May 30, 2018

ಎಜ್ಯು ಆ್ಯಪ್ಸ್ Educational apps

ದಿನಾಂಕ 4-4-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಭವಿಷ್ಯದ ಬೆಳಕಿಂಡಿಯಾಗುವ ಎಜ್ಯು ಆ್ಯಪ್ಸ್


ಇಂದು ಶಿಕ್ಷಣ ಕ್ಷೆತ್ರವು ವಿಸ್ತಾರವಾಗುತ್ತಿದೆ. ಕಲಿಕೆಯು ಕೇವಲ ತರಗತಿ ಕೋಣೆಗೆ ಸೀಮಿತವಾಗಿಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿವಿಧ ಮೂಲಗಳಿಂದ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳುವ ಅಗತ್ಯತೆ ಇದೆ. ಹಾಗಾಗಿ ಬೋಧನೆ ಮತ್ತು ಕಲಿಕಾ ವಿಧಾನಗಳು ಗ್ರಹಿಕೆಯನ್ನು ಮೀರಿ ವಿಸ್ತಾರಗೊಳ್ಳುತ್ತಿವೆ ಮತ್ತು ಅಭಿವೃದ್ದಿಗೊಳ್ಳುತ್ತಿವೆ. 
   ಇಂದಿನ ಪ್ರಪಂಚವು ವೇಗವಾಗಿ ಬದಲಾಗುತ್ತಿದೆ. ಅದಕ್ಕೆ ಪೂರಕವಾಗಿ ಶೈಕ್ಷಣಿಕ ವ್ಯವಸ್ಥೆಯಲ್ಲೂ ಬದಲಾವಣೆಗಳು ಅಗತ್ಯವಾಗಿವೆ. ಈ ನಿಟ್ಟಿನಲ್ಲಿ  ಹೆಚ್ಚುತ್ತಿರುವ ವಿದ್ಯಾರ್ಥಿಗಳ ನಡುವಿನ ಸ್ಪರ್ಧೆಯ ಒತ್ತಡವನ್ನು ನಿಭಾಯಿಸಲು ಕೆಲವು ಶೈಕ್ಷಣಿಕ ಆ್ಯಪ್‌ಗಳು ರೂಪುಗೊಂಡಿವೆ. ಮೊಬೈಲ್ ಆಧಾರಿತ ಕಲಿಕೆ ಮತ್ತು ಮೊಬೈಲ್ ಉಪಕರಣಗಳು ಇಂದಿನ ಯುವಜನತೆಯ ಅವಿಭಾಜ್ಯ ಅಂಗವಾಗಿವೆ. ಇದನ್ನು ಗಮನಿಸಿದ ಕೆಲವು ಶೈಕ್ಷಣಿಕ ಸಂಸ್ಥೆಗಳು ಶಾಲಾ ಕಾಲೇಜುಗಳ ಶೈಕ್ಷಣಿಕ ಕಲಿಕೆಗೆ ಪೂರಕವಾದ ಮಾಹಿತಿ/ಶಿಕ್ಷಣ ನೀಡುವ ಸದುದ್ದೆÃಶದಿಂದ ಶೈಕ್ಷಣಿಕ ಆ್ಯಪ್‌ಗಳನ್ನು ಸಿದ್ದಪಡಿಸಿವೆ. 
ತಂತ್ರಜ್ಞಾನದ ಆಗಮನವು ಸ್ವಯಂ ಕಲಿಕೆಯ ಸಾಧ್ಯತೆಗೆ ಸಾಕಷ್ಟು ಅವಕಾಶಗಳನ್ನು ತಂದಿಟ್ಟಿದೆ. ಯುವಜನತೆಯ ಆಶೊತ್ತರಗಳನ್ನು ಗಮನದಲ್ಲಿಟ್ಟುಕೊಂಡು ನಾವೀನ್ಯ ರೀತಿಯ ಬೋಧನಾ ಕಲಿಕಾ ವಿಧಾನಗಳು ರೂಪುಗೊಳ್ಳುತ್ತಿವೆ. ಅದಕ್ಕಾಗಿ ಅನೇಕ ಶೈಕ್ಷಣಿಕ ಆ್ಯಪ್‌ಗಳು ಸಿದ್ದಗೊಂಡಿವೆ. ನೀವು ಸ್ಮಾರ್ಟ್ಫೋನ್ ಅಥವಾ ಟ್ಯಾಬ್ಲೆಟ್ ಬಳಸುತ್ತಿದ್ದರೆ ಇಂತಹ ಶೈಕ್ಷಣಿಕ ಆ್ಯಪ್‌ಗಳನ್ನು ಸುಲಭವಾಗಿ ಬಳಸಬಹುದು. 
         ಶೈಕ್ಷಣಿಕ ಆ್ಯಪ್‌ಗಳು ಕಲಿಕಾರ್ಥಿಗಳ ವೈಯಕ್ತಿಕ ಕಲಿಕೆಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತವೆ. ವಿವಿಧ ವಿಷಯ ಮತ್ತು ಪರಿಕಲ್ಪನೆಗಳನ್ನು ವೈವಿಧ್ಯಮಯವಾಗಿ ಕಲಿಯುವ, ಅಭ್ಯಾಸ ಮತ್ತು ಅಧ್ಯಯನ ಮಾಡುವ ಸಾಧ್ಯತೆಗಳಿವೆ. ಇಲ್ಲಿ ವಿಷಯ ನಿರೂಪಣೆಯು ತರಗತಿ ಕೋಣೆಗಿಂತ ವಿಭಿನ್ನವಾಗಿರುವುದರಿಂದ ಕಲಿಕೆಯು ಆನಂದದಾಯಕವಾಗಿರುತ್ತದೆ. ಎಲ್ಲಾ ವಯಸ್ಸಿನ ವಿದ್ಯಾರ್ಥಿಗಳಿಗೂ ಪ್ರತ್ಯೆÃಕವಾದ ಉತ್ತಮ ಗುಣಮಟ್ಟದ ಶೈಕ್ಷಣಿಕ ಆ್ಯಪ್‌ಗಳಿವೆ. 2017ರ ಅಂತ್ಯಕ್ಕೆ ಒಟ್ಟು 116 ಶೈಕ್ಷಣಿಕ ಆ್ಯಪ್‌ಗಳು ಸಿದ್ದಗೊಂಡಿವೆ. ಅವುಗಳಲ್ಲಿ ಕೆಲವು ಆ್ಯಪ್‌ಗಳ ಬಗ್ಗೆ ತಿಳಿಯೋಣ. 
ಕೋರ್ಸೆರಾ(ಅouಡಿseಡಿಚಿ) : ಶಿಕ್ಷಣದ ವಿವಿಧ ಕ್ಷೆÃತ್ರಗಳ ವಿಸ್ತಾರವನ್ನು ಹೊಂದಿದ ಹಲವು ಅಪ್ಲಿಕೇಶನ್‌ಗಳಲ್ಲಿ ಕೋರ್ಸೆರಾ ಒಂದಾಗಿದೆ. ಕಂಪ್ಯೂಟರ್ ಸೈನ್ಸ್, ಡೇಟಾ ಸೈನ್ಸ್, ಹಣಕಾಸು ಮತ್ತು ವ್ಯವಹಾರ, ವಿದೇಶಿ ಭಾಷೆಗಳನ್ನು ಒಳಗೊಂಡಂತೆ ಹಲವಾರು ಸ್ವದೇಶಿ ಭಾಷೆಗಳನ್ನು ಈ ಆ್ಯಪ್ ಮೂಲಕ ಕಲಿಯಬಹುದು. 20ಕ್ಕೂ ಹೆಚ್ಚಿನ ಕ್ಷೆತ್ರಗಳ ವಿಷಯಗಳಿದ್ದು 100ಕ್ಕೂ ಹೆಚ್ಚಿನ ಉನ್ನತ ವಿಶ್ವವಿದ್ಯಾನಿಲಯದೊಂದಿಗೆ ಪಾಲುದಾರಿಕೆ ಇದೆ. 1000ಕ್ಕೂ ಹೆಚ್ಚು ಸಿಲಬಸ್‌ಗಳಿವೆ. ಅವುಗಳಲ್ಲಿ ವೀಡಿಯೋ ಪಾಠಗಳು ಮತ್ತು ಟ್ಯುಟೋರಿಯಲ್‌ಗಳಿವೆ. ಕೆಲವು ಪಾಠಗಳು ಉಚಿತವಾಗಿದ್ದರೆ ಕೆಲವು ಕನಿಷ್ಠ ಬೆಲೆಯನ್ನು ನಿಗದಿಪಡಿಸಿವೆ. ನಿಮ್ಮ ಬಜೆಟ್‌ಗೆ ತಕ್ಕಂತ ಪಾಠವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶಗಳಿವೆ. ಆನ್‌ಲೈನ್ ಟ್ಯುಟೋರಿಯಲ್‌ಗಳು ನಿರ್ದಿಷ್ಟ ಸಮಯಕ್ಕೆ ಲಾಕ್ ಆಗದಿರುವುದು ಬಳಕೆದಾರ ಸ್ನೆಹಿಯಾಗಿದೆ. 14 ಭಾಷೆಗಳಲ್ಲಿ ಲಭ್ಯವಿರುವ ಈ ಆ್ಯಪ್‌ನ್ನು ಪ್ಲೆಸ್ಟೊರ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. 
ಇ.ಡಿ.ಎಕ್ಸ್. : ವಿಶಿಷ್ಠ ಶೈಕ್ಷಣಿಕ ಅಪ್ಲಿಕೇಶನ್‌ಗಳಲ್ಲಿ ಇ.ಡಿ.ಎಕ್ಸ್ ಕೂಡಾ ಒಂದಾಗಿದೆ. ಇದು ವೃತ್ತಿಪರರಿಂದ ಶಿಕ್ಷಣ ನೀಡುವ ಬದಲು ನೇರವಾಗಿ ಕಾಲೇಜುಗಳಿಂದ ಶಿಕ್ಷಣ ನೀಡುತ್ತದೆ. ಆದರೆ ಇದರಲ್ಲಿ ಕಾನೂನುಬದ್ದ ಪದವಿ ಪಡೆಯುವುದಿಲ್ಲ ಅಷ್ಟೆ. ಆದಾಗ್ಯೂ ಕಂಪ್ಯೂಟರ್ ಪ್ರೊÃಗ್ರಾಮಿಂಗ್, ಎಂಜಿನಿಯರಿಂಗ್, ಇತಿಹಾಸ, ಮನಶಾಸ್ತç, ಆರೋಗ್ಯ, ಇತರೆ ನೂರಾರು ಶೈಕ್ಷಣಿಕ ಕಲಿಕೆಗಳಿವೆ. ಇಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ವೀಡಿಯೋ ಉಪನ್ಯಾಸಗಳಿವೆ. ಜೊತೆಗೆ ಟ್ಯುಟೋರಿಯಲ್‌ಗಳೂ ಸಹ ಲಭ್ಯ ಇವೆ. ಇಲ್ಲಿ ಎಲ್ಲವೂ ಮುಕ್ತವಾಗಿದೆ. ಉನ್ನತ ಶಿಕ್ಷಣದ ಹಂಬಲ ಇರುವ ಯಾರಾದರೂ ಈ ಆ್ಯಪ್ ಬಳಸಬಹುದು. 
ಖಾನ್ ಅಕಾಡೆಮಿ : ಖಾನ್ ಅಕಾಡೆಮಿ ಮತ್ತೊಂದು ಶಿಕ್ಷಣ ವೇದಿಕೆಯಾಗಿದೆ. ಇದು ಯುವಜನತೆಗೆ ಮತ್ತು ಮಕ್ಕಳಿಗೆ ವಿವಿಧ ಶಿಕ್ಷಣ ಮತ್ತು ತರಗತಿ ನೀಡುತ್ತದೆ. ಪ್ರಸ್ತುತ 10,000ಕ್ಕೂ ಹೆಚ್ಚಿನ ವೀಡಿಯೋ ತರಗತಿಗಳನ್ನು ಹೊಂದಿದೆ. ಇವೆಲ್ಲವೂ ಸಂಪೂರ್ಣವಾಗಿ ಉಚಿತವಾಗಿವೆ. ಖಾನ್ ಅಕಾಡೆಮಿ ಗಣಿತ, ಅರ್ಥಶಾಸ್ತç, ಇತಿಹಾಸ, ವಿಜ್ಞಾನ ಹೀಗೆ ಅನೇಕ ವಿಷಯಗಳ ಸಂಕೀರ್ಣ ಅಂಶಗಳನ್ನು ಸುಲಭವಾಗಿ ತಿಳಿಸುವ ಪ್ರಯತ್ನ ಮಾಡುತ್ತದೆ. ಇದು ಆಫ್‌ಲೈನ್‌ನಲ್ಲೂ ಕೂಡಾ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ಇದೊಂದು ಬೆಸ್ಟ್ ಅಪ್ಲಿಕೇಶನ್ ಆಗಿದೆ. 
ಮೆಸ್‌ಮೆರೈಸ್ : ಇದೊಂದು ಭಾಷಾ ಕಲಿಕೆಯ ಅಪ್ಲಿಕೇಶನ್ ಆಗಿದೆ. ಇಲ್ಲಿ ಸುಲಭವಾಗಿ ಭಾಷೆಯನ್ನು ಕಲಿಸಲಾಗುತ್ತದೆ. ಕಲಿಕೆಯನ್ನು ಪ್ರೊÃತ್ಸಾಹಿಸುವ ಆಟಗಳು, ಗುರಿ ತಲುಪುವ ಪ್ರೆÃರಕಾಂಶಗಳು ಇಲ್ಲಿವೆ. ಇದರ ಬಹುದೊಡ್ಡ ವಿಶೇಷ ಎಂದರೆ ನೀವು ಕಲಿಯಬಹುದಾದ 100 ಕ್ಕಿಂತ ಹೆಚ್ಚಿನ ಭಾಷಾ ಕೌಶಲ್ಯಗಳನ್ನು ಕಲಿಸುತ್ತದೆ. ಪ್ರಾಥಮಿಕ ಕಲಿಕೆಗೆ ಚಂದಾದಾರಿಕೆ ಉಚಿತವಾಗಿದ್ದು ಉನ್ನತ ಕಲಿಕೆಗೆ ಕನಿಷ್ಠ ಚಂದಾದಾರಿಕೆಯನ್ನು ಬೇಡುತ್ತದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಸರಳವಾದ ಕಲಿಕೆ ಬಯಸುವವರಿಗೆ ಉತ್ತಮ ಆ್ಯಪ್ ಇದಾಗಿದೆ. 
ಯುಡೆಮಿ  : ಮೊಬೈಲ್ ಮೂಲಕ ಶಿಕ್ಷಣ ನೀಡುವ ಮೊಟ್ಟಮೊದಲ ಶೈಕ್ಷಣಿಕ ಆ್ಯಪ್ ಇದಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಅಡುಗೆಮನೆ ಶಿಕ್ಷಣದಿಂದ ವಿದೇಶಿ ಭಾಷಾ ಕಲಿಕೆವರೆಗಿನ ವ್ಯಾಪ್ತಿಯ 32.000 ಕ್ಕೂ ಹೆಚ್ಚಿನ ಕಲಿಕಾಂಶಗಳನ್ನು ಹೊಂದಿದೆ. ವ್ಯವಹಾರ, ಮಾರ್ಕೆಟಿಂಗ್, ಉಧ್ಯಮಶೀಲತೆ, ವಿನ್ಯಾಸ, ಆರೋಗ್ಯ, ಸಂಗೀತ, ಫಿಟ್ನೆಸ್, ಛಾಯಾಗ್ರಹಣ, ಸಾಫ್ಟ್ವೇರ್ ಇತ್ಯಾದಿ ಕೋರ್ಸ್ಗಳನ್ನು ಹೊಂದಿದೆ. ವಿಷಯದ ಗುಣಮಟ್ಟ ಉನ್ನತ ಶ್ರೆÃಣಿಯಲ್ಲಿದೆ. ಕೆಲವು ಪಾಠಗಳು ಸಾಧಾರಣವಾಗಿವೆ. ಇಲ್ಲಿ ಉಚಿತ ಮತ್ತು ಪಾವತಿಸುವ ಶಿಕ್ಷಣವೂ ಲಭ್ಯವಿದೆ. ಈ ಆ್ಯಪ್ ಕಲಿಕೆಗೆ ಬಹಳ ಯೋಗ್ಯವಾಗಿದೆ ಮತ್ತು ಹೆಚ್ಚು ವೈಶಿಷ್ಟö್ಯಗಳನ್ನು ಹೊಂದಿದೆ.
ಟೆಡ್ ಟಾಕ್ಸ್ : ಕೆಲವೊಮ್ಮೆ ನೇರ ಶಿಕ್ಷಣವು ಸಾಕಾಗುವುದಿಲ್ಲ ಅಥವ ಪರಿಣಾಮಕಾರಿಯಾಗುವುದಿಲ್ಲ. ಅದಕ್ಕಾಗಿ ಒಳನೋಟದ ಆರೋಗ್ಯಕರ ಡೋಸ್ ಬೇಕಾಗುತ್ತದೆ. ನಿಮ್ಮನ್ನು ನೀವೇ ಮಾನಸಿಕವಾಗಿ ಒಳಗಿನಿಂದಲೇ ತಿದ್ದಿಕೊಳ್ಳುವ ಅವಶ್ಯಕತೆ ಇರುತ್ತದೆ. ಇದಕ್ಕಾಗಿ ಒಂದಿಷ್ಟು ಪ್ರೆÃರಣಾತ್ಮಕ ಮಾತುಗಳು ಅಗತ್ಯ ಎನಿಸುತ್ತವೆ. ಇಂತಹ ಪ್ರೆÃರಣಾತ್ಮಕ ಮಾತುಗಳಿಗೆ ಪ್ರಸಿದ್ದವಾಗ ಅಪ್ಲಿಕೇಶನ್ ಎಂದರೆ ಟೆಡ್ ಟಾಕ್ಸ್. ಇಲ್ಲಿನ ಮಾತುಗಳು ಪ್ರಬುದ್ದವಾಗಿದ್ದು ನಿಮ್ಮನ್ನು ನೀವೇ ಅರಿಯಲು ಸಾಧ್ಯವಾಗುತ್ತದೆ ಮತ್ತು ಮಾನಸಿಕವಾಗಿ ಸಬಲತೆ ಹೊಂದುವಂತೆ ಮಾಡುತ್ತದೆ. ಪ್ರಪಂಚದಾದ್ಯಂತ ಪ್ರಸಿದ್ದರಾದ ಸ್ಪಿÃಕರ್‌ಗಳ ಮಾತಿನ ಬಹುದೊಡ್ಡ ಸಂಗ್ರಹವೇ ಇಲ್ಲಿದೆ. 1700ಕ್ಕೂ ಹೆಚ್ಚಿನ ವೀಡಿಯೋಗಳಿದ್ದು 22 ವಿವಿಧ ಭಾಷೆಗಳಲ್ಲಿ ಲಭ್ಯ ಇವೆ. 
ಬುಸು : ನಿಮ್ಮ ಹೊಸ ಆಂಡ್ರಾಯ್ಡ್ ಫೋನ್ ನಿಮಗೆ ಎಷ್ಟು ಭಾಷೆಗಳನ್ನು ಕಲಿಸಬಹುದು? ಭಾಷಾವಿನ್ಯಾಸ ಆಯ್ಕೆ ಮಾಡಲು ಹಲವಾರು ಭಾಷೆಗಳಿದ್ದರೂ ಆ ಭಾಷೆಯನ್ನು ಕಲಿಯಲು ಆಗುವುದಿಲ.್ಲ ಅಲ್ಲವೇ? ವಿಶ್ವದ 11 ಜನಪ್ರಿಯ ಭಾಷೆಗಳಲ್ಲಿ ಓದುವುದು, ಬರೆಯುವುದು, ಮಾತನಾಡುವುದನ್ನು ಕಲಿಸುವ ವಿಶಿಷ್ಠ ಆ್ಯಪ್ ಎಂದರೆ ಬುಸು. ಬುಸುವಿನ ತಂತ್ರಗಾರಿಕೆ ಕೇವಲ ಒಣ ಪುಸ್ತಕಗಳನ್ನು ಓದುವುದಕ್ಕಿಂತ ಅರ್ಥಗರ್ಭಿತ ಹಾಗೂ ಪರಿಣಾಮಕಾರಿಯಾಗಿವೆ. ನೀವು ಈ ಆ್ಯಪ್ ಮೂಲಕ 45 ಮಿಲಿಯನ್‌ಗೂ ಹೆಚ್ಚು ಜನರೊಂದಿಗೆ ಸಂವಹನ ಮಾಡಬಹುದು. ಸ್ಥಳಿಯ ಭಾಷಿಕರೊಡನೆ ಮಾತನಾಡುವ ಮೂಲಕ ನಿಮ್ಮ ಹೊಸ ಭಾಷೆಯನ್ನು ಕಲಿಯಬಹುದು. ಆ್ಯಪ್ ನೀಡುವ ಸಾಮರ್ಥ್ಯವನ್ನು ಗಳಿಸುವ ಮೂಲಕ ಮುಂದಿನ ಸಾಮರ್ಥ್ಯಕ್ಕೆ ಕಾಲಿಡಬಹುದು.
ಸ್ಟಾರ್ ಚಾರ್ಟ್  : ಬಾಹ್ಯಾಕಾಶವನ್ನು ಪ್ರಿÃತಿಸುವವರಿಗೆ ಈ ಅಪ್ಲಿಕೇಶನ್ ಅತ್ಯಗತ್ಯವಾಗಿದೆ. ಸ್ಟಾರ್ ಚಾರ್ಟ್ ನಿಮ್ಮ ಸ್ಮಾರ್ಟ್ಫೋನ್ ಅಥವಾ ಟ್ಯಾಬ್ಲೆಟ್‌ಗೆ ರಾತ್ರಿ ಆಕಾಶವನ್ನು ತರುತ್ತದೆ ಮತ್ತು ಯಾವುದೇ ಕೋನದಿಂದ ಅದನ್ನು ಅನ್ವೆÃಷಿಸುವ ಸಾಮರ್ಥ್ಯವನ್ನು ನೀಡುತ್ತದೆ. ನಿಮ್ಮ ಸಾಧನದಲ್ಲಿ ಅಪ್ಲಿಕೇಶನ್ ತೆರೆದು ಗಾಳಿಯಲ್ಲಿ ಕೈಆಡಿಸಿದರೆ ನಿಮ್ಮ ಸ್ಥಳವನ್ನಾಧರಿಸಿ ನೀವು ಎಲ್ಲಿದ್ದಿÃರಿ ಎಂಬುದನ್ನು ನಿರ್ಧರಿಸುತ್ತದೆ. ಸ್ಟಾರ್ ಚಾರ್ಟ್ನಲ್ಲಿ 88 ನಕ್ಷತ್ರಪುಂಜಗಳು ಮತ್ತು 1,20,000ಕ್ಕೂ ಹೆಚ್ಚಿನ ವಿಭಿನ್ನ ನಕ್ಷತ್ರಗಳನ್ನು ಒಳಗೊಂಡಿದೆ. ನಕ್ಷತ್ರ/ನಕ್ಷತ್ರಪುಂಜದ ಬಗ್ಗೆ ವಿವರವಾಗಿ ತಿಳಿಯಲು ಅದರ ಮೇಲೆ ಟ್ಯಾಪ್ ಮಾಡಿ ಝೂಮ್ ಮಾಡಿದರೆ ಸಾಕಷ್ಟು ವಿವರಗಳು ಲಭ್ಯವಾಗುತ್ತವೆ. ಈ ಕಾರಣಕ್ಕಾಗಿ ಆಂಡ್ರಾಯ್ಡ್ಗಳಲ್ಲಿ ಲಭ್ಯ ಇರುವ ಅತ್ಯುತ್ತಮ ಖಗೋಳವಿಜ್ಞಾನದ ಅಪ್ಲಿಕೇಶನ್ ಇದಾಗಿದೆ. ಸ್ಟಾರ್ ಚಾರ್ಟ್ ಸಾಕಾಗದಿದ್ದರೆ ಸೋಲಾರ್ ವಾಕ್ ಅಥವಾ ಸ್ಕೆöÊಮ್ಯಾಪ್ ಬಳಸಬಹುದು.
ಸ್ಪಿಡ್ ಅನಾಟಮಿ ಕ್ವಿಜ್  : ನಿಮ್ಮ ಸ್ವಂತ ದೇಹದ ಬಗ್ಗೆ ನಿಮಗೇನು ತಿಳಿದಿದೆ? ನಿಮ್ಮ ನರವ್ಯೂಹದಲ್ಲಿನ ಕೋಶಗಳೆಷ್ಟು? ನಿಮ್ಮ ಹೃದಯ ಒಂದು ದಿನದಲ್ಲಿ ಎಷ್ಟು ಬಾರಿ ರಕ್ತವನ್ನು ಪಂಪ್ ಮಾಡುತ್ತದೆ? ಇತ್ಯಾದಿ ವಿಷಯಗಳು ನಿಮಗೆ ಆಶ್ಚರ್ಯ ತರುತ್ತವೆ. ಅನಾಟಮಿ ಎಂಬುದು ಆಳವಾಗಿ ಕಲಿಯುವ ಒಂದು ವಿಷಯವಾಗಿದೆ. ಸ್ಪಿÃಡ್ ಅನಾಟಮಿ ಕ್ವಿಜ್ ಅಪ್ಲಿಕೇಶನ್ ಮೂಲಕ ದೇಹದ ವಿವಿಧ ಅಂಗಗಳ ಪರಿಚಯ, ಅವುಗಳ ಕಾರ್ಯ ರಚನೆ, ಕಾರ್ಯವಿಧಾನ, ಉಪಯುಕ್ತತೆ ಮುಂತಾದ ವಿಷಯಗಳನ್ನು ತಿಳಿಯಬಹುದು. ಇದೊಂದು ರೀತಿಯ ಆಟದಂತಿದ್ದು, ಸಮಯದ ಮಿತಿಯೊಳಗೆ ವಿವಿಧ ಅಂಗಗಳನ್ನು ಗುರುತಿಸುವ ಮತ್ತು ಅವುಗಳ ಬಗ್ಗೆ ತಿಳಿಯುವ ಆಟವಾಗಿದೆ. ಇದು ಮಾನವನ ದೇಹದ ಬಗ್ಗೆ ಹೆಚ್ಚು ವೇಗವಾಗಿ ಕಲಿಯುವ ಮೊದಲ ಹೆಜ್ಜೆಯಾಗಿದೆ.
ಸೋಕ್ರಾಂಟಿಕ್  : ಗಣಿತ ಎಂಬುದೇ ಬಹುತೇಕರಿಗೆ ಭಯದ ವಿಷಯ. ಕೆಲವೊಂದು ಗಣಿತದ ಸಮಸ್ಯೆಗಳನ್ನು ಬಿಡಿಸುವ ಮಾರ್ಗವೇ ತಿಳಿಯುವುದಿಲ್ಲ. ಅಂತಹ ಕಠಿಣ ಸಮಸ್ಯೆಯ ಲೆಕ್ಕವನ್ನು ಹಂತಹಂತವಾಗಿ ಬಿಡಿಸುವ ಮಾರ್ಗವನ್ನು ತಿಳಿಸುವ ಆ್ಯಪ್ ಎಂದರೆ ಸೋಕ್ರಾö್ಯಟಿಕ್. ಆ್ಯಪ್‌ನ್ನು ತೆರೆದಾಗ ಕ್ಯಾಮೆರಾ ತೆರೆಯುತ್ತದೆ. ಕ್ಯಾಮೆರಾವನ್ನು ಗಣಿತದ ಸಮಸ್ಯೆಯ ಮೇಲೆ ಕೇಂದ್ರಿಕರಿಸಿದರೆ ಸಮಸ್ಯೆಯನ್ನು ಸ್ಕಾö್ಯನ್ ಮಾಡುತ್ತದೆ. ನಂತರ ಅದರ ಲೆಕ್ಕಾಚಾರವನ್ನು ಹಂತಹಂತವಾಗಿ ಹೇಗೆ ಬಿಡಿಸಬಹುದು ಎಂಬುದನ್ನು ತಿಳಿಸುತ್ತದೆ. ಹಾಗಾಗಿ ಗಣಿತದ ಎಂತಹ ಸಮಸ್ಯೆಗಳನ್ನೂ ಕೂಡಾ ಇಲ್ಲಿ ಸುಲಭವಾಗಿ ಬಿಡಿಸುವ ವಿಧಾನ ತಿಳಿಯಬಹುದು. ಇದು ತೃಪ್ತಿ ನೀಡದಿದ್ದರೆ ಮಾಥ್ಸ್ ಟ್ರಿಕ್ಸ್ ಆ್ಯಪ್ ಬಳಸಬಹುದು.
ಇವುಗಳಲ್ಲದೇ ಇನ್ನೂ ಅನೇಕ ಶೈಕ್ಷಣಿಕ ಅಪ್ಲಿಕೇಶನ್‌ಗಳಿವೆ. ಅವುಗಳನ್ನು ಬಳಸಿಕೊಂಡು ನಿಮ್ಮ ಜ್ಞಾನವಲಯ ಉತ್ತಮಪಡಿಸಿಕೊಳ್ಳುವ ಮೂಲಕ ಶೈಕ್ಷಣಿಕ ಅಭಿವೃದ್ದಿ ಹೊಂದಬಹುದಾಗಿದೆ. 

ಆರ್.ಬಿ.ಗುರುಬಸವರಾಜ ಹೊಳಗುಂದಿ


No comments:

Post a Comment