May 30, 2018

ಓದಿನ ಗಮ್ಮತ್ತು Benefits of Reading

ದಿನಾಂಕ 28-5-2018ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಓದಿನ ಗಮ್ಮತ್ತು


“ಇತ್ತಿÃಚಿನ ಯುವ ಪೀಳಿಗೆ ಇಂಟರ್‌ನೆಟ್‌ನಲ್ಲೆÃ ಮುಳುಗಿ ಹೋಗಿರುವಾಗ ಪುಸ್ತಕ ಓದುವ ಜನ ಎಲ್ಲಿದ್ದಾರೆ? ಈ ಪುಸ್ತಕವನ್ನು ಓದುವವರು ಯಾರು? ಯಾವ ಉದ್ದೆÃಶದಿಂದ ಹೊರತರುತ್ತಿÃರಿ?” ಇದು ಖ್ಯಾತ ಸಾಹಿತಿ ನಾಡೋಜ ಕೋ.ಚೆನ್ನಬಸಪ್ಪ ಅವರ ನೋವಿನ ನುಡಿ. ಇತ್ತಿÃಚೆಗೆ ಪುಸ್ತಕದ ಮುನ್ನುಡಿಗೆಂದು ಅವರ ಬಳಿ ಹೋದಾಗ ಪುಸ್ತಕ ಓದುವವರ ಸಂಖ್ಯೆ ಕ್ಷಿÃಣಿಸುತ್ತಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಆದರೆ ಮುಂದುವರೆದು ಪುಸ್ತಕ ಓದುವುದರಿಂದ ತಮ್ಮ ವೈಯಕ್ತಿಕ ಜೀವನದಲ್ಲಿ ಆದ ಲಾಭಗಳ ಬಗ್ಗೆಯೂ ಚರ್ಚಿಸಿದರು. “ಓದು, ನನ್ನ ಆಲೋಚನೆಗಳ ದಿಕ್ಕನ್ನು ಬದಲಿಸಿತು ಮತ್ತು ಭಾವನೆಗಳನ್ನು ಅಭಿವ್ಯಕ್ತಿಗೊಳಿಸಲು ಸಹಾಯಕವಾಯಿತು. ಪುಸ್ತಕ ಓದಿನಿಂದ ಶೋಷಿತರ ಮತ್ತು ಅವ್ಯವಸ್ಥೆಯ ವಿರುದ್ದ ನನ್ನ ಧ್ವನಿ ಗಟ್ಟಿಯಾಗಿದೆ. ಪುಸ್ತಕಗಳು ಇಲ್ಲದೇ ಹೋಗಿದ್ದರೆ ನಾನಿಂದು ಈ ಹಂತಕ್ಕೆ ಬೆಳೆಯುತ್ತಿರಲಿಲ್ಲ. ಪುಸ್ತಕಗಳು ನನ್ನನ್ನು ಒಬ್ಬ ಮನುಷ್ಯನನ್ನಾಗಿಸಿವೆ”. 
 ಹೌದು ಇತ್ತಿಚಿಗೆ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ನಿಜಕ್ಕೂ ಖೇದಕರ ಸಂಗತಿ. ಆದಾಗ್ಯೂ ಕನ್ನಡದ ನೆಲದಲ್ಲಿ ಪುಸ್ತಕಗಳು, ಸಾಹಿತಿಗಳು, ಬರಹಗಾರರು, ಪ್ರಕಾಶಕರು ಮತ್ತು ಮಾರಾಟಗಾರರ ಸಂಖ್ಯೆ ಹೆಚ್ಚುತ್ತಿರುವುದು ಸಂತೋಷದ ಸಂಗತಿಯಲ್ಲವೇ?
ಪ್ರತಿದಿನವೂ ಪುಸ್ತಕ ದಿನವನ್ನಾಗಿ ಮಾಡಿಕೊಂಡವರ ಬದುಕು ಸುಂದರವಾಗಿರುವುದನ್ನು ಕಾಣಬಹುದು. ದಶಕಕ್ಕೂ ಹಿಂದೆ ಪುಸ್ತಕ ಓದುವುದು ಬಹುತೇಕರ ದಿನದ ಅವಿಭಾಜ್ಯ ಅಂಗವಾಗಿತ್ತು. ಆದರೆ ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಉಂಟಾದ ಸಂಪರ್ಕ ಕ್ರಾಂತಿ ಮತ್ತು ಮೊಬೈಲ್ ಮೇನಿಯಾಗಳು ಜನರನ್ನು ಪುಸ್ತಕ ಓದಿನಿಂದ ದೂರ ಸರಿಸಿದವು. ಆದರೆ ಪುಸ್ತಕ ಓದುವುದರಿಂದ ದೊರೆಯುವ ಸುಖ ಮತ್ತು ಲಾಭಗಳನ್ನು ಬೇರೆ ಯಾವ ಸಾಧನಗಳೂ ನೀಡಲಾರವು. 
ಪುಸ್ತಕಗಳು ಜೀವನದ ಆತ್ಮ ಸಂಗಾತಿಗಳು. ಪ್ರತಿಯೊಬ್ಬ ಸಾಕ್ಷರರ ಜೀವನದಲ್ಲಿ ಕನಿಷ್ಠ ಒಂದು ಪುಸ್ತಕವಾದರೂ ಪ್ರಭಾವ ಬೀರಿರುತ್ತದೆ ಮತ್ತು ಅವರ ಜೀವನದ ದಿಕ್ಕನ್ನು ಉತ್ತಮಗೊಳಿಸಿರುತ್ತದೆ. ಪುಸ್ತಕದ ಓದು ಭವಿಷ್ಯಕ್ಕೊಂದು ದಿಕ್ಸೂಚಿ. ಓದುವುದರಿಂದ ಸ್ವಯಂ ಅಭಿವೃದ್ದಿ, ಸ್ವಯಂ ಶಿಕ್ಷಣ ಮತ್ತು ಮನೋರಂಜನೆ ದೊರೆಯುತ್ತದೆ. ಹಾಗಾಗಿ ಓದು ಅತ್ಯಂತ ಜನಪ್ರಿಯ ಹಾಗೂ ಸುಲಭ ಮಾಧ್ಯಮವಾಗಿದೆ. ಓದು ಮಕ್ಕಳ ಮತ್ತು ವಯಸ್ಕರ ಬೆಳೆವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಾಹಿತಿಯನ್ನು ಸಂಗ್ರಹಿಸಲು ಮತ್ತು ಕೇಂದ್ರಿÃಕರಿಸಲು ಓದು ಅತ್ಯಂತ ಅವಶ್ಯಕ. ಓದುವುದರಿಂದ ಜೀವನಕ್ಕೆ ಪರ್ಯಾಯ ದೃಷ್ಟಿಕೋನ, ವಿವಿಧ ಅಭಿಪ್ರಾಯಗಳು ಮತ್ತು ಅವುಗಳ ಒಳನೋಟಗಳು ಲಭಿಸುತ್ತದೆ. ಜೊತೆಗೆ ಕೆಲವೊಮ್ಮೆ ನಾವು ನಂಬಲು ಕಾರಣವಾದ ಅಂಶಗಳಿಗೆ ವಿಭಿನ್ನ ದೃಷ್ಟಿಕೋನ ದೊರೆಯುತ್ತದೆ. 
ಆದ್ದರಿಂದ ಒಂದು ಒಳ್ಳೆಯ ಪುಸ್ತಕ ಎತ್ತಿಕೊಳ್ಳಿ ಅಥವಾ ಒಂದು ಒಳ್ಳೆಯ ಲೇಖನ ಹುಡುಕಿ. ನಿಮ್ಮ ಎಲ್ಲಾ ತಂತ್ರಜ್ಞಾನ ಉಪಕರಣಗಳನ್ನು ಆಫ್ ಮಾಡಿ. ಮನಸ್ಸನ್ನು ಕೇಂದ್ರಿÃಕರಿಸಿ ಓದಲು ಪ್ರಾರಂಭಿಸಿ. ಖಂಡಿತವಾಗಿಯೂ ಆ ಓದು ನಿಮ್ಮನ್ನು ಉತ್ತಮರನ್ನಾಗಿಸುತ್ತದೆ. ಕೆಳಗಿನ ಅಂಶಗಳು ನಿಮಗೆ ಓದಿನ ಮಹತ್ವ ತಿಳಿಸುತ್ತವೆ.
ಓದಿನಿಂದ ಮನಸ್ಸು ಪ್ರಫುಲ್ಲವಾಗುತ್ತದೆ.
ಸಂಭಾಷಣೆಯ ಮಟ್ಟವನ್ನು ಸುಧಾರಿಸುತ್ತದೆ.
ಕುತೂಹಲವನ್ನು ತಣಿಸುತ್ತದೆ.
ವಿಭಿನ್ನ ಸ್ಥಳಗಳ ಮಾಹಿತಿ ಲಭ್ಯವಾಗುತ್ತದೆ.
ವಿಭಿನ್ನ ಸಂಸ್ಕೃತಿಗಳ ಪರಿಚಯವಾಗುತ್ತದೆ.
ಸಮಾಜದಲ್ಲಿ ವಿಭಿನ್ನ ವ್ಯಕ್ತಿಗಳ ಪಾತ್ರ ಪರಿಚಯವಾಗುತ್ತದೆ.
ಸೃಜನಶೀಲತೆಯನ್ನು ಉದ್ದಿÃಪಿಸುತ್ತದೆ.
ಸುಲಭ ರೀತಿಯಲ್ಲಿ ಮನೋರಂಜನೆ ನೀಡುತ್ತದೆ. 
ವಿಶ್ಲೆÃಷಣಾತ್ಮಕ ಚಿಂತನಾ ಸಾಮರ್ಥ್ಯ ಬೆಳೆಯುತ್ತದೆ.
ಶಬ್ದ ಭಂಡಾರ ಮತ್ತು ಜ್ಞಾನ ವಿಸ್ತಾರಗೊಳ್ಳುತ್ತದೆ.
ಬರವಣಿಗೆಯ ಸಾಮರ್ಥ್ಯವನ್ನು ಉನ್ನತೀಕರಿಸುತ್ತವೆ. 
ಪ್ರಾಪಂಚಿಕ ಜ್ಞಾನ ವೃದ್ದಿಯಾಗುತ್ತದೆ. 
ವಾಸ್ತವಿಕತೆಯ ಪರಿಚಯವಾಗುತ್ತದೆ.
ದೈನಂದಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. 
ಒತ್ತಡವನ್ನು ಕಡಿಮೆ ಮಾಡುತ್ತದೆ.
ಧೈರ್ಯ, ಸ್ಥೆöÊರ್ಯ ಮತ್ತು ನಿರ್ಣಯ ಸಾಮರ್ಥ್ಯಗಳು ಬೆಳೆಯುತ್ತವೆ. 
ಓದಿನಿಂದ ಜನರ ಕಷ್ಟ-ನಷ್ಟ, ನೋವು-ನಲಿವುಗಳ ಪರಿಚಯವಾಗುತ್ತದೆ. 
ಆಂತರಿಕ ಸೌಂದರ್ಯ ಹೆಚ್ಚುತ್ತದೆ.

ಆರ್.ಬಿ.ಗುರುಬಸವರಾಜ ಹೊಳಗುಂದಿ


2 comments: