May 30, 2018

ತಂಬಾಕಿಗೆ ಗುಡ್‌ಬೈ GOODBYE TO TOBACCO

ದಿನಾಂಕ 30-5-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ತಂಬಾಕಿಗೆ ಗುಡ್‌ಬೈ 



ಇಂದು ದೇಶವನ್ನು ಕಾಡುತ್ತಿರುವ ಆರೋಗ್ಯ ಸಂಬಂಧಿ ಪಿಡುಗುಗಳಲ್ಲಿ ಅತೀ ದೊಡ್ಡ ಪಿಡುಗು ಎಂದರೆ ತಂಬಾಕು. ಇದು ಏಡ್ಸ್, ಡ್ರಗ್ಸ್, ಕುಡಿತ, ಆತ್ಮಹತ್ಯೆ ಮತ್ತು ಕೊಲೆಗಿಂತ ಹೆಚ್ಚು ಅಪಾಯಕಾರಿ. ಭಾರತದಲ್ಲಿ ಪ್ರತಿವರ್ಷ ತಂಬಾಕು ಕ್ಯಾನ್ಸರ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ 10 ಲಕ್ಷ ಮೀರುತ್ತಿದೆ ಎಂದು `ಭಾರತೀಯ ವೈದ್ಯ ಸಂಸ್ಥೆ’(ಂIಒS)ಹೇಳಿದೆ. ಇದರಲ್ಲಿ ಪುರುಷÀರ ಸಂಖ್ಯೆ ಅಧಿಕ. ಅದರಲ್ಲೂ ಧೂಮಪಾನಿಗಳ ಸಂಖ್ಯೆ ಇನ್ನೂ ಅಧಿಕ. ಶೇ.56 ರಷ್ಟು ಪುರುಷರು ಮತ್ತು ಶೇ.44 ರಷ್ಟು ಮಹಿಳೆಯರು ತಂಬಾಕು ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ಶೇ.82 ರಷ್ಟು ಪ್ರಕರಣಗಳಲ್ಲಿ ಶ್ವಾಸಕೋಶದ ಕಾಯಿಲೆ, ಪುಪ್ಪುಸದ ಕ್ಯಾನ್ಸರ್‌ಗೆ ತಂಬಾಕು ಕಾರಣ ಎಂದು ಧೃಢಪಟ್ಟಿದೆ.
ಕಳೆದ ದಶಕದ ಅಂಕಿ-ಅಂಶಗಳನ್ನು ಗಮನಿಸಿದರೆ, ದಶಕದ ಪ್ರಾರಂಭಕ್ಕಿಂತ ಅಂತ್ಯದ ವೇಳೆಗೆ ತಂಬಾಕು ಸೇವಿಸುವವರ ಸಂಖ್ಯೆ ಹೆಚ್ಚಾಗಿರುವುದು ಕಂಡುಬರುತ್ತದೆ. ಇದೇ ಪರಿಸ್ಥಿತಿ ಮುಂದುವರೆದರೆ 2020 ರ ವೇಳೆಗೆ ತಂಬಾಕು ಸಂಬಂಧಿ ಕಾಯಿಲೆ ಮತ್ತು ಸಾವುಗಳ ಪ್ರಮಾಣ ಶೇಕಡಾ 8.9 ರಷ್ಟು ಹೆಚ್ಚುವ ಭೀತಿ ಇದೆ.
ಈ ಎಲ್ಲಾ ಅಂಕಿ-ಅಂಶಗಳನ್ನು ಗಮನಿಸಿದರೆ ತಂಬಾಕು ಸೇವನೆ ಪ್ರತಿವರ್ಷ ಅಧಿಕವಾಗುತ್ತಿರುವುದು ಶೋಚನೀಯ. ಅದರಲ್ಲೂ ಯುವಜನತೆ ಮತ್ತು ಮಕ್ಕಳು ಅಧಿಕ ಪ್ರಮಾಣದಲ್ಲಿ ಈ ಪಿಡುಗಿಗೆ ತುತ್ತಾಗುತ್ತಿರುವುದು ಅಘಾತಕಾರಿಯಾಗಿದೆ. ಒಂದು ಸಮೀಕ್ಷೆ ಪ್ರಕಾರ 12-14 ವಯೋಮಾನದ ಶೇ.21 ಬಾಲಕರು ಮತ್ತು ಶೇ.2 ಬಾಲಕಿಯರು ತಂಬಾಕು ಉತ್ಪನ್ನಗಳಿಗೆ ದಾಸರಾಗುತ್ತಿದ್ದಾರೆ. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳು ಮತ್ತು ಯುವಕರು ತಂಬಾಕು ಉತ್ಪನ್ನಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ. 
ಕಾರಣಗಳು
ದೃಶ್ಯ ಮಾಧ್ಯಮ ಹಾಗೂ ಚಲನಚಿತ್ರಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆಯನ್ನು ವೈಭವೀಕರಿಸಿ ತೋರಿಸುವುದು.
ಕುಟುಂಬ ಮತ್ತು ಸುತ್ತಲಿನ ಪರಿಸರದಲ್ಲಿನ ಬಹುತೇಕ ಜನರು ತಂಬಾಕು ಉತ್ಪನ್ನಗಳನ್ನು ಬಳಸುತ್ತಿರುವುದು.
ಸ್ನೆÃಹಿತರನ್ನು ಒಲಿಸಿಕೊಳ್ಳಲು/ಒತ್ತಾಯಕ್ಕಾಗಿ ಅಥವಾ ಅನುಕರಣೆಯಿಂದಾಗಿ ತಂಬಾಕು ಉತ್ಪನ್ನಗಳಿಗೆ ಬಲಿಯಾಗುತ್ತಿರುವುದು.
ವಿರಾಮವೇಳೆ ಕಳೆಯಲು ಹಾಗೂ ಮನೋರಂಜನೆಗಾಗಿ.
ಜಾಹೀರಾತಿನ ಪ್ರಭಾವಕ್ಕೆ ಒಳಗಾಗುವುದು.
ತಂಬಾಕಿನಿಂದಾಗುವ ದುಷ್ಪರಿಣಾಮಗಳು
ತಂಬಾಕು ಸೇವನೆಯಿಂದ ಅನೇಕ ರೀತಿಯ ನಷ್ಟಗಳಾಗುತ್ತವೆ. ಮೊದಲನೆಯದು ಸಾಮಾಜಿಕ ಸ್ಥಾನಮಾನ, ಗೌರವಕ್ಕೆ ಕುಂದುಂಟಾಗುತ್ತದೆ. ಎರಡನೆಯದು ಆರೋಗ್ಯ ಹಾನಿಯುಂಟಾಗುತ್ತದೆ. ಮೂರನೆಯದು ಆರ್ಥಿಕ ನಷ್ಟವಾಗುತ್ತದೆ. ಹೇಗೆಂದರೆ, ಒಬ್ಬ ವ್ಯಕ್ತಿ ತಂಬಾಕು ಸೇವನೆಗಾಗಿ (ಬೀಡಿ/ಸಿಗರೇಟು/ಹುಕ್ಕಾ/ಗುಟ್ಕಾ/ಖೈನಿ/ಜರ್ದಾಪಾನ್ ಇತ್ಯಾದಿ) ದಿನವೊಂದಕ್ಕೆ 30-50 ರೂ. ಖರ್ಚು ಮಾಡುತ್ತನೆ ಎಂದುಕೊಂಡರೆ, ಒಂದು ವರ್ಷಕ್ಕೆ 14,600 ರೂ.ಗಳನ್ನು ಹಾಗೂ 10 ವರ್ಷಕ್ಕೆ 1,46,000 ರೂ.ಗಳನ್ನು ಖರ್ಚು ಮಾಡುತ್ತಾನೆ. ಇಷ್ಟೊಂದು ಮೊತ್ತದ ಹಣವನ್ನು ತಂಬಾಕು ಸೇವನೆಗಾಗಿ ಖರ್ಚು ಮಾಡುವ ವೇಳೆಗೆ ಅವನ ಆರೋಗ್ಯ ಹದಗೆಟ್ಟಿರುತ್ತದೆ. ಆರೋಗ್ಯ ಸುಧಾರಣೆಗಾಗಿ ಲಕ್ಷ ಲಕ್ಷಗಳೇ ಖರ್ಚಾಗಬಹುದು. ಹೀಗೆ ತಂಬಾಕು ಆರ್ಥಿಕ ನಷ್ಟವನ್ನೂ ಉಂಟುಮಾಡುತ್ತದೆ. 
ಈಗಾಗಲೇ ನಮಗೆಲ್ಲಾ ತಿಳಿದಿರುವಂತೆ ತಂಬಾಕಿನಲ್ಲಿರುವ ‘ನಿಕೋಟಿನ್’ ಅತ್ಯಂತ ವಿಷಕಾರಿ ಎಂಬುದು ಸಾಬೀತಾಗಿದೆ. ನಿಕೋಟಿನ್ ಎಷ್ಟು ವಿಷಕಾರಿ ಎಂದರೆ, 6 ಮಿ.ಗ್ರಾಂ ನಿಕೋಟಿನ್‌ನ್ನು ನೇರವಾಗಿ ಒಂದು ನಾಯಿಗೆ ಪ್ರಯೋಗಿಸಿದರೆ ಕೆಲವೇ ಸೆಕೆಂಡುಗಳಲ್ಲಿ ನಾಯಿ ಸಾಯುತ್ತದೆ. ಇಂತಹ ನಿಕೋಟಿನ್ ನಮ್ಮ ಬಾಯಿಗೆ ಪ್ರವೇಶಿಸಿದ 10 ಸೆಕೆಂಡುಗಳಲ್ಲಿ ಮೆದುಳಿಗೆ ಹೋಗಿ ‘ಡೊಪಾಮಿನ್’ ಎಂಬ ವಿಷವನ್ನು ಉತ್ಪಾದಿಸಿ ಮೆದುಳಿಗೆ ಬರುವ ರಕ್ತ ಸಂಚಾರಕ್ಕೆ ತಡೆಯೊಡ್ಡುತ್ತದೆ. ಕ್ರಮೇಣವಾಗಿ ಇದು ಬಾಯಿಯ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಧೂಮಪಾನಿಗಳು ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗುವರು, ಅಲ್ಲದೇ ಅನ್ನನಾಳದ, ಹೊಟ್ಟೆಯ, ಮೂತ್ರಪಿಂಡದ, ಮೂತ್ರಕೋಶದ, ಮೇದೋಜೀರಕ ಗ್ರಂಥಿಯ, ಗರ್ಭಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು. ನಿಕೋಟಿನ್ ರಕ್ತದೊತ್ತಡ ಮತ್ತು ಕೊಲೆಸ್ಟಾçಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೇ ಗರ್ಭೀಣಿಯರ ಗರ್ಭದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.  
ತಂಬಾಕನ್ನು ಹದಗೊಳಿಸಲು ಮತ್ತು ಸ್ವಾದಿಷ್ಟಗೊಳಿಸಲು 4 ಸಾವಿರಕ್ಕಿಂತ ಹೆಚ್ಚಿನ ರಸಾಯನಿಕಗಳನ್ನು ಬೆರೆಸುತ್ತಾರೆ. ಅದರಲ್ಲಿ 250ಕ್ಕೂ ಹೆಚ್ಚಿನ ರಸಾಯನಿಕಗಳು ವಿಷಕಾರಿಗಳಾಗಿವೆ ಹಾಗೂ 50ಕ್ಕೂ ಹೆಚ್ಚಿನ ರಸಾಯನಿಕಗಳು ಕ್ಯಾನ್ಸರ್‌ಗೆ ಕಾರಣವಾಗಿವೆ. ಅಲ್ಲದೇ ಚರ್ಮ ಹದಮಾಡಲು ಬಳಸುವಂತಹ ಅತಿ ತೀಕ್ಷ÷್ಣವಾದ ರಸಾಯನಿಕಗಳನ್ನು ತಂಬಾಕು ಸಂಸ್ಕರಣೆಗೆ ಬಳಸುವುದರಿಂದ ಬಾಯಿಯ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ರಸಾಯನಿಕ ಬೆರೆಸದಿದ್ದಾಗಲೂ ನಿಕೋಟಿನ್‌ನ ಪ್ರಮಾಣ ಪ್ರತಿ ಪೌಂಡಿಗೆ 22.8 ಗ್ರಾಂ ಇರುತ್ತದೆ. ಅಲ್ಲದೇ ಅದರಲ್ಲಿ ಕೊಲಿಡೀಸ್, ಅಮೋನಿಯಾ, ಪೈಯರಡೀನ್, ಕಾರ್ಬನ್ ಮೋನಾಕ್ಸೆöÊಡ್‌ಗಳೆಂಬ ಪ್ರತ್ಯೆÃಕ ವಿಷಕಾರಿಗÀಳಿವೆ. ಧೂಮಪಾನದೊಂದಿಗೆ ಹೊಗೆ ಮಾತ್ರ ದೇಹ ಸೇರುವುದಿಲ್ಲ. ಅದರ ಜೊತೆಗೆ ಅರ್ಸೆನಿಕ್, ಸೈನೈಡ್, ಫಾರ್ಮಾಲೈಡ್ ಮುಂತಾದ ವಿಷಕಾರಿಗಳು ಸೇರುತ್ತವೆ.
 


ದುಷ್ಟರಿಣಾಮದ ಕೆಲವು ಅಂಕಿ-ಅಂಶಗಳು
ತಂಬಾಕು ಅದರ ಬಳಕೆದಾರರ ಅರ್ದದಷ್ಟು ಜನರನ್ನು ಕೊಲ್ಲುತ್ತದೆ.
ತಂಬಾಕು ಪ್ರತಿವರ್ಷ 70 ಲಕ್ಷ ಜನರನ್ನು ಕೊಲ್ಲುತ್ತದೆ. ಅದರಲ್ಲಿ 60 ಲಕ್ಷ ಜನರು ನೇರ ತಂಬಾಕಿಗೆ ಬಲಿಯಾದರೆ, ಉಳಿದ ಒಂದು ಲಕ್ಷ ಜನರು ಸೆಕೆಂಡ್ ಹ್ಯಾಂಡ್ ಧೂಮಪಾನದಿಂದ ಸಾಯುತ್ತಾರೆ. 
ವಿಶ್ವದ 1.1 ಕೋಟಿ ಧೂಮಪಾನಿಗಳಲ್ಲಿ ಶೇಕಡಾ 80 ರಷ್ಟು ಜನರು ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿ ವಾಸಿಸುತ್ತಾರೆ.


ಸೆಕೆಂಡ್ ಹ್ಯಾಂಡ್ ಧೂಮಪಾನಿ
ಧೂಮಪಾನಿ ಬಿಟ್ಟ ಹೊಗೆಯನ್ನು ಸೇವಿಸುವವರನ್ನು ಸೆಕೆಂಡ್ ಹ್ಯಾಂಡ್ ಧೂಮಪಾನಿಗಳೆನ್ನುವರು. ಧೂಮಪಾನಿಯು ಬೀಡಿ, ಸಿಗರೇಟ್, ಹುಕ್ಕಾ, ಪೈಪ್ ಇತ್ಯಾದಿಗಳಿಂದ  ತಂಬಾಕು ಸೇವಿಸಿ ಬಿಟ್ಟ ಹೊಗೆಯನ್ನು ಪಕ್ಕದಲ್ಲಿರುವ ಇನ್ನಿತರರು ಸೇವಿಸುತ್ತಾರೆ. ಇವರೇ ಸೆಕೆಂಡ್ ಹ್ಯಾಂಡ್ ಧೂಮಪಾನಿಗಳು. ಸಾಮಾನ್ಯವಾಗಿ ಮನೆ, ಹೋಟೆಲ್, ರೆಸ್ಟೊರೆಂಟ್, ಬಸ್/ರೈಲು ನಿಲ್ದಾಣಗಳು ಇತ್ಯಾದಿ ಜನಸಾಂದ್ರತೆ ಇರುವ ಪ್ರದೇಶದಲ್ಲಿ ಇಂತಹ ಸೆಕೆಂಡ್ ಹ್ಯಾಂಡ್ ಧೂಮಪಾನಿಗಳಿರುತ್ತಾರೆ. ಇದರಲ್ಲಿ ಮಕ್ಕಳು, ಮಹಿಳೆಯರು, ಗರ್ಭಿಣಿಯರು, ಬಾಣಂತಿಯರು, ವಯಸ್ಕರು, ಮುದುಕರೂ ಇರಬಹುದು. ಇವರು ನೇರವಾಗಿ ತಂಬಾಕನ್ನು ಸೇವಿಸದಿದ್ದರೂ ಧುಮಪಾನಿಯ ಹೊಗೆಯಿಂದ ಇವರಲ್ಲೂ ದುಷ್ಟರಿಣಾಮಗಳು ಕಾಣಿಸಿಕೊಳ್ಳುತ್ತವೆ.

ತಂಬಾಕು ತ್ಯಜಿಸುವುದರಿಂದ ಆಗುವ ಲಾಭಗಳು
ತಂಬಾಕು ತ್ಯಜಿಸುವುದರಿಂದ ಕೆಳಗಿನವುಗಳನ್ನು ಆನಂದಿಸಬಹುದು.
ಕೆಂಪು ಒಸಡುಗಳು, ಬಾಯಿ ಅಥವಾ ತುಟಿಯಲ್ಲಿನ ಬಿಳಿ ಕಲೆಗಳು ಮಾಯವಾಗುತ್ತವೆ.
ಒಸಡುಗಳಲ್ಲಿ ರಕ್ತ ಒಸರುವುದು ನಿಲ್ಲುತ್ತದೆ.
ಕೆಂಪು ಹಲ್ಲುಗಳಿಂದ ಮುಕ್ತಿ ದೊರೆಯುತ್ತದೆ.
ಸ್ವಸ್ಥ ಹಾಗೂ ಆರೋಗ್ಯಕರ ಬಾಯಿ ಇರುತ್ತದೆ.
ಆರೋಗ್ಯಪೂರ್ಣ ಹೊಳೆಯುವ ಕೆನ್ನೆಗಳು ನಿಮ್ಮದಾಗುತ್ತವೆ.
ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.
ಸಾಮಾಜಿಕ ಮನ್ನಣೆ ದೊರೆಯುತ್ತದೆ. 
ಉಸಿರು ಹಾಗೂ ಬಟ್ಟೆಗಳು ಉತ್ತಮ ವಾಸನೆಯಿಂದ ಕೂಡಿರುತ್ತದೆ.
ಆಹಾರವು ರುಚಿಯನ್ನು ಪಡೆದು ಸಂಪೂರ್ಣವಾಗಿ ಜೀರ್ಣವಾಗುತ್ತದೆ.
ಬೆರಳುಗಳು ಮತ್ತು ಉಗುರುಗಳು ನಿಧಾನವಾಗಿ ಹಳದಿ ಮುಕ್ತವಾಗುತ್ತವೆ.
ಉದ್ಯೊÃಗದ ಅವಕಾಶಗಳು ಹೆಚ್ಚುತ್ತವೆ.
ಹಣದ ಉಳಿತಾಯ ಆರಂಭವಾಗುತ್ತದೆ.
ಮುಕ್ತಿಮಾರ್ಗ
ತಂಬಾಕು ಸೇವನೆ ಇಂದು ಸಮುದಾಯ ಆರೋಗ್ಯ ಸಮಸ್ಯೆಯಾಗಿದೆ. ಇದಕ್ಕೆ ಬಲವಾದ ವಿರೋಧದ ಅಗತ್ಯವಿದೆ. ಬಹುತೇಕರು ತಂಬಾಕು ತ್ಯಜಿಸುವುದು ಸುಲಭವಲ್ಲ ಎನ್ನುತ್ತಾರೆ. ತಂಬಾಕು ಪದಾರ್ಥಗಳನ್ನು ತ್ಯಜಿಸುವುದು ದೇಹದ ತೂಕ ಕಳೆದುಕೊಳ್ಳುವಂತೆ ಬಹು ದೀರ್ಘಕಾಲದ ಪ್ರಯತ್ನ. ಆದರೆ ಬದ್ದತೆಯಿಂದ ಕೂಡಿದ ಗಟ್ಟಿ ನಿರ್ಧಾರದಿಂದ ಎಂತಹ ಚಟವನ್ನಾದರೂ ಬಿಡಬಹುದು. ತಂಬಾಕು ವಿರೋಧಿಸುವ ಪ್ರತಿಯೊಬ್ಬರೂ ಕೆಳಗಿನ ಅಂಶಗಳತ್ತ ಚಿತ್ತವಹಿಸಬೇಕಾಗಿದೆ.
ತಂಬಾಕು ತ್ಯಜಿಸುವ ದಿನಾಂಕವನ್ನು ನಿರ್ಧರಿಸಿ ಕ್ಯಾಲೆಂಡರನಲ್ಲಿ ಗುರುತಿಸಿಕೊಳ್ಳಿ.
ನೀವು ತಂಬಾಕು ತ್ಯಜಿಸುವ ದಿನಾಂಕದ ಬಗ್ಗೆ ನಿಮ್ಮ ಸ್ನೆÃಹಿತರು ಮತ್ತು ಕುಟುಂಬದವರಿಗೆ ತಿಳಿಸಿ.
ನಿಮ್ಮ ಮನೆ, ವಾಹನ, ಮತ್ತು ಕೆಲಸದ ಸ್ಥಳ ಎಲ್ಲವೂ ತಂಬಾಕು ಮುಕ್ತವಾಗಲಿ.
ತಂಬಾಕು ಸೇವಿಸುವ ಬಯಕೆಯಾದಾಗ ತಂಬಾಕಿನ ಬದಲು ಇನ್ನಿತರೇ ಅಪಾಯಕಾರಿಯಲ್ಲದ ಅಗಿಯುವ ವಸ್ತುಗಳು ಬಳಿಯಿರಲಿ. ಉದಾ: ಚಾಕೋಲೇಟ್, ಚ್ಯೂಯಿಂಗ್ ಗಮ್, ಕ್ಯಾಂಡಿ, ಲವಂಗ, ಯಾಲಕ್ಕಿ ಇತ್ಯಾದಿ.
ಕುಟುಂಬ ಅಥವಾ ದಂತ ವೈದ್ಯರನ್ನು ಸಂಪರ್ಕಿಸಿ ಬಾಯಿ ಪರೀಕ್ಷೆ ಮಾಡಿಸಿಕೊಳ್ಳಿ. 
ತಂಬಾಕು ಬಳಸುವ ಕುಟುಂಬ/ಸ್ನೆÃಹಿತರಿಂದ ದೂರವಿರಿ ಅಥವಾ ಬಳಸುವಂತೆ ಒತ್ತಾಯ ಮಾಡದಿರಲು ತಿಳಿಸಿ.
ವಾಕಿಂಗ್, ವ್ಯಾಯಾಮ, ಸೃಜನಾತ್ಮಕ ಚಟುವಟಿಕೆ ಅಥವಾ ಉತ್ತಮ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ.
ಆಗಾಗ ನೀರು ಅಥವಾ ಹಣ್ಣಿನ ರಸ/ಜ್ಯೂಸ್ ಕುಡಿಯಿರಿ.
ತಂಬಾಕು ಮುಕ್ತ ಮಾಡುವಲ್ಲಿ ಸಮುದಾಯದ ಪಾತ್ರ
ತಂಬಾಕು ಸೇವೆಯಿಂದಾಗುವ ದುಷ್ಪರಿಣಾಮಗಳನ್ನು ಮತ್ತು ಪರಿಹಾರ ಮಾರ್ಗಗಳನ್ನು ಉನ್ನತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಪಠ್ಯಪುಸ್ತಕಗಳಲ್ಲಿ ಅಳವಡಿಸುವ ಮೂಲಕ ‘ತಂಬಾಕು ವಿರೋಧಿ ಶಿಕ್ಷಣ’ವನ್ನು ಪ್ರೊÃತ್ಸಾಹಿಸುವುದು.
ಮಕ್ಕಳು ಮತ್ತು ಯುವಜನತೆಯನ್ನು ತಂಬಾಕು ಮುಕ್ತರನ್ನಾಗಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದು. ಶಾಲಾ ಶಿಕ್ಷಣದ ಮೂಲಕ ತಂಬಾಕು ಬಳಕೆಯನ್ನು ತಡೆಯಲು ಪ್ರಯತ್ನಿಸಬೇಕು.
ಶಾಲೆಗಳಲ್ಲಿ ಚರ್ಚೆ, ಸಂವಾದ, ಉಪನ್ಯಾಸ, ವಿಚಾರಗೋಷ್ಟಿ, ನಾಟಕ, ವೀಡಿಯೋ ಪ್ರದರ್ಶನಗಳಂತಹ ಕರ‍್ಯಕ್ರಮಗಳನ್ನು ಕಾಲಕಾಲಕ್ಕೆ ಹಮಿಕೊಂಡು ಅವುಗಳ ಮೂಲಕ ‘ತಂಬಾಕು ವಿರೋಧಿ ಶಿಕ್ಷಣ’ ಬೆಂಬಲಿಸುವುದು.
ಮಕ್ಕಳು ಮತ್ತು ಯುವಜನತೆ ಸದಾಕಾಲ ಜ್ಞಾನಾಧಾರಿತ/ ಅಭಿವೃದ್ದಿ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೆÃರೇಪಿಸುವುದು.
ಹತಾಶೆ ಮತ್ತು ಖಿನ್ನತೆಯಿಂದ ಮುಕ್ತರನ್ನಾಗಿಸುವುದು.
ವಿರಾಮ ವೇಳೆಯ ಸದುಪಯೋಗಕ್ಕಾಗಿ ಕ್ರಿÃಡೆಗಳು/ ಓದುವ ಹವ್ಯಾಸ ಇತ್ಯಾದಿಗಳಲ್ಲಿ ತೊಡಗಿಸಿಕೊಳ್ಳವಂತೆ ಮಾಡುವುದು.
ಮಾಧ್ಯಮಗಳ ಮೂಲಕ ‘ತಂಬಾಕು ವಿರೋಧಿ ಶಿಕ್ಷಣ’ ನೀಡುವುದು.
ತಂಬಾಕನ್ನು ತಿರಸ್ಕರಿಸುವ ಕೌಶಲಗಳನ್ನು ಅಭಿವೃದ್ದಿಪಡಿಸುವದು ಮತ್ತು ತರಬೇತಿ ನೀಡುವದು.
ಆತ್ಮವಿಶ್ವಾಸ ಹೆಚ್ಚಿಸುವ ಚಟುವಟಿಕೆಗಳನ್ನು ಪ್ರೊÃತ್ಸಾಹಿಸುವುದು.
ತಂಬಾಕು ಸೇವನೆ ಪ್ರಚೋದಿಸುವ ದೃಶ್ಯಗಳು ಮತ್ತು ಜಾಹೀರಾತುಗಳಿಗೆ ತಡೆಯೊಡ್ಡುವುದು.
ತಂಬಾಕಿನಿಂದಾಗುವ ದುಷ್ಪರಿಣಾಮಗಳನ್ನು ಬಿಂಬಿಸುವ ಪೋಸ್ಟರ್/ಬ್ಯಾನರ್‌ಗಳನ್ನು ಪ್ರದರ್ಶಿಸುವುದು.
ಕಾನೂನುಗಳಿಗೆ ಸೂಕ್ತ ಮಾರ್ಪಾಡು ಮಾಡುವ ಮೂಲಕ ತಂಬಾಕು ಉತ್ಪನ್ನಗಳಿಗೆ ಕಡಿವಾಣ  ಹಾಕುವುದು.
ತಂಬಾಕು ವಿರೋಧಿ ಹೋರಾಟ ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯಿಂದ ಆಗುವ ಕೆಲಸವಲ್ಲ. ಇದಕ್ಕೆ ಸಾಮೂಹಿಕ ಬೆಂಬಲ ಅಗತ್ಯ. ಇದಕ್ಕೆ ಪೂರಕವಾಗಿ ಸರ್ಕಾರದ ನೀತಿ ನಿಯಮಗಳು ಬದಲಾಗಬೇಕು. ಪ್ರತಿಯೊಬ್ಬರೂ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತಾಗಬೇಕು. ಬನ್ನಿ! ಎಲ್ಲರೂ ಕೈ ಜೋಡಿಸಿ ‘ತಂಬಾಕು ವಿರೋಧಿ ಶಿಕ್ಷಣ’ವನ್ನು ಬಲಪಡಿಸೋಣ.
ಆರ್.ಬಿ.ಗುರುಬಸವರಾಜ ಹೊಳಗುಂದಿ





2 comments:

  1. ಒಳ್ಳೆಯ ವಿಷಯ ತಿಳಿಸಿ ಕೊಟ್ಟಿದ್ದೀರಿ.. ಧನ್ಯವಾದಗಳು ಸರ್

    ReplyDelete