ್ಯಾಸದಿಂದ ಮಾತ್ರ ಅದನ್ನು ಸುಧಾರಿಸಬಹುದು. ಇಂದಿನ ಚಿಕ್ಕ ಪ್ರಯತ್ನ ನಾಳಿನ ಮಹಾನ್ ಸಾಧನೆ ಆಗುತ್ತದೆ. ನಿಮ್ಮಲ್ಲಿನ ಸಾಮಾನ್ಯ ಸ್ಮರಣಾ ಶಕ್ತಿಯನ್ನು ಉತ್ತಮಪಡಿಸಿಕೊಳ್ಳಲು ನೀವೇ ಪ್ರಯತ್ನಿಸಬೇಕೆ ಹೊರತು ಇತರರು ಅಲ್ಲ.
ಆರ್.ಬಿ.ಗುರುಬಸವರಾಜ

ಫೆಬ್ರವರಿ 2019ರ ಟೀಚರ್ ಮಾಸಪತ್ರಿಕೆಯಲ್ಲಿ ಪ್ರಕಟವಾದ ನನ್ನ ಬರಹ.

ಕಲಿಕಾ ಕೊರತೆಯ ವಾಸ್ತವಾಂಶಗಳು

ಸರ್ಕಾರಿ ಶಾಲಾ ಶಿಕ್ಷಣದ ಗುಣಮಟ್ಟದ ಕುರಿತು ಅನೇಕ ಸರ್ಕಾರೇತರ ಸಂಸ್ಥೆಗಳು ಪ್ರತಿವರ್ಷ ತಮ್ಮದೇ ಆದ ರೀತಿಯ ವರದಿಗಳನ್ನು ಬಿಡುಗಡೆ ಮಾಡುತ್ತಲೇ ಇವೆ. ಇವುಗಳನ್ನು ನೋಡಿದ ಪ್ರತಿಯೊಬ್ಬರಿಗೂ ಸರ್ಕಾರಿ ಶಾಲೆಗಳ ಗುಣಮಟ್ಟದ ಇಷ್ಟೊಂದು ಕೆಟ್ಟದಾಗಿದೆಯಾ? ಎಂಬ ಪ್ರಶ್ನೆ ಮೂಡುತ್ತದೆ. ವಿಶೇಷವಾಗಿ ಪಾಲಕರ ಮನಸ್ಸಿನ ಮೇಲೆ ಇಂತಹ ವರದಿಗಳು ಪರಿಣಾಮ ಬೀರುತ್ತವೆ. ಪರಿಣಾಮವಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ.
ಇಂತಹ ವರದಿಗಳನ್ನು ನೋಡಿದಾಗಲೆಲ್ಲ ಕೆಲವೊಂದಿಷ್ಟು ಪ್ರಶ್ನೆಗಳು ಮೂಡುತ್ತದೆ. ಗುಣಮಟ್ಟವನ್ನು ಅಳೆಯುವ ಮಾನಕಗಳೇನು? ನಿಜವಾದ ಕಲಿಕಾ ಕೊರತೆಯ ಕಾರಣಗಳನ್ನು ಪತ್ತೆ ಹಚ್ಚಲು ಈ ವರದಿಗಳು ಏಕೆ ಪ್ರಯತ್ನಿಸುತ್ತಿಲ್ಲ? ಕೇವಲ ಸರ್ಕಾರಿ ಶಾಲೆಗಳ ಗುಟ್ಟಮಟ್ಟದ ಬಗ್ಗೆ ಮಾತನಾಡುವ ವರದಿಗಳು ಖಾಸಗೀ ಶಾಲೆಗಳ ಗುಣಮಟ್ಟದ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಎಂಬ ಪ್ರಶ್ನೆಗಳು ಮೂಡುತ್ತವೆ. 
 ಕಲಿಕಾ ಕೊರತೆಯ ವರದಿಗಳು ಇದೇ ಮೊದಲೇನಲ್ಲ. ಕಲಿಕಾ ಕೊರತೆಯ ಬಗ್ಗೆ ಈ ಹಿಂದೆ ಸಾಕಷ್ಟು ಬಾರಿ ಪ್ರಸ್ತಾಪಿಸಲಾಗಿದೆ. ಆದರೆ ಫಲಿತಾಂಶದಲ್ಲಿ ಮಾತ್ರ ಯಾವುದೇ ಬದಲಾವಣೆಗಳಾಗುತ್ತಿಲ್ಲ. ಇದಕ್ಕೆ ಮೂಲ ಕಾರಣಗಳನ್ನು ಹುಡುಕುವ ಪ್ರಯತ್ನಗಳಾಗದಿರುವುದೇ ಇದಕ್ಕೆಲ್ಲಾ ಕಾರಣ. 
ಕಲಿಕಾ ಕೊರತೆಯ ಕಾರಣಗಳನ್ನು ಕಂಡುಕೊಳ್ಳುವಲ್ಲಿ ಹಾಗೂ ಅವುಗಳನ್ನು ಪರಿಹರಿಸುವಲ್ಲಿ ಇಂತಹ ವರದಿಗಳು ಹಿಂದೆ ಬಿದ್ದಿವೆ. ಮೂಲ ಕಾರಣಗಳನ್ನು ಮರೆಮಾಚಿ ಕೇವಲ ಕಲಿಕಾ ಕೊರತೆಯನ್ನೇ ಎತ್ತಿ ಹೇಳುತ್ತಿರುವುದು ದುರಂತ. ಕಲಿಕಾ ಕೊರತೆಯ ಮೂಲ ಸಮಸ್ಯೆ ಎಂದರೆ ಗ್ರಾಮೀಣ ಮಕ್ಕಳ ಅನಿಯಮಿತ ಗೈರುಹಾಜರಿ. 
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಜೂನ್-ಜುಲೈ ತಿಂಗಳಲ್ಲಿ ಬಿತ್ತನೆ ಕಾರ್ಯ ಪ್ರಾರಂಭವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಬಿತ್ತನೆ ಕಾರ್ಯಕ್ಕೆ ಕೃಷಿ ಕೂಲಿಗಳ ಸಮಸ್ಯೆ ಹೆಚ್ಚಾಗಿದೆ. ಈ ಸಮಸ್ಯೆ ನಿವಾರಣೆಗೆ ಪಾಲಕರು ಬಿತ್ತನೆ ಹಾಗೂ ಇನ್ನಿತರೇ ಕೃಷಿ ಚಟುವಟಿಕೆಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವುದು ಸಾಮಾನ್ಯವಾಗುತ್ತಿದೆ. ಇದರಿಂದಾಗಿ ಶಾಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕಾಗಿದ್ದ ಆ ಮಕ್ಕಳು ಕೃಷಿ ಚಟುವಟಿಕೆಗಳಲ್ಲಿ ತೊಡಗುವುದರಿಂದ ಕಲಿಕಾ ಕೊರತೆಯನ್ನು ಅನುಭವಿಸುತ್ತಾರೆ. ಈ ಪ್ರಕ್ರಿಯೆ ಕೇವಲ ಜೂನ್ ಜುಲೈ ತಿಂಗಳಿಗೆ ಮಾತ್ರ ಸೀಮಿತವಲ್ಲ. ಸುಗ್ಗಿಯವರೆಗೂ ಮುಂದುವರೆಯುತ್ತದೆ. ಅಲ್ಲದೇ ಕೆಲ ಗ್ರಾಮೀಣ ಭಾಗಗಳಲ್ಲಿ ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಪಾಲಕರು ಮಕ್ಕಳೊಂದಿಗೆ ಮರ‍್ನಾಲ್ಕು ತಿಂಗಳುಗಳ ಕಾಲ ದುಡಿಮೆ ಅರಸಿ ವಲಸೆ ಹೋಗುತ್ತಾರೆ. ಕೆಲವು ವೇಳೆ ಚಿಕ್ಕ ಮಕ್ಕಳ ಪಾಲನೆ ಹಾಗೂ ಮನೆಕೆಲಸಗಳಿಗಾಗಿ ಶಾಲಾ ಮಕ್ಕಳನ್ನೇ ಬಳಸಿಕೊಳ್ಳುತ್ತಾರೆ. ಇದರಿಂದ ಮಕ್ಕಳ ಶೈಕ್ಷಣಿಕ ಕಲಿಕಾ ದಿನಗಳು ಹಾಳಾಗುತ್ತಿವೆ. ಇಂತಹ ಅನಿಯಮಿತ ಗೈರುಹಾಜರಿ ಮಕ್ಕಳ ಕಲಿಕೆಯ ಮೇಲೆ ನೇರ ಪರಿಣಾಮ ಬೀರುತ್ತದೆ. 
ಇಂತಹ ಮಕ್ಕಳನ್ನು ಶಾಲೆಗೆ ಕರೆತರುವುದೇ ಶಿಕ್ಷಕರ ದೊಡ್ಡ ಸವಾಲಾಗುತ್ತಿದೆ. ಪಾಲಕರ ಭೇಟಿಗೆಂದು ಮನೆಗೆ ಹೋದಾಗ ಬಹುತೇಕ ಸಮಯದಲ್ಲಿ ಪಾಲಕರು ಲಭ್ಯ ಇರುವುದಿಲ್ಲ. ಇನ್ನು ಕೆಲ ಪಾಲಕರು ಸಮಯದ ಅಭಾವದಿಂದಲೋ ಅಥವಾ ಶಿಕ್ಷಣದ ಬಗೆಗಿನ ನಿರ್ಲಕ್ಷದಿಂದಲೋ ಶಾಲೆಯತ್ತ ಸುಳಿಯುವುದೇ ಇಲ್ಲ.  ಇಂತಹ ಎಲ್ಲಾ ಮಕ್ಕಳ ಮನೆಗಳಿಗೆ ಭೇಟಿ ನೀಡಿ ವಾಪಾಸಾಗುವ ವೇಳೆಗೆ ಶಿಕ್ಷಕರ ದೈಹಿಕ ಹಾಗೂ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಇತ್ತ ಶಾಲೆಯಲ್ಲಿದ್ದ ಮಕ್ಕಳ ಕಲಿಕೆಯೂ ಕುಂಟಿತ, ಅತ್ತ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರುವುದೂ ವಿಫಲ. ಇಂತಹ ಅನೇಕ ವಿಫಲ ಪ್ರಯತ್ನಗಳ ನಡುವೆ ಕಲಿಕೆ ಸೊರಗುವುದು ಸಹಜ. ವಿಫಲ ಪ್ರಯತ್ನಗಳ ನಡುವೆಯೂ ಅಲ್ಲಲ್ಲಿ ಕೆಲವು ಶಾಲೆ/ಶಿಕ್ಷಕರು ಉತ್ತಮ ಪ್ರಯತ್ನಗಳು ಮರುಭೂಮಿಯ ಓಯಸಿಸ್‌ನಂತೆ ದಾರಿದೀಪಗಳಾಗುತ್ತಿವೆ. ಇಂತಹ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನಗಳಾಗಬೇಕಿರುವುದು ಅನಿವಾರ್ಯ. 
ಅನಿಮಿತ ಗೈರುಹಾಜರಾದ ಮಕ್ಕಳಿಗೆ ಪ್ರತ್ಯೇಕ ತರಗತಿಗಳನ್ನು ತೆಗೆದುಕೊಂಡು ಕಲಿಸಲು ಶಿಕ್ಷಕರಿಗೆ ತೊಂದರೆಯಾಗುತ್ತಿದೆ. ಇರುವ ಸಮಯಾವಕಾಶದಲ್ಲಿ ಹಲವಾರು ಕಾರ್ಯಗಳನ್ನು ನಿಭಾಯಿಸಬೇಕಾದ ಶಿಕ್ಷಕರಿಗೆ ಕೆಲಸದ ಒತ್ತಡ ಸಹಜ. ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ಕೇವಲ ಕಾರ್ಯಕ್ರಮಗಳಾಗಿ ಜಾರಿಯಲ್ಲಿರುವ ಅನೇಕ ಯೋಜನೆಗಳು ಬೋಧನಾ ಕಲಿಕಾ ಅವಧಿಯನ್ನು ಮೊಟಕುಗೊಳಿಸಿವೆ. 
ಹೆಚ್ಚಿನ ಗ್ರಾಮೀಣ ಶಾಲೆಗಳು ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಕಲಿಕೆ ಉತ್ತಮವಾಗಲು ತರಗತಿಗೊಬ್ಬ ಶಿಕ್ಷಕ ಇರಬೇಕೆನ್ನುವುದು ಶಿಕ್ಷಣ ತಜ್ಞರ ಅಭಿಪ್ರಾಯ. ಆದರೆ ಇಂದು ಬಹುತೇಕ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಶಾಲೆಗೆ ಒಬ್ಬರು ಅಥವಾ ಇಬ್ಬರು ಶಿಕ್ಷಕರು ಇದ್ದಾರೆ. ಎನ್.ಸಿ.ಎಫ್-2005, ಆರ್.ಟಿ.ಇ-2009 ಹಾಗೂ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ(ಸಿ.ಸಿ.ಇ) ಪ್ರಕಾರ ಶಿಕ್ಷಕ ಮತ್ತು ಮಕ್ಕಳ ಅನುಪಾತ 1:30 ಇರಬೇಕೆಂದು ಸ್ಪಷ್ಟ ನಿರ್ದೇಶನಗಳಿವೆ. ಪ್ರಸ್ತುತ ನಮ್ಮ ರಾಜ್ಯ ಮಟ್ಟದ ಅಂಕಿ-ಅAಶಗಳನ್ನು ಗಮನಿಸಿದರೆ ಇದೇ ಅನುಪಾತ ಇದೆ. ಆದರೆ ವಾಸ್ತವಾಂಶ ಇದಕ್ಕಿಂತ ಭಿನ್ನವಾಗಿದೆ. ಕೆಲವು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಅಧಿಕವಾಗಿದ್ದು ಶಿಕ್ಷಕರ ಕೊರತೆ ಇದೆ. ಕೆಲವು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದು ಶಿಕ್ಷಕರ ಸಂಖ್ಯೆ ಹೆಚ್ಚಿದೆ. ಕಿರಿಯ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಈ ಅನುಪಾತದಂತೆ ಕಾರ್ಯ ನಿರ್ವಹಿಸಲು ಕೆಲವು ತಾಂತ್ರಿಕ ದೋಷಗಳಿವೆ. ಗ್ರಾಮೀಣ ಭಾಗಗಳಲ್ಲಿ ಈ ಅನುಪಾತದಲ್ಲಿ ತುಂಬಾ ವ್ಯತ್ಯಾಸಗಳಿವೆ.
ಇಂದು ಶಿಕ್ಷಕರ ಕಾರ್ಯಭಾರ ಹೆಚ್ಚಾಗಿದ್ದು, ಪ್ರತೀ ಶಾಲೆಯಲ್ಲಿ ಕನಿಷ್ಠ ಒಬ್ಬ ಶಿಕ್ಷಕರು ದಾಖಲಾತಿ ನಿರ್ವಹಣೆ, ಬಿಸಿಯೂಟ/ಕ್ಷೀರಭಾಗ್ಯ, ಕಛೇರಿ ಪತ್ರಗಳ ಸರಬರಾಜು, ಪೋಷಕರು/ವಿದ್ಯಾರ್ಥಿಗಳ ದಾಖಲಾತಿ ನಿರ್ವಹಣೆ, ಇಲಾಖೆ ಹಾಗೂ ಇಲಾಖೇತರ ಸಭೆಗಳು ಇತ್ಯಾದಿ ಕಾರ್ಯಗಳಿಗೆಂದು ಅಲೆದಾಡುತ್ತಾ ಒಟ್ಟಾರೆ ಆಡಳಿತ ನಿರ್ವಹಣೆಗೆ ಮೀಸಲಾಗುತ್ತಿದ್ದಾರೆ. ಇಬ್ಬರು ಶಿಕ್ಷಕರು ಇರುವ ಶಾಲೆಗಳಲ್ಲಿ ಒಬ್ಬರು ಆಡಳಿತಕ್ಕೇ ಮೀಸಲಾದರೆ ಉಳಿದ ಒಬ್ಬರೇ ಶಿಕ್ಷಕರು, ಐದು ತರಗತಿಗಳ 21 ವಿಷಯಗಳ ಭೋದನೆ ಹಾಗೂ ಅದಕ್ಕೆ ಸಂಬAಧಿಸಿದ ದಾಖಲೆಗಳನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಆಗ ಶಿಕ್ಷಣದ ಗುಣಮಟ್ಟ ಎಂಬುದು ಕೇವಲ ಕಾಗದದ ಸರಕಾಗುತ್ತದೆ. ನಮ್ಮ ರಾಜ್ಯದ ಪ್ರಾಥಮಿಕ ಶಿಕ್ಷಣ ಗಟ್ಟಿಗೊಳ್ಳಲು ತರಗತಿಗೊಬ್ಬ ಶಿಕ್ಷಕರನ್ನು ನೇಮಿಸಿದರೆ ಮಾತ್ರ ಉತ್ತಮ ಗುಟ್ಟಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ.  
ಇನ್ನು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿಯೂ ಇದಕ್ಕಿಂತ ಭಿನ್ನವಾದ ಸಮಸ್ಯೆಗಳಿವೆ. ಎಂಟನೇ ತರಗತಿವರೆಗಿನ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರು ಇಲ್ಲದಿರುವುದು ಕಲಿಕಾ ಕೊರತೆಗೆ ಮೂಲ ಕಾರಣವಾಗಿದೆ. ಅಲ್ಲದೇ ಅಲ್ಲಿಯೂ ಮಕ್ಕಳ ಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ಶಿಕ್ಷಕರ ಸಂಖ್ಯೆ ಕಡಿಮೆ ಇದೆ. ಐದಾರು ಜನ ಶಿಕ್ಷಕರು ಎಂಟು ತರಗತಿಗಳ ಎಲ್ಲಾ ವಿಷಯಗಳನ್ನು ಬೋಧಿಸಿಕೊಂಡು ಇಲಾಖೆಯ ಇನ್ನಿತರೇ ಕಾರ್ಯಚಟುವಟಿಕೆಗಳನ್ನು ಪೂರೈಸುವುದು ನಿಜಕ್ಕೂ ತ್ರಾಸದಾಯಕ. ಇಂತಹ ಸಂದರ್ಭಗಳಲ್ಲಿ ಕಾರ್ಯದ ಒತ್ತಡದಿಂದ ಮಕ್ಕಳಿಗೆ ವೈಯಕ್ತಿಕ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಬಹುತೇಕ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ  ಕನಿಷ್ಠ ವಿಜ್ಞಾನ ಪ್ರಯೋಗಾಲಯಗಳು ಇಲ್ಲವೇ ಇಲ್ಲ. ಮಕ್ಕಳ ಜ್ಞಾನವೃದ್ದಿಗೆ ಪೂರಕವಾದ ಸುಸಜ್ಜಿತವಾದ ಗ್ರಂಥಾಲಯ ಹಾಗೂ ವಾಚನಾಲಯಗಳ ಕೊರತೆ ಇದೆ. ಬಹುತೇಕ ಶಾಲೆಗಳ ಗ್ರಂಥಾಲಯಗಳಲ್ಲಿ ಪುಸ್ತಕಗಳಿವೆ. ಆದರೆ ಕಾರಣಾಂತರಗಳಿಂದ ಅವು ಮಕ್ಕಳಿಗೆ ಓದಲು ದೊರೆಯುತ್ತಿಲ್ಲ. ಹೀಗಾಗಿ ಕಲಿಕಾ ಕೊರತೆ ಉಂಟಾಗುವುದು ಸಹಜ. ಇಂತಹ ಅನೇಕ ವಿಫಲ ಪ್ರಯತ್ನಗಳು ಶಿಕ್ಷಕರ ಮನೋಸ್ಥಿತಿಯನ್ನು ಕುಗ್ಗಿಸುವ ಪ್ರೇರಕಾಂಶಗಳಾಗಿರುವುದು ಶೋಚನೀಯ.
ಕಲಿಕಾ ಕೊರತೆಗೆ ಸಂಬಂಧಿಸಿದ ನಿಜವಾದ ಕಾರಣಗಳನ್ನು ಕಾರಣಗಳನ್ನು ಪತ್ತೆ ಹಚ್ಚಿ ಅವುಗಳನ್ನು ಪರಿಹರಿಸುವ ಪ್ರಯತ್ನಗಳಾಗಬೇಕು. ಅದರ ಜೊತೆಗೆ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರತಿ ವಿಷಯಕ್ಕೂ ಪ್ರತ್ಯೇಕವಾದ ಪ್ರಯೋಗಾಲಯ ವ್ಯವಸ್ಥೆಯಾಗಬೇಕು. ಅಂದರೆ ಈಗಿರುವ ತರಗತಿ ಕೊಠಡಿಗಳನ್ನೇ ವಿಷಯವಾರು ಪ್ರಯೋಗಾಲಯಗಳಾಗಿ ಪರಿವರ್ತಿಸಬೇಕು. ಅಲ್ಲಿಯೇ ವೇಳಾಪಟ್ಟಿಗೆ ಅನುಗುಣವಾಗಿ ತರಗತಿ ನಡೆಯಬೇಕು.  ಇದರಿಂದ ಮಕ್ಕಳಲ್ಲಿ ಕೆಲವು ಕೌಶಲ್ಯಗಳನ್ನು ಗಟ್ಟಿಗೊಳಿಸಲು ಸಾಧ್ಯವಾಗುತ್ತದೆ. ಆಗ ಮಾತ್ರ “ಸ್ಕಿಲ್ ಇಂಡಿಯಾ”ಕ್ಕೆ ನಿಜವಾದ ಅರ್ಥ ಕೊಡಲು ಸಾಧ್ಯವಾದೀತು. 
ಆರ್.ಬಿ.ಗುರುಬಸವರಾಜ ಹೊಳಗುಂದಿ

ಆಸ್ಟ್ರಿಚ್ ಪಾದದ ಜನ/Ostrich footed people

ದಿನಾಂಕ 12-01-2019ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಆಸ್ಟ್ರಿಚ್ ಪಾದದ ಜನ


ಆಫ್ರಿಕಾ ಅಚ್ಚರಿಗಳ ತಾಣ. ಇಡೀ ವಿಶ್ವದಲ್ಲಿಯೇ ವಿಶಿಷ್ಠತೆ ಪಡೆದ ಪ್ರದೇಶ. ಅಲ್ಲಿನ ಅಚ್ಚರಿಗೆ ಅನೇಕ ಕಾರಣಗಳಿವೆ. ಅಂತಹ ಒಂದು ಅಚ್ಚರಿಯೆಂದರೆ ಆಸ್ಟಿçಚ್ ಪಾದದ ಜನಾಂಗ. ಸಾಮಾನ್ಯವಾಗಿ ಮನುಷ್ಯನ ಪಾದಗಳಲ್ಲಿ ತಲಾ ಐದು ಕಾಲ್ಬೆರಳು ಇರುತ್ತವೆ. ಆದರೆ ಆಫ್ರಿಕಾದ ಈ ಜನಾಂಗದ ಪಾದಗಳಲ್ಲಿ ತಲಾ ಎರಡು ಕಾಲ್ಬೆರಳುಗಳಿವೆ. ಆಸ್ಟಿçಚ್ ಪಕ್ಷಿಯ ಪಾದ ಹೋಲುವ ರೀತಿಯ ಪಾದ ಹೊಂದಿದ್ದಾರೆ. 
ಜಿಂಬಾಬ್ವೆಯ ಉತ್ತರಕ್ಕೆ ವಾಸಿಸುವ ಬಾಡ್ವಾನ ಬುಡಕಟ್ಟಿನ ವಡೋಮ ಜನರು ಇಂತಹ ಪಾದಗಳನ್ನು ಹೊಂದಿದವರು. ಜಾಂಜ್ವೆ ನದಿ ಕಣಿವೆಯ ಉರುಗ್ವೆ ಮತ್ತು ಸಿಪೋಲಿಲೋ ಜಿಲ್ಲೆಗಳಲ್ಲಿ ವಡೋಮ ಜನಾಂಗ ವಾಸಿಸುತ್ತಿದೆ. ಈ ವಡೋಮ ಜನಾಂಗದ ಪ್ರತಿ ನಾಲ್ವರಲ್ಲಿ ಒಬ್ಬರು ಆಸ್ಟಿçಚ್ ಪಾದ ಹೊಂದಿದ್ದಾರೆ. ಪ್ರತಿ ಪಾದದಲ್ಲಿ ಮೊದಲ ಮತ್ತು ಕೊನೆಯ ಎರಡು ಬೆರಳುಗಳು ಮಾತ್ರ ಇದ್ದು, ಮಧ್ಯದ ಮೂರು ಬೆರಳುಗಳು ನಾಪತ್ತೆಯಾಗಿವೆ. ಈ ಎರಡೂ ಬೆರಳುಗಳು ಉದ್ದವಾಗಿ ಬೆಳೆದಿದ್ದು, ಒಳಭಾಗಕ್ಕೆ ಬಾಗಿಕೊಂಡಿವೆ.
ಇಂತಹ ಪಾದ ಇವರಿಗೆ ಯಾವುದೇ ತೊಂದರೆ ಆಗಿಲ್ಲ. ಇವರು ಎಲ್ಲರಂತೆ ನಡೆಯಲು ಮತ್ತು ಓಡಲು ಸ್ವಲ್ಪ ತೊಂದರೆ ಅನುಭವಿಸುತ್ತಾರೆ. ಆದರೆ ಇವರು ಎಲ್ಲರಿಗಿಂತ ಸುಲಭವಾಗಿ ಮರಹತ್ತುವ ಸಾಮರ್ಥ್ಯ ಹೊಂದಿದ್ದಾರೆ. ಪರ್ವತ ಪ್ರದೇಶಗಳಲ್ಲಿ ವಾಸಿಸುವ ಇವರು ಪರ್ವತಾರೋಹಣ, ಬೇಟೆ, ಮೀನುಗಾರಿಕೆಗಳಲ್ಲಿ ಪ್ರವೀಣರು. ಜೊತೆಗೆ ಸುಲಭವಾಗಿ ಮರ ಏರುವ ಇವರು ಜೇನು ಮತ್ತು ಹಣ್ಣುಗಳನ್ನು ಕೀಳುವುದವರಲ್ಲಿ ನಿಸ್ಸೀಮರು. ಅಲೆಮಾರಿಗಳಾದ ಇವರನ್ನು ಸರ್ಕಾರವು ಮುಖ್ಯವಾಹಿಸನಿಗೆ ತರಲು ಎಷ್ಟೇ ಶ್ರಮಿಸಿದರೂ ಇದುವರೆಗೂ ಸಾಧ್ಯವಾಗಿಲ್ಲ.
ವೈಜ್ಞಾನಿಕವಾಗಿ ಇದನ್ನು ಎಕ್ಟೊಡಾಕ್ಲೆಟ್ ಎಂದು ವಿಶ್ಲೇಷಿಸಲಾಗಿದೆ. ಇದು ಆಟೋಸೋಮಲ್ ಪ್ರಾಬಲ್ಯದ ಸ್ಥಿತಿಯಾಗಿದ್ದು, ಕ್ರೋಮೋಸೋಮ್-7 ರ ರೂಪಾಂತರದ ಪರಿಣಾಮವಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಡೋಮ ಆಫ್ರಿಕಾದ ಒಂದು ವಿಶೇಷ ಬುಡಕಟ್ಟು ಜನಾಂಗವಾಗಿದ್ದು, ಹೊರಗಿನ ಇನ್ನಿತರೇ ಜನಾಂಗದ ವೈವಾಹಿಕ ಸಂಬAಧ ಇರಿಸಿಕೊಂಡಿಲ್ಲ. ಹಾಗಾಗಿ ಇದೊಂದು ಅನುವಂಶಿಕ ಸ್ಥಿತಿ ಎಂದು ಹೇಳಲಾಗುತ್ತದೆ.
ಆರ್.ಬಿ.ಗುರುಬಸವರಾಜ

ಲೇಡಿ ಟಾರ್ಜನ್ ಜಮುನಾ /Lady Targen Jamuna

ದಿನಾಂಕ 07-01-2019ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಬರಹ.

ಲೇಡಿ ಟಾರ್ಜನ್ ಜಮುನಾ


ಯಾರು ತಮ್ಮ ತೋಳ್ಬಲದಿಂದ ಹೋರಾಡಿ ಎದುರಾಳಿಯನ್ನು ಮಣ್ಣು ಮುಕ್ಕಿಸುತ್ತಾರೋ, ಯಾರು ಗಟ್ಟಿಯಾದ ತೀರ್ಮಾನಗಳನ್ನು ಕೈಗೊಳ್ಳುವ ಮೂಲಕ ಸಾಮಾಜಿಕ ಬದಲಾವಣೆಯನ್ನು ತರುತ್ತಾರೋ, ಅವರೇ ನಿಜವಾದ ನಾಯಕರು. ಯಾರೂ ನಾಯಕರಾಗಿ ಹುಟ್ಟುವುದಿಲ್ಲ. ಬದಲಾಗಿ ಸಾಮಾಜಿಕ ಹೊಣೆಗಾರಿಕೆಗಳನ್ನು ನಿಭಾಯಿಸುವ ಮೂಲಕ ನಾವೇ ನಾಯಕರಾಗಬೇಕು ಎಂಬ ಮಾತನ್ನು ಜಮುನಾ ಅವರು ಸಾಧಿಸಿ ತೋರಿಸಿದ್ದಾರೆ. ಯಾರು ಈ ಜಮುನಾ ? ಅವರು ಮಾಡಿದ ಸಾಧನೆ ಏನು? ಎಂಬ ಪ್ರಶ್ನೆಗಳಿಗೆ ಉತ್ತರವೇ ಈ ಬರಹ.
ಈಕೆಯ ಪೂರ್ಣ ಹೆಸರು ಜಮುನಾ ತುಡು. ಒಡಿಸ್ಸಾದಲ್ಲಿ ಜನಿಸಿದ ಜಮುನಾ ಈಗ ಜಾರ್ಖಂಡ್ ರಾಜ್ಯದ ಪೂರ್ವ ಸಿಂಗ್ಭಾಮ್ ಜಿಲ್ಲೆಯ ಮುತುರ್ಖಮ್ ಗ್ರಾಮದ ನಿವಾಸಿ. 35ರ ಹರೆಯದ ಜಮುನಾ, ತನ್ನ ಗ್ರಾಮದ ಸುತ್ತಲೂ ಇರುವ 50 ಹೆಕ್ಟೇರ್ ಅರಣ್ಯವನ್ನು ಸಂರಕ್ಷಣೆ ಮಾಡುವ ಮೂಲಕ ‘ಲೇಡಿ ಟಾರ್ಜನ್’ ಎಂದೇ ಹೆಸರುವಾಸಿಯಾಗಿದ್ದಾಳೆ. ಕಳೆದ 18 ವರ್ಷಗಳಿಂದ ಅರಣ್ಯ ಮಾಫಿಯಾದ ಗ್ಯಾಂಗ್‌ಗೆ ಟಾರ್ಜನ್ ರೂಪದಲ್ಲಿ ಸಿಂಹಸ್ವಪ್ನವಾಗಿದ್ದಾಳೆ. 
ಪ್ರಕೃತಿಯೇ ದೇವರೆಂದು ಭಾವಿಸಿದ್ದ ಗೌರವಯುತ ಕುಟುಂಬದಲ್ಲಿ 1998ರಲ್ಲಿ ಜಮುನಾ ವಿವಾಹವಾದಳು. ಸಹಜವಾಗಿ ಪ್ರೀತಿ ವಿಶ್ವಾಸಗಳಿಂದ ಜೀವನ ಸಾಗಿತ್ತು. ಪ್ರಾರಂಭದಲ್ಲಿ ತನ್ನ ಕುಟುಂಬದವರೊAದಿಗೆ ಗ್ರಾಮದ ಪಕ್ಕದಲ್ಲಿನ ಅರಣ್ಯಕ್ಕೆ ತೆರಳಿ ಉರುವಲಿಗಾಗಿ ಕಟ್ಟಿಗೆ ಸಂಗ್ರಹಿಸಿಕೊAಡು ಬರುತ್ತಿದ್ದಳು. ಹೀಗೆ ಸಂಗ್ರಹಿಸಲು ಹೋದಾಗ ಪ್ರತಿದಿನ ಮರಗಳನ್ನು ಕಡಿದು ನಾಟಾಗಳನ್ನು ಕಳ್ಳತನದಿಂದ ಸಾಗಿಸುತ್ತಿದ್ದ ಬಗ್ಗೆ ವಿಷಯ ತಿಳಿಯಿತು. ಇದು ಅವಳಿಗೆ ಸರಿ ಎನಿಸಲಿಲ್ಲ. ಇಂತಹ ಅಗಾದ ಸಂಪತ್ತನ್ನು ಹೊಂದಿದ ಸುಂದರ ಕಾಡು ನಾಶವಾಗುತ್ತ ಹೋದರೆ ಮುಂದೊಂದು ದಿನ ಸಂಪೂರ್ಣವಾಗಿ ಇಲ್ಲದಂತಾಗುತ್ತದೆ ಎಂಬ ಕಳವಳ ಮೂಡಿತು. ಇದಕ್ಕೆ ಏನಾದರೂ ಉಪಾಯ ಹೂಡಲೇಬೇಕು ಎಂದುಕೊAಡಳು. ಆಗ ಮನಸ್ಸಿನಲ್ಲಿ ಮೂಡಿದ ಕನಸನ್ನು ಸಾಕಾರಗೊಳಿಸಲು ಸನ್ನಧಳಾದಳು.
ಹೋರಾಟದ ಮೊದಲ ಹೆಜ್ಜೆ
ಮಹಿಳೆಯರ ಸಹಕಾರದಿಂದ ಕಾಡನ್ನು ಸಂರಕ್ಷಿಸುವ ಯೋಜನೆ ರೂಪಿಸಿದಳು. ಅದಕ್ಕಾಗಿ ಗ್ರಾಮದ ಮಹಿಳೆಯರೊಂದಿಗೆ ಸಭೆ ನಡೆಸಿದಳು. ಪ್ರಾರಂಭದಲ್ಲಿ ಬಹಳ ಜನರು ಈ ಯೋಜನೆಯನ್ನು ತಿರಸ್ಕರಿಸಿದರು. ಯಾರಿಗೂ ಇಲ್ಲದ ಉಸಾಬರಿ ನಮಗ್ಯಾಕೆ ಎಂದರು. ಕುಟುಂಬದ ಸದಸ್ಯರೂ ಸಹ ಇದನ್ನು ನಿರಾಕರಿಸಿದರು. ಆದರೆ ಸಾಮಾಜಿಕ ಹೊಣೆಗಾರಿಕೆಯನ್ನು ಹೋರುವ ಬದ್ದತೆ ಜಮುನಾಳಲ್ಲಿ ಅಗಾಧವಾಗಿತ್ತು. ಮನದಲ್ಲಿ ಸಕಾರಾತ್ಮಕ ಯೋಚನೆಗಳು ತೇಲಾಡುತ್ತಿದ್ದವು. ಛಲಗಾತಿಯಾದ ಜಮುನಾ ಪುನಃ ಪುನಃ ಮಹಿಳೆಯರೊಂದಿಗೆ ಚರ್ಚೆ ಮಾಡಿ ಅವರನ್ನು ಹುರಿದುಂಬಿಸಿದಳು. ಇವಳ ಮಾತಿನ ಮೋಡಿಗೆ ಐದಾರು ಮಹಿಳೆಯರು ಕೈಜೋಡಿಸಿದರು. 
ಯೋಜನೆಯಂತೆ ಪ್ರತಿದಿನ ಕಾಡಿನ ಭಾಗವನ್ನು ಸುತ್ತಲು ನಿರ್ಧರಿಸಿದರು. ಬೀಸುಕೋಲು, ಬಿಲ್ಲು ಬಾಣ, ಹರಿತವಾದ ಆಯುಧಗಳು, ನೀರಿನ ಬಾಟಲ್ ಜೊತೆಗೆ ಕೆಲವು ನಾಯಿಗಳನ್ನು ಕರೆದುಕೊಂಡು ಕಾಡು ಸುತ್ತಲು ಹೊರಟರು. ಮರ ಕಡಿಯುವವರ ಬಳಿ ಸಾಗಿ ಮರ ಕಡಿಯುವುದು ತಪ್ಪೆಂದು ತಿಳುವಳಿಕೆ ಹೇಳುತ್ತಿದ್ದರು. ಕೇಳದಿದ್ದರೆ ಅವರೊಂದಿಗೆ ಮುಖಾಮುಖಿ ಹೋರಾಟಕ್ಕೆ ಇಳಿಯುತ್ತಿದ್ದರು. ಮಹಿಳೆಯರ ಸಂಘಟಿತ ಹೋರಾಟಕ್ಕೆ ಹೆದರಿದ ಮರಗಳ್ಳರು ಅಲ್ಲಿಂದ ಕಾಲುಕೀಳುತ್ತಿದ್ದರು. ಹೀಗೆ ಪ್ರತಿದಿನವೂ ಎರಡು ಮೂರು ಬಾರಿ ತಂಡದೊಂದಿಗೆ ಕಾಡು ಸುತ್ತುವುದು ಮುಂದುವರೆಯಿತು.
ಕಾಡಿನಿಂದ ಕಡಿದ ಮರಗಳನ್ನು ಜಾರ್ಖಂಡ್‌ನ ರೈಲುನಿಲ್ದಾಣದ ಮೂಲಕ ರಫ್ತು ಮಾಡುತ್ತಿದ್ದರು. ಇದನ್ನು ತಡೆಯುವಂತೆ ಜಮುನಾ ರೈಲು ಅಧಿಕಾರಿಗಳಿಗೆ ಪತ್ರ ಬರೆದಳು.. ಅವರಿಂದ ಯಾವುದೇ ಸಹಾಯ ಸಿಗಲಿಲ್ಲ. ಏಕೆಂದರೆ ಅವರೂ ಅದರಲ್ಲಿ ಶಾಮೀಲಾಗಿದ್ದರು. ದಿನೇ ದಿನೇ ಹೆಚ್ಚಿದ ಜಮುನಾಳ ಕಾಟದಿಂದ ಜಂಗಲ್ ಮಾಫಿಯಾ ತಂಡ ತತ್ತರಿಸಿತು. ಕೋಪಗೊಂಡ ಮಾಫಿಯಾ ತಂಡ ಜಮುನಾ ತಂಡಕ್ಕೆ ಬೆದರಿಕೆ ಹಾಕಲು ಪ್ರಯತ್ನಿಸಿತು. ಯಾವ ಬೆದರಿಕೆಗೂ ಬಗ್ಗದ ಜಮುನಾ ಮತ್ತಷ್ಟು ಉತ್ಸಾಹ ಹಾಗೂ ಕೆಚ್ಚೆದೆಯಿಂದ ಸಮಸ್ಯೆಯನ್ನು ಎದುರಿಸಲು ಸಜ್ಜಾದಳು. 
ಮತ್ತಷ್ಟು ಬೆಂಬಲ
ಇವರ ಹೋರಾಟದ ಸ್ವರೂಪ ಗಮನಿಸಿದ ಹಳ್ಳಿಯ ಇನ್ನಿತರೇ ಮಹಿಳೆಯರು ಜಮುನಾ ತಂಡವನ್ನು ಸೇರಿಕೊಂಡರು. “ವನ ಸಂರಕ್ಷಣಾ ಸಮಿತಿ” ಹೆಸರಿನ ಸಂಘವೊAದು ಅಸ್ಥಿತ್ವಕ್ಕೆ ಬಂದಿತು. ಮೂರು ತಂಡಗಳನ್ನು ರಚಿಸಿಕೊಂಡರು. ದಿನಕ್ಕೆ ಮೂರು ಪಾಳೆಯಂತೆ ಅರಣ್ಯ ಸಂರಕ್ಷಣಾ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಕಾಡಿನ ಭ್ರಷ್ಠಾಚಾರದ ವಿರುದ್ದ ಧ್ವನಿ ಎತ್ತಿದರು. ಜಂಗಲ್ ಮಾಫಿಯಾ ತಂಡವನ್ನು ಅಲ್ಲಿಂದ ಓಡಿಸಿದರು. ಜೊತೆಗೆ ಈ ಮಾಫಿಯಾದಲ್ಲಿ ಶಾಮೀಲಾಗಿದ್ದ ಕೆಲ ಅರಣ್ಯ ಅಧಿಕಾರಿಗಳನ್ನು ಜೈಲಿಗೆ ಕಳಿಸಿದರು. 
ಮಾಫಿಯಾ ತಂಡ ಮತ್ತೊಂದು ಪ್ರಯತ್ನಕ್ಕೆ ಕೈಹಾಕಿತು. ರಾತ್ರಿ ಕಾಡಿಗೆ ಬೆಂಕಿ ಹಚ್ಚಿ, ಮರಗಳನ್ನು ಕಡಿದು ಸಾಗಿಸಲು ಪ್ರಯತ್ನಿಸಿದರು. ಇದನ್ನರಿತ ಜಮುನಾ ರಾತ್ರಿ ವೇಳೆಯೂ ತಂಡದೊಂದಿಗೆ ಕಾಡು ಕಾಯುವ ಕೆಲಸಕ್ಕೆ ಮುಂದಾದಳು. ಮರಗಳ್ಳರು ಕಾಡಿನ ಯಾವುದೇ ಭಾಗದಲ್ಲಿದ್ದರೂ, ಅವರನ್ನು ಹಿಡಿದು ಪೋಲೀಸರಿಗೆ ಒಪ್ಪಿಸುವ ಜವಾಬ್ದಾರಿಯನ್ನು ಜಮುನಾ ಹೊತ್ತಳು. ಈಗ ಅವಳ ತಂಡದಲ್ಲಿ ಸುಮಾರು 300 ಜನ ಮಹಿಳೆಯರಿದ್ದಾರೆ. 30 ಜನರ ತಂಡದಂತೆ 10 ತಂಡಗಳು ಈ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಕೇವಲ ಕಾಡಿನ ಸಂರಕ್ಷಣೆ ಅಲ್ಲದೇ ಕಾಡಿನ ಮಹತ್ವ ಮತ್ತು ರಕ್ಷಣೆಯ ಕುರಿತು ಜನಾಂದೋಲನ ಪ್ರಾರಂಭಿಸಿದ್ದಾಳೆ. ಅಲ್ಲಲ್ಲಿ ಚಿಕ್ಕ ಸಭೆ ಸಮಾರಂಭಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಈ ಬಗ್ಗೆ ಜನಜಾಗೃತಿ ಮೂಡಿಸುತ್ತಿದ್ದಾಳೆ. 
ಕೊರತೆಯೇ ಸಂಪನ್ಮೂಲ
ಇಷ್ಟೆಲ್ಲಾ ಖ್ಯಾತಿ ಗಳಿಸಿದ ಜಮುನಾಳಿಗೆ ಕೊರತೆ ಇಲ್ಲವೆಂದೇನಿಲ್ಲ. ತನ್ನ ಕೊರತೆಯನ್ನೇ ಸಂಪತ್ತನ್ನಾಗಿಸಿಕೊAಡಿದ್ದಾಳೆ. ಮುದುವೆಯಾಗಿ 20ವರ್ಷವಾದರೂ ಮಕ್ಕಳಿಲ್ಲ ಎಂಬುದೇ ಅವಳ ಕೊರತೆ. ಈ ಬಗ್ಗೆ ಅವಳೆಂದೂ ಕೊರಗಿಲ್ಲ. “ಈ ವಿಷಯದಲ್ಲಿ ಕರ್ನಾಟಕದ ಸಾಲುಮರದ ತಿಮ್ಮಕ್ಕನೇ ನನಗೆ ಸ್ಪೂರ್ತಿ” ಎನ್ನುತ್ತಾಳೆ. ಮಕ್ಕಳಿಲ್ಲದ ತಿಮ್ಮಕ್ಕ ಮರಗಳನ್ನು ಬೆಳೆಸಿ ಸಾಕಿದರು. ಅಂತೆಯೇ ಮರಗಳೇ ತನ್ನ ಸರ್ವಸ್ವ ಎಂದು ತಿಳಿದ ಜಮುನಾ ಅವುಗಳನ್ನು ತನ್ನ ಮಕ್ಕಳಂತೆ  ರಕ್ಷಿಸುವ ಜವಾಬ್ದಾರಿ ಹೊತ್ತಿದ್ದಾರೆ. 
ಈಗ ಹಳ್ಳಿಗೆ ಅವಳೇ ನಾಯಕಿ. ಇಡೀ ಹಳ್ಳಿಯ ಮಹಿಳೆಯರು ಇವಳ ಹಿಂಬಾಲಕರಾಗಿದ್ದಾರೆ. ಮರಗಳನ್ನು ತಮ್ಮ ಸಹೋದರರಂತೆ ಪ್ರೀತಿಸುತ್ತಾರೆ. ರಕ್ಷಬಂಧನದ ದಿನ ಎಲ್ಲಾ ಮಹಿಳೆಯರೂ ಕಾಡಿಗೆ ತೆರಳಿ, ಅಲ್ಲಿನ ಎಲ್ಲಾ ಮರಗಳಿಗೂ ರಾಖಿ ಕಟ್ಟುತ್ತಾರೆ. ಆ ಮೂಲಕ ಮರಗಳಿಗೆ ರಕ್ಷಣೆಯ ಭರವಸೆ ನೀಡುತ್ತಿದ್ದಾರೆ. ಗ್ರಾಮದಲ್ಲಿ ಹೆಣ್ಣು ಮಗು ಜನಿಸಿದರೆ 18 ಸಸಿಗಳನ್ನು ನೆಟ್ಟು ಸಂಭ್ರಮಿಸುತ್ತಾರೆ. ಹೆಣ್ಣು ಮಗಳ ಮದುವೆಯಾದರೆ 10 ಸಸಿಗಳನ್ನು ನೆಟ್ಟು ಬೆಳೆಸುವ ಸಂಪ್ರದಾಯ ರೂಢಿಸಿಕೊಂಡಿದ್ದಾರೆ. 
ಅರಸಿ ಬಂದ ಪುರಸ್ಕಾರಗಳು
ಜಮುನಾಳ ಸಾಮಾಜಿಕ ಕಳಕಳಿಯ ಕಾರ್ಯ ಇಡೀ ದೇಶವೇ ಬೆರಗಾಗಿ ನೋಡುವಂತೆ ಮಾಡಿದೆ. ಅವಳ ಕಾರ್ಯವನ್ನು ಗಮನಿಸಿದ ಅನೇಕ ಸಂಘ ಸಂಸ್ಥೆಗಳು ಗೌರವ ಸನ್ಮಾನಗಳನ್ನು ನೀಡಿವೆ. ಅದರಲ್ಲಿ ಪ್ರಮುಖವಾಗಿ 2013 ರಲ್ಲಿ ಗಾಡ್‌ಫ್ರೇ ಫಿಲಿಪ್ಸ್ ಬ್ರೇವರಿ ಪುರಸ್ಕಾರ, 2014 ರಲ್ಲಿ ಸ್ತಿç ಶಕ್ತಿ ಪ್ರಶಸ್ತಿ, 2017 ರಲ್ಲಿ ನೀತಿ ಆಯೋಗದ ವುಮೆನ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ ಪ್ರಶಸ್ತಿಗಳಿಗೆ ಭಾಜನಳಾಗಿದ್ದಾಳೆ. ಜಾರ್ಖಂಡ್‌ನ ಶಸ್ತçಸಜ್ಜಿತ ಪೋಲೀಸ್ ಇಲಾಖೆಯು ಜಮುನಾಳೊಂದಿಗೆ ಕಾಡಿನ ರಕ್ಷಣೆಯ ಕಾರ್ಯಕ್ಕೆ ಸಹಭಾಗಿತ್ವ ನೀಡಿದೆ. ಜೊತೆಗೆ ಅರಣ್ಯ ಇಲಾಖೆಯು ಅವಳ ಹಳ್ಳಿಗೆ ಶುದ್ದ ಕುಡಿಯುವ ನೀರು ಮತ್ತು ಸುಸಜ್ಜಿತ ಶಾಲಾ ಸೌಲಭ್ಯವನ್ನು ಒದಗಿಸಿದೆ. 
ಜಮುನಾಳ ಕಥೆಯು ಕೇವಲ ಮನೋರಂಜನಾತ್ಮಕ ಸಿನೆಮಾ ಅಲ್ಲ. ಅದೊಂದು ಯಶೋಗಾಥೆ. ಅಲ್ಲಿ ಸಾಕಷ್ಟು ನೋವು ಇದೆ. ಆದರೂ ಸಮುದಾಯದ ಸಹಭಾಗಿತ್ವದೊಂದಿಗೆ ಸಮಾಜ್ಜೋದ್ದಾರದ ಸಾಕಾರತೆ ಇದೆ. ಮಹಿಳಾ ಸಬಲೀಕರಣವು ಎಂತಹ ಸಾಹಸವನ್ನೂ ಕೂಡಾ ಮಾಡಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿದೆ. ಹೆಣ್ಣೆಂದರೆ ಮೂಗು ಮುರಿಯುವ ಇಂತಹ ಕಾಲದಲ್ಲಿ ಪ್ರತಿ ಮನೆಯ ಹೆಣ್ಣೂ ಸಹ ಜಮುನಾಳಂತೆ ಸಾಮಾಜಿಕ ಬದಲಾವಣೆಯಲ್ಲಿ ಪಾಲ್ಗೊಂಡರೆ ದೇಶದ ಅಭಿವೃದ್ದಿ ಸುಲಭವಲ್ಲವೇ?
ಆರ್.ಬಿ.ಗುರುಬಸವರಾಜ

November 10, 2018

ಆರ್ಕಿಡ್​ಗಳ ಬಣ್ಣದ ಲೋಕ/Orchids

ದಿನಾಂಕ 10-11-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಆರ್ಕಿಡ್​ಗಳ ಬಣ್ಣದ ಲೋಕ



ಹೂಗಳನ್ನು ನೋಡಿದಾಗ ಮನಸ್ಸು ಕೂಡ ಹೂವಿನಂತೆ ಅರಳುವುದು ಸಹಜ. ಬಣ್ಣ ಹಾಗೂ ಸುವಾಸನೆಯಿಂದ ಎಲ್ಲರನ್ನೂ ಆಕರ್ಷಿಸುವ ಹೂವುಗಳನ್ನು ಇಷ್ಟಪಡದವರು ಯಾರೂ ಇರಲಿಕ್ಕಿಲ್ಲ. ಅವುಗಳ ಸುವಾಸನೆಯಂತೂ ಇಡೀ ಪ್ರದೇಶವನ್ನೇ ವ್ಯಾಪಿಸಿ ಮೋಹಕಗೊಳಿಸುತ್ತದೆ. ಅದೆಷ್ಟು ಪ್ರಭೇದಗಳು, ಅದೆಷ್ಟು ವಿಭಿನ್ನತೆಗಳು. ಇಂತಿಪ್ಪ ಹೂಗಳ ಲೋಕದಲ್ಲಿಯೇ ಅತ್ಯಂತ ಹೆಚ್ಚು ಪ್ರಭೇದಗಳಿರುವ ಹೂಗಳೆಂದರೆ ಆರ್ಕಿಡ್​ಗಳು.
ಆರ್ಕಿಡ್ ವಿಶೇಷ ಬಗೆಯ ಹೂವು. ವೈವಿಧ್ಯಮಯ ಬಣ್ಣ ಮತ್ತು ಆಕಾರಗಳಿಂದ ಕಣ್ಣು ಮತ್ತು ಮನಸ್ಸಿಗೆ ಮುದ ನೀಡುತ್ತವೆ. ಕನ್ನಡದಲ್ಲಿ ಸೀತಾಳೆ ಹೂವು ಅಥವಾ ಸೀತೆ ಹೂವು ಎಂದು ಕರೆಯಲ್ಪಡುವ ಆರ್ಕಿಡ್​ಗಳನ್ನು ಜಗತ್ತಿನಾದ್ಯಂತ ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಸಭೆ ಸಮಾರಂಭಗಳಲ್ಲಿ ವೇದಿಕೆ ಅಂದಗೊಳಿಸಲು ಆರ್ಕಿಡ್​ಗಳನ್ನೇ ಹೆಚ್ಚು ಬಳಸಲಾಗುತ್ತವೆ. ಕೆಲವು ಆರ್ಕಿಡ್​ಗಳನ್ನು ಮನೆಯ ಬಳಿ ಅಲಂಕಾರಕ್ಕಾಗಿಯೂ ಬೆಳೆಸಲಾಗುತ್ತದೆ. ವಿವಿಧ ಬಣ್ಣಗಳ ಕಾಂಬಿನೇಷನ್ ಇವುಗಳ ವೈಶಿಷ್ಟ್ಯ ಒಂದೇ ಒಂದು ಕೊರತೆ ಎಂದರೆ, ಇವುಗಳಲ್ಲಿರುವ ಎಲ್ಲ ಪ್ರಭೇದಗಳು ನಮ್ಮ ಮನೆಯಂಗಳದ ಮಲ್ಲಿಗೆ, ಸಂಪಿಗೆಗಳಂತೆ ಸುವಾಸನೆಭರಿತವಾಗಿರುವುದಿಲ್ಲ. ಅಷ್ಟೇ ಅಲ್ಲ, ಕೆಲ ಆರ್ಕಿಡ್​ಗಳು ದುರ್ವಾಸನೆಯನ್ನೂ ಬೀರುತ್ತವೆ.
ಕಾಡು ಹೂವು ಆರ್ಕಿಡ್: ಜಗತ್ತಿನಾದ್ಯಂತ 35 ಸಾವಿರಕ್ಕಿಂತಲೂ ಹೆಚ್ಚಿನ ಆರ್ಕಿಡ್ ಪ್ರಭೇದಗಳಿರುವುದನ್ನು ಸಸ್ಯಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ. ಉಷ್ಣ ವಲಯದ ಕಾಡುಗಳಲ್ಲಿ ಇಂತಹ ಆರ್ಕಿಡ್​ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು. ಭಾರತದ ಈಶಾನ್ಯ ಗಡಿರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯಗಳಲ್ಲಿ ಹೇರಳವಾಗಿ ಬೆಳೆಯುತ್ತವೆ. ಬಹುತೇಕ ಆರ್ಕಿಡ್​ಗಳು ಪರೋಪಜೀವಿಗಳು. ಮರ ಅಥವಾ ಇನ್ನಿತರ  ಕೊಳೆತ ಸಸ್ಯಗಳ ಮೇಲೆ ಬೆಳೆದು, ಅವುಗಳಿಂದಲೇ ಆಹಾರ ಪಡೆದು ಜೀವಿಸುತ್ತವೆ.
ಗಾತ್ರ ವೈವಿಧ್ಯ!: ಆರ್ಕಿಡ್​ಗಳು ವಿವಿಧ ಗಾತ್ರಗಳಲ್ಲಿರುತ್ತವೆ. ಕೆಲವು ಆರ್ಕಿಡ್​ಗಳು ಸೆಂಟಿಮೀಟರ್​ಗಿಂತ ಕಡಿಮೆ ಗಾತ್ರ ಹೊಂದಿದ್ದರೆ ಇನ್ನು ಕೆಲವು ಆರ್ಕಿಡ್​ಗಳು 20 ಮೀಟರ್​ನಷ್ಟು ಉದ್ದಕ್ಕೆ ಬೆಳೆಯಬಲ್ಲವು. ಆರ್ಕಿಡ್​ಗಳು ಎರಡು ಆಯಾಮದ ಸಮಮಿತಿಗೆ ಒಳಪಟ್ಟಿರುತ್ತವೆ. ಅಂದರೆ, ಎರಡೂ ಅಂಚುಗಳನ್ನು ಮಡಿಸಿದರೆ ಸಮಮಿತಿಯ ಅರ್ಧ ಹೂವು ಕಾಣುತ್ತದೆ. ಪಳೆಯುಳಿಕೆ ದಾಖಲೆಗಳ ಪ್ರಕಾರ, ಆರ್ಕಿಡ್​ಗಳು 10 ಕೋಟಿ ವರ್ಷಗಳ ಹಿಂದಿನಿಂದಲೂ ಇರುವುದು ತಿಳಿದುಬಂದಿದೆ. ಕಪ್ಪುಬಣ್ಣವನ್ನು ಹೊರತುಪಡಿಸಿ ಪ್ರತಿಬಣ್ಣದಲ್ಲೂ ಆರ್ಕಿಡ್ ಲಭ್ಯ ಇರುವುದು ವಿಶೇಷ. ಕೆಲವು ಜಾತಿಯ ಆರ್ಕಿಡ್​ಗಳನ್ನು ಆಹಾರ, ಮಸಾಲೆ ಮತ್ತು ಗಿಡಮೂಲಿಕೆ ಔಷಧವಾಗಿ ಮತ್ತು ಸುಗಂಧದ್ರವ್ಯ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ.
ಮಂಕಿ
ಈ ಆರ್ಕಿಡ್ ಮಂಕಿಯ ಮುಖ ಹೋಲುವುದರಿಂದ ಇದಕ್ಕೆ ಮಂಕಿ ಆರ್ಕಿಡ್ ಎಂಬ ಹೆಸರಿದೆ. ಇದು ದಕ್ಷಿಣ ಪೂರ್ವ ಈಕ್ವೆಡಾರ್ ಮತ್ತು ಪೆರು ಮೌಂಟೇನ್ ಅರಣ್ಯ ಪ್ರದೇಶದಲ್ಲಿ ಬೆಳೆಯುತ್ತದೆ. ಇದರ ವೈಜ್ಞಾನಿಕ ಹೆಸರು ಸಿಮಿಯಾನ್. ಇದು ಸಿಟ್ರಸ್ ವಾಸನೆಯನ್ನು ಹೊಂದಿರುತ್ತದೆ ಮತ್ತು ಸಂಪೂರ್ಣ ಅರಳಿದಾಗ ಕಿತ್ತಳೆ ಬಣ್ಣವನ್ನು ಹೊಂದಿರುತ್ತದೆ.
ಲೇಡಿ ಸ್ಲಿಪ್ಪರ್
ವಿಚಿತ್ರ ನೋಟವನ್ನು ಒಳಗೊಂಡ ಈ ಆರ್ಕಿಡ್ ಸ್ಲಿಪ್ಪರ್ ಆಕಾರದ ಚೀಲಗಳನ್ನು ಹೊಂದಿರುತ್ತದೆ. ಪರಾಗಸ್ಪರ್ಶಕ್ಕಾಗಿ ಚೀಲಗಳನ್ನು ಹೊಂದಿದ್ದು, ಇದಕ್ಕೆ ಕೀಟಗಳನ್ನು ಅಂಟಿಸಿಕೊಳ್ಳುತ್ತವೆ. ಇದು ಭೂ ಪ್ರದೇಶದಲ್ಲಿ ಬೆಳೆಯುವ ಆರ್ಕಿಡ್ ಆಗಿದ್ದು, ಎಲ್ಲ ರೀತಿಯ ಕಡಿಮೆ ಹಾಗೂ ಹೆಚ್ಚು ತಾಪಮಾನದಲ್ಲೂ ಬೆಳೆಯುತ್ತದೆ.
ಡಾನ್ಸಿಂಗ್ ಲೇಡಿ
ಹೆಸರೇ ಸೂಚಿಸುವಂತೆ ಇದು ನೋಡಲು ಸ್ತ್ರೀರೂಪದಲ್ಲಿ ಇರುತ್ತದೆ. ತಿಳಿಹಳದಿ, ಗಾಢ ಹಳದಿ ಮತ್ತು ಕೆಂಪು ಬಣ್ಣಗಳಲ್ಲಿ ಕಾಣುವ ಇದು ನೃತ್ಯ ಮಾಡುವ ಮಹಿಳೆಯಂತೆ ಕಾಣುತ್ತದೆ. ಉಷ್ಣವಲಯದಲ್ಲಿ ಬೆಳೆಯುವ ಇದಕ್ಕೆ ನಿಯಮಿತ ನೀರಿನ ಅವಶ್ಯಕತೆ ಇದೆ. ಇದು ಅತಿಹೆಚ್ಚು ತಾಪಮಾನವನ್ನು ಅಂದರೆ 100 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಸಹಿಸಿಕೊಳ್ಳಬಲ್ಲದು! ಅತ್ಯದ್ಭುತ ಪರಿಮಳ ಹೊಂದಿದ ಇದನ್ನು ಮನೆಯ ಆವರಣದಲ್ಲಿ ಬೆಳೆಯಬಹುದು. ನೋಡಲು ಅತ್ಯಾಕರ್ಷಕವಾಗಿರುತ್ತದೆ.
ಫ್ಲೈಯಿಂಗ್ ಡಕ್
ಹಾರಲು ತಯಾರಾದ ಬಾತುಕೋಳಿಯಂತೆ ಕಾಣುವ ಈ ಆರ್ಕಿಡ್ ಪೂರ್ವ ಮತ್ತು ದಕ್ಷಿಣ ಆಸ್ಟ್ರೇಲಿಯಾದಲ್ಲಿ ಬೆಳೆಯುತ್ತದೆ. ಕ್ಯಾಲೀನಾ ಮೇಜರ್ ಎಂಬ ವೈಜ್ಞಾನಿಕ ಹೆಸರುಳ್ಳ ಇದು ಸುಮಾರು 50 ಸೆಂಟಿಮೀಟರ್ ಉದ್ದ ಇರುತ್ತದೆ. ಇದು ಪರಾಗಸ್ಪರ್ಶಕ್ಕಾಗಿ ಕೀಟಗಳನ್ನು ಆಕರ್ಷಿಸುತ್ತದೆ.
ವೈಟ್ ಎಗ್ರೆಟ್
ಹೇಬೆನರಿಯಾ ರೇಡಿಯಾಟ ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲ್ಪಡುವ ಇದು ಅಸಾಮಾನ್ಯ ಆರ್ಕಿಡ್ ಆಗಿದೆ. ಹಕ್ಕಿಯ ಬಿಳಿ ತುಪ್ಪಳದಂತೆ ಕಾಣುವ ಈ ಆರ್ಕಿಡ್ ಗಮನಾರ್ಹ ಆಕರ್ಷಣೆ ಹೊಂದಿದೆ. ಇದು ಮುಖ್ಯವಾಗಿ ದಕ್ಷಿಣ ಕೊರಿಯಾ, ರಷ್ಯಾ, ಚೀನಾ ಮತ್ತು ಜಪಾನ್​ಗಳಲ್ಲಿ ಕಂಡುಬರುತ್ತದೆ.
ಬೀ ಆರ್ಕಿಡ್
ಜೇನುನೊಣವು ಹಾರಿ ಹೋಗುತ್ತಿರುವಂತೆ ಕಾಣುವ ಈ ಆರ್ಕಿಡ್ ಇಂಗ್ಲೆಂಡ್, ಐರ್ಲೆಂಡ್​ಗಳಲ್ಲಿ ಕಂಡುಬರುತ್ತದೆ. ಇದರ ವೈಜ್ಞಾನಿಕ ಹೆಸರು ಒಫ್ರೀಸ್ ಆಫಿಫೆರಾ. ಸಾಮಾನ್ಯವಾಗಿ ಇದು ಗುಲಾಬಿ ಬಣ್ಣದಲ್ಲಿರುತ್ತದೆ.

ಆರ್.ಬಿ.ಗುರುಬಸವರಾಜ ಹೊಳಗುಂದಿ

October 24, 2018

ಮೊಬೈಲ್ ಗೀಳು ಜೀವನ ಹಾಳು ನೋಮೋಫೋಬಿಯಾ/ Nomophobia

ದಿನಾಂಕ 17-10-2018ರ ವಿಜಯವಾಣಿಯಲ್ಲಿ  ನನ್ನ ಬರಹ.


ಮೊಬೈಲ್ ಗೀಳು   ಜೀವನ ಹಾಳು

ಪಿ.ಯು.ಸಿ ಓದಿ ಮನೆಯಲ್ಲಿರುವ ಇಪ್ಪತ್ಮೂರು ವರ್ಷದ ರಮೇಶ ಕಳೆದ ಒಂದು ವಾರದಿಂದ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಾನೆ. ಸದಾ ಮಂಪರಿನಲ್ಲಿರುವ ರಮೇಶ ಕೈಯಲ್ಲಿ ಮೊಬೈಲ್ ಹಿಡಿದ ರೀತಿಯಲ್ಲಿ ವರ್ತಿಸುತ್ತಾನೆ. ಎಚ್ಚರವಾದೊಡನೆ ಮೊಬೈಲ್ ಎಲ್ಲಿ ಎಂದು ಹುಡುಕಾಡುತ್ತಾನೆ. ಅಕ್ಕಪಕ್ಕದವರಲ್ಲಿ ಮೊಬೈಲ್ ಕೇಳುತ್ತಾನೆ. ರಮೇಶನ ಸ್ಥಿತಿಯನ್ನು ಅಧ್ಯಯನ ಮಾಡಿದ ವೈದ್ಯರು ಈ ಕಾಯಿಲೆಗೆ ನೊಮೋಫೋಬಿಯಾ ಎಂದು ಹೇಳಿದ್ದಾರೆ. ರಮೇಶನ ಈ ಸ್ಥಿತಿ ಬಡ ತಂದೆ ತಾಯಿಗೆ ಚಿಂತೆಯಾಗಿದೆ.  
    ಹತ್ತನೇ ತರಗತಿಯ ಜ್ಯೊತಿ ಮಾಹಿತಿ ಹುಡುಕುವ ನೆಪದಲ್ಲಿ ಸಂಜೆಯಿಂದ ರಾತ್ರಿ ಮಲಗುವವೆರಗೂ ಸ್ಮಾರ್ಟ್ಫೋನ್‌ಗೆ ಅಂಟಿಕೊಂಡಿರುತ್ತಾಳೆ. ಮಗಳ ಸ್ಮಾರ್ಟ್ಪೋನ್ ಪುರಾಣ ಕುರಿತು ತಾಯಿ ಚಿಂತಿತಳಾಗಿದ್ದಾಳೆ. 
ಇದು ಕೇವಲ ಜ್ಯೊತಿ ಹಾಗೂ ರಮೇಶರ ಕಥೆಯಲ್ಲ. ಬಹುತೇಕ ಯುವಕರ ಸ್ಥಿತಿಯೂ ಇದೇ ಆಗಿದೆ. ಶಾಲೆ/ಕಾಲೇಜು ಸಮಯ ಹೊರತು ಪಡಿಸಿದರೆ ಬಹುತೇಕ ವೇಳೆ ಮೊಬೈಲ್ ಫೋನಿಗೆ ಅಂಟಿಕೊಂಡಿರುತ್ತಾರೆ. ಇತ್ತಿಚಿಗೆ ಶಾಲೆ/ಕಾಲೇಜಿನಲ್ಲೂ ಪಾಠದ ವೇಳೆಯಲ್ಲಿ ಮೊಬೈಲ್ ವಿದ್ಯಾರ್ಥಿಗಳು ಮೊಬೈಲ್ ಬಳಸುತ್ತಿರುವ ಬಗ್ಗೆ ವರದಿಯಾಗಿವೆ. ಯುವಕರನ್ನು ಆಕರ್ಷಿಸುವ ಅಪ್ಲಿಕೇಶನ್‌ಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ತಮ್ಮ ವಯಸ್ಸಿನ ಫ್ರೆಂಡ್ಸ್  ಜೊತೆ ಹೊರಗಡೆ ಬಯಲಿನಲ್ಲಿ ಆಡವಾಡುವುದನ್ನು ಬಿಟ್ಟು, ಮೊಬೈಲ್ ಕೈಯಲ್ಲಿ ಹಿಡಿದು ಮೂಲೆ ಸೇರುತ್ತಿದ್ದಾರೆ. ನಾಲ್ಕಾರು ಗೆಳೆಯರು ಒಂದೆಡೆ ಸೇರಿದ್ದರೂ ಸಹ ಪರಸ್ಪರ ಮಾತನಾಡದೇ ಮೊಬೈಲ್‌ನಲ್ಲೆ ಕಾಲ ಕಳೆಯುತ್ತಿದ್ದಾರೆ. ಇದರಿಂದಾಗಿ ಅವರು ಸ್ಮಾರ್ಟ್ಫೋನ್ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಇದನ್ನು ಹೇಗೆ ಬಿಡಿಸಬೇಕೆಂಬುದೇ ಬಹುತೇಕ ಪಾಲಕರ ಚಿಂತೆಯಾಗಿದೆ. ಯುವಕರು ಮೊಬೈಲ್ ಫೋನಿಗೆ ಅಂಟಿಕೊಂಡರುವ ಪ್ರಕರಣಗಳನ್ನು ಮನೋವಿಜ್ಞಾನದಲ್ಲಿ ‘ನೊಮೋಫೋಬಿಯಾ’ ಎಂದು ಗುರುತಿಸಲಾಗಿದೆ. ಇದರಿಂದ ಆಗುವ ತೊಂದರೆಗಳು ಹಾಗೂ ಯುವಕರು ಇದರಿಂದ ದೂರವಿರುವ ಕ್ರಮಗಳ ಕುರಿತ ಕಿರು ಮಾಹಿತಿ ಇಲ್ಲಿದೆ.
ನೊಮೋಫೋಬಿಯಾ ಎಂದರೆ,,,,,, : ಮೊಬೈಲ್ ಫೋನ್‌ನಿಂದ ದೂರ ಇರಲಾಗದ ಭಯವೇ ನೊಮೋಫೋಬಿಯಾ. ಅಂದರೆ ಸದಾ ಮೊಬೈಲ್ ಫೋನಿಗೆ ಅಂಟಿಕೊಂಡು, ಅದರಲ್ಲಿಯೇ ಕಾಲ ಕಳೆಯುವ ದುರಭ್ಯಾಸವೇ ನೊಮೋಫೋಬಿಯಾ. ಇಂತಹ ತೊಂದರೆಗೆ ಒಳಗಾದರು ಫೋನ್‌ನ್ನು ಸದಾ ಬಳಿಯೇ ಇಟ್ಟುಕೊಂಡಿರುತ್ತಾರೆ. ಆಗಾಗ್ಗೆ ಮೊಬೈಲ್ ಸ್ಕಿçನ್ ಓಪನ್ ಮಾಡುವುದು, ನೋಟಿಫಿಕೇಶನ್‌ಗಳನ್ನು ಗಮನಿಸುವತ್ತ ಚಿತ್ತ ಹರಿಸುತ್ತಾರೆ. ಪದೇ ಪದೇ ಸಾಮಾಜಿಕ ಜಾಲ ತಾಣಗಳಾದ ಫೇಸ್‌ಬುಕ್, ವಾಟ್ಸಪ್‌ಗಳನ್ನು ಓಪನ್ ಮಾಡುತ್ತಾ ಅದರಲ್ಲೆ ಕಾಲ ಕಳೆಯುತ್ತಾರೆ. 
ಲಕ್ಷಣಗಳು :
ಪದೇ ಪದೇ ಮೊಬೈಲ್ ನೋಡುವುದು.
ಒಂಟಿಯಾಗಿರಲು ಬಯಸುವುದು. 
ಪ್ರತ್ಯೆಕ ಕೊಠಡಿಗಳಲ್ಲಿ ಅವಿತುಕೊಳ್ಳುವುದು. 
ಟಾಯ್ಲೆಟ್ ರೂಮಿಗೂ ಮೊಬೈಲ್ ಕೊಂಡೊಯ್ಯುವುದು. 
ಮೊಬೈಲ್ ಕಾಣಿಸದಿದ್ದರೆ ಏನನ್ನೊ ಕಳೆದುಕೊಂಡವರಂತೆ ವರ್ತಿಸುವುದು. 
ರಾತ್ರಿ ಮಲಗುವಾಗ ತಲೆದಿಂಬಿನ ಪಕ್ಕದಲ್ಲಿಯೇ ಇಟ್ಟುಕೊಂಡು ಮಲಗುವುದು. 
ಎಚ್ಚರವಾದ ಕೂಡಲೇ ಮೊಬೈಲ್ ಸ್ಕಿçನ್ ಓಪನ್ ಮಾಡಿ ನೋಟಿಫಿಕೇಶನ್ ಗಮನಿಸುವುದು. 
ನಿದ್ರಾಹೀನತೆಯಿಂದ ಬಳಲುವುದು.
ಡ್ರಗ್ ವ್ಯಸನಿಯಂತೆ ವರ್ತಿಸುವುದು.
ಕಾರಣಗಳು : ಇಂದಿನ ವಿಭಕ್ತ ಕುಟುಂಬ ಪದ್ದತಿಯು ನೊಮೋಫೋಬಿಯಾಕ್ಕೆ ಮೂಲಕಾರಣ ಎನ್ನಲಾಗುತ್ತದೆ. ತಂದೆ-ತಾಯಿ ಇಬ್ಬರೂ ದುಡಿಮೆಯ ನೆಪದಲ್ಲಿ ಮಕ್ಕಳಿಂದ ಹೆಚ್ಚು ಸಮಯ ದೂರವಿರುತ್ತಾರೆ. ಮಕ್ಕಳ ಓಲೈಕೆಗಾಗಿ ಮೊಬೈಲ್ ಫೋನ್ ಕೊಡಿಸುತ್ತಾರೆ. ಆಕರ್ಷಕ ದೃಶ್ಯಿಕೆಗಳು, ಖುಷಿ ನೀಡುವ ವೀಡಿಯೋ ಗೇಮ್‌ಗಳು, ಕಣ್ಮನ ಸೆಳೆಯುವ ನೃತ್ಯಗಳು, ನಗಿಸುವ ಹಾಸ್ಯ ತುಣುಕುಗಳು ನೊಮೋಫೋಬಿಯಾಕ್ಕೆ ಕಾರಣಗಳು. ಅಲ್ಲದೇ ಕಡಿಮೆ ಬೆಲೆಗೆ ದೊರೆಯುವ ವೇಗದ ಇಂಟರ್‌ನೆಟ್ ಸೌಲಭ್ಯವೂ ಸಹ ಈ ದುರಭ್ಯಾಸಕ್ಕೆ ಕಾರಣವೆಂದರೆ ತಪ್ಪಲ್ಲ. 
ಪರಿಣಾಮಗಳು : 
ಸಂಪರ್ಕ ಕ್ರಾಂತಿಯ ಭಾಗವೆಂದು ಭಾವಿಸಿದ, ಮಿನಿ ಕಂಪ್ಯೂಟರ್‌ಗಳಾದ ಮೊಬೈಲ್ ಫೋನ್‌ಗಳು ಯುಜನತೆಯ ಮೇಲೆ ಅನೇಕ ದುಷ್ಪರಿಣಾಮಗಳನ್ನುಂಟು ಮಾಡುತ್ತದೆ. ಇಂದಿನ ಮಕ್ಕಳು ಹಾಗೂ ಯುವಜನತೆ ಹೆಚ್ಚಿನ ರೇಡಿಯೋ ಫ್ರಿಕ್ವೆನ್ಸಿ ಪರಿಸರದಲ್ಲಿ ಬೆಳೆಯುತ್ತಿದ್ದಾರೆ. ಮೊಬೈಲ್‌ಗಳಿಂದ ಹೊರಸೂಸುವ ವಿಕಿರಣಗಳು ಅವರ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡುತ್ತಿವೆ.
         ಇತ್ತಿಚಿನ ವರ್ಷಗಳಲ್ಲಿ ದೇಹದಲ್ಲಿ ಸೆಲ್‌ಫೋನ್ ವಿಕಿರಣ ಪರಿಣಾಮ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ. ‘ದಿ ಜರ್ನಲ್ ಆಫ್ ಅಮೇರಿಕನ್ ಮೆಡಿಕಲ್ ಅಸೋಸಿಯೇಶನ್’ ನಡೆಸಿದ ಅಧ್ಯಯನವು ಮಕ್ಕಳು/ಯುವಕರು ಮೊಬೈಲ್ ಫೋನ್ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದೆ. 
ಮೊಬೈಲ್ ಬಳಸುತ್ತಿರುವ ಯುವಕರ ಮೆದುಳು ಮತ್ತು ಕಿವಿಯಲ್ಲಿ ಮಾರಣಾಂತಿಕ ಟ್ಯುಮರ್ ಬೆಳೆಯುವ ಸಾಧ್ಯತೆಯನ್ನು ಅಧ್ಯಯನವು ತೋರಿಸಿದೆ. 
ವಿಶ್ವ ಆರೋಗ್ಯ ಸಂಸ್ಥೆಯು ಸೆಲ್‌ಫೋನ್ ವಿಕಿರಣ ಭಾಗಶಃ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಹೇಳಿದೆ. ಮಕ್ಕಳು/ಯುವಕರು ಶೇಕಡಾ ೬೦ರಷ್ಟು ವಿಕಿರಣವನ್ನು ಹೀರಿಕೊಳ್ಳುತ್ತಾರೆ. ಅವರ ಮೆದುಳಿನ ತೆಳುವಾದ ಚರ್ಮ, ಅಂಗಾಂಶಗಳು ಮತ್ತು ಮೂಳೆಗಳು ವಯಸ್ಕರಿಗಿಂತ ಎರಡು ಪಟ್ಟು ವಿಕಿರಣವನ್ನು ಹೀರಿಕೊಳ್ಳುತ್ತವೆ ಎಂದು ಅಧ್ಯಯನವು ಹೇಳುತ್ತದೆ. ಈ ವಿಕಿರಣಗಳು ನರಮಂಡಲವನ್ನು ದುರ್ಬಲಗೊಳಿಸಿ ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎಂದು ಹೇಳಿದೆ.
ಕೇವಲ ೨ ನಿಮಿಷದ ಕರೆಯು ೧೬ ವರ್ಷದೊಳಗಿನ ಮಕ್ಕಳ ಮೆದುಳಿನ ಕಾರ್ಯನಿರ್ವಾಹಕ ಚಟುವಟಿಕೆಯನ್ನು ಬದಲಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಕಿವಿಗೆ ಹತ್ತಿರವಾಗಿ ಮೊಬೈಲ್ ಹಿಡಿದು ಮಾತನಾಡುವಾಗ ಅದರಿಂದ ಬರುವ ರೇಡಿಯೋ ತರಂಗಗಳು ಮಕ್ಕಳ ಮೆದುಳಿನಲ್ಲಿ ವ್ಯಾಪಿಸಿ ಕಲಿಕಾ ಸಾಮರ್ಥ್ಯ ಹಾಗೂ ಇನ್ನಿತರೇ ವರ್ತನೆಯ ಸಮಸ್ಯೆಗಳನ್ನು ದುರ್ಬಲಗೊಳಿಸುತ್ತದೆ. ಇದು ಕಲಿಯುವವರ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.
ಸದಾ ಮೊಬೈಲ್ ಬಳಸುತ್ತಿದ್ದರೆ, ಕಲಿಕಾ ಸಾಮರ್ಥ್ಯ ಕಡಿಮೆಯಾಗಿ ಶೈಕ್ಷಣಿಕವಾಗಿ ಹಿಂದುಳಿಯುತ್ತಾರೆ. ಕ್ರಮೇಣವಾಗಿ ಕಲಿಕೆಯಲ್ಲಿ ನಿರಾಸಕ್ತಿ ಉಂಟಾಗುತ್ತದೆ.
ಸದಾ ಮೊಬೈಲ್ ಫೋನ್‌ಗೆ ಅಂಟಿಕೊಂಡಿರುವುದರಿಂದ ದೈಹಿಕ ಚಟುವಟಿಕೆಗಳು ಇಲ್ಲದೇ ದಢೂತಿದೇಹ ಉಂಟಾಗುತ್ತದೆ. 
ಸೆಲ್‌ಫೋನ್ ಮಕ್ಕಳು/ಯುವಕರಲ್ಲಿ ಅನುಚಿತ ವರ್ತನೆಗೆ ಕಾರಣವಾಗುತ್ತದೆ. ಅನಗತ್ಯ ಪಠ್ಯ ಹಾಗೂ ಚಿತ್ರ ಸಂದೇಶದ ಚಾಟಿಂಗ್‌ನಲ್ಲಿ ತೊಡಗುವ ಸಮಸ್ಯೆ ಉಂಟಾಗುತ್ತದೆ. ಕುಟುಂಬದ ವ್ಯಕ್ತಿಗಳ ಚಿತ್ರಗಳು ಕೆಲವೊಮ್ಮೆ ಕೈತಪ್ಪಿ ಅಂತರಜಾಲದಲ್ಲಿ ಸಿಲುಕಿ, ಅಶ್ಲಿಲ ಸೈಟ್‌ಗಳಿಗೆ ಪ್ರವೇಶಹೊಂದಿ ಅವಾಂತರ ತರುವ ಸಾಧ್ಯತೆಗಳಿವೆ. 
ಮೊಬೈಲ್ ಬಳಕೆಯಿಂದ ಕಲಿಕೆಯಲ್ಲಿ ಹಿಂದುಳಿದವರು ಆಂತರಿಕ ಮತ್ತು ಬಾಹ್ಯ ಪರೀಕ್ಷೆಗಳಲ್ಲಿ ಮೋಸ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಪರೀಕ್ಷೆಗಳಲ್ಲಿ ನಕಲು ಮಾಡುವಂತಹ ದುಷ್ಕೃತ್ಯ ಎಸಗಬಹುದು.
ಮೊಬೈಲ್ ವ್ಯಸನಕ್ಕೆ ಒಳಗಾದವರು ಮೌಲ್ಯಯುತವಾದ ಹವ್ಯಾಸಗಳು ಮತ್ತು ಪ್ರಿತಿಪಾತ್ರರಿಂದ ದೂರವಾಗುತ್ತದೆ. 
ಸ್ಮಾರ್ಟ್ಫೋನ್ ಬಳಕೆಯಿಂದ ಯುವಕರಲ್ಲಿ ಆಕ್ರಮಣಕಾರಿ ವರ್ತನೆಗಳು ಪ್ರಕಟಗೊಳ್ಳುತ್ತವೆ. ಇದರಿಂದ ಅವರಲ್ಲಿ ಆತಂಕ, ಒತ್ತಡ, ಖಿನ್ನತೆ, ಚಡಪಡಿಕೆ ಉಂಟಾಗುತ್ತದೆ. 
ಮೊಬೈಲ್ ಬಳಕೆ ನಿದ್ರಾಹೀನತೆಗೂ ಕಾರಣವಾಗುತ್ತದೆ. ನಿದ್ರಾಹೀನತೆಯಿಂದ ಸ್ಮರಣಶಕ್ತಿಯೂ ಕಡಿಮೆಯಾಗುತ್ತದೆ ಮತ್ತು ಆ ಕಾರಣದಿಂದ ಶೈಕ್ಷಣಿಕ ಪ್ರಗತಿ ವೇಗವಾಗಿ ಕುಂಟಿತವಾಗುತ್ತದೆ. 
ಬ್ಲೂವ್ಹೆಲ್, ಮೊಮೋನಂತಹ ಆನ್‌ಲೈನ್ ಗೇಮ್‌ಗಳು ಮಕ್ಕಳು/ಯುವಕರ ಪ್ರಾಣಕ್ಕೆ ಕಂಟಕವಾಗಬಹುದು. 
ಭವಿಷ್ಯದಲ್ಲಿ ಭಾವನೆಗಳು ನಶಿಸುವ ಸಾಧ್ಯತೆ ಇದೆ.
ಮುಕ್ತಿಮಾರ್ಗ :
ನೊಮೋಫೋಬಿಯಾದಿಂದ ಹೊರಬರುವುದು ಯುವಕರಿಗೆ ಬಹುದೊಡ್ಡ ಸಮಸ್ಯೆಯಾಗಿದೆ. ಶಾಂತವಾಗಿ ಯೋಚಿಸಿದರೆ ಇದೇನೂ ದೊಡ್ಡ ಸಮಸ್ಯೆಯಲ್ಲ. ಆದರೆ ಗಂಭೀರ ಪರಿಣಾಮಗಳ ಬಗ್ಗೆ ಯೋಚಿಸಿದರೆ ಖಂಡಿತವಾಗಿ ಹೊರಬರಲೇಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಯುವಕರು ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ. 
ಆದಷ್ಟೂ ಬಯಲಿನಲ್ಲಿ ದೈಹಿಕ ಶ್ರಮದ ಆಟಗಳಲ್ಲಿ ತೊಡಗಿಸಿಕೊಳ್ಳಿ. ಇದು ನಿಮ್ಮ ಮನಸ್ಸು ಉಲ್ಲಿಸತವಾಗುವಂತೆ ಮಾಡುತ್ತದೆ.
ಸ್ಮಾರ್ಟ್ಫೋನ್‌ಗಳು ನಮ್ಮ ಜೀವನದ ಭಾಗವೇನಲ್ಲ. ಅದನ್ನು ಬದಿಗಿಟ್ಟು ಸೃಜನಾತ್ಮಕ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ. 
ಕುಟುಂಬದ ಸದಸ್ಯರೊಡನೆ ಭೌತಿಕವಾಗಿ ಹೆಚ್ಚು ಹೆಚ್ಚು ಬರೆಯಿರಿ. ಸಣ್ಣ ಸಣ್ಣ ಮನೆಕೆಲಸಗಳಲ್ಲಿ ಪೋಷಕರಿಗೆ ನೆರವಾಗಿ.
ಒಡನಾಡಿಗಳು, ಬಂಧು-ಬಾಂಧವರ ಜೊತೆ ಹೆಚ್ಚು ಹೆಚ್ಚು ಬೆರೆಯಿರಿ.
ಹಾಡುಗಾರಿಕೆ, ನೃತ್ಯ, ಯೋಗ, ಚಿತ್ರಕಲೆ, ಕ್ಲೆಮಾಡಲಿಂಗ್‌ನಂತಹ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. 
ಚೆಸ್, ಕೇರಂ, ಟೇಬಲ್ ಟೆನ್ನಿಸ್, ಈಜುಗಳಂತಹ ಒಳಾಂಗಣ ಕ್ರಿಡೆಗಳು ವಿರಾಮ ವೇಳೆಯ ಸದುಪಯೋಗದ ಜೊತೆಗೆ ನೀವು ಸದಾ ಆಕ್ಟಿವ್ ಆಗಿರಲು ಸಹಾಯಮಾಡುತ್ತವೆ. 
ಕಥೆ, ಕವನ, ಕಾದಂಬರಿ, ಜೀವನಚರಿತ್ರೆಗಳಂತಹ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ. ಓದುವ ಹವ್ಯಾಸ ಎಲ್ಲೆಡೆ ನೀವು ತಲೆ ಎತ್ತಿ ನಡೆಯುವಂತೆ ಮಾಡುತ್ತದೆ. 
ಮೊಬೈಲ್ ಬೇಕೇ ಬೇಕು ಎಂದಾದರೆ ಕಡಿಮೆ ವಿಕಿರಣ ಮಟ್ಟ ಹೊಂದಿರುವ ಮೊಬೈಲ್ ಖರೀದಿಸಿ. ಇದಕ್ಕಾಗಿ ಎಸ್.ಎ.ಆರ್(ನಿರ್ದಿಷ್ಟ ಹೀರಿಕೆ ದರ) ಕಡಿಮೆ ಇರುವ ಮೊಬೈಲ್ ಖರೀದಿಸಿ. ಭಾರತದಲ್ಲಿ ಎಸ್.ಎ.ಆರ್ ಮಟ್ಟವು ೧.೬ ತಿ/ಞg ಆಗಿದೆ. ನಿಮ್ಮ ಮೊಬೈಲ್‌ನ ಎಸ್.ಎ.ಆರ್ ಮಟ್ಟ ಪರೀಕ್ಷಿಸಲು *#೦೭# ಡಯಲ್ ಮಾಡಿ. 
ಪ್ರಯಾಣದ ವೇಳೆ ಮೊಬೈಲ್ ಬಳಸಬೇಡಿ. ರೈಲು, ಬಸ್ಸು, ಕಾರು ಮುಂತಾದ ವಾಹನಗಳಲ್ಲಿ ಪ್ರಯಾಣಿಸುವಾಗ ಮೊಬೈಲ್ ಸಿಗ್ನಲ್‌ಗಳಿಗಾಗಿ ರೇಡಿಯೇಶನ್ ಸ್ಕಾö್ಯನಿಂಗ್ ಮಾಡುತ್ತಿರುತ್ತದೆ. ಈ ವೇಳೆಯಲ್ಲಿ ಹೆಚ್ಚು ವಿಕರಣಗಳು ಹೊರಸೂಸುತ್ತಿರುತ್ತವೆ. 
ರಾತ್ರಿ ಮಲಗುವಾಗ ಹತ್ತಿರ ಮೊಬೈಲ್ ಇಟ್ಟುಕೊಳ್ಳಬೇಡಿ. ವಿಕಿರಣಗಳಿಂದ ನೆನಪಿನ ಶಕ್ತಿಯ ಮೇಲೆ ಪರಿಣಾಮಗಳಾಗುತ್ತವೆ. 
ಎರಡು ನಿಮಿಷಕ್ಕಿಂತ ಹೆಚ್ಚಿಗೆ ಮಾತನಾಡಬೇಕಿದ್ದರೆ ಲ್ಯಾಂಡ್‌ಲೈನ್ ಬಳಸಿ. ಇಲ್ಲವಾದರೆ ಮೊಬೈಲ್‌ನಲ್ಲಿ ಓಪನ್ ಸ್ಪಿಕರ್ ಹಾಕಿ ಮಾತನಾಡಿಸಿ. ಮಾತು ಆದಷ್ಟೂ ಹಿತಮಿತವಾಗಿರಲಿ.
ಸಾಮಾಜಿಕ ಜಾಲತಾಣ ಬಳಸುವುದು ಅನಿವಾರ್ಯವಾದರೆ ಮೊಬೈಲ್‌ನ ಬದಲು  ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಬಳಸಿ. 
           ನಿಮ್ಮ ಮೇಲೆ ಇಡೀ ಸಮಾಜ ಹಾಗೂ ಕುಟುಂಬ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ. ನಿಮ್ಮನ್ನು ನಂಬಿದವರ ನಿರೀಕ್ಷೆಗಳನ್ನು ನನಸು ಮಾಡುವುದು ನಿಮ್ಮ ಮೊದಲ ಆಧ್ಯತೆಯಾಗಲಿ. ಪುಸ್ತಕ ಹಾಗೂ ಸೃಜನಾತ್ಮಕ ಚಟುವಟಿಕೆಗಳು ನಿಮ್ಮನ್ನು ತಲೆ ಎತ್ತಿ ನಡೆಯುವಂತೆ ಮಾಡುತ್ತವೆ. ಆದರೆ ಮೊಬೈಲ್ ನಿಮ್ಮನ್ನು ತಲೆ ತಗ್ಗಿಸಿ ನಡೆಸುತ್ತದೆ. ನಿಮಗೆ ನಿಮ್ಮ ಭವಿಷ್ಯ ಮುಖ್ಯವಾಗಬೇಕೆ ಹೊರತು ಕ್ಷಣಿಕ ಸುಖದ ಮೊಬೈಲ್ ಅಲ್ಲ. 
ಆರ್.ಬಿ.ಗುರುಬಸವರಾಜ

ಆ್ಯಂಕರಿಂಗ್ ಎಂಬ ಕನಸಿನ ಲೋಕ Anchoring

ದಿನಾಂಕ 26-9-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಆ್ಯಂಕರಿಂಗ್ ಎಂಬ ಕನಸಿನ ಲೋಕ 


ಉಪಗ್ರಹ ಆಧಾರಿತ ಚಾನಲ್‌ಗಳ ಪ್ರವೇಶದೊಂದಿಗೆ ಜನಪ್ರಿಯ ವೃತ್ತಿಯಾದ ಆ್ಯಂಕರಿಂಗ್ ಯುವಪೀಳಿಗೆಯ ಆಕರ್ಷಣೆಯ ಕ್ಷೆÃತ್ರವಾಗಿದೆ. ಹಲವಾರು ಸುದ್ದಿ ಹಾಗೂ ಮನೋರಂಜನಾ ಚಾನಲ್‌ಗಳಲ್ಲಿ ವೈಯಾರದ ಮಾತುಗಳಿಂದ ಪ್ರೆÃಕ್ಷಕರ ಮನ ಗೆದ್ದ ಅನೇಕರು ತಾರೆಗಳ ಸಾಲಿನಲ್ಲಿ ಸೇರಿರುವುದೂ ಸಹ ಆಕರ್ಷಣೆಯ ಮತ್ತೊಂದು ಬಿಂದುವಾಗಿದೆ. 
ಇಂದಿನ ಯುವಪೀಳಿಗೆಗೆ ದೃಶ್ಯ ಮಾಧ್ಯಮದಲ್ಲಿ ಕಾಣಿಸಿಕೊಳ್ಳುವಾಸೆ ಅಧಿಕ. ನಟರಾಗಿ, ಕಾರ್ಯಕ್ರಮ ನಿರೂಪಕರಾಗಿ, ವಾರ್ತಾ ವಾಚಕರಾಗಿ, ಸಂವಹನಕಾರರಾಗಿ ಹೀಗೆ ವಿಭಿನ್ನ ರೂಪಗಳಲ್ಲಿ ಕಾಣಿಸಿಕೊಳ್ಳುವಾಸೆ. ಏಕೆಂದರೆ ಏಕಕಾಲದಲ್ಲಿ ಸಾವಿರಾರು ಕಣ್ಣುಗಳು ತಮ್ಮನ್ನು ನೋಡುತ್ತಾರೆ, ತಮ್ಮ ಅಂದ ಹಾಗೂ ವಿದ್ವತ್ತನ್ನು ಮೆಚ್ಚುತ್ತಾರೆ, ತಮ್ಮ ಶೈಲಿಯನ್ನು ಅನುಸರಿಸುತ್ತಾರೆ, ಅಭಿಮಾನಗಳ ಸಂಖ್ಯೆ ಹೆಚ್ಚುತ್ತದೆ ಎಂಬ ಕಲ್ಪನೆ ಸಹಜ. ನಾವೂ ಅವರಂತೆ ಆ್ಯಂಕರ್ ಆಗಬೇಕು ಎಂಬ ತುಡಿತ ಮಿಡಿತ ಯುವಪೀಳಿಗೆಯಲ್ಲಿರುವುದು ಸಹಜ. ಹೌದು ಆ್ಯಂಕರ್ ಆಗುವುದರಿಂದ ಮೇಲಿನ ಎಲ್ಲಾ ಪ್ರಯೋಜನಗಳು ದೊರೆಯುತ್ತವೆ. ಹಾಗಾದರೆ ಆ್ಯಂಕರ್ ಆಗಲು ಬೇಕಾದ ಅರ್ಹತೆಗಳೇನು, ಅನುಸರಿಸಬೇಕಾದ ನಿಯಮಗಳೇನು ಎಂಬುದನ್ನು ತಿಳಿಯೋಣ.  
ಆ್ಯಂಕರ್ ಎಂದರೆ,,,,, : ಕನ್ನಡದಲ್ಲಿ ನಿರೂಪಕರು ಎಂದು ಕರೆಯಲ್ಪಡುವ ಆ್ಯಂಕರ್ ಎಂಬ ಪದವು ಹಲವು ರೂಪಗಳನ್ನು ಹೊಂದಿದೆ. ಪ್ರೆಸೆಂಟರ್, ಹೋಸ್ಟ್, ನ್ಯೂಸ್ ರೀಡರ್, ಪ್ರೊÃಗ್ರಾಂ ಆ್ಯಂಕರ್ ಹೀಗೆ ವಿವಿಧ ರೂಪಗಳನ್ನು ಹೊಂದಿದೆ. ಇವರು ಚಾನಲ್ ಮತ್ತು ಪ್ರೆÃಕ್ಷಕರ ನಡುವೆ ಮಧ್ಯವರ್ತಿಗಳಾಗಿದ್ದಾರೆ. ಚಾನಲ್‌ನ ಕಾರ್ಯಕ್ರಮಗಳನ್ನು ಪ್ರೆÃಕ್ಷಕರಿಗೆ ಮನಮುಟ್ಟುವಂತೆ ತಲುಪಿಸುವುದೇ ಆ್ಯಂಕರ್‌ಗಳ ಕೆಲಸವಾಗಿದೆ. ಇವರು ಕೇವಲ ನಿರೂಪಕರಲ್ಲದೇ ತಮ್ಮ ಜ್ಞಾನವನ್ನು ವಿಸ್ತರಿಸುವ ಹಾಗೂ ಅದನ್ನು ಪ್ರೆÃಕ್ಷಕರಿಗೆ ಹಂಚುವ ಕಾರ್ಯ ಮಾಡುತ್ತಾರೆ. ಮನೋರಂಜನೆ ಅಥವಾ ಗಂಭೀರ ಸುದ್ದಿ ಪ್ರಸ್ತುತಿ ಇರಲಿ ಕಾರ್ಯಕ್ರಮದ ಉದ್ದಕ್ಕೂ ವೀಕ್ಷಕರನ್ನು ಆಕರ್ಷಿಸುವ ಗುಣಮಟ್ಟವನ್ನು ಅವರು ಹೊಂದಿರಬೇಕು. ಇದು ಅತ್ಯಂತ ಸವಾಲಿನ ಕ್ಷೆÃತ್ರವಾಗಿದೆ. ಕೇವಲ ಮಾಹಿತಿಯನ್ನು ವಿನಿಮಯ ಮಾಡದೇ ಕಾರ್ಯಕ್ರಮವನ್ನು ಮನೋರಂಜನಾತ್ಮಕ ರೀತಿಯಲ್ಲಿ ಪ್ರೆÃಕ್ಷಕರಿಗೆ ತಲುಪಿಸುವ ಗುರುತರ ಜವಾಬ್ದಾರಿ ಇವರ ಮೇಲಿದೆ. 

ಆ್ಯಂಕರ್‌ಗಳಲ್ಲಿ ಮೂರು ರೀತಿಯ ಆ್ಯಂಕರ್‌ಗಳನ್ನು ನೋಡುತ್ತೆÃವೆ. ಅವುಗಳೆಂದರೆ 
ಪ್ರೊÃಗ್ರಾಂ ಆ್ಯಂಕರ್: ನಿರ್ಧಿಷ್ಟ ಕಾರ್ಯಕ್ರಮವನ್ನು ನಡೆಸಿಕೊಡುವ ನಿರೂಪಕರು. ಇವರು ಮನೋರಂಜನಾ ಕಾರ್ಯಕ್ರಮ, ಹಾಸ್ಯ ಕಾರ್ಯಕ್ರಮಗಳು, ಸನ್ಮಾನ ಸಮಾರಂಭಗಳು, ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮ, ವಿವಿಧ ಸಾಂಸ್ಕೃತಿಕ/ದಿನಾಚರಣೆಗಳ ವೇದಿಕೆ ಕಾರ್ಯಕ್ರಮಗಳ ನಿರ್ವಹಣೆ ಮಾಡುವುದು.
ನ್ಯೂಸ್ ರೀಡರ್ : ವಿವಿಧ ಭಾಷೆಗಳ ಪ್ರಾದೇಶಿಕ/ರಾಜ್ಯ/ರಾಷ್ಟಿçÃಯ ಸುದ್ದಿಗಳನ್ನು ಓದುವವರು.
ಲೈವ್ ಆ್ಯಂಕರ್ : ರಿಯಾಲಿಟಿ ಷೋಗಳು, ಅಡುಗೆ ಕಾರ್ಯಕ್ರಮಗಳು, ಕ್ರಿÃಡೆಗಳು, ಚರ್ಚೆ, ಸಂವಾದಗಳು, ಮುಂತಾದ ಲೈವ್ ಕಾರ್ಯಕ್ರಮ ನಿರೂಪಕರು. 
ಇರಬೇಕಾದ ಅರ್ಹತೆಗಳು : ಆ್ಯಂಕರಿಂಗ್ ಎಂಬುದು ಸಾಮಾನ್ಯವಾದ ಕೆಲಸವಲ್ಲ. ಇದು ಆಕರ್ಷಕವಾಗಿ ಕಾಣುವ ಸವಾಲಿನ ಕೆಲಸ. ಕೆಲವೊಂದು ಅರ್ಹತೆಗಳು ಅಗತ್ಯವಾಗಿ ಬೇಕು. ನ್ಯೂಸ್ ರೀಡರ್‌ಗಳಿಗೆ ಪತ್ರಿಕೋಧ್ಯಮ ಹಾಗೂ ಸಮೂಹ ಮಾಧ್ಯಮದಂತಹ ಸ್ನಾತಕ ಪದವಿ ಅತ್ಯಗತ್ಯ. ಕೇವಲ ಪದವಿ ಇದ್ದರೆ ಸಾಲದು. ಅದರ ಜೊತೆಗೊಂದಿಷ್ಟು ಸಾಮಾನ್ಯ ಅರ್ಹತೆಗಳು ಅವಶ್ಯಕ. 
ಶುದ್ದ ಭಾಷಾಜ್ಞಾನ
ಉತ್ತಮ ಸಂವಹನ ಕೌಶಲ್ಯ
ಪ್ರಾಪಂಚಿಕ ಜ್ಞಾನ(ಆಗುಹೋಗುಗಳ ಪರಿಚಯ)
ಶಬ್ದಭಂಢಾರ
ಆಕರ್ಷಕ ದೇಹ ಮತ್ತು ಆರೋಗ್ಯಯುತ ಮನಸ್ಸು
ಮೋಡಿಮಾಡುವ ಮಾತುಗಾರಿಕೆ
ಆತ್ಮವಿಶ್ವಾಸ
ಸಹಕಾರ ಮತ್ತು ಹೊಂದಿಕೊಳ್ಳುವ ಗುಣ 
ಕನಸಿಗೆ ಪರಿಶ್ರಮದ ಬಣ್ಣ ಬಳಿಯಿರಿ:
ಇಂದಿನ ಯುವಜನತೆ ತಾವೊಬ್ಬ ಉತ್ತಮ ಆ್ಯಂಕರ್ ಆಗಬೇಕೆಂಬ ಕನಸು ಕಾಣುವುದು ತಪ್ಪೆÃನಲ್ಲ. ಆದರೆ ಅದಕ್ಕೊಂದಿಷ್ಟು ಕಿರು ತಯಾರಿ ಅಗತ್ಯ ಎಂಬುದನ್ನು ಮರೆಯಬಾರದು. ಕೆಳಗಿನ ಕೆಲವು ಕ್ರಮಗಳನ್ನು ಪಾಲಿಸುವ ಮೂಲಕ ಕೌಶಲ್ಯ ಗಳಿಸಿಕೊಂಡರೆ, ನೀವೊಬ್ಬ ಉತ್ತಮ ಆ್ಯಂಕರ್ ಆಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ.
ಅರ್ಹತೆ : ಸಾಮಾನ್ಯ ಕಾರ್ಯಕ್ರಮಗಳ ನಿರೂಪಕರಾಗಲು ಯಾವುದೇ ವಿದ್ಯಾರ್ಹತೆಯ ಅಗತ್ಯವಿಲ್ಲ. ಆದರೂ ಭಾಷಾಜ್ಞಾನ ಮತ್ತು ಸಂವಹನ ಕೌಶಲ್ಯ ಬೆಳೆಸಿಕೊಳ್ಳಲು ಅಗತ್ಯ ವಿದ್ಯಾರ್ಹತೆ ಅಗತ್ಯ. ಟಿ.ವಿ.ಗಳಲ್ಲಿ ನ್ಯೂಸ್ ರೀಡರ್ ಆಗಬೇಕಾದರೆ ಬ್ರಾಡ್‌ಕಾಸ್ಟ್ ಜರ್ನಲಿಸಂನಲ್ಲಿ ಸ್ನಾತಕ ಪದವಿ ಹೊಂದಿದವರಿಗೆ ಹೆಚ್ಚಿನ ಅವಕಾಶಗಳಿವೆ. ಜೊತೆಗೆ ಇಂಗ್ಲಿÃಷ್ ಮತ್ತು ಮಾಸ್ ಕಮ್ಯೂನಿಕೇಶನ್‌ನಲ್ಲಿ ಪದವಿ ಗಳಿಸಿದವರಿಗೆ ಆಧ್ಯತೆ ಹೆಚ್ಚು. 
ಜವಾಬ್ದಾರಿಯುತ ಕಾರ್ಯನಿರ್ವಹಣೆ : ನಿಮಗೆ ನೀಡಿದ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಕೌಶಲ್ಯ ಬೆಳೆಸಿಕೊಳ್ಳಬೇಕಾದುದು ಅಗತ್ಯ. ನಿಮಗೆ ನೀಡಿದ ಕಾರ್ಯದ ಎಲ್ಲಾ ಆಯಾಮಗಳನ್ನು ಅರ್ಥೈಸಿಕೊಂಡು ಅದರ ಯಶಸ್ಸಿಗೆ ಪರಿಶ್ರಮಿಸುವ ಬದ್ದತೆ ಇರಬೇಕು. ಇಲ್ಲಿ ವೈಯಕ್ತಿಕ ಜೀವನಕ್ಕಿಂತ ವೃತ್ತಿ ಜೀವನಕ್ಕೆ ಹೆಚ್ಚು ಗಮನಕೊಡಬೇಕಾಗುತ್ತದೆ. ಅದಕ್ಕಾಗಿ ಕಎಲವು ಯಶಸ್ವಿ ಆ್ಯಂಕರ್‌ಗಳ ಜೀವನವನ್ನು ಅಧ್ಯಯನ ಮಾಡಿದಾಗ ಅವರ ಪ್ರಯತ್ನದ ಹಾದಿ ತಿಳಿಯುತ್ತದೆ. ಅರ್ಹತೆಯುಳ್ಳ ಅನೇಕರು ಅರ್ದಕ್ಕೆ ಕೆಲಸ ಬಿಟ್ಟ ಉದಾಹರಣೆಗಳಿವೆ. ಅಂತಯೇ ವಿದ್ಯಾರ್ಹತೆ ಇಲ್ಲದಿದ್ದರೂ ಬದ್ದತೆಯಿಂದ ಕೆಲಸ ಮಾಡುವವರು ಉನ್ನತ ಹಂತ ತಲುಪಿದ್ದಾರೆ. ವರದಿಗಾರರು, ಕ್ಯಾಮೆರಾಮನ್ ಆಗಿ ಸೇರಿದವರು ಇಂದು ಉನ್ನತ ಹಂತಕ್ಕೆ ಏರಿದ್ದಾರೆ. ತಮಗೆ ನೀಡಿದ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿರುವುದೇ ಬೆಳವಣಿಗೆಗೆ ಕಾರಣ.
ಪ್ರಾಪಂಚಿಕ ಘಟನೆಗಳ ಜ್ಞಾನ : ಆ್ಯಂಕರ್ ಆಗಬೇಕಾದರೆ ಪ್ರಾಪಂಚಿಕ ಜ್ಞಾನದ ಅರಿವು ಅಗತ್ಯ. ಜಗತ್ತಿನಲ್ಲಿ ನಡೆಯುತ್ತಿರುವ ಸಧ್ಯದ ಘಟನೆಗಳು, ವಿಸ್ಮಯಗಳ ಬಗ್ಗೆ ಅರಿವು ಇರಬೇಕಾಗುತ್ತದೆ. ಘಟನೆಗಳನ್ನು ವಿವಿಧ ಆಯಾಮಗಳಿಂದ ವಿಶ್ಲೆÃಷಿಸುವ ಕೌಶಲ್ಯ ಇರಬೇಕು. 
ಮಾತಿನ ಕೌಶಲ್ಯ :  ಮಾತಿನ ಕೌಶಲ್ಯ ಇರದ ಹೊರತು ಆ್ಯಂಕರ್‌ಗಳಾಗಲು ಸಾಧ್ಯವೇ ಇಲ್ಲ. ಪ್ರಸ್ತುತಪಡಿಸುವ ಸುದ್ದಿ ಅಥವಾ ಕಾರ್ಯಕ್ರಮಕ್ಕೆ ವೀಕ್ಷಕರನ್ನು ಸೆಳೆಯುವ ಕಾರ್ಯತಂತ್ರವೆಂದರೆ ಮಾತಿನ ಕುಶಲತೆ. ಧ್ವನಿ, ಹಾವಭಾವ, ಶಭ್ದಗಳ ಬಳಕೆ, ಮುಕ್ತ ಸಂವಹನ ಇವೆಲ್ಲವೂ  ಮಾತಿನಶೈಲಿಯನ್ನು ನಿರ್ಧರಿಸುತ್ತವೆ. ಸಂದರ್ಶನದ ವೇಳೆಯಲ್ಲಿ ಪ್ರಶ್ನಿಸುವ ಕೌಶಲ್ಯ ಹಾಗೂ ಸಂದರ್ಶಕರ ಮಾತಿನಲ್ಲಿನ ಆಂತರ್ಯವನ್ನು ಬಿಂಬಿಸುವ ಕುಶಲತೆ ಇರಬೇಕು. ಸ್ಪಷ್ಟ ಉಚ್ಛಾರ, ವಿವಿಧ ಪದಗಳ ಬಳಕೆ, ಧ್ವನಿಯ ಏರಿಳಿತ ಅಗತ್ಯ.
ಸ್ಟೆಮಿನಾ : ರಾಷ್ಟಿçÃಯ ಹಾಗೂ ಅಂತರರಾಷ್ಟಿçÃಯ ಸುದ್ದಿ ಚಾನಲ್‌ಗಳಲ್ಲಿ ಕೆಲಸ ಮಾಡುವವರು ಸಮಯದ ಹಂಗನ್ನು ಕೆಲಸ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಯಾವ ಸಂಧರ್ಭದಲ್ಲಿ ಎಲ್ಲಿಗೆ ಹೋಗಿ ಸುದ್ದಿ ಮಾಡುವ ಅಗತ್ಯವಿರುತ್ತದೆ ಎಂಬುದನ್ನು ಊಹಿಸಲಾಗುವುದಿಲ್ಲ. ಅಲ್ಲಿಗೆ ಹೋದ ಮೇಲೆ ವಾಪಾಸಾಗುವುದು ಯಾವಾಗ ಎಂಬುದು ಸಹ ತಿಳಿದಿರುವುದಿಲ್ಲ. ಇಂತಹ ವೇಳೆ ಆಹಾರ ನೀರಡಿಕೆಗಳನ್ನು ತ್ಯಜಿಸಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಅದಕ್ಕಾಗಿ ಅಗತ್ಯ ಸ್ಟೆಮಿನಾ(ತ್ರಾಣ) ಬಳೆಸಿಕೊಳ್ಳಬೇಕಾಗುತ್ತದೆ. 
ಕ್ಯಾಮೆರಾಸ್ನೆÃಹಿ ನೋಟ : ಆ್ಯಂಕರ್‌ಗಳು ಸಾಮಾನ್ಯವಾಗಿ ಕ್ಯಾಮೆರಾ ಮುಂದೆ ಕೆಲಸ ಮಾಡಬೇಕಾಗಿರುತ್ತದೆ. ಅದಕ್ಕಾಗಿ ಕ್ಯಾಮೆರಾಸ್ನೆÃಹಿ ಮುಖ ಹಾಗೂ ದೇಹ ಹೊಂದಬೇದುದು ಅಗತ್ಯ. ಇದಕ್ಕಾಗಿ ಆಹಾರ ಕ್ರಮದ ಮೇಲೆ ನಿಯಂತ್ರಣ ಇರಬೇಕಾಗುತ್ತದೆ. ಶಕ್ತಿ ಮತ್ತು ಹುರುಪು ಪಡೆಯಲು ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಆಹಾರಕ್ಕಾಗಿ ಆಯ್ಕೆ ಮಾಡಿಕೊಳ್ಳಬೇಗುತ್ತದೆ. ಕೊಬ್ಬು ಬೆಳವಣಿಗೆಯಾಗದಂತೆ ನಿಯಮಿತ ವ್ಯಾಯಾಮದಲ್ಲಿ ತೊಡಗಿಕೊಳ್ಳಬೇಕು. 
ಉಡುಪುಗಳ ಸಭ್ಯತೆ : ಆ್ಯಂಕರ್‌ಗಳು ಸದಾ ವೀಕ್ಷಕರ ಮುಂದೆ ಇರಬೇಕಾದುದರಿಂದ ಆಕರ್ಷಕ ಉಡುಪು ಧರಿಸಿಬೇಕಾಗುತ್ತದೆ. ಉಡುಪುಗಳು ವ್ಯಕ್ತಿತ್ವದ ಸಂಕೇತ. ಇತರರ ಭಾವನೆಗಳಿಗೆ ತೊಂದರೆಯಾಗದಂತಹ ರೀತಿಯಲ್ಲಿ ಉಡುಪು ಧರಿಸುವುದು ಇಂದಿನ ಅಗತ್ಯವಾಗಿದೆ. ಆ್ಯಂಕರ್‌ಗಳನ್ನು ಕೇವಲ ಒಂದು ವರ್ಗದ ಜನ ವೀಕ್ಷಿಸುವುದಿಲ್ಲ. ಮಕ್ಕಳಿಂದ ವೃದ್ದರವರೆಗೆ ಎಲ್ಲಾ ಹಂತದ ಜನ ವೀಕ್ಷಿಸುವುದರಿಂದ ಉಡುಪುಗಳಲ್ಲಿ ಸಭ್ಯತೆ ಅಗತ್ಯ. ಸೂಟ್‌ಗಳಂತಹ ಉಡುಪುಗಳು ಎಲ್ಲರಿಗೂ ಅಚ್ಚುಮೆಚ್ಚು. ಹಾಗಾಗಿ ಆ್ಯಂಕರ್‌ಗಳು ಸೂಟ್‌ಗಳನ್ನು ಹೆಚ್ಚಾಗಿ ಧರಿಸುತ್ತಾರೆ. 
ಬದಲಾವಣೆಗೆ ಸಿದ್ದತೆ : ನಿರೂಪಣೆಯಲ್ಲಿ ಕೊನೆ ಕ್ಷಣದ ಬದಲಾವಣೆಗಳು ಸಹಜ. ಇಂತಹ ಬದಲಾವಣೆಗೆ ಹೊಂದಿಕೊಳ್ಳುವ ಹಾಗೂ ಅದನ್ನು ನಿಭಾಯಿಸುವ ಕೌಶಲ್ಯ ನಿರೂಪಕರಿಗೆ ಇರಬೇಕಾದುದು ಅಪೇಕ್ಷಣೀಯ. ಬದಲಾವಣೆಗೆ ಹೊಂದಿಕೊಳ್ಳದಿದ್ದರೆ ಆ್ಯಂಕರ್‌ಗಳ ಇಮೇಜ್ ಹಾಳಾಗುತ್ತದೆ. 
ಮಾನವೀಯತೆಯತೆ : ನಿರೂಪಕರಿಗೆ ಇರಲೇಬೇಕಾದ ಬಹುದೊಡ್ಡ ಗುಣ ಅಥವಾ ಮಾನವೀತೆ. ಸಂದರ್ಶನ ಅಥವಾ ಚರ್ಚೆ ವೇಳೆ ನಾವೂ ಒಬ್ಬ ಮನುಷ್ಯರಾಗಿ ಇನ್ನೊಬ್ಬ ಮನುಷ್ಯರೊಂದಿಗೆ ಸಂವಾದ ನಡೆಸುತ್ತಿದ್ದೆÃವೆ ಎಂಬುದನ್ನು ಮನದಲ್ಲಿಟ್ಟುಕೊಂಡು ವರ್ತಿಸುವ ಕೌಶಲ್ಯ ಬೆಳೆಸಿಕೊಳ್ಳಬೇಕು. ಯಾರನ್ನೂ ಅನಗತ್ಯವಾಗಿ ದೂಷಿಸದೇ, ತೇಜೋವಧೆ ಮಾಡದೇ, ಮಾನವೀಯ ಹಕ್ಕುಗಳ ನೆಲೆಯಲ್ಲಿ ಪ್ರಸ್ತುತಿ ನಡೆಸಬೇಕು. ಆ ಮೂಲಕ ಮಾನವೀಯತೆ ಮೆರೆಯಬೇಕು.
ಜವಾಬ್ದಾರಿಗಳು
ತಂಡದ ಸದಸ್ಯರಿಂದ ಪಡೆದ ಸುದ್ದಿ/ವಿಷಯವನ್ನು ಸಮಯದ ಮಿತಿಗನುಗುಣವಾಗಿ ಹಿರಿಯರ ಸಲಹೆ ಪಡೆದು ಪಸ್ತುತಿಗೆ ಇದ್ದಪಡಿಸುವುದು.
ಸುದ್ದಿ ಕಥೆಯನ್ನು ವಿಷಯಕ್ಕೆ ಅನುಗುಣವಾಗಿ ನಿರೂಪಿಸುವುದು.
ವ್ಯಕ್ತಿ ಸಂದರ್ಶನದಲ್ಲಿ ಅಗತ್ಯ ಮಾಹಿತಿ ಸಂಗ್ರಹಿಸುವುದು. ವ್ಯಕ್ತಿಯ ಪೂರ್ವಾಪರಗಳನ್ನು ತಿಳಿದು ಸಂದರ್ಶನ ಪ್ರಶ್ನೆಗಳನ್ನು ಸಿದ್ದಪಡಿಸಿಕೊಳ್ಳುವುದು.
ಸ್ಥಳ/ಘಟನೆಯ ಪರಿಚಯದಲ್ಲಿ ಅದಕ್ಕೆ ಪೂರಕ ಮಾಹಿತಿಗಳನ್ನು ಕಲೆಹಾಕುವುದು.
ತಪ್ಪು ಮಾಹಿತಿ ನೀಡುವುದನ್ನು ತಡೆಯುವುದು.
ವಿವಿಧ ಮೂಲಗಳಿಂದ ಸಂಗ್ರಹಿಸಿದ ಸುದ್ದಿ/ವಿಷಯಗಳನ್ನು ಲೈವ್‌ಗೆ ಮುಂಚಿತವಾಗಿ ಪರಿಶೀಲಿಸುವುದು.
ವ್ಯಕ್ತಿಯ ತೇಜೋವಧೆ/ ಹಕ್ಕುಗಳ ಉಲ್ಲಂಘನೆ ಆಗುವುದನ್ನು ತಡೆಯುವುದು.
ಪ್ರಸ್ತುತ ವಿದ್ಯಮಾನಗಳಿಗೆ ಸಂಬಂಧಿಸಿದ ಹೊಸ ಶೈಲಿಯ ಸುದ್ದಿಯನ್ನು ಸೃಜಿಸುವುದು. ಆ ಮೂಲಕ ವೀಕ್ಷಕರ ಸಂಖ್ಯೆ ಹೆಚ್ಚುವಂತೆ ಮಾಡುವುದು.
ಅಂತರಜಾಲ ಸುದ್ದಿಗಳ ಸತ್ಯಾಸತ್ಯತೆ ತಿಳಿದು ಪ್ರಸಾರಕ್ಕೆ ಆಯ್ಕೆ ಮಾಡಿಕೊಳ್ಳುವುದು.
ನಿರ್ದಿಷ್ಟ ಸಮಯದೊಳಗೆ ಸುದ್ದಿ/ಮಾಹಿತಿಯನ್ನು ಓದುವುದು ಮತ್ತು ಪ್ರಸ್ತುತಿ ಪಡಿಸುವುದು. 
ಬೃಹತ್ ಪ್ರಮಾಣದಲ್ಲಿ ಒಳಬರುವ ಡಾಟಾವನ್ನು ವಿಂಗಡಿಸುವುದು, ಸಂಸ್ಕರಿಸುವುದು ಮತ್ತು ಆಧ್ಯತೆಗೆ ತಕ್ಕಂತೆ ಆಯ್ಕೆ ಮಾಡಿಕೊಂಡು ಪ್ರಸ್ತುಪಡಿಸುವುದು.
- ಆರ್.ಬಿ.ಗುರುಬಸವರಾಜ ಹೊಳಗುಂದಿ
                               

ಅರೋರಾ ಕಂಡೀರಾ! Arorea

ದಿನಾಂಕ 22-9-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.
ಅರೋರಾ ಕಂಡೀರಾ!


ಅರೋರಾ ಕಂಡಿರಾ!

ಕೆಲವೊಮ್ಮೆ ಸಂಜೆಯ ವೇಳೆ ಆಕಾಶದಲ್ಲಿ ಮಾಂತ್ರಿಕ ಪ್ರದರ್ಶನ ಏರ್ಪಟ್ಟಿರುತ್ತದೆ. ಸಂಜೆಯ ಆಗಸದಲ್ಲಿ ಬಣ್ಣಬಣ್ಣದ ಮೋಡಗಳ ಚಿತ್ತಾರವನ್ನು ಕಂಡಿದ್ದಿÃರಾ? ನೋಡಲು ಬಹು ಸುಂದರವಾಗಿರುತ್ತದೆ ಅಲ್ಲವೇ? ಬಣ್ಣ ಬಣ್ಣದ ಮೋಡಗಳಲ್ಲಿ ವಿವಿಧ ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ಕಲ್ಪಿಸಿಕೊಂಡು ಅವುಗಳನ್ನು ನೋಡುವುದೇ ಒಂದು ಸಂಭ್ರಮ. ಇಂತಹ ಸನ್ನಿವೇಶಗಳು ಅನಿರೀಕ್ಷಿತವಾಗಿ ಘಟಿಸುತ್ತವೆ. ಬೆಳಕಿನ ವರ್ಣ ವಿಭಜನೆಯಿಂದದ ಇಂತಹ ನೈಸರ್ಗಿಕ ವಿದ್ಯಮಾನಗಳನ್ನು ನೋಡಿ ಸವಿಯತ್ತೆÃವೆ. ಧ್ರುವ ಪ್ರದೇಶಗಳಲ್ಲಿ ಇಂತಹ ಇನ್ನೊಂದು ವೈವಿಧ್ಯಮಯ ವಿದ್ಯಮಾನ ಜರುಗುತ್ತದೆ. ಅದೇ ಅರೋರಾ. ಈ ಅರೋರಾದ ಬಗ್ಗೆ ತಿಳಿಯುವ ಕುತುಹಲವಿದ್ದರೆ ಮುಂದೆ ಓದಿ.
ಅರೋರಾ ಎಂದರೆ,,,,,,
ಧ್ರುವ ಪ್ರದೇಶಗಳಲ್ಲಿ ರಾತ್ರಿಯ ವೇಳೆ ಆಗಸದಲ್ಲಿ ಕಾಣಬರುವ ವರ್ಣರಂಜಿತ ಬೆಳಕಿನಾಟವೇ ಅರೋರಾ. ಇದೊಂದು ನೈಸರ್ಗಿಕ ವಿದ್ಯಮಾನವಾಗಿದ್ದು, ಇದನ್ನು ಅರೋರಾ ಬೋರಿಯಾಲಿಸ್ ಎಂತಲೂ ಕರೆಯುತ್ತಾರೆ. ಅರೋರಾ ಸಾಮಾನ್ಯವಾಗಿ ಹಸಿರು ಬಣ್ಣದ ಹೊಳಪಿನಿಂದ ಕೂಡಿರುತ್ತದೆ. ಕೆಲವೊಮ್ಮೆ ತಿಳಿಕೆಂಪು ಬಣ್ಣವೂ ಸಹ ಇದರಲ್ಲಿ ಕೂಡಿರುತ್ತದೆ. ಮೊದಲ ನೋಟಕ್ಕೆ ಬೇರಾವುದೇ ದಿಕ್ಕಿನಲ್ಲಿ ಜರುಗುವ ಸೂರ್ಯೋದಯದಂತೆ ಭಾಸವಾಗುತ್ತದೆ. ಅರೋರಾ ಬೋರಿಯಾಲಿಸನ್ನು ತೆಂಕಣ ಬೆಳಕು ಎಂತಲೂ ಕರೆಯುತ್ತಾರೆ. 
ಬಣ್ಣದ ಬೆಳಕನ್ನು ಚೆಲ್ಲುತ್ತಿರುವ ಕುಂಡದಂತೆ ಅಥವಾ ಪೂರ್ವದಿಂದ ಪಶ್ಚಿಮಕ್ಕೆ ಕಟ್ಟಿರುವ ಒಂದು ಬಣ್ಣದ ಪರದೆಯಂತೆ ಅರೋರಾವು ಗೋಚರಿಸುತ್ತದೆ. ಕೆಲವೊಮ್ಮೆ ಇವು ಆಗಸದಲ್ಲಿ ದಪ್ಪನಾಗಿ ಎಳೆದಿರುವ ಸ್ಥಿರ ವಕ್ರ ರೇಖೆಗಳಂತೆ ಕಂಡರೆ, ಕೆಲವು ಸಲ ಅರೋರಾಗಳು ಕ್ಷಣಕ್ಷಣಕ್ಕೂ ಆಕಾರ ಬದಲಿಸುತ್ತವೆ. ಪ್ರತಿ ಬಣ್ಣದ ಪರದೆಯು ಕೆಲವಾರು ಸಮಾನಾಂತರ ರೇಖೆಗಳನ್ನು ಹೊಂದಿದ್ದು ಈ ಗೆರೆಗಳು ಆ ಕ್ಷೇತ್ರದ ಕಾಂತೀಯ ಗೆರೆಗಳಿಗೆ ಅನುಗುಣವಾಗಿಯೇ ಇರುತ್ತವೆ. ಇದರಿಂದಾಗಿ ಅರೋರಾಗಳ ಆಕಾರವು ಭೂಮಿಯ ಕಾಂತತ್ವದ ಮೇಲೆ ನಿರ್ಧರಿಸಲ್ಪಡುತ್ತದೆಂದು ತಿಳಿಯಲಾಗಿದೆ. ಧ್ರುವಪ್ರದೇಶಗಳಲ್ಲಿ ಆರೋರಾದ ಉಗಮವು ಅತಿ ಸಾಮಾನ್ಯ.
ಅರೋರಾ ಹೀಗೆ ಉಂಟಾಗುತ್ತದೆ
ಭೂಮಿಯ ವಾತಾವರಣದ ಮೇಲ್ಪದರದಲ್ಲಿರುವ ಪರಮಾಣುಗಳಿಗೆ ಕಾಂತಗೋಲದಲ್ಲಿನ ವಿದ್ಯುತ್ಪೆçÃರಿತ ಧನ ಅಥವಾ ಋಣ ಆಯಾನುಗಳು ಢಿಕ್ಕಿ ಹೊಡೆದಾಗ ಅರೋರಾ ಉಂಟಾಗುತ್ತದೆ. ಸೂರ್ಯನ ಮಧ್ಯಭಾಗದಲ್ಲಿನ ಸರಾಸರಿ ತಾಪವು 15 ದಶಲಕ್ಷ ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಇದು ಕೆಲವು ವೇಳೆ ಏರಿಳಿತವಾಗುತ್ತದೆ. ಸೌರಜ್ವಾಲೆಗಳು ಸೌರಮಾರುತಗಳು ಎಂದು ಕರೆಯಲ್ಪಡುವ ಪ್ಲಾಸ್ಮಾ ಕಣಗಳನ್ನು ಅಂತರಿಕ್ಷಕ್ಕೆ ಹರಿಸುತ್ತವೆ. 
ಸೌರಮಾರುತಗಳು ಗಂಟೆಗೆ 300 ರಿಂದ 1200 ಕಿ.ಮೀ ವೇಗದಲ್ಲಿ ಅಂತರಿಕ್ಷದತ್ತ ಸಾಗುತ್ತವೆ. ವಿದ್ಯುತ್ಪೆçÃರಿತವಾದ ಈ ಕಣಗಳು ಭೂಮಿಯ ವಾತಾವರಣದಲ್ಲಿನ ಅನಿಲಗಳ ಪರಮಾಣುಗಳಿಗೆ ಢಿಕ್ಕಿ ಹೊಡೆದಾಗ ಅವು ಉತ್ತೆÃಜಿತವಾಗುತ್ತವೆ. ಅನಿಲಗಳ ಪರಮಾಣುಗಳು ಸೌರಮಾರುತದಿಂದ ಪಡೆದ ಶಕ್ತಿಯನ್ನು ಬೆಳಕಿನ ರೂಪದಲ್ಲಿ ಹೊರಹಾಕುತ್ತವೆ. ಬೆಳಕಿನ ಈ ಶಕ್ತಿಯು ಆಗಸದಲ್ಲಿ ವರ್ಣರಂಜಿತವಾಗಿ  ಕಾಣಿಸುವುದು. ಇದೇ ಅರೋರಾ. 
ಅರೋರಾ ಬಣ್ಣಬಣ್ಣವೇಕೆ?
ಅರೋರಾ ಗುಲಾಬಿ, ತಿಳಿಗೆಂಪು, ಹಸಿರು, ಹಳದಿ, ನೀಲಿ, ನೇರಳೆ, ಮತ್ತು ಕಿತ್ತಳೆ ಬಣ್ಣದಿಂದ ಕೂಡಿರುತ್ತದೆ. ಕಣಗಳು ಆಮ್ಲಜನಕದೊಂದಿಗೆ ಘರ್ಷಿಸಿದಾಗ ಹಳದಿ ಮತ್ತು ಹಸಿರು ಬಣ್ಣ ಉತ್ಪತ್ತಿಯಾಗುತ್ತದೆ. ಸಾರಜನಕದೊಂದಿಗೆ ಘರ್ಷಿಸಿದಾಗ ಕೆಂಪು, ನೇರಳೆ ಮತ್ತು ಸಾಂದರ್ಬಿಕವಾಗಿ ನೀಲಿ ಬಣ್ಣ ಉತ್ಪತ್ತಿ ಮಾಡುತ್ತದೆ. ಬಣ್ಣಗಳೂ ಸಹ ಎತ್ತರದ ಮೂಲಕ ಪ್ರಭಾವಿತವಾಗುತ್ತದೆ. ಹಸಿರು ಮತ್ತು ಕೆಂಪು ಬಣ್ಣವು ವಿಶಿಷ್ಠವಾಗಿ 241 ಕಿ.ಮೀ(150 ಮೈಲು) ದೂರದವರೆಗೂ ಗೋಚರಿಸಿದರೆ, ನೀಲಿ ಮತ್ತು ನೇರಳೆ ಬಣ್ಣವು 96.5 ಕಿ.ಮೀ(60 ಮೈಲಿ) ದೂರದವರೆಗೆ ಗೋಚರಿಸುತ್ತದೆ.
ಅರೋರಾ ವೀಕ್ಷಣೆಗೆ ಸೂಕ್ತ ಸಮಯ
ಅರೋರಾ ನೋಡಲು ಚಳಿಗಾಲ ಸೂಕ್ತ ಕಾಲ. ಈ ಸಮಯದಲ್ಲಿ ಮಾಲಿನ್ಯದ ಮಟ್ಟ ಕಡಿಮೆ ಇದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ಸೆಪ್ಟಂಬರ್, ಅಕ್ಟೊÃಬರ್, ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳು ಅರೋರಾ ವೀಕ್ಷಿಸಲು ಉತ್ತಮ ಸಮಯ. ಸೌರಜ್ವಾಲೆಗಳು ಹೆಚ್ಚು ಸಕ್ರಿಯವಾದ ಎರಡು ದಿನಗಳ ನಂತರ ಅರೋರಾ ಹೆಚ್ಚು ಪ್ರಕಾಶಮಾನವಾಗಿರುತ್ತದೆ.
ಅರೋರಾ ಎಲ್ಲೆಲ್ಲಿ ನೋಡಬಹುದು?
ಅರೋರಾ ನೋಡಲು ಅತ್ಯುತ್ತಮ ಸ್ಥಳವೆಂದರೆ ಅಮೇರಿಕಾದ ಅಲಾಸ್ಕಾ ಮತ್ತು ಉತ್ತರ ಕೆನಡಾ. ಇವು ಹೆಚ್ಚು ವಿಶಾಲ ಪ್ರದೇಶಗಳಾಗಿದ್ದು ಯಾವಾಗಲೂ ಅರೋರಾ ನೋಡುವುದು ಸುಲಭವಲ್ಲ. ನಾರ್ವೆ, ಸ್ವಿÃಡನ್ ಮತ್ತು ಫಿನ್‌ಲ್ಯಾಂಡ್‌ಗಳು ಉತ್ತಮ ವೀಕ್ಷಣಾ ತಾಣಗಳಾಗಿವೆ. ಸೌರಸ್ಪೊÃಟವು ಸಕ್ರಿಯವಾಗಿದ್ದಾಗ ದಕ್ಷಿಣದ ಸ್ಕಾಟ್‌ಲ್ಯಾಂಡ್ ಮತ್ತು ಉತ್ತರದ ಇಂಗ್ಲೆಂಡ್‌ನಲ್ಲೂ ಅರೋರಾವನ್ನು ಕಾಣಬಹುದು. ಅಪರೂಪದ ಸಂದರ್ಭಗಳಲ್ಲಿ ದಕ್ಷಿಣದ ಇಂಗ್ಲೆಂಡಿನಲ್ಲೂ ಕಾಣಬಹುದು. 
ಇತರೆ ಗ್ರಹಗಳಲ್ಲೂ ಅರೋರಾ !
ನಮ್ಮ ಸೌರಮಂಡಲದಲ್ಲಿ ಅನಿಲ ದೈತ್ಯರು ಎನಿಸಿಕೊಂಡ ಗುರು, ಶನಿ, ಯುರೇನೆಸ್, ನೆಪ್ಚೂನ್‌ಗಳಲ್ಲಿ ದಟ್ಟ ವಾಯುಮಂಡಲ ಮತ್ತು ಬಲವಾದ ಕಾಂತೀಯ ಕ್ಷೆÃತ್ರವಿದೆ. ಹಾಗಾಗಿ ಈ ಅನಿಲದೈತ್ಯ ಗ್ರಹಗಳಲ್ಲೂ ಅರೋರಾ ಕಾಣಬಹುದು. ಆದರೆ ಇಲ್ಲಿನ ಅರೋರಾ ಭೂಮಿಗಿಂತ ಸ್ವಲ್ಪ ಭಿನ್ನ ಸ್ಥಿತಿಯಲ್ಲಿ ರೂಪುಗೊಳ್ಳುತ್ತದೆ.
ಅರೋರಾದ ಇತಿಹಾಸ 
ಶತಶತಮಾನಗಳಿಂದಲೂ ಬೆಳಕು ಊಹಾಪೋಹ, ಮೂಢನಂಬಿಕೆ ಮತ್ತು ವಿಸ್ಮಯಗಳ ಮೂಲವಾಗಿತ್ತು. 30,000 ವರ್ಷಗಳ ಇತಿಹಾಸವಿರುವ ಫ್ರಾನ್ಸ್ನ ಗುಹೆಗಳಲ್ಲಿನ ವರ್ಣಚಿತ್ರಗಳು ಬೆಳಕಿನ ನೈಸರ್ಗಿಕ ವಿದ್ಯಮಾನದ ವಿವರಣೆ ಹೊಂದಿವೆ ಎಂದು ಭಾವಿಸಲಾಗಿದೆ. ಧ್ರುವ ಪ್ರದೇಶಗಳಲ್ಲಿ ಅರೋರಾದಂತಹ ಬೆಳಕು ಯುದ್ದ ಅಥವಾ ವಿನಾಶದ ಮುಂದಾಲೋಚನೆ ಎಂದು ಭಾವಿಸಲಾಗಿತ್ತು. ಅರಿಸ್ಟಾಟಲ್, ಡೆಸ್ಕಾರ್ಟೆ, ಗಯಟೆ, ಹ್ಯಾಲಿ ಮುಂತಾದ ಖಗೋಳಶಾಸ್ತçಜ್ಞರು ತಮ್ಮ ಕೃತಿಗಳಲ್ಲಿ ಅರೋರಾ ಬೆಳಕಿನ ಬಗ್ಗೆ ಉಲ್ಲೆÃಖೀಸಿದ್ದಾರೆ. 1616 ರಷ್ಟು ಮುಂಚೆ ಗೆಲಿಲಿಯೋ ಗೆಲಿಲಿ ಅರೋರಾ ಬೋರೊಯಾಲಿಸ್ ಎಂಬ ಹೆಸರನ್ನು ಬಳಸಿದ್ದಾರೆ. ರೋಮನ್ ಪುರಾಣ ದೇವತೆಯಾದ ಅರೋರಾ ಮತ್ತು ಗ್ರಿÃಕ್‌ನ ಉತ್ತರದ ಗಾಳಿಯಾದ ಬೋರಾಸ್ ಹೆಸರಿನಲ್ಲಿ ಅರೋರಾ ಬೋರೊಯಾಲಿಸ್ ಎಂಬ ಹೆಸರು ಬಂದಿದೆ ಎನ್ನುತ್ತಾರೆ.
ಆರ್.ಬಿ.ಗುರುಬಸವರಾಜ


ಸವಾಲಾದಿರಲಿ ಮಕ್ಕಳ ಸಂಕೋಚ ಸ್ವಭಾವ Shyness in Children

ದಿನಾಂಕ 18-9-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.



ಸವಾಲಾದಿರಲಿ ಮಕ್ಕಳ ಸಂಕೋಚ ಸ್ವಭಾವ

ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಕನಸು ಮನೆಗೆ ಯಾರಾದರೂ ಅತಿಥಿಗಳು ಬಂದರೆ ಸಾಕು, ತಂದೆ ತಾಯಿಗೆ ಅಂಟಿಕೊಂಡುಬಿಡುತ್ತಾಳೆ. ಯಾರೊಂದಿಗೂ ಮಾತನಾಡುವುದಿಲ್ಲ. ಅಳುಮೋರೆ ಹಾಕಿಕೊಂಡು ಪೆಚ್ಚಾಗಿರುತ್ತಾಳೆ. ಅತಿಥಿಗಳು ಹೋಗಿ ಕೆಲ ಕಾಲದ ನಂತರ ಮೊದಲಿನಂತಾಗುತ್ತಾಳೆ. ಸಭೆ ಸಮಾರಂಭಗಳಲ್ಲಂತೂ ಯಾವಾಗಲೂ ತಾಯಿಗೆ ಅಂಟಿಕೊಂಡೇ ಇರುತ್ತಾಳೆ. ಕನಸುವಿನ ಈ ವರ್ತನೆ ತಂದೆ ತಾಯಿಗಳಿಗೆ ಬೇಸರ ತಂದಿದೆ. ಏನು ಮಾಡಬೇಕೆಂಬುದೇ ತೋಚುತ್ತಿಲ್ಲ.
ಶಾಲೆಯಲ್ಲಿ ಕಲಿತ ಹಾಡು, ಮಗ್ಗಿ, ಇತ್ಯಾದಿಗಳನ್ನು ತಂದೆ-ತಾಯಿ ಕೇಳದಿದ್ದರೂ ಪಟಪಟನೇ ಹೇಳುವ ಶಶಾಂಕ ಬಂಧುಗಳ ಎದಿರು ಹೇಳಲು ತಡವರಿಸುತ್ತಾನೆ. ಒಂದೊಂದು ಅಕ್ಷರ/ಪದ ಹೇಳಲು ಕಷ್ಟಪಡುತ್ತಾನೆ. ಶಾಲೆಯಲ್ಲಿ ಸ್ನೆÃಹಿತರ ಜೊತೆಗೆ ಸದಾ ಮಾತನಾಡುವ ಶಶಾಂಕ ಶಿಕ್ಷಕರ ಮಾತಿಗೆ ಪ್ರತಿಕ್ರಿಯೆ ನೀಡುವುದೇ ಇಲ್ಲ. ಸದಾ ಮೌನಿಯಾಗಿರುತ್ತಾನೆ. 
ಇದು ಕೇವಲ ಕನಸು ಮತ್ತು ಶಶಾಂಕರ ಸಮಸ್ಯೆಯಲ್ಲ. ಬಹುತೇಕ ಮಕ್ಕಳು ಇಂತಹ ವರ್ತನೆ ತೋರುತ್ತಿರುತ್ತಾರೆ. ಪರಿಚಯವಿಲ್ಲದ ಸಂದರ್ಭಗಳಲ್ಲಿ ಕೆಲವು ಮಕ್ಕಳು ಸಂವಹನ ಮಾಡಲು ಹಿಂಜರಿಯುತ್ತಾರೆ. ಅದನ್ನೆÃ ನಾವು ಸಂಕೋಚ ಅಥವಾ ನಾಚಿಕೆ ಎನ್ನುತ್ತೆÃವೆ. ಮಗುವಿನಲ್ಲಿ ಇಂತಹ ವರ್ತನೆ ಪೋಷಕರಿಗೆ ಗಾಬರಿ ಹುಟ್ಟಿಸಬಹುದು. ಸ್ನೆÃಹಪರರು ಮತ್ತು ಒಡನಾಡಿಗಳೊಂದಿಗೆ ಮಾತ್ರ ಮುಕ್ತವಾಗಿ ಸಂವಹನ ಮಾಡುವ ಮಕ್ಕಳು, ಹೊಸ ಸನ್ನಿವೇಶ ಅಥವಾ ಹೊಸಬರೊಂದಿಗೆ ವ್ಯವಹರಿಸಲು ಹಿಂಜರಿಯುತ್ತದೆ. 
ಮಗು ಬೆಳೆದು ದೊಡ್ಡದಾದಂತೆ ಪರಿಚಿತ ಪ್ರಪಂಚವು ವಿಸ್ತರಿಸುತ್ತದೆ. ವಿವಿಧ ಜನರನ್ನು ಭೇಟಿಯಾಗುವ, ಮಾತಮಾಡುವ, ವ್ಯವಹರಿಸುವ ಸಂದರ್ಭಗಳು ಪದೇ ಪದೇ ಜರುಗುತ್ತವೆ. ಇದರಿಂದಾಗಿ ಮಗು ನಿಧಾನವಾಗಿ ಸಂಕೋಚವನ್ನು ಕಳೆದುಕೊಂಡು ಮುಕ್ತವಾಗಿ ವ್ಯವಹರಿಸಲು ಪ್ರಾರಂಭಿಸುತ್ತದೆ. ಹೆತ್ತವರ ಮೇಲೆ ಹೆಚ್ಚು ಅವಲಂಬಿತವಾಗಿದ್ದ ಮಗು ಕ್ರಮೇಣ ಸ್ವಾವಲಂಬಿಯಾಗಲು ಪ್ರಯತ್ನಿಸುತ್ತದೆ. ಮಗುವಿನ ಪರಿಕಲ್ಪನೆ ಮತ್ತು ವಿಷಯಗಳ ಪ್ರಪಂಚ ವಿಸ್ತರಿಸುತ್ತದೆ. ಸಾಮಾಜೀಕರಣದ ಪ್ರಭಾವದಿಂದಾಗಿ ಮಗು ಎಲ್ಲರೊಂದಿಗೆ ಬೆರೆಯುವ ಗುಣ ಅಭಿವೃದ್ದಿಪಡಿಸಿಕೊಳ್ಳುತ್ತದೆ. 
ಕೆಲವು ಮಕ್ಕಳು ಎಲ್ಲಾ ವಯಸ್ಸಿನಲ್ಲೂ ನಾಚಿಕೆ ಪಡುತ್ತಾರೆ. ತೀಕ್ಷ÷್ಣವಾದ ಸ್ವಭಾವದಿಂದ ಬಳಲುವ ಮಕ್ಕಳ ಸಂಕೋಚ/ನಾಚಿಕೆ ಪ್ರೌಢಾವಸ್ಥೆಯಲ್ಲೂ ಮುಂದುವರೆಯಬಹುದು. ಇದರಿಂದ ಮಕ್ಕಳು ಪ್ರತಿಯೊಂದು ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಾರೆ. ಸಂಕೋಚವು ಮಗುವಿನ ಸಾಮರ್ಥ್ಯಾಭಿವೃದ್ದಿಯ ಮೇಲೆ ನೇರ ಪ್ರಭಾವ ಬೀರುತ್ತದೆ. ಯಾವ ಮಗು ಮುಕ್ತವಾಗಿ ಎಲ್ಲರೊಂದಿಗೂ ಬೆರೆತು ಸಂವಹನ ಮಾಡುತ್ತದೆಯೋ ಆ ಮಗುವಿನಲ್ಲಿ ಸಾಮಾಜಿಕ, ಭಾವನಾತ್ಮಕ ಮತ್ತು ಶೈಕ್ಷಣಿಕ ಸಾಮರ್ಥ್ಯಗಳು ಬೇಗನೇ ವೃದ್ದಿಯಾಗುತ್ತವೆ. ಹಾಗಾಗಿ ಪಾಲಕರು ಪ್ರಾರಂಭಿಕ ಹಂತದಲ್ಲಿ ಸಂಕೋಚವನ್ನು ಗುರುತಿಸಿ, ಸೂಕ್ತ ಮಾರ್ಪಾಡುಗಳೊಂದಿಗೆ ಮಗುವಿನ ಸಾಮರ್ಥ್ಯಾಭಿವೃದ್ದಿಗೆ ಸಹಕರಿಸಬಹುದು.

ಸಂಕೋಚದ ಚಿಹ್ನೆಗಳು :
ಹೊಸಬರನ್ನು ಅನುಮಾನದಿಂದ ನೋಡುವುದು.
ಇತರರ ಸುತ್ತಲೂ ವಿಚಿತ್ರ ಭಾವನೆಯನ್ನು ಅನುಭವಿಸುವುದು.
ಸದಾ ಅಸುರಕ್ಷತೆಯ ಮತ್ತು ಅಹಿತಕರ ಭಾವನೆ ಅನುಭವಿಸುತ್ತಿರುವುದು.
ಅಂಜುಬುರುಕತನ ಭಾವನೆ.
ನಾಚಿಕೆ ಸ್ವಭಾವದ ಪ್ರದರ್ಶನ.
ಸಮರ್ಥಿಸಿಕೊಳ್ಳಲು ನಿಷ್ಕಿçÃಯವಾದ ಕಾರಣಗಳ ಪ್ರದರ್ಶನ.
ಭೌತಿಕ ಸಂವೇದನೆಗಳ ಪ್ರದರ್ಶನ.
ವೇಗವಾಗಿ ಉಸಿರಾಡುವಿಕೆ.
ಮುಖ ಮತ್ತು ಕೈಗಳಲ್ಲಿ ಅನಗತ್ಯ ಬೆವರು ಒಸರುವಿಕೆ.
ವಿಶ್ವಾಸಿಗರು ಅಥವಾ ಗೋಡೆ ಹಿಂದೆ ಅವಿತುಕೊಳ್ಳುವುದು.
ಸಂಕೋಚಕ್ಕೆ ಕಾರಣಗಳು:
ಅನಿವಂಶೀಯತೆ. 
ಭಯದ ವಾತಾವರಣ.
ಕಲಿಕೆಯ ನಡವಳಿಕೆಗಳ ಮೇಲೆ ಆತ್ಮವಿಶ್ವಾಸ ಇಲ್ಲದಿರುವುದು.
ಕೌಟುಂಬಿಕ ಸಮಸ್ಯೆಗಳ ಕೆಟ್ಟ ಪರಿಣಾಮ
ಪಾಲಕರ ಅಸಮಂಜಸ ನಡವಳಿಕೆಗಳು.
ಕುಟುಂಬದಲ್ಲಿ ಅಸುರಕ್ಷತೆ ಭಾವನೆ.
ಸಾಮಾಜಿಕ ಸಂವಹನ ಕೌಶಲ್ಯಗಳ ಕೊರತೆ.
ಪಾಲಕರು/ಪೋಷಕರ ಕಠಿಣವಾದ ವಿಮರ್ಶೆ .
ಟೀಕೆ ಮತ್ತು ಅಪನಿಂದನೆಗಳು.
ವೈಫಲ್ಯದ ಭಯ.
ಕುಟುಂಬದಲ್ಲಿ ಗಮನದ ಕೊರತೆ.
ಗಮನಾರ್ಹ ವ್ಯಕ್ತಿಗಳಿಂದ ಕಿರುಕುಳ ಅಥವಾ ಹಿಂಸೆ.
ಅಂತರ್ಮುಖಿಗಳಾಗಿರುವುದು.

ಸಂಕೋಚದ ಕೆಲವು ಲಾಭಗಳು: 
ಸಂಕೋಚದಿಂದ ಮಗು ಕೇವಲ ತೊಂದರೆಗೆ ಒಳಗಾಗುವುದಿಲ್ಲ. ಬದಲಾಗಿ ಕೆಲವು ಲಾಭಗಳನ್ನೂ ಅನುಭವಿಸುತ್ತದೆ. ಅವುಗಳೆಂದರೆ ಹೊಸಬರನ್ನು ನಂಬಿ ತೊಂದರೆಗೆ ಸಿಲುಕದೇ ಇರುವುದು, ಸದಾ ಜಾಗೃತಿಯಲ್ಲಿರುವುದು, ವಾತಾವರಣಕ್ಕೆ ಅನುಗುಣವಾಗಿ ವರ್ತಿಸುವುದು, ವರ್ತನೆಯಲ್ಲಿ ಸದಾ ಜಾಗೃತಿಯಿಂದ ಇರುವುದು, ಉತ್ತಮವಾಗಿ ಕೆಲಸ ಮಾಡಬೇಕೆಂಬ ಹಂಬಲ ಹೆಚ್ಚುವುದು, ತಪ್ಪು ಮಾಡಲೇಬಾರದೆಂಬ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವುದು. ಹೀಗೆ ಅನೇಕ ವ್ಯಕ್ತಿಗತ ಲಾಭಗಳು ದೊರೆಯುತ್ತವೆ.

ಬದಲಾಗಬೇಕಾದ ಪೋಷಕರ ವರ್ತನೆಗಳು :
ನಾಚಿಕೆಗೇಡಿ, ಸಂಕೋಚ ಸ್ವಭಾವ ಎಂದು ಮಗುವಿಗೆ ಹಣೆಪಟ್ಟಿ ಹಚ್ಚಬೇಡಿ.
ನಾಚಿಕೆಪಡಿಸುವಂತಹ ಸಂದರ್ಭಗಳಿಂದ ಮಗುವನ್ನು ದೂರವಿಡಿ.
ಮಗು ನಾಚಿಕೆ/ಸಂಕೋಚಪಡುವಾಗ ಟೀಕಿಸಬೇಡಿ ಅಥವಾ ಗೇಲಿ ಮಾಡಬೇಡಿ. ಬದಲಿಗೆ ಮಗುವಿಗೆ ಬೆಂಬಲ, ಅನುಭೂತಿ ನೀಡಿ.
ಭಯ ರಹಿತ ವಾತಾವರಣ ನಿರ್ಮಿಸಿ. ಸಂಕೋಚದ ಕಾರಣಗಳ ಬಗ್ಗೆ ಮಾತನಾಡಲು ಪ್ರೊÃತ್ಸಾಹಿಸಿ ಅಥವಾ ಅವಕಾಶ ನೀಡಿ. 
ಮಗುವಿನಲ್ಲಿ ಆತಂಕ ಹಾಗೂ ದುಗುಡ ಹೆಚ್ಚಿಸಬೇಡಿ.  
ಮಗುವನ್ನು ಒಬ್ಬಂಟಿಯಾಗಿ ಬಿಟ್ಟು ಹೋಗುವ ಸಂದರ್ಭ ಬಂದಾಗ ಇತರರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಕಲಿಸಿ.
ಪೋಷಕರ ತಂತ್ರಗಾರಿಕೆ :
ನೀವು ಮಗುವಾಗಿದ್ದಾಗ ಸಂಕೋಚ ಅನುಭವಿಸಿದಾಗ ಅದನ್ನು ಹೇಗೆ ಎದುರಿಸಿದಿರಿ ಎಂಬುದನ್ನು ಮಗುವಿಗೆ ತಿಳಿಸಿ ಹೇಳಿ.
ಸಂಕೋಚಪಡದೇ ಇರುವಂತಹ ಅನೇಕ ಪ್ರಯೋಜನಗಳ ಬಗ್ಗೆ ಮಗುವಿಗೆ ತಿಳಿಸಿ. ನಿಮ್ಮ ಜೀವನದ ಸ್ವಂತ ಉದಾಹರಣೆ ತಿಳಿಸಿ.
ಸಭೆ, ಕಾರ್ಯಕ್ರಮಗಳು, ಸಮಾರಂಭಗಳು ಇತ್ಯಾದಿಗಳಿಗೆ ಮಗುವನ್ನು ಮನೆಯಿಂದ ಹೊರ ಕರೆದೊಯ್ಯಿರಿ. 
ಪರಿಚಯವಿಲ್ಲವರೊಂದಿಗೆ ಹೇಗೆ ವರ್ತಿಸಬೇಕೆಂಬುದನ್ನು ಹೇಳಿಕೊಡಿ. 
ಮನೆಗೆ ಆಗಾಗ ಅತಿಥಿಗಳನ್ನು, ಸ್ನೆÃಹಿತರನ್ನು, ಬಂಧುಗಳನ್ನು ಆಹ್ವಾನಿಸಿ, ಮಗುವಿಗೆ ಪರಿಚಯ ಮಾಡಿಕೊಡಿ. ಅವರ ಮತ್ತು ನಿಮ್ಮ ಸಂಬಂಧದ ಬಗ್ಗೆ ಮಗುವಿಗೆ ವಿವರವಾಗಿ ತಿಳಿಸಿ.
ಮನೆಗೆ ಬಂದ ಅತಿಥಿಗಳನ್ನು ಮಾತನಾಡಿಸಲು ಮಗುವಿಗೆ ತಿಳಿಸಿ. 
ಹೊಸ ವ್ಯಕ್ತಿಗಳನ್ನು ಮಗು ಮಾತನಾಡಿಸಿದಾಗ ಮಗುವನ್ನು ಅಭಿನಂದಿಸಿ. 
ಮಗುವಿಗೆ ಭಾವನಾತ್ಮಕ ಬೆಂಬಲ ನೀಡಿ. 
ಹೊಸ ವಾತಾವರಣದಲ್ಲಿ ಹೇಗೆ ಪ್ರತಿಕ್ರಿಯಿಸಬೇಕೆಂಬ ಬಗ್ಗೆ ತಿಳುವಳಿಕೆ ನೀಡಿ.
ಮುಕ್ತವಾಗಿ ಮಾತನಾಡಲು ಅವಕಾಶಗಳನ್ನು ಸೃಷ್ಟಿಸಿ.
ಸಾಮಾಜಿಕ ಕೌಶಲ್ಯಗಳ ಕುರಿತ ಆತ್ಮವಿಶ್ವಾಸ ಮೂಡಿಸಿ.
ನಿಮ್ಮ ಕೋಪವನ್ನು ಮೊದಲು ಕಡಿಮೆ ಮಾಡಿಕೊಂಡು ನಂತರ ಮಗುವಿನ ಕೋಪವನ್ನು ಕಡಿಮೆ ಮಾಡಿ.
ಬದಲಾವಣೆ ಅಥವಾ ಪರಿವರ್ತನೆ ಜಗದ ನಿಯಮ ಎಂಬುದನ್ನು ಮಗುವಿಗೆ ಮನವರಿಕೆ ಮಾಡಿಕೊಡಿ.
ವೈಫಲ್ಯ ಎದುರಿಸುವುದನ್ನು ಕಲಿಸಿ.
ಧೈರ್ಯ ಸ್ಥೆöÊರ್ಯ ತುಂಬಿ ಆತ್ಮವಿಶ್ವಾಸ ಬೆಳೆಸಿ.
ಅಪಾಯಕಾರಿ ಸಂದರ್ಭಗಳಿಂದ ಮಗು ದೂರವಿರಲು ತಿಳಿಸಿ.

ಆರ್.ಬಿ.ಗುರುಬಸವರಾಜ 


September 18, 2018

ಮಕ್ಕಳ ಸಂಕೋಚ ಸ್ವಭಾವ

ದಿನಾಂಕ 18-9-18 ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.


ತಾಯಂದಿರಿಗೆ ಸವಾಲಾದಿರಲಿ ಮಕ್ಕಳ ಸಂಕೋಚ ಸ್ವಭಾವ
ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಕನಸು ಮನೆಗೆ ಯಾರಾದರೂ ಅತಿಥಿಗಳು ಬಂದರೆ ಸಾಕು, ತಂದೆ ತಾಯಿಗೆ ಅಂಟಿಕೊಂಡುಬಿಡುತ್ತಾಳೆ. ಯಾರೊಂದಿಗೂ ಮಾತನಾಡುವುದಿಲ್ಲ. ಅಳುಮೋರೆ ಹಾಕಿಕೊಂಡು ಪೆಚ್ಚಾಗಿರುತ್ತಾಳೆ. ಅತಿಥಿಗಳು ಹೋಗಿ ಕೆಲ ಕಾಲದ ನಂತರ ಮೊದಲಿನಂತಾಗುತ್ತಾಳೆ. ಸಭೆ ಸಮಾರಂಭಗಳಲ್ಲಂತೂ ಯಾವಾಗಲೂ ತಾಯಿಗೆ ಅಂಟಿಕೊಂಡೇ ಇರುತ್ತಾಳೆ. ಕನಸುವಿನ ಈ ವರ್ತನೆ ತಂದೆ ತಾಯಿಗಳಿಗೆ ಬೇಸರ ತಂದಿದೆ. ಏನು ಮಾಡಬೇಕೆಂಬುದೇ ತೋಚುತ್ತಿಲ್ಲ.
ಶಾಲೆಯಲ್ಲಿ ಕಲಿತ ಹಾಡು, ಮಗ್ಗಿ, ಇತ್ಯಾದಿಗಳನ್ನು ತಂದೆ-ತಾಯಿ ಕೇಳದಿದ್ದರೂ ಪಟಪಟನೇ ಹೇಳುವ ಶಶಾಂಕ ಬಂಧುಗಳ ಎದಿರು ಹೇಳಲು ತಡವರಿಸುತ್ತಾನೆ. ಒಂದೊಂದು ಅಕ್ಷರ/ಪದ ಹೇಳಲು ಕಷ್ಟಪಡುತ್ತಾನೆ. ಶಾಲೆಯಲ್ಲಿ ಸ್ನೆÃಹಿತರ ಜೊತೆಗೆ ಸದಾ ಮಾತನಾಡುವ ಶಶಾಂಕ ಶಿಕ್ಷಕರ ಮಾತಿಗೆ ಪ್ರತಿಕ್ರಿಯೆ ನೀಡುವುದೇ ಇಲ್ಲ. ಸದಾ ಮೌನಿಯಾಗಿರುತ್ತಾನೆ. 
ಇದು ಕೇವಲ ಕನಸು ಮತ್ತು ಶಶಾಂಕರ ಸಮಸ್ಯೆಯಲ್ಲ. ಬಹುತೇಕ ಮಕ್ಕಳು ಇಂತಹ ವರ್ತನೆ ತೋರುತ್ತಿರುತ್ತಾರೆ. ಪರಿಚಯವಿಲ್ಲದ ಸಂದರ್ಭಗಳಲ್ಲಿ ಕೆಲವು ಮಕ್ಕಳು ಸಂವಹನ ಮಾಡಲು ಹಿಂಜರಿಯುತ್ತಾರೆ. ಅದನ್ನೆÃ ನಾವು ಸಂಕೋಚ ಅಥವಾ ನಾಚಿಕೆ ಎನ್ನುತ್ತೆÃವೆ. ಮಗುವಿನಲ್ಲಿ ಇಂತಹ ವರ್ತನೆ ಪೋಷಕರಿಗೆ ಗಾಬರಿ ಹುಟ್ಟಿಸಬಹುದು. ಸ್ನೆÃಹಪರರು ಮತ್ತು ಒಡನಾಡಿಗಳೊಂದಿಗೆ ಮಾತ್ರ ಮುಕ್ತವಾಗಿ ಸಂವಹನ ಮಾಡುವ ಮಕ್ಕಳು, ಹೊಸ ಸನ್ನಿವೇಶ ಅಥವಾ ಹೊಸಬರೊಂದಿಗೆ ವ್ಯವಹರಿಸಲು ಹಿಂಜರಿಯುತ್ತದೆ. 
ಮಗು ಬೆಳೆದು ದೊಡ್ಡದಾದಂತೆ ಪರಿಚಿತ ಪ್ರಪಂಚವು ವಿಸ್ತರಿಸುತ್ತದೆ. ವಿವಿಧ ಜನರನ್ನು ಭೇಟಿಯಾಗುವ, ಮಾತಮಾಡುವ, ವ್ಯವಹರಿಸುವ ಸಂದರ್ಭಗಳು ಪದೇ ಪದೇ ಜರುಗುತ್ತವೆ. ಇದರಿಂದಾಗಿ ಮಗು ನಿಧಾನವಾಗಿ ಸಂಕೋಚವನ್ನು ಕಳೆದುಕೊಂಡು ಮುಕ್ತವಾಗಿ ವ್ಯವಹರಿಸಲು ಪ್ರಾರಂಭಿಸುತ್ತದೆ. ಹೆತ್ತವರ ಮೇಲೆ ಹೆಚ್ಚು ಅವಲಂಬಿತವಾಗಿದ್ದ ಮಗು ಕ್ರಮೇಣ ಸ್ವಾವಲಂಬಿಯಾಗಲು ಪ್ರಯತ್ನಿಸುತ್ತದೆ. ಮಗುವಿನ ಪರಿಕಲ್ಪನೆ ಮತ್ತು ವಿಷಯಗಳ ಪ್ರಪಂಚ ವಿಸ್ತರಿಸುತ್ತದೆ. ಸಾಮಾಜೀಕರಣದ ಪ್ರಭಾವದಿಂದಾಗಿ ಮಗು ಎಲ್ಲರೊಂದಿಗೆ ಬೆರೆಯುವ ಗುಣ ಅಭಿವೃದ್ದಿಪಡಿಸಿಕೊಳ್ಳುತ್ತದೆ. 
ಕೆಲವು ಮಕ್ಕಳು ಎಲ್ಲಾ ವಯಸ್ಸಿನಲ್ಲೂ ನಾಚಿಕೆ ಪಡುತ್ತಾರೆ. ತೀಕ್ಷ÷್ಣವಾದ ಸ್ವಭಾವದಿಂದ ಬಳಲುವ ಮಕ್ಕಳ ಸಂಕೋಚ/ನಾಚಿಕೆ ಪ್ರೌಢಾವಸ್ಥೆಯಲ್ಲೂ ಮುಂದುವರೆಯಬಹುದು. ಇದರಿಂದ ಮಕ್ಕಳು ಪ್ರತಿಯೊಂದು ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಾರೆ. ಸಂಕೋಚವು ಮಗುವಿನ ಸಾಮರ್ಥ್ಯಾಭಿವೃದ್ದಿಯ ಮೇಲೆ ನೇರ ಪ್ರಭಾವ ಬೀರುತ್ತದೆ. ಯಾವ ಮಗು ಮುಕ್ತವಾಗಿ ಎಲ್ಲರೊಂದಿಗೂ ಬೆರೆತು ಸಂವಹನ ಮಾಡುತ್ತದೆಯೋ ಆ ಮಗುವಿನಲ್ಲಿ ಸಾಮಾಜಿಕ, ಭಾವನಾತ್ಮಕ ಮತ್ತು ಶೈಕ್ಷಣಿಕ ಸಾಮರ್ಥ್ಯಗಳು ಬೇಗನೇ ವೃದ್ದಿಯಾಗುತ್ತವೆ. ಹಾಗಾಗಿ ಪಾಲಕರು ಪ್ರಾರಂಭಿಕ ಹಂತದಲ್ಲಿ ಸಂಕೋಚವನ್ನು ಗುರುತಿಸಿ, ಸೂಕ್ತ ಮಾರ್ಪಾಡುಗಳೊಂದಿಗೆ ಮಗುವಿನ ಸಾಮರ್ಥ್ಯಾಭಿವೃದ್ದಿಗೆ ಸಹಕರಿಸಬಹುದು.

ಸಂಕೋಚದ ಚಿಹ್ನೆಗಳು :
ಹೊಸಬರನ್ನು ಅನುಮಾನದಿಂದ ನೋಡುವುದು.
ಇತರರ ಸುತ್ತಲೂ ವಿಚಿತ್ರ ಭಾವನೆಯನ್ನು ಅನುಭವಿಸುವುದು.
ಸದಾ ಅಸುರಕ್ಷತೆಯ ಮತ್ತು ಅಹಿತಕರ ಭಾವನೆ ಅನುಭವಿಸುತ್ತಿರುವುದು.
ಅಂಜುಬುರುಕತನ ಭಾವನೆ.
ನಾಚಿಕೆ ಸ್ವಭಾವದ ಪ್ರದರ್ಶನ.
ಸಮರ್ಥಿಸಿಕೊಳ್ಳಲು ನಿಷ್ಕಿçÃಯವಾದ ಕಾರಣಗಳ ಪ್ರದರ್ಶನ.
ಭೌತಿಕ ಸಂವೇದನೆಗಳ ಪ್ರದರ್ಶನ.
ವೇಗವಾಗಿ ಉಸಿರಾಡುವಿಕೆ.
ಮುಖ ಮತ್ತು ಕೈಗಳಲ್ಲಿ ಅನಗತ್ಯ ಬೆವರು ಒಸರುವಿಕೆ.
ವಿಶ್ವಾಸಿಗರು ಅಥವಾ ಗೋಡೆ ಹಿಂದೆ ಅವಿತುಕೊಳ್ಳುವುದು.
ಸಂಕೋಚಕ್ಕೆ ಕಾರಣಗಳು:
ಅನಿವಂಶೀಯತೆ. 
ಭಯದ ವಾತಾವರಣ.
ಕಲಿಕೆಯ ನಡವಳಿಕೆಗಳ ಮೇಲೆ ಆತ್ಮವಿಶ್ವಾಸ ಇಲ್ಲದಿರುವುದು.
ಕೌಟುಂಬಿಕ ಸಮಸ್ಯೆಗಳ ಕೆಟ್ಟ ಪರಿಣಾಮ
ಪಾಲಕರ ಅಸಮಂಜಸ ನಡವಳಿಕೆಗಳು.
ಕುಟುಂಬದಲ್ಲಿ ಅಸುರಕ್ಷತೆ ಭಾವನೆ.
ಸಾಮಾಜಿಕ ಸಂವಹನ ಕೌಶಲ್ಯಗಳ ಕೊರತೆ.
ಪಾಲಕರು/ಪೋಷಕರ ಕಠಿಣವಾದ ವಿಮರ್ಶೆ .
ಟೀಕೆ ಮತ್ತು ಅಪನಿಂದನೆಗಳು.
ವೈಫಲ್ಯದ ಭಯ.
ಕುಟುಂಬದಲ್ಲಿ ಗಮನದ ಕೊರತೆ.
ಗಮನಾರ್ಹ ವ್ಯಕ್ತಿಗಳಿಂದ ಕಿರುಕುಳ ಅಥವಾ ಹಿಂಸೆ.
ಅಂತರ್ಮುಖಿಗಳಾಗಿರುವುದು.

ಸಂಕೋಚದ ಕೆಲವು ಲಾಭಗಳು: 
ಸಂಕೋಚದಿಂದ ಮಗು ಕೇವಲ ತೊಂದರೆಗೆ ಒಳಗಾಗುವುದಿಲ್ಲ. ಬದಲಾಗಿ ಕೆಲವು ಲಾಭಗಳನ್ನೂ ಅನುಭವಿಸುತ್ತದೆ. ಅವುಗಳೆಂದರೆ ಹೊಸಬರನ್ನು ನಂಬಿ ತೊಂದರೆಗೆ ಸಿಲುಕದೇ ಇರುವುದು, ಸದಾ ಜಾಗೃತಿಯಲ್ಲಿರುವುದು, ವಾತಾವರಣಕ್ಕೆ ಅನುಗುಣವಾಗಿ ವರ್ತಿಸುವುದು, ವರ್ತನೆಯಲ್ಲಿ ಸದಾ ಜಾಗೃತಿಯಿಂದ ಇರುವುದು, ಉತ್ತಮವಾಗಿ ಕೆಲಸ ಮಾಡಬೇಕೆಂಬ ಹಂಬಲ ಹೆಚ್ಚುವುದು, ತಪ್ಪು ಮಾಡಲೇಬಾರದೆಂಬ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವುದು. ಹೀಗೆ ಅನೇಕ ವ್ಯಕ್ತಿಗತ ಲಾಭಗಳು ದೊರೆಯುತ್ತವೆ.

ಬದಲಾಗಬೇಕಾದ ಪೋಷಕರ ವರ್ತನೆಗಳು :
ನಾಚಿಕೆಗೇಡಿ, ಸಂಕೋಚ ಸ್ವಭಾವ ಎಂದು ಮಗುವಿಗೆ ಹಣೆಪಟ್ಟಿ ಹಚ್ಚಬೇಡಿ.
ನಾಚಿಕೆಪಡಿಸುವಂತಹ ಸಂದರ್ಭಗಳಿಂದ ಮಗುವನ್ನು ದೂರವಿಡಿ.
ಮಗು ನಾಚಿಕೆ/ಸಂಕೋಚಪಡುವಾಗ ಟೀಕಿಸಬೇಡಿ ಅಥವಾ ಗೇಲಿ ಮಾಡಬೇಡಿ. ಬದಲಿಗೆ ಮಗುವಿಗೆ ಬೆಂಬಲ, ಅನುಭೂತಿ ನೀಡಿ.
ಭಯ ರಹಿತ ವಾತಾವರಣ ನಿರ್ಮಿಸಿ. ಸಂಕೋಚದ ಕಾರಣಗಳ ಬಗ್ಗೆ ಮಾತನಾಡಲು ಪ್ರೊÃತ್ಸಾಹಿಸಿ ಅಥವಾ ಅವಕಾಶ ನೀಡಿ. 
ಮಗುವಿನಲ್ಲಿ ಆತಂಕ ಹಾಗೂ ದುಗುಡ ಹೆಚ್ಚಿಸಬೇಡಿ.  
ಮಗುವನ್ನು ಒಬ್ಬಂಟಿಯಾಗಿ ಬಿಟ್ಟು ಹೋಗುವ ಸಂದರ್ಭ ಬಂದಾಗ ಇತರರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಕಲಿಸಿ.
ಪೋಷಕರ ತಂತ್ರಗಾರಿಕೆ :
ನೀವು ಮಗುವಾಗಿದ್ದಾಗ ಸಂಕೋಚ ಅನುಭವಿಸಿದಾಗ ಅದನ್ನು ಹೇಗೆ ಎದುರಿಸಿದಿರಿ ಎಂಬುದನ್ನು ಮಗುವಿಗೆ ತಿಳಿಸಿ ಹೇಳಿ.
ಸಂಕೋಚಪÀಡದೇ ಇರುವಂತಹ ಅನೇಕ ಪ್ರಯೋಜನಗಳ ಬಗ್ಗೆ ಮಗುವಿಗೆ ತಿಳಿಸಿ. ನಿಮ್ಮ ಜೀವನದ ಸ್ವಂತ ಉದಾಹರಣೆ ತಿಳಿಸಿ.
ಸಭೆ, ಕಾರ್ಯಕ್ರಮಗಳು, ಸಮಾರಂಭಗಳು ಇತ್ಯಾದಿಗಳಿಗೆ ಮಗುವನ್ನು ಮನೆಯಿಂದ ಹೊರ ಕರೆದೊಯ್ಯಿರಿ. 
ಪರಿಚಯವಿಲ್ಲವರೊಂದಿಗೆ ಹೇಗೆ ವರ್ತಿಸಬೇಕೆಂಬುದನ್ನು ಹೇಳಿಕೊಡಿ. 
ಮನೆಗೆ ಆಗಾಗ ಅತಿಥಿಗಳನ್ನು, ಸ್ನೆÃಹಿತರನ್ನು, ಬಂಧುಗಳನ್ನು ಆಹ್ವಾನಿಸಿ, ಮಗುವಿಗೆ ಪರಿಚಯ ಮಾಡಿಕೊಡಿ. ಅವರ ಮತ್ತು ನಿಮ್ಮ ಸಂಬಂಧದ ಬಗ್ಗೆ ಮಗುವಿಗೆ ವಿವರವಾಗಿ ತಿಳಿಸಿ.
ಮನೆಗೆ ಬಂದ ಅತಿಥಿಗಳನ್ನು ಮಾತನಾಡಿಸಲು ಮಗುವಿಗೆ ತಿಳಿಸಿ. 
ಹೊಸ ವ್ಯಕ್ತಿಗಳನ್ನು ಮಗು ಮಾತನಾಡಿಸಿದಾಗ ಮಗುವನ್ನು ಅಭಿನಂದಿಸಿ. 
ಮಗುವಿಗೆ ಭಾವನಾತ್ಮಕ ಬೆಂಬಲ ನೀಡಿ. 
ಹೊಸ ವಾತಾವರಣದಲ್ಲಿ ಹೇಗೆ ಪ್ರತಿಕ್ರಿಯಿಸಬೇಕೆಂಬ ಬಗ್ಗೆ ತಿಳುವಳಿಕೆ ನೀಡಿ.
ಮುಕ್ತವಾಗಿ ಮಾತನಾಡಲು ಅವಕಾಶಗಳನ್ನು ಸೃಷ್ಟಿಸಿ.
ಸಾಮಾಜಿಕ ಕೌಶಲ್ಯಗಳ ಕುರಿತ ಆತ್ಮವಿಶ್ವಾಸ ಮೂಡಿಸಿ.
ನಿಮ್ಮ ಕೋಪವನ್ನು ಮೊದಲು ಕಡಿಮೆ ಮಾಡಿಕೊಂಡು ನಂತರ ಮಗುವಿನ ಕೋಪವನ್ನು ಕಡಿಮೆ ಮಾಡಿ.
ಬದಲಾವಣೆ ಅಥವಾ ಪರಿವರ್ತನೆ ಜಗದ ನಿಯಮ ಎಂಬುದನ್ನು ಮಗುವಿಗೆ ಮನವರಿಕೆ ಮಾಡಿಕೊಡಿ.
ವೈಫಲ್ಯ ಎದುರಿಸುವುದನ್ನು ಕಲಿಸಿ.
ಧೈರ್ಯ ಸ್ಥೆöÊರ್ಯ ತುಂಬಿ ಆತ್ಮವಿಶ್ವಾಸ ಬೆಳೆಸಿ.
ಅಪಾಯಕಾರಿ ಸಂದರ್ಭಗಳಿಂದ ಮಗು ದೂರವಿರಲು ತಿಳಿಸಿ.

ಆರ್.ಬಿ.ಗುರುಬಸವರಾಜ