October 6, 2013

ಬೆಳಕೆಂದು ಬಾಳಿಗೆ

ಬೆಳಕೆಂದು ಬಾಳಿಗೆ

ಚಿಂದಿ ಬಟ್ಟೆಯ ಜೊತೆಗೆ ಸಾಗಿದೆ
ಚಿಂದಿ ಆಯುವ ಬದುಕು
ನೆತ್ತಿಯ ಮೇಲೆ ಸೂರ್ಯನ ಬಿಸಿಬೆಂಕಿ
ಒಡಲೊಳಗೆ ಹಸಿವಿನ ಕಿಚ್ಚು
ಬಿಸಿಲಿಗೆ ಬಳಲಿ ಬೆಂಡಾದ
ಒಣ ಕೊರಡಿನಂತಹ ದೇಹ
ದಾಹ  ಇಂಗಬಲ್ಲದೇ
ಬೆವರಿನ ಹನಿಗಳಿಂದ
ಹುಡುಕುತಲಿವೆ ಕಣ್ಣುಗಳು
ಅನಾವಶ್ಯಕ ವಸ್ತುಗಳಲ್ಲಿನ
ಅವಶ್ಯಕ ಗುಣವನ್ನು
ಇವರಿಗೆ ಹೇಳಿಕೊಟ್ಟವರು ಯಾರು?
ಸಾಮಾಜಿಕ ಉಪಯುಕ್ತ ಉತ್ಪಾದನಾ ಕಾರ್ಯವ
ಇವರಿಗಿಲ್ಲವೇ ಮುಕ್ತಿ
ಚಿಂದಿ ಆಯುವ ಕಾಯಕದಿಂದ
ತರಬಲ್ಲನೇ ಸುಡುವ ಸೂರ್ಯ
ಇಂತಹವರ ಬಾಳಿನಲ್ಲಿ ಬೆಳಕನ್ನು!

1 comment:

  1. ಚೆನ್ನಾಗಿದೆ. ಈ ಪ್ರಯತ್ನ ಮುಂದುವರೆಯಲಿ.
    - ಬಿ.ಎಂ.ನಾಗಯ್ಯ

    ReplyDelete