July 28, 2018

ಜಗತ್ಪ್ರಸಿದ್ದ ಮ್ಯೂಸಿಯಂಗಳು. world Top Musiums

ದಿನಾಂಕ 28-07-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಜಗತ್ಪ್ರಸಿದ್ದ ಮ್ಯೂಸಿಯಂಗಳು.



ಮ್ಯೂಸಿಯಂ ಅಥವಾ ವಸ್ತು ಸಂಗ್ರಹಾಲಯಗಳು ಎಲ್ಲಡೆ ಇವೆ. ಕಲಾತ್ಮಕ, ಐತಿಹಾಸಿಕ, ಸಾಂಸ್ಕೃತಿಕ ಅಥವಾ ವೈಜ್ಞಾನಿಕ ಪ್ರಾಮುಖ್ಯತೆ ಇರುವ ಕಲಾಕೃತಿಗಳನ್ನು ಮತ್ತು ಇನ್ನಿತರೇ ವಸ್ತುಗಳನ್ನು ಸಂಗ್ರಹಿಸಿಟ್ಟ ಅಥವಾ ರಕ್ಷಿಸಲ್ಪಟ್ಟ ಸ್ಥಳವೇ ಮ್ಯೂಸಿಯಂ. ಬಹುತೇಕ ಮ್ಯೂಸಿಯಂಗಳು ಸಾರ್ವಜನಿಕ ಮ್ಯೂಸಿಯಂಗಳಾಗಿದ್ದು, ಅಲ್ಲಿನ ವಸ್ತುಗಳು ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗುವಂತೆ ಮಾಡುತ್ತವೆ. ಪ್ರದರ್ಶನವು ಶಾಶ್ವತವಾಗಿರಬಹುದು ಅಥವಾ ತಾತ್ಕಾಲಿಕವಾಗಿರಬಹುದು. ಒಟ್ಟಾರೆ ಅಲ್ಲಿನ ವಸ್ತುಗಳನ್ನು ಪ್ರದರ್ಶಿಸುವ ಹಾಗೂ ಕೆಲವು ವೇಳೆ ಮಾರಾಟ ಮಾಡುವ ವ್ಯವಸ್ಥೆ ಇರುತ್ತದೆ. 
ಸಾಂಸ್ಕೃತಿಕ, ಧಾರ್ಮಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ವಸ್ತುಗಳನ್ನು ಸಂಗ್ರಹಿಸುವುದು, ಅವುಗಳನ್ನು ಕಾಪಾಡುವುದರ ಜೊತೆಗೆ ಶಿಕ್ಷಣ ಮತ್ತು ಮನೋರಂಜನೆ ನೀಡುವುದು ವಸ್ತು ಸಂಗ್ರಹಾಲಯಗಳ ಉದ್ದೆÃಶವಾಗಿದೆ. ವಸ್ತು ಸಂಗ್ರಹಾಲಯಗಳು ಸಾಮಾನ್ಯ ಜನರಿಂದ ಸಂಶೋಧಕರಿಗೆ ಅನೇಕ ರೀತಿಯ ಸೇವೆಗಳನ್ನು ಒದಗಿಸುತ್ತವೆ. ಸಂಶೋಧನೆಗೆ ಮ್ಯೂಸಿಯಂಗಳು ಮುಕ್ತ ಅವಕಾಶ ನೀಡುತ್ತವೆ. ಸಂಗ್ರಹಾಲಯದಲ್ಲಿನ ವಸ್ತುಗಳ ಆಧಾರದ ಮೇಲೆ ವಿವಿಧ ಪ್ರಕಾರಗಳಾಗಿ ವಿಂಗಡಿಸಲಾಗುತ್ತದೆ. ಕಲಾ ವಸ್ತು ಸಂಗ್ರಹಾಲಯ, ವಿಜ್ಞಾನ ವಸ್ತು ಸಂಗ್ರಹಾಲಯ, ಯುದ್ದ ವಸ್ತು ಸಂಗ್ರಹಾಲಯ, ಇತಿಹಾಸ ವಸ್ತು ಸಂಗ್ರಹಾಲಯ, ಮತ್ತು ಮಕ್ಕಳ ವಸ್ತು ಸಂಗ್ರಹಾಲಯ ಹೀಗೆ ವಿವಿಧ ಪ್ರಕಾರದ ವಸ್ತು ಸಂಗ್ರಹಾಲಯಗಳನ್ನು ಕಾಣುತ್ತೆÃವೆ. 
ವಸ್ತು ಸಂಗ್ರಹಾಲಯದ ಪ್ರಯೋಜನಗಳು:
     ಒಂದು ರೀತಿಯಲ್ಲಿ ಹೇಳುವುದಾದರೆವಸ್ತು ಸಂಗ್ರಹಾಲಯಗಳು ಭೂತ(ಇತಿಹಾಸ)ವನ್ನು ತಿಳಿಸುವ ಭವಿಷ್ಯದ ಬೆಳಕಿಂಡಿಗಳು ಇದ್ದಂತೆ. ವಸ್ತು ಸಂಗ್ರಹಾಲಯಗಳು ಸಾಕಷ್ಟು ಪ್ರಯೋಜನಗಳನ್ನು ಹೊಂದಿವೆ. ಅವುಗಳು ಕೆಳಗಿನಂತಿವೆ.
ಸಂಸ್ಕೃತಿ ಮತ್ತು ಪರಂಪರೆಯ ಕುರುಹನ್ನು ನೀಡುತ್ತವೆ.
ಇತಿಹಾಸಕ್ಕೆ ಪುರಾವೆ ಒದಗಿಸುತ್ತವೆ.
ಕುತೂಹಲವನ್ನು ಉತ್ತೆÃಜಿಸಿ ಸಂಶೋಧನೆಗೆ ನಾಂದಿ ಹಾಡುತ್ತವೆ.
ಇತಿಹಾಸವನ್ನು ತಿಳಿಯುವ ಭವಿಷ್ಯದ ಮಾರ್ಗದರ್ಶಿಗಳಾಗಿವೆ.
ಪುರಾತನ ಮತ್ತು ಆಧುನಿಕ ಜಗತ್ತಿನ ಕೊಂಡಿಗಳು.
ಕಲಿಕೆಗೆ ಗಟ್ಟಿಯಾದ ಸಾಕ್ಷಾö್ಯಧಾರಗಳನ್ನು ಒದಗಿಸುತ್ತವೆ.
ಸಮುದಾಯ ಕೇಂದ್ರಗಳಾಗಿ ಸಮಾಜ ಮತ್ತು ವಿಜ್ಞಾನಗಳ ಸಮಾಗಮ ಕೇಂದ್ರಗಳಾಗಿವೆ.
ಇತಿಹಾಸದ ಜ್ಞಾನವನ್ನು ವೃದ್ದಿಸುತ್ತವೆ.
ಮಾನವ ಇತಿಹಾಸದ ಪರಂಪರೆಯನ್ನು ತಿಳಿಸುತ್ತವೆ.
ಮನೋರಂನೆಯ ಜೊತೆಗೆ ಜ್ಞಾನವನ್ನು ಬೆಳೆಸುತ್ತವೆ. 
ಪ್ರಶ್ನಿಸುವ ಮನೋಭಾವ ಬೆಳೆಸುವ ಜೊತೆಗೆ ಭಾಷಾ ಬೆಳವಣಿಗೆಗೆ ಪೂರಕವಾಗಿವೆ.
ಮನಸ್ಸನ್ನು ಉತ್ತೆÃಜಿಸುವ ಮೂಲಕ ಹೊಸ ಐಡಿಯಾವನ್ನು ಬೆಳೆಸುತ್ತವೆ.

ಥೀಮ್ ಎಂಟರ್ಟೈನ್ಮೆಂಟ್ ಅಸೋಸಿಯೇಷನ್‌ನ 12ನೇ ವಾರ್ಷಿಕ ಮ್ಯೂಸಿಯಂ ಇಂಡೆಕ್ಸ್ನ ಪ್ರಕಾರ ಕೆಳಗಿನ ಮ್ಯೂಸಿಯಂ ಅತೀ ಹೆಚ್ಚು ಜನರು ವೀಕ್ಷಿಸಿದ ಮ್ಯೂಸಿಯಂಗಳಾಗಿವೆ. ಅವುಗಳ ಕಿರುಮಾಹಿತಿ ಇಲ್ಲಿದೆ.
1. ಫ್ರಾನ್ಸ್ನ ಲೌವ್ರೆ : ಫ್ರಾನ್ಸ್ನ ಪ್ಯಾರಿಸ್ ನಗರದಲ್ಲಿರುವ ಲೌವ್ರೆ ವಸ್ತು ಸಂಗ್ರಹಾಲಯವು ವಿಶ್ವದ ಅತಿ ದೊಡ್ಡ ಕಲಾ ವಸ್ತು ಸಂಗ್ರಹಾಲಯವಾಗಿದೆ. ಇದು ಫ್ರಾನ್‌ನ ಐತಿಹಾಸಿಕ ಸ್ಮಾರಕವಾಗಿದ್ದು, 72,735 ಚದರ ಮೀಟರ್ ವಿಸ್ತಿÃರ್ಣ ಹೊಂದಿದೆ. ಲೌವ್ರೆ ಮ್ಯೂಸಿಯಂ ಪ್ರಪಂಚದ ಅತಿ ಹೆಚ್ಚು ಜನರು ಸಂದರ್ಶಿತ ವಸ್ತು ಸಂಗ್ರಹಾಲಯವಾಗಿದೆ. ಕಳೆದ ವರ್ಷ 81 ಲಕ್ಷ ಪ್ರವಾಸಿಗರು ಈ ವಸ್ತು ಸಂಗ್ರಹಾಲಯವನ್ನು ವೀಕ್ಷಿಸಿದ್ದಾರೆ.
ಈ ಸಂಗ್ರಹಾಲಯವು ಲೌವ್ರೆಯ ಅರಮನೆಯಾಗಿದ್ದು, ಆಗಸ್ಟ್ 10, 1793 ರಲ್ಲಿ ಪ್ರಾರಂಭವಾಗಿದೆ. 537 ವರ್ಣಚಿತ್ರಗಳ ಪ್ರದರ್ಶನದೊಂದಿಗೆ ಪ್ರಾರಂಭವಾದ ಈ ವಸ್ತು ಸಂಗ್ರಹಾಲಯದಲ್ಲಿ ಪ್ರಸ್ತುತ 38,000 ವಿವಿಧ ಕಲಾಕೃತಿಗಳಿವೆ. ಈಜಿಪ್ಟ್, ಗ್ರಿÃಕ್, ರೋಮನ್ ನಾಗರೀಕತೆಗಳಿಂದ ಇಂದಿನ ಇಸ್ಲಾಮಿಕ್‌ವರೆಗಿನ ಕಲೆ, ಶಿಲ್ಪ, ಧಾರ್ಮಿಕ, ಸಾಂಸ್ಕೃತಿಕ, ಅಲಂಕಾರಿಕ ವರ್ಣ ಚಿತ್ರಗಳು, ಮುದ್ರಣ ಮತ್ತು ರೇಖಾಚಿತ್ರಗಳಿವೆ. (ಚಿತ್ರ – 1)
2. ಚೀನಾದ ರಾಷ್ಟಿçÃಯ ವಸ್ತುಸಂಗ್ರಹಾಲಯ : ಚೀನಾದ ಬೀಜಿಂಗ್‌ನಲ್ಲಿರುವ ರಾಷ್ಟಿçÃಯ ವಸ್ತುಸಂಗ್ರಹಾಲಯವು ಚೀನಾದ ಕಲೆ ಮತ್ತು ಇತಿಹಾಸದ ಬಗ್ಗೆ ಶಿಕ್ಷಣ ನೀಡುವ ಉದ್ದೆÃಶ ಹೊಂದಿದೆ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಸಂಸ್ಕೃತಿ ಸಚಿವಾಲಯ ಇದರ ಉಸ್ತುವಾರಿ ಹೊತ್ತಿದೆ. ಕಳೆದ ವರ್ಷ 80 ಲಕ್ಷಕ್ಕೂ ಹೆಚ್ಚಿನ ಪ್ರವಾಸಿಗರು ವೀಕ್ಷಿಸಿದ ವಸ್ತುಸಂಗ್ರಹಾಲಯವಾಗಿದೆ. 
1959ರಿಂದ ಒಂದೇ ಕಟ್ಟಡದಲ್ಲಿದ್ದ ಎರಡು ಪ್ರತ್ಯೆÃಕ ಸಂಗ್ರಹಾಲಯಗಳನ್ನು 2003ರಲ್ಲಿ ಒಟ್ಟುಗೂಡಿಸುವ ಮೂಲಕ ಈ ವಸ್ತುಸಂಗ್ರಹಾಲಯ ಸ್ಥಾಪನೆಯಾಗಿದೆ. 17 ಲಕ್ಷ ವರ್ಷಗಳ ಹಿಂದೆ ಯುವಾನ್ಮೌ ಮಾನವನಿಂದ ಹಿಡಿದು ಕ್ವಿಂಗ್ ರಾಜವಂಶದವರೆಗಿನ ಚೀನಾ ಇತಿಹಾಸವನ್ನು ಇದು ಒಳಗೊಂಡಿದೆ. 16 ಎಕರೆ ವಿಸ್ತಾರದ ಪ್ರದೇಶದಲ್ಲಿ 10 ಲಕ್ಷಕ್ಕೂ ಅಧಿಕ ಕಲಾಕೃತಿಗಳನ್ನು ಒಳಗೊಂಡಿದೆ. ಚೀನಾ ಒಳಗೊಂಡಂತೆ ಪ್ರಪಂಚದ ವಿವಿಧ ದೇಶಗಳ ಅಪರೂಪದ ಹಸ್ತಪ್ರತಿಗಳು, ಕಲಾಕೃತಿಗಳು ಈ ಸಂಗ್ರಹಾಲಯದಲ್ಲಿವೆ. (ಚಿತ್ರ – 2)
3. ಅಮೇರಿಕಾದ ನ್ಯಾಷನಲ್ ಏರ್ ಅಂಡ್ ಸ್ಪೆÃಸ್ ಮ್ಯೂಸಿಯಂ : ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ಈ ಮ್ಯೂಸಿಯಂನಲ್ಲಿ ವಾಯಯಾನ ಮತ್ತು ಅಂತರಿಕ್ಷ ಯಾನಕ್ಕೆ ಸಂಬಂಧಿಸಿದ ಮಾದರಿಗಳನ್ನು ಕಾಣಬಹುದು. 1946ರಲ್ಲಿ ನ್ಯಾಷನಲ್ ಏರ್ ಮ್ಯೂಸಿಯಂ ಆಗಿ ಸ್ಥಾಪನೆಯಾಗಿ 1976 ರಲ್ಲಿ ನ್ಯಾಷನಲ್ ಮಾಲ್ನಿÃಯರ್ ಎಲ್ ಎನ್ಫಾಂಟ್ ಪ್ಲಾಜಾದಲ್ಲಿ ತನ್ನ ಮುಖ್ಯ ಕಟ್ಟಡ ತೆರೆಯಿತು. ಯುನೈಟೆಡ್ ಸ್ಟೆÃಟ್ಸ್ನಲ್ಲಿ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ ಸಂಗ್ರಹಾಲಯ ಇದಾಗಿದೆ. 
ಇಲ್ಲಿ ಅಪೋಲೋ11, ಕಮಾಂಡ್ ಮಾಡ್ಯೂಲ್, ರೈಟ್ ಸಹೋದರರ ವಿಮಾನದ ಮಾಡ್ಯೂಲ್‌ಗಳು ಇಲ್ಲಿವೆ. ವಾಯುಯಾನ ಮತ್ತು ಬಾಹ್ಯಾಕಾಶ ಹಾರಾಟದ ಇತಿಹಾಸ ಮತ್ತು ವಿಜ್ಞಾನದ ಸಂಶೋಧನಾ ಕೇಂದ್ರವಾಗಿದೆ. ಬಾಹ್ಯಾಕಾಶ ಮತ್ತು ವಿಮಾನಯಾನಕ್ಕೆ ಸಂಬಂಧಿಸಿದ ಅನೇಕ ಕಾಪ್ಟರ್‌ಗಳನ್ನು ಇಲ್ಲಿ ವೀಕ್ಷಿಸಬಹುದಾಗಿದೆ. 7.6 ಲಕ್ಷ ಚದರ ಅಡಿ ವಿಸ್ತಿÃರ್ಣ ಹೊಂದಿದ ಈ ಸಂಗ್ರಹಾಲಯವನ್ನು ಕಳೆದ ವರ್ಷ 75 ಲಕ್ಷ ಜನ ವೀಕ್ಷಿಸಿದ್ದಾರೆ. (ಚಿತ್ರ – 3) 
4. ಯುನೈಟೆಡ್ ಸ್ಟೆÃಟ್ಸ್ನ ಮೆಟ್ರೊÃಪಾಲಿಟಿನ್ ಆರ್ಟ್ ಮ್ಯೂಸಿಯಂ : ನ್ಯೂಯಾರ್ಕ್ ನಗರದಲ್ಲಿರುವ ಮೆಟ್ರೊÃಪಾಲಿಟಿನ್ ಆರ್ಟ್ ಮ್ಯೂಸಿಯಂ ಅತಿದೊಡ್ಡ ಕಲಾ ಮತ್ತು ಐತಿಹಾಸಿಕ ವಸ್ತುಸಂಗ್ರಹಾಲಯವಾಗಿದೆ. 2017ರಲ್ಲಿ 70 ಲಕ್ಷಕ್ಕೂ ಅಧಿಕ ಪ್ರವಾಸಿಗರು ಈ ಮ್ಯೂಸಿಯಂಗೆ ಭೇಟಿ ನೀಡಿದ್ದಾರೆ.
ಇದರಲ್ಲಿ 20 ಲಕ್ಷ ಕಲಾಕೃತಿಗಳಿವೆ. ಮಧ್ಯಕಾಲೀನ ಯುರೋಪಿನ ಕಲೆ, ವಾಸ್ತುಶಿಲ್ಪಗಳಿಗೆ ಸಂಬಂಧಿಸಿದ ವ್ಯಾಪಕ ಸಂಗ್ರಹವನ್ನು ಹೊಂದಿದೆ. ಮೆಟ್ ಆಫ್ರಿಕನ್, ಏಷ್ಯನ್, ಓಷಿಯನ್, ಬೈಜಾಂಟೈನ್ ಮತ್ತು ಇಸ್ಲಾಮಿಕ್ ಕಲಾಕೃತಿಗಳನ್ನು ಒಳಗೊಂಡಿದೆ. ಸಂಗೀತ ವಾದ್ಯಗಳು, ವೇಷಭೂಷಣಗಳು, ಪುರಾತನ ಆಯುಧಗಳು ಮತ್ತು ರಕ್ಷಾಕವಚಗಳು, ಮುಂತಾದವುಗಳನ್ನು ಹೊಂದಿದೆ. 1872 ರ ಫೆಬ್ರವರಿ 20 ರಂದು ಈ ಮ್ಯೂಸಿಯಂ ಸ್ಥಾಪಿತವಾಗಿದೆ. ಅಮೇರಿಕನ್ ಜನರಿಗೆ ಕಲೆ ಮತ್ತು ಕಲಾ ಶಿಕ್ಷಣವನ್ನು ಕೊಡುವ ಉದ್ದೆÃಶದಿಂದ ಈ ಮ್ಯೂಸಿಯಂ ಸ್ಥಾಪಿಸಲಾಗಿದೆ. (ಚಿತ್ರ – 4)
5. ವ್ಯಾಟಿಕನ್ ವಸ್ತುಸಂಗ್ರಹಾಲಯ : ವ್ಯಾಟಿಕನ್ ನಗರದಲ್ಲಿರುವ ಈ ಸಂಗ್ರಹಾಲಯವು ಕ್ರಿಶ್ಚಿಯನ್ ಪೋಪ್‌ಗಳು ಸಂಗ್ರಹಿಸಿದ ಅಪಾರ ವಸ್ತುಗಳ ಸಂಗ್ರಹದಿಂದ ಕೂಡಿದೆ. ಪ್ರಸಿದ್ದ ಶಾಸ್ತಿçÃಯ ಶಿಲ್ಪಗಳು ಮತ್ತು ವಿಶ್ವ ನವೋದಯ ಕಲೆಯ ಮೇರು ಕಲಾಕೃತಿಗಳು ಇಲ್ಲಿವೆ. ಈ ವಸ್ತು ಸಂಗ್ರಹಾಲಯದಲ್ಲಿ 70 ಸಾವಿರಕ್ಕೂ ಹೆಚ್ಚಿನ ಕಲಾಕೃತಿಗಳಿವೆ. ಅದರಲ್ಲಿ 20 ಸಾವಿರ ವಸ್ತುಗಳನ್ನು ಮಾತ್ರ ಪ್ರದರ್ಶನಕ್ಕೆ ಇಡಲಾಗಿದೆ. ಉಳಿದ ಕಲಾಕೃತಿಗಳನ್ನು ಆಡಳಿತ, ಪಾಂಡಿತ್ಯ ಮತ್ತು ಸಂಶೋಧನೆಗಾಗಿ ಬಳಸಲಾಗುತ್ತದೆ.
16ನೇ ಶತಮಾನದ ಆರಂಭದಲ್ಲಿ ಪೋಪ್ ಜ್ಯೂಲಿಯಸ್-2 ಈ ಸಂಗ್ರಹಾಲಯವನ್ನು ಸ್ಥಾಪಿಸಿದರು. 54 ಗ್ಯಾಲರಿಗಳನ್ನು ಹೊಂದಿದ ಈ ಸಂಗ್ರಹಾಲಯವನ್ನು 2017 ರಲ್ಲಿ 60 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ. ಆಧುನಿಕ ಧಾರ್ಮಿಕ ಕಲಾಕೃತಿಗಳ ಜೊತೆಗೆ ಕಾರ್ಲೋ ಕಾರಾ, ಜಾರ್ಜಿಯೋ ಡೇ, ವಿನ್ಸೆಂಟ್ ವ್ಯಾನ್ ಗಾಗ್, ಸಲ್ವಡಾರ್ ಡಾಲಿ, ಪ್ಯಾಬ್ಲೊÃ ಪಿಕಾಸೋರಂತಹ ಪ್ರಸಿದ್ದ ವರ್ಣಚಿತ್ರಗಾರರ ಕಲಾಕೃತಿಗಳು ಇಲ್ಲಿವೆ. (ಚಿತ್ರ – 5)
6. ಚೀನಾದ ವಿಜ್ಞಾನ ಮತ್ತು ತಂತ್ರಜ್ಞಾನ ಮ್ಯೂಸಿಯಂ : ಶಾಂಘೈ ನಗರದಲ್ಲಿರುವ ಅತೀ ದೊಡ್ಡ ವಸ್ತುಸಂಗ್ರಹಾಲಯ ಇದಾಗಿದೆ. 1995ರಲ್ಲಿ ಪ್ರಾರಂಭವಾದ ಈ ಮ್ಯೂಸಿಯಂ ಪ್ರಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನಗಳೊಂದಿಗಿನ ಮಾನವ ಕುಲದ ಸಾಧನೆಗಳನ್ನು ತಿಳಿಸುತ್ತದೆ. ‘ಸ್ವರ್ಗ ಮತ್ತು ಭೂಮಿ’, ‘ಜೀವನ’, ‘ಸಾಮ್ರಾಜ್ಯ’, ‘ಸೃಜನಶೀಲತೆ’ ಮತ್ತು ‘ಭವಿಷ್ಯ’ ಎಂಬ ಐದು ಪ್ರದರ್ಶನ ಸಭಾಂಗಣಗಳಿವೆ. ಕಳೆದ ವರ್ಷ 64 ಲಕ್ಷ ವೀಕ್ಷಕರು ಇಲ್ಲಿಗೆ ಭೇಟಿ ನೀಡಿದ್ದಾರೆ. 
ಚೀನಾದ ಪುರಾತನ ವಿಜ್ಞಾನ ಮತ್ತು ತಂತ್ರಜ್ಞಾನದ ಅನ್ವೆÃಷಕ ಮಾದರಿಗಳು ಇಲ್ಲಿವೆ. 7500 ಚದರ ಅಡಿ ವಿಸ್ತಾರದಲ್ಲಿ ದೃಕ್-ಶ್ರವಣ ಸಂಶೋಧನೆಯ ಮಾದರಿ, ಸಣ್ಣ ಪ್ರಮಾಣದ ಜಲ ವಿದ್ಯುತ್ ಕೇಂದ್ರ, ಮಳೆಕಾಡು, ಅಕ್ವೆÃರಿಯಂ ಹಾಗೂ ಭೂಕಂಪ ಮಾಪನ ಕೇಂದ್ರವೂ ಇದೆ. ಅಲ್ಲದೇ ವೈಜ್ಞಾನಿಕ ಅಭಿವೃದ್ದಿಯನ್ನು ತಿಳಿಸುವ ಅನೇಕ ವೀಡಿಯೋಗಳ ಪ್ರದರ್ಶನವು ಇಲ್ಲಿದೆ. (ಚಿತ್ರ – 6)
7. ಅಮೇರಿಕಾದ ನ್ಯಾಷನಲ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ : ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ಈ ಮ್ಯೂಸಿಯಂನ ಪ್ರವೇಶ ಉಚಿತ. ನೈಸರ್ಗಿಕ ವಸ್ತುಗಳ ಸಂಗ್ರಹಾಲಯವಾಗಿರುವ ಇದು ಪ್ರವಾಸಿಗೆ ನೆಚ್ಚಿನ ಸ್ಥಳವಗಿದೆ. 15 ಲಕ್ಷ ಚದರ ಅಡಿ ವಿಸ್ತಾರವುಳ್ಳ ಈ ಸಂಗ್ರಹಾಲಯಕ್ಕೆ ಕಳೆದ ವರ್ಷ 71 ಲಕ್ಷ ಜನ ಭೇಟಿ ನೀಡಿದ್ದಾರೆ. ಇಲ್ಲಿ 1.26 ಕೋಟಿ ವಿವಿಧ ಮಾದರಿಯ ಕಲಾಕೃತಿಗಳಿವೆ. ಪ್ರಾಣಿಗಳ ಪಳೆಯುಳಿಕೆಗಳು, ಖನಿಜಗಳು, ಉಲ್ಕೆಗಳು, ಮಾನವ ಅವಶೇಷಗಳು ಮತ್ತು ಮಾನವನ ಸಾಂಸ್ಕೃತಿಕ  ಕಲಾಕೃತಿಗಳನ್ನು ಹೊಂದಿದೆ. ಇಲ್ಲಿ ವಿಜ್ಞಾನಿಗಳ ದೊಡ್ಡ ನೆಲೆಯಾಗಿದೆ. ವಿಶ್ವದ ನೈಸರ್ಗಿಕ ಮತ್ತು ಸಾಂಸ್ಕೃತಿಕ ಅಧ್ಯಯನಕ್ಕೆ ಮೀಸಲಾದ ತಾಣ ಇದಾಗಿದೆ.  (ಚಿತ್ರ – 7)
8. ಲಂಡನ್‌ನ ಬ್ರಿಟಿಷ್ ಮ್ಯೂಸಿಯಂ : ಲಂಡನ್ನಿನ ಬ್ಲೂಮ್ಸ್ಬರಿ ಪ್ರದೇಶದಲ್ಲಿರುವ ಈ ಮ್ಯೂಸಿಯಂ ಮಾನವನ ಇತಿಹಾಸ, ಕಲೆ ಮತ್ತು ಸಂಸ್ಕೃತಿಗೆ ಸಮರ್ಪಿತವಾದ ಒಂದು ಸಾರ್ವಜನಿಕ ಸಂಸ್ಥೆಯಾಗಿದೆ. 80 ಲಕ್ಷ ಕಲಾಕೃತಿಗಳನ್ನು ಒಳಗೊಂಡಿದೆ. ಪ್ರಾರಂಭದಿಂದ ಇಂದಿನವರೆಗಿನ ಮಾನವ ಸಂಸ್ಕೃತಿಯ ಕಥೆಯನ್ನು ಹಾಗೂ ಬ್ರಿಟಿಷ್ ಸಾಮ್ರಾಜ್ಯ ಯುಗದ ವ್ಯಾಪಕ ಮೂಲಗಳನ್ನು ದಾಖಲಿಸಿದೆ. 
1753ರಲ್ಲಿ ಪ್ರಾರಂಭವಾದ ಈ ಮ್ಯೂಸಿಯಂ ವೈದ್ಯ ವಿಜ್ಞಾನಿ ಸರ್.ಹ್ಯಾನ್ಸ್ ಸ್ಲೊÃಯೆನ್ ಅವರ ಸಂಗ್ರಹಗಳನ್ನು ಆಧರಿಸಿತ್ತು. ಪ್ರಾರಂಭದಲ್ಲಿ ಕೇವಲ ಗ್ರಂಥಾಲಯವಾಗಿದ್ದ ಇದು ಕ್ರಮೇಣವಾಗಿ ಮಾನವ ಸಂಸ್ಕೃತಿಯ ಪ್ರದರ್ಶನಗಳ ಕೇಂದ್ರವಾಗಿ ಮಾರ್ಪಾಟಾಯಿತು. ಕಳೆದ ವರ್ಷ 59 ಲಕ್ಷ ಜನ ಈ ಸಂಗ್ರಹಾಲಯವನ್ನು ವೀಕ್ಷಿಸಿದ್ದಾರೆ. (ಚಿತ್ರ – 8)
9. ಲಂಡನ್‌ನ ಟೇಟ್ ಮಾರ್ಡನ್ : ಲಂಡನ್ ನಗರದಲ್ಲಿರುವ ಇದು ಆಧುನಿಕ ಕಲಾ ಸಂಪುಟವಾಗಿದೆ. 1900 ರಿಂದ ಇಂದಿನವರೆಗೆ ಅಂತರರಾಷ್ಟಿçÃಯ ಆಧುನಿಕ ಮತ್ತು ಸಮಕಾಲೀನ ಕಲೆಯ ಸಮಾಗಮವಾಗಿದೆ. ವಿಶ್ವದ ಸಮಕಾಲೀನ ಕಲೆಯ ದೊಡ್ಡ ಸಂಗ್ರಹಾಲಯಗಳಲ್ಲಿ ಟೇಟ್ ಮಾರ್ಡನ್ ಕೂಡಾ ಒಂದಾಗಿದೆ. ಇದರ ಪ್ರವೇಶ ಉಚಿತ. ವಿವಿಧ ದೇಶಗಳ ಆಧುನಿಕ ಕಲೆಯ ಮೂಲ ಕಲ್ಪನೆಗಳನ್ನು ಪರಿಚಯಿಸುವ ಹಿನ್ನಲೆಯಲ್ಲಿ ಈ ಮ್ಯೂಸಿಯಂ ನಿರ್ಮಾಣಗೊಂಡಿದೆ. ಇಲ್ಲಿ ಥೀಮ್ ಆಧಾರಿತ ಎಂಟು ಪ್ರದರ್ಶನ ಗ್ಯಾಲರಿಗಳಿವೆ. ಶಾಶ್ವತ ಪ್ರದರ್ಶನಗಳ ಜೊತೆಗೆ ಕೆಲವು ತಾತ್ಕಾಲಿಕ ಪ್ರದರ್ಶನಗಳನ್ನೂ ಸಹ ಏರ್ಪಡಿಸಲಾಗುತ್ತದೆ. ತಾತ್ಕಾಲಿಕ ಪ್ರದರ್ಶನಗಳಿಗೆ ಪ್ರವೇಶ ಶುಲ್ಕ ಇರುತ್ತದೆ. ಸಾಮಾನ್ಯವಾಗಿ ಇವು ಮರ‍್ನಾಲಕು ತಿಂಗಳುಗಳ ಕಾಲ ನಡೆಯುತ್ತವೆ. ಶಾಶ್ವತ ಪ್ರದರ್ಶನದ ಬಳಿ ಪುಸ್ತಕ ಮತ್ತು ಕೆಲವು ಸರಕುಗಳ ಪ್ರದರ್ಶನ ಮತ್ತು ಮಾರಾಟವೂ ಇರುತ್ತದೆ. (ಚಿತ್ರ – 9)
10. ವಾಷಿಂಗ್ಟನ್‌ನ ನ್ಯಾಷನಲ್ ಆರ್ಟ್ ಗ್ಯಾಲರಿ : 1937 ರಲ್ಲಿ ಖಾಸಗಿಯಾಗಿ ಪ್ರಾರಂಭವಾದ ಈ ಸಂಗ್ರಹಾಲಯ ವಾಷಿಂಗ್ಟನ್ ಡಿ.ಸಿ.ಯಲ್ಲಿದೆ. ಈಗ ಸಾರ್ವಜನಿಕವಾದ ಇದು ಸಂಪೂರ್ಣವಾಗಿ ಕಲಾ ಸಂಗ್ರಹಾಲಯವಾಗಿದೆ. ಇದರಲ್ಲಿ ವರ್ಣಚಿತ್ರಗಳು, ರೇಖಾ ಚಿತ್ರಗಳು, ಮುದ್ರಿತ ಪ್ರತಿಗಳು, ಛಾಯಾ ಚಿತ್ರಗಳು, ಶಿಲ್ಪಗಳು, ಪದಕಗಳು, ಅಲಂಕಾರಿಕ ವಸ್ತುಗಳಿವೆ. ಇದರಲ್ಲಿ ಲಿಯೋನಾರ್ಡ್ ಡಾವಿಂಚಿಯ ಕಲಾಕೃತಿಗಳು ಇವೆ. 
ಸಂಗ್ರಹಾಲಯವು ಎರಡು ಕಟ್ಟಡಗಳನ್ನು ಒಳಗೊಂಡಿದೆ. ಈ ಎರಡೂ ಕಟ್ಟಡಗಳು ಬೇರೆ ಬೇರೆಯಾಗಿದ್ದು ಭೂಗತ ಮಾರ್ಗಗಳನ್ನು ಹೊಂದಿವೆ. ಸಂಗ್ರಹಾಲಯದಲ್ಲಿ ಮಧ್ಯಯುಗದಿಂದ ಇಂದಿನವರೆಗಿನ ಪಾಶ್ಚಿಮಾತ್ಯ ಕಲೆಯ ಬೆಳವಣಿಗೆಯನ್ನು ಪತ್ತೆಹಚ್ಚುವ 141,000 ಕ್ಕೂ ಹೆಚ್ಚಿನ ಕಲಾಕೃತಿಗಳಿವೆ. ಕಳೆದ ವರ್ಷ ಈ ಸಂಗ್ರಹಾಲಯಕ್ಕೆ 52 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. (ಚಿತ್ರ – 10)
11. ತೈಪೈಯ ರಾಷ್ಟಿçÃಯ ಅರಮನೆ ಮ್ಯೂಸಿಯಂ : ಚೀನೀ ಚಕ್ರಾಧಿಪತ್ಯದ ಕಲಾಕೃತಿಗಳನ್ನು ಹೊಂದಿದ ಈ ಮ್ಯೂಸಿಯಂ ಚೀನಾದ ತೈಪೈಯಲ್ಲಿದೆ. ನವಶಿಲಾಯುಗದಿಂದ ಆಧುನಿಕದವರೆಗಿನ 8000 ವರ್ಷಗಳ ಚೀನೀಯರ ಕಲೆಯ ಇತಿಹಾಸವನ್ನು ಹೊಂದಿದ ಈ ಮ್ಯೂಸಿಯಂನಲ್ಲಿ 7 ಲಕ್ಷಕ್ಕೂ ಅಧಿಕ ಕಲಾಕೃತಿಗಳಿವೆ. 1925ರಲ್ಲಿ ಪ್ರಾರಂಭವಾದ ಈ ಮ್ಯೂಸಿಯಂನ ಈಗಿನ ಮುಖ್ಯ ಕಟ್ಟಡವನ್ನು ಹುವಾಂಗ್ ಬಾಯುಯು ವಿನ್ಯಾಸಗೊಳಿಸಿ 1965ರಲ್ಲಿ ನಿರ್ಮಿಸಿದ್ದಾರೆ. ಮಿಂಗ್ ಮತ್ತು ಕ್ವಿಂಗ್ ರಾಜವಂಶಗಳ ಸಾಮ್ರಾಜ್ಯದ ಅರಮನೆ ಸಂಗ್ರಹಗಳು ಇಲ್ಲಿವೆ. ಚಿತ್ರಕಲೆ ಮತ್ತು ಕಾಲಿಗ್ರಫಿಯ ಶಾಶ್ವತ ಪ್ರದರ್ಶನ ಮೂರು ತಿಂಗಳಿಗೊಮ್ಮೆ ನಡೆಯುತ್ತದೆ. 2017 ರಲ್ಲಿ 44 ಲಕ್ಷ ಪ್ರವಾಸಿಗರು ಈ ಮ್ಯೂಸಿಯಂ ವೀಕ್ಷಿಸಿದ್ದಾರೆ. (ಚಿತ್ರ – 11)
12. ರಷ್ಯಾದ ಸ್ಟೆÃಟ್ ಹರ್ಮಿಟೇಜ್ ಮ್ಯೂಸಿಯಂ : ಸೇಂಟ್ ಪೀರ‍್ಸ್ಬರ್ಗ್ನಲ್ಲಿರುವ ಸ್ಟೆÃಟ್ ಹರ್ಮಿಟೇಜ್ ಮ್ಯೂಸಿಯಂ ಕಲೆ ಮತ್ತು ಸಂಸ್ಕೃತಿಯ ಆಗರವಾಗಿದೆ. ಇದು 1764 ರಲ್ಲಿ ಎಂಪ್ರಾಸ್ ಕ್ಯಾಥರೀನ್ ದಿ ಗ್ರೆÃಟ್ ಬರ್ಲಿನ್ ಎಂಬ ವ್ಯಾಪಾರಿಯ ವರ್ಣ ಚಿತ್ರಗಳ ಸಂಗ್ರಹದಿಂದ ಪ್ರಾರಂಭವಾಗಿದೆ. ರಷ್ಯಾದ ಐತಿಹಾಸಿಕ ಕಟ್ಟಡಗಳಾದ ವಿಂಟರ್ ಅರಮನೆ, ಮೆನ್ಶಿಕೋವ್ ಪ್ಯಾಲೇಸ್, ಮ್ಯೂಸಿಯಂ ಆಫ್ ಪಿರ್ಸಿಲೈನ್ ಮುಂತಾದವುಗಳನ್ನು ಒಳಗೊಂಡ ಸಂಕೀರ್ಣ ಸಂಗ್ರಹಾಲಯವಾಗಿದೆ. ಅಲ್ಲದೇ ಇದು ಸಿನಿಮಾ ಮತ್ತು ದೂರದರ್ಶನಗಳ ಚಿತ್ರಿÃಕರಣ ತಾಣವೂ ಆಗಿದೆ. ಕಳೆದ ವರ್ಷ 42 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿನೀಡಿದ್ದಾರೆ.  (ಚಿತ್ರ – 12)
13. ಮ್ಯಾಡ್ರಿಡ್‌ನ ರೇನಾ ಸೋಫಿಯಾ : ಸ್ಪೆÃನ್‌ನ ಮ್ಯಾಡ್ರಿಡ್‌ನಲ್ಲಿರುವ ಇದು ರಾಷ್ಟಿçÃಯ ಮ್ಯೂಸಿಕ್ ಸಂಗ್ರಹಾಲಯವಾಗಿದೆ. ಸಂಗೀತಕ್ಕಾಗಿಯೇ ಮೀಸಲಾದ ಇದರಲ್ಲಿ ಪ್ರಸಿದ್ದ ಸಂಗೀತಗಾರರ ಸಂಗ್ರಹಗಳಿವೆ. 1992ರ ಸೆಪ್ಟಂಬರ್ 10 ರಂದು ಪ್ರಾರಂಭವಾದ ಈ ಮ್ಯೂಸಿಯಂಗೆ ಕ್ವಿÃನ್ ಸೋಫಿಯಾ ಹೆಸರಿಡಲಾಗಿದೆ. ಸ್ಪೆÃನ್‌ನ ಪ್ಯಾಬ್ಲೊà ಪಿಕಾಸೋ ಮತ್ತು ಸಾಲ್ವಡಾರ್ ಡಾಲಿಯ ಅತ್ಯುತ್ತಮ ಸಂಗ್ರಹಗಳನ್ನು ಒಳಗೊಂಡಿದೆ. ಇದಲ್ಲದೇ ಜೋನಾ ಮೀರೋ, ಪಾಬ್ಲೊà ಗಾರ್ಗಲ್ಲೊÃ, ಲೂಯಿಸ್ ಗಾರ್ಡಿಲ್ಲೊ, ಲೂಯಿಸ್ ಮನೋಜ್, ಜಾರ್ಜ್ ಓಟೈಟಾ ಮುಂತಾದ ಕಲಾವಿದರ ಸಂಗ್ರಹದಿಂದ ಈ ಮ್ಯೂಸಿಯಂ ಕಾರ್ಯ ನಿರ್ವಹಿಸುತ್ತದೆ. ಈ ಮ್ಯೂಸಿಯಂನಲ್ಲಿ 1 ಲಕ್ಷಕ್ಕೂ ಹೆಚ್ಚಿನ ಪುಸ್ತಕಗಳು, 3500 ಕ್ಕೂ ಹೆಚ್ಚಿನ ಧ್ವನಿ ಮುದ್ರಣಗಳು ಮತ್ತಿ 1000 ಕ್ಕೂ ಹೆಚ್ಚಿನ ವೀಡಿಯೋಗಳ ಹೊಂದಿದ ಗ್ರಂಥಾಲಯವಿದೆ. ಕಳೆದ ವರ್ಷ 39 ಲಕ್ಷ ಪ್ರವಾಸಿಗರು ಈ ತಾಣಕ್ಕೆ ಭೇಟಿ ನೀಡಿದ್ದಾರೆ.  (ಚಿತ್ರ – 13)
ಆರ್.ಬಿ.ಗುರುಬಸವರಾಜ ಹೊಳಗುಂದಿ

No comments:

Post a Comment